Wednesday, 29 November 2023

ಉಜಿರೆ SDM ಕಾಲೇಜು-MAAM ಸಹಯೋಗದ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರ ಉದ್ಘಾಟನೆ ವರದಿ (29.11.2023)


ಸ್ಥಳೀಯತೆಯನ್ನು ವ್ಯಾಪಕಗೊಳಿಸುವ ಪ್ರಯೋಗಶೀಲತೆ ಅಗತ್ಯ: ಡಾ.ಯು.ಪಿ.ಶಿವಾನಂದ


ಉಜಿರೆ: ಸ್ಥಳೀಯ ಮಟ್ಟದಿಂದಜಾಗತಿಕ ನೆಲೆಯಲ್ಲಿ ವಿಸ್ತಾರಗೊಳ್ಳುವ ಸಾಧ್ಯತೆಗಳೊಂದಿಗಿನ ಮಾದರಿಯಆಧಾರದಲ್ಲಿ ಸಮೂಹ ಮಾಧ್ಯಮಗಳ ಪ್ರಭಾವಕ್ಕೆ ಹೊಸ ಆಯಾಮಗಳನ್ನು ಸೇರ್ಪಡೆಗೊಳಿಸಬೇಕಿದೆ ಎಂದು ಸುದ್ದಿ ಸಮೂಹದಅಧ್ಯಕ್ಷ, 'ಸುದ್ದಿ ಬಿಡುಗಡೆ' ಪತ್ರಿಕೆಯ ಸಂಪಾದಕಡಾ.ಯು.ಪಿ.ಶಿವಾನಂದ ಅಭಿಪ್ರಾಯಪಟ್ಟರು.


ಉಜಿರೆಯಎಸ್.ಡಿ.ಎಂ. ಸ್ನಾತಕೋತ್ತರಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ಪದವಿ ಅಧ್ಯಯನ ವಿಭಾಗಗಳು ಮೀಡಿಯಾಅಲ್ಯೂಮ್ಮಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 'ಸ್ಥಳೀಯ ಮಾಧ್ಯಮ: ಕಾರ್ಯನಿರ್ವಹಣೆ ಮತ್ತು ಸುಸ್ಥಿರತೆ' ಕುರಿತಒಂದು ದಿನದರಾಜ್ಯಮಟ್ಟದಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.




ಸ್ಥಳೀಯ ಮಟ್ಟದಿಂದಜಾಗತಿಕ ಮಟ್ಟದಲ್ಲಿ ನೆಲೆನಿಲ್ಲುವ ಮಾಧ್ಯಮ ಪ್ರಯತ್ನಗಳು ವಿಶಿಷ್ಠ ಪ್ರಯೋಗಗಳಾಗಿ ಗಮನ ಸೆಳೆದಿವೆ. ಮಹಾತ್ಮಾ ಗಾಂಧಿ ಅವರ ಪತ್ರಿಕಾ ಪ್ರಯೋಗಗಳು ಇಂಥ ಸಾಧ್ಯತೆಗಳೊಂದಿಗೆ ಗುರುತಿಸಿಕೊಂಡಿವೆ. ಸ್ಥಳೀಯ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿತವಾಗುವ ಮಾಧ್ಯಮಗಳ ಸ್ವರೂಪಕ್ರಮೇಣತನ್ನ ಪ್ರಭಾವ ವ್ಯಾಪ್ತಿಯನ್ನುಜಾಗತಿಕ ಮಟ್ಟದಲ್ಲಿ ವಿಸ್ತರಿಸಿಕೊಳ್ಳುವ ಅಗಾಧತೆಯನ್ನು ಹೊಂದಿರುತ್ತದೆ. ಈ ಮಾದರಿಯನ್ನು ಅನ್ವಯಿಸಿಕೊಂಡಾಗ ನಿರೀಕ್ಷಿತಯಶಸ್ಸುದೊರೆಯುತ್ತದೆ. ಆದರೆ, ಈ ಯಶಸ್ಸು ವಿಶ್ವಾಸಾರ್ಹತೆ ಮತ್ತು ನಿಖರತೆಯಅಡಿಪಾಯದೊಂದಿಗೆ ನಂಟನ್ನು ಹೊಂದಿರಬೇಕುಎಂದು ಹೇಳಿದರು.
ರಾಜ್ಯ, ರಾಷ್ಟ್ರಮಟ್ಟದ ಪತ್ರಿಕೆಗಳು ಸ್ಥಳೀಯ ಮಟ್ಟದ ವಿವರಗಳನ್ನು ಒಳಗೊಂಡಿರುತ್ತಿರಲಿಲ್ಲ. ರಾಜ್ಯ, ರಾಷ್ಟ್ರ ಮತ್ತುಅಂತರರಾಷ್ಟ್ರೀಯ ಮಟ್ಟದ ಸುದ್ದಿ ವಿವರಗಳು ಮಾತ್ರ ಕಾಣಿಸಿಕೊಳ್ಳುವ ಟ್ರೆಂಡ್‌ಇತ್ತು. ಇಂಥ ಸಂದರ್ಭದಲ್ಲಿಜಿಲ್ಲೆ, ತಾಲೂಕು ಮಟ್ಟದ ಪತ್ರಿಕೆಗಳು ಹುಟ್ಟಿಕೊಂಡವು. ಸ್ಥಳೀಯ ವಿವರಗಳನ್ನು ದಾಖಲಿಸುತ್ತಾರಾಜ್ಯ, ರಾಷ್ಟ್ರ ಮಟ್ಟಕ್ಕೆತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡವು. ಆಯಾಜಿಲ್ಲೆ, ತಾಲೂಕುಗಳವರು ರಾಜ್ಯ, ರಾಷ್ಟ್ರ, ಜಗತ್ತಿನಯಾವುದೇ ಭಾಗದಲ್ಲಿದ್ದರೂತಮ್ಮೂರಿನ ಪತ್ರಿಕೆಗಳನ್ನು ಓದುವ ಕುತೂಹಲವಿರಿಸಿಕೊಂಡಿದ್ದರಿಂದ ಅವುಗಳ ಪ್ರಭಾವ ವಿಸ್ತಾರವಾಯಿತುಎಂದು ತಿಳಿಸಿದರು.
ಮಾಧ್ಯಮಗಳ ವಿಶ್ವಾಸಾರ್ಹತೆಯು ನಿಖರತೆ ಮತ್ತು ಪಾರದರ್ಶಕತೆಯನ್ನೇ ಆಧರಿಸಿಕೊಂಡಿರುತ್ತದೆ. ವಿಶ್ವಾಸಾರ್ಹತೆಇಲ್ಲದೇ ಮಾಧ್ಯಮಗಳು ನಿರ್ವಹಿಸಲ್ಪಡಬಹುದು. ಆದರೆ ಅವುಗಳು ತಮ್ಮ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.


ಮುಖ್ಯಅತಿಥಿ, ಮೀಡಿಯಾ ಅಲ್ಯುಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ ಅಧ್ಯಕ್ಷರಾದ ನವೀನ್ ಅಮ್ಮೆಂಬಳ ಮಾತನಾಡಿದರು. ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮವು ಅಭ್ಯುದಯ ಪತ್ರಿಕೋದ್ಯಮದಇತಿಹಾಸದಲ್ಲಿ ವಿಶೇಷ ಆದ್ಯತೆ ಪಡೆದುಕೊಂಡಿದೆ. ಅಭ್ಯುದಯ ಪತ್ರಿಕೋದ್ಯಮದ ಆರಂಭ ಇಲ್ಲಿಂದಲೇ ಆಗಿದ್ದು. ಸ್ಥಳೀಯತೆಯ ಸುದ್ದಿಸಂಗತಿಗಳು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಬಲ್ಲವು. ಅಭಿವೃದ್ಧಿಯ ವಿನೂತನ ಮಾದರಿಯನ್ನುಕಾಣಿಸಬಲ್ಲವುಎಂದು ಹೇಳಿದರು.
ಜಾಗತಿಕ ಮಟ್ಟದ ಪತ್ರಿಕೆಗಳಿಗಿಂತ ಸ್ಥಳೀಯ ಪತ್ರಿಕೆಗಳಿಗೆ ಪ್ರಾಮುಖ್ಯತೆ ಹೆಚ್ಚು. ಏಕೆಂದರೆ ಇವು ಸ್ಥಳೀಯ ಆಸಕ್ತಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಜಾಗತಿಕ ನೆಲೆಗಟ್ಟಿನಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತವೆ. ಪ್ರಸ್ತುತ ಕ್ರಿಯಾಶೀಲ ಸ್ಥಳೀಯ ಪತ್ರಿಕೆಗಳಿಗೆ ಹೊಸ ಮಾಧ್ಯಮ ಲೋಕದಲ್ಲಿ ವ್ಯಾಪಕ ಅವಕಾಶಗಳು ಲಭ್ಯವಾಗುತ್ತಿವೆಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ ಬಿ.ಎ ಅವರು ಮಾತನಾಡಿ ಸದ್ಯದ ಸಮೂಹ ಮಾಧ್ಯಮಟ್ರೆಂಡ್ ಮೌಲಿಕ ಭಾಷಿಕ ಮಾದರಿಗಳೊಂದಿಗಿನ ಭಾಷಿಕ ಪರಂಪರೆಯಿಂದ ವಿಮುಖಗೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಹೊಸ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ವೃತ್ತಿನಿರತ ಪತ್ರಕರ್ತರುಕನ್ನಡದ್ದೇಆದ ಮೌಲಿಕ ಭಾಷಿಕ ಪರಂಪರೆಯಅಂತಃಸತ್ವವನ್ನುಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿಗಮನಹರಿಸಬೇಕು. ವಿಸ್ತಾರವಾದ ಓದಿನ ನೆರವಿನೊಂದಿಗೆ ಭಿನ್ನವಾದ ಸೃಜನಶೀಲತೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೀಡಿಯಾಅಲ್ಯುಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ ಗೌರವಾಧ್ಯಕ್ಷ ವೇಣು ಶರ್ಮ, ಸಹಾಯಕ ಪ್ರಾಧ್ಯಾಪಕಿ, ಕಾರ್ಯಾಗಾರದ ಸಂಚಾಲಕಿ ಡಾ.ಗೀತಾಎ.ಜೆ. ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥಡಾ.ಭಾಸ್ಕರ್ ಹೆಗಡೆಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾಇನ್ಯೀಯೇಟಿವ್ ಮುಖ್ಯಸ್ಥ ಶರತ್ ಹೆಗ್ಡೆ ವಂದಿಸಿದರು. ಶಿವುಕುಮಾರ ನಿರೂಪಿಸಿದರು.

ವಿವಿಧ ಗೋಷ್ಠಿಗಳನ್ನು ಮಾಮ್ ಪದಾಧಿಕಾರಿಗಳಾದ ವೇಣು ಶರ್ಮ, ಶರತ್ ಹೆಗ್ಡೆ, ವೇಣು ವಿನೋದ್ ಕೆ.ಎಸ್., ಸುರೇಶ್ ಪುದುವೆಟ್ಟು ನಡೆಸಿಕೊಟ್ಟರು.

-ವರದಿ ಕೃಪೆ: SDM ಕಾಲೇಜು ಪತ್ರಿಕೋದ್ಯಮ ವಿಭಾಗ.




































https://www.upayuktha.com/2023/11/Experimentation-to-expand-localism-is-necessary-Dr-U-P-Shivananda.html