Saturday, 16 December 2017

ಮಾಧ್ಯಮ ವಿಚಾರಸಂಕಿರಣ ಗೋಷ್ಠಿಯಲ್ಲಿ ಮಾಮ್ ಸಹಯೋಗ (16.12.2017)


ಮಂಗಳಾ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಡಿ.16, 2017 ಶನಿವಾರ ಕುತ್ತಾರುಪದವು ಬಾಲಸಂರಕ್ಷಣಾ ಕೇಂದ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಭಾರತೀಯ ಪ್ರಜಾತಂತ್ರದ ಚತುರ್ಥ ಸ್ತಂಭ ಮಾಧ್ಯಮ ಒಂದು ವಿಚಾರಸಂಕಿರಣ ನಡೆಯಿತು.
ಸಮಾರಂಭದ ಅಪರಾಹ್ನದ ಮುಖ್ಯ ಸಂವಾದ ಕಾರ್ಯಕ್ರಮಕ್ಕೆ ಮಾಮ್ ಸಹಯೋಗ ನೀಡಿತ್ತು. ಬೆಳಗ್ಗೆ ನಡೆದ ದ್ವಿತೀಯ ಗೋಷ್ಠಿ ಮಾಧ್ಯಮ ಹಾಗೂ ಸಾಮಾಜಿಕ ಬದ್ಧತೆ ವಿಚಾರದಲ್ಲಿ ಮಾಮ್ ಪ್ರತಿನಿಧಿ, ಸುವರ್ಣ ನ್ಯೂಸ್ ವಾಹಿನಿಯ ವಿಶೇಷ ಪ್ರತಿನಿಧಿ ವಿಜಯಲಕ್ಷ್ಮೀ ಶಿಬರೂರು ಪಾಲ್ಗೊಂಡು ವಿಚಾರ ಮಂಡಿಸಿದರು.

ಅಪರಾಹ್ನ ನಡೆದ ಮುಕ್ತ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಜಾವಾಣಿ ಮಂಗಳೂರು ಆವೃತ್ತಿ ಮುಖ್ಯಸ್ಥ ಶ್ರೀ ಬಾಲಕೃಷ್ಣ ಎಂ.ಜಿ., ವಿಜಯಕರ್ನಾಟಕ ಮಂಗಳೂರು ಆವೃತ್ತಿ ಮುಖ್ಯಸ್ಥ ಯು.ಕೆ.ಕುಮಾರನಾಥ, ವಿಜಯಕರ್ನಾಟಕದ ಮಂಗಳೂರಿನ ಚೀಫ್ ಕಾಪಿ ಎಡಿಟರ್ ಬಿ.ರವೀಂದ್ರ ಶೆಟ್ಟಿ, ಸುರ್ವಣ ನ್ಯೂಸ್ ನ ವಿಶೇಷ ಪ್ರತಿನಿಧಿ ವಿಜಯಲಕ್ಷ್ಮೀ ಶಿಬರೂರು ಪಾಲ್ಗೊಂಡರು. ಮಾಮ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಟಿ.ಪ್ರಾಸ್ತಾವಿಕ ಮಾತನಾಡಿ, ಸಂವಾದದಲ್ಲಿ ಪಾಲ್ಗೊಂಡರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಸಂವಾದ ನಿರ್ವಹಿಸಿದರು.

ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. ಮಂಗಳಾ ಸೇವಾ ಸಮಿತಿ ಟ್ರಸ್ಟ್ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಿದರು. ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್ ವೈ., ವಸಂತ ಕೊಣಾಜೆ, ಮಹಾಂತೇಶ ಹಿರೇಮಠ್, ಸ್ಮಿತಾ ಶೆಣೈ ಮತ್ತಿತರರು ಪಾಲ್ಗೊಂಡರು.

ಪೂರ್ವಾಹ್ನದ ಗೋಷ್ಠಿಯಲ್ಲಿ ಪಾಲ್ಗೊಂಡ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಸಭೆಗೆ ಪರಿಚಯಿಸುವ ಸಂದರ್ಭ ಮಾಮ್ ಹೊರತಂದ ಮನೋಭಿನಂದನ ಕೃತಿಯನ್ನು ವಿಶೇಷವಾಗಿ ಉಲ್ಲೇಖಿಸಿದ್ದು ಗಮನ ಸೆಳೆಯಿತು. ಸಂಪನ್ಮೂಲ ವ್ಯಕ್ತಿ ಮನೋಹರ ಪ್ರಸಾದ್ ಅವರೂ ಮಾಮ್ ಸನ್ಮಾನವನ್ನು ಸ್ಮರಿಸಿದರು.

ಮುಂಜಾನೆ ನಡೆದ ಸಮಾರಂಭದಲ್ಲಿ ಉಜಿರೆ ಎಸ್ ಡಿಎಂ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಉದ್ಘಾಟಿಸಿದರು. ಬಳಿಕ ನಡೆದ ಭಾರತೀಯ ಪ್ರಜಾತಂತ್ರದ ಆರೋಗ್ಯ ಸಂವರ್ಧನೆಯಲ್ಲಿ ಮಾಧ್ಯಮದ ಪಾತ್ರ ವಿಚಾರದ ಕುರಿತು ನಡೆದ ಗೋಷ್ಠಿಯಲ್ಲಿ ಡಾ.ವಸಂತ ಕುಮಾರ್ ಪೆರ್ಲ, ಯು.ಕೆ.ಕುಮಾರನಾಥ ವಿಷಯ ಮಂಡಿಸಿದರು. ಪತ್ರಕರ್ತ ರವಿ ಪೊಸವಣಿಕೆ ನಿರ್ವಹಿಸಿದರು. ಟ್ರಸ್ಟಿ ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.
ದ್ವಿತೀಯ ಗೋಷ್ಠಿ ಮಾಧ್ಯಮ ಹಾಗೂ ಸಾಮಾಜಿಕ ಬದ್ಧತೆ ಕುರಿತು ನಡೆಯಿತು. ಪತ್ರಕರ್ತರಾದ ಪ್ರಕಾಶ ಇಳಂತಿಲ ಹಾಗೂ ವಿಜಯಲಕ್ಷ್ಮೀ ಶಿಬರೂರು ವಿಷಯ ಮಂಡಿಸಿದರು. ಮನೋಹರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ನಿರ್ವಹಿಸಿದರು.

ವರದಿ: ಕೆಎಂ
ಫೋಟೊಗಳು: ಕೃಷ್ಣಕಿಶೋರ್ ವೈ., ವಸಂತ ಕೊಣಾಜೆ ಹಾಗೂ ಕೆಎಂ.



ಸಮಾರಂಭದಲ್ಲಿ ಮನೋಭಿನಂದನ ಕುರಿತು ಬಿ.ರವೀಂದ್ರ ಶೆಟ್ಟಿ ಪ್ರಸ್ತಾಪ.