ನಮಸ್ತೆ....
ಮಾಮ್ ಮಂಗಳೂರು ಚಾಪ್ಟರ್ ಕಾರ್ಯಕಾರಿ ಸಮಿತಿ ಸದಸ್ಯರ ಸಾಮಾನ್ಯ ಸಭೆ ದಿನಾಂಕ 01.03.2016 ಆಡ್ ಐಡಿಯಾ ಕಚೇರಿಯಲ್ಲಿ ನಡೆದಿದ್ದು ಈ ಕೆಳಗಿನ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
1) ಮಾಮ್ ಅಕೌಂಟ್ ಹೊಂದಿರುವ ಎಸ್ ಸಿಡಿಸಿಸಿ ಬ್ಯಾಂಕಿನಲ್ಲಿರುವ ಸುಮಾರು ಎರಡು ಲಕ್ಷ ರು. ನಗದು ಪೈಕಿ ಒಂದು ಲಕ್ಷವನ್ನು ಮಾಮ್ ದತ್ತನಿಧಿ ಬಳಕೆ ಉದ್ದೇಶದಿಂದ ದೀರ್ಘಾವಧಿ ಎಫ್ ಡಿ ಹಾಗೂ ಉಳಿದ ಮೊತ್ತವನ್ನು ಅಲ್ಪಾವಧಿ ಎಫ್ ಡಿ ರೂಪದಲ್ಲಿ ಠೇವಣಿ ಇಡುವುದು. ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸೈನಿಂಗ್ ಅಥಾರಿಟಿಗಳಾಗಿ 15 ದಿನಗಳೊಳಗೆ ಈ ಪ್ರಕ್ರಿಯೆ ಪೂರೈಸುವುದು.
2) ಮಾಮ್ ವೆಬ್ ಸೈಟ್ ಆರಂಭಿಸಲು ರು.10ಸಾವಿರ ಮೀಸಲಿರಿಸಲಾಗಿದ್ದು, ಈಗಾಗಲೇ ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿವೆ. ರೋನಿ ಹಾಗೂ ವೇಣುವಿನೋದ್ ಅವರು ಈ ವಿಚಾರದ ಫಾಲೋ ಅಪ್ ಮಾಡುವುದು.
3) ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಗದು ರೂಪದಲ್ಲಿ ದತ್ತಿನಿಧಿ ನೀಡುವುದನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕೋಸ್ಕರ ರು.ಒಂದು ಲಕ್ಷ ನಿರಖು ಠೇವಣಿ ತಕ್ಷಣ ಇಡಲಾಗುವುದು.
5) ವಾರ್ಷಿಕ ಮಮ್ ಮೀಟ್ ನ್ನು ಮುಂದಿನ ಪೇಪರ್ ಗೆ ಕ್ಲೋಸ್ಡ್ ಹಾಲಿಡೇ ಇರುವ ದಿನ ಆಚರಿಸುವ ಕುರಿತು ತೀರ್ಮಾನಿಸಲಾಗಿದ್ದು, ಆ ದಿನ ಏಪ್ರಿಲ್ 8ರಂದು ಬರುತ್ತದೆ. ಆ ಕಾರ್ಯಕ್ರಮಕ್ಕೆ ಈಗಿನಿಂದ ಸಿದ್ಧತೆ ನಡೆಯಬೇಕು. ಈ ಹಿಂದೆ ಪಿಕ್ನಿಕ್ ವೇಳೆ ನಿರ್ಧರಿಸಿದಂತೆ ಮಾಮ್ ಬೆಂಗಳೂರು ಚಾಪ್ಟರ್ ನವರಿಗೆ ಈ ಜವಾಬ್ದಾರಿ ಕುರಿತು ಮಾತನಾಡಲು ನಿರ್ಧಿರಿಸಿದ್ದು, ಬೆಂಗಳೂರಿನ ವರ್ಕಿಂಗ್ ಕಮಿಟಿಯಲ್ಲಿರುವ ನವೀನ್ ಅಮ್ಮೆಂಬಳ, ವಿವೇಕ್ ನಂಬಿಯಾರ್, ದೀಪಕ್, ಸೂರ್ಯ ಮತ್ತಿತರರು ತಕ್ಷಣ ಈ ಕುರಿತು ಬೆಂಗಳೂರು ಚಾಪ್ಟರ್ ಸಭೆ ಕರೆದು ಮಾ.15ರೊಳಗೆ ಈ ಕುರಿತ ತೀರ್ಮಾನಗಳನ್ನು ಮಂಗಳೂರು ಚಾಪ್ಟರಿನವರಿಗೆ ತಿಳಿಸುವುದು.
6) ಎಸ್ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವರ್ಷಪೂರ್ತಿ ಸರಣಿ ಕಾರ್ಯಕ್ರಮಗಳಿಗೆ ಸಹಯೋಗ ನೀಡುವ ಕೋಆರ್ಡಿನೇಶನ್ ಹೊಣೆ ಬಾಲಕೃಷ್ಣ ಹೊಳ್ಳ ಹಾಗೂ ಪರಶುರಾಮ ಕಾಮತ್ ಅವರ ನಡುವೆ ನಡೆಯಲು ನಿರ್ಧಿರಿಸಿದ್ದು, ಮುಂದಿನ ವಾರ ಮಾಮ್ ಪ್ರಮುಖರು ಕಾಲೇಜು ಪ್ರಾಂಶುಪಾಲರ ಭೇಟಿಗೆ ದಿನ ನಿಗದಿಪಡಿಸಲು ನಿರ್ಧರಿಸಲಾಗಿದೆ.
7) ವಾಮಂಜೂರು ಕಾಲೇಜಿನ ಡೊಂಬಯ್ಯ ಇಡ್ಕಿದು ಮಾಮ್ ಸಹಯೋಗದಲ್ಲಿ ವಾರಾಂತ್ಯ ಪತ್ರಿಕೋದ್ಯಮ ಶಿಬಿರದಲ್ಲಿ ಮೂರು ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದರು. ವೇಣು ವಿನೋದ್ ಈಗಾಗಲೇ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಾ.12ರಂದು ರೋನಿಯವರು ಪಾಲ್ಗೊಳ್ಳಲಿದ್ದಾರೆ.
8) ಮಾಮ್ ರಕ್ತದಾನ ಶಿಬಿರಗಳ ಸಂಚಾಲಕರನ್ನಾಗಿ ಸುರೇಶ್ ಡಿ.ಪಳ್ಳಿ ಅವರನ್ನು ನಿಯೋಜಿಸಲಾಗಿದೆ. ಮುಂದಿನ ಕಾರ್ಯಕ್ರಮಗಳ ಕೋಆರ್ಡಿನೇಶನ್ ಅವರು ನಿರ್ವಹಿಸಲಿದ್ದಾರೆ.
9) ಮಾಮ್ ನ ಈಗಿನ ಸದಸ್ಯರ ಹೆಸರು, ಡೆಸಿಗ್ನೇಶನ್, ನಮ್ಮ ದುಡ್ಡುಪಾವತಿಸಿ ಸದಸ್ಯರಾದವರ ಹೆಸರು, ವಿವರ, ಹಾಗೂ ಮಮ್ ಬೈಲಾದ ವಿವರಗಳನ್ನು ನಮ್ಮ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು. ಕೆಎಂ ಹಾಗೂ ಕಿಶೋರ್ ಈ ಜವಾಬ್ದಾರಿ ಹೊರಲಿದ್ದಾರೆ. ಮಾಮ್ ನೂತನ ಲೆಟರ್ ಹೆಡ್ ಜವಾಬ್ದಾರಿ ವೇಣುವಿನೋದ್ ನಿರ್ವಹಿಸುವರು.
10) ಮಾಮ್ ಆಕ್ಟಿವ್ ಎಂಬ ವಾಟ್ಸಾಪ್ ಗ್ರೂಪುಗಳಿಗೆ ಸಹ ಅಡ್ಮಿನ್ ಆಗಿ ಶರತ್ ಹೆಗ್ಡೆ ಕಡ್ತಲ ಅವರನ್ನು ಸೇರಿಸುವ ಕುರಿತು ನಿರ್ಧರಿಸಲಾಯಿತು.
11) ಮಾರ್ಚಿ ಎರಡೇ ವಾರ ವಿ.ವಿ.ಯ ಪೊಲಟಿಕಲ್ ಸೈನ್ಸ್ ವಿಭಾದವರು ಮಾಮ್ ಸಹಯೋಗದಲ್ಲಿ ಒಂದು ಕಾರ್ಯಾಗಾರ ಏರ್ಪಡಿಸಲು ಉದ್ದೇಶಿಸಿದ್ದು, ಮಾಮ್ ಕಡೆಯಿಂದ ವೇಣು ಶರ್ಮ ಅಥವಾ ರೋನಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತೆರಳಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕುರಿತು ಮಾತನಾಡಲಿದ್ದಾರೆ.
-ಫ್ಲೋನಿನ್, ವೇಣು ಶರ್ಮ, ರೋನಿ, ಕೆಎಂ, ವೇಣುವಿನೋದ್, ಸುರೇಶ್ ಪಳ್ಳಿ, ಕೃಷ್ಣಕಿಶೋರ್ ಪಾಲ್ಗೊಂಡಿದ್ದರು.