ಮಂಗಳೂರಿನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಬಂಟ್ವಾಳ ತಾಲೂಕು ಮಡಂತ್ಯಾರು ಸಮೀಪದ ತೆಂಕಕಜೆಕಾರು ಕರ್ಲದ ದ.ಕ.ಜಿಲ್ಲಾ ಪಂಚಾಯಿತಿ ಕಿ.ಪ್ರಾ.ಶಾಲೆಯಲ್ಲಿ ಡಿ.29 ಮಂಗಳವಾರ ನಡೆದ ಮಾಮ್ ಸಹಯೋಗದ ರಕ್ತದಾನ ಅಭಿಯಾನದ ಎಂಟನೇ ರಕ್ತದಾನ ಶಿಬಿರದ ವರದಿ
----------------------
ನೊಂದವರ ಕುರಿತು ಕೇವಲ ಅನುಕಂಪ ತೋರುವುದರಿಂದ ಅವರಿಗೇನೂ ಸಹಾಯವಾಗದು. ಬದಲಿಗೆ ಸಹಾನುಭೂತಿಯಿಂದ ಸ್ಪಂದಿಸಿ, ರಕ್ತದಾನದಂತಹ ಶ್ರೇಷ್ಠ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಸಮಾಜಕ್ಕೆ ನಮ್ಮಿಂದಾದ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ಗೋರಿಗುಡ್ಡೆ ಕಿಟೆಲ್ ಮೆಮೇರಿಯಲ್ ಕಾಲೇಜ್ ಪ್ರಾಂಶುಪಾಲ ವಿಠಲ್ ಎ. ಅಭಿಪ್ರಾಯಪಟ್ಟಿದ್ದಾರೆ.
ಮೀಡಿಯಾ ಅಲ್ಯೂಮ್ನಿ ಅಸೋಸಿ ಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಹಾಗೂ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಯೋಗದ ರಕ್ತದಾನ ಅಭಿಯಾನ ಪ್ರಯುಕ್ತ ಮಂಗಳವಾರ (29.12.2015) ಬಂಟ್ವಾಳ ತಾಲೂಕು ತೆಂಕಕಜೆಕಾರು ಕರ್ಲ ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಂಟೇ ರಕ್ತದಾನ ಶಿಬಿರಕ್ಕೆ ರಕ್ತದಾನ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಂಗಳೂರು ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಪ್ರಯುಕ್ತ ಆಯೋಜಿಸಲಾದ ಶಿಬಿರಕ್ಕೆ ಕಾಲೇಜು ಶಿಕ್ಷಣ ಇಲಾಖೆ, ಕರ್ಲ ತೆಂಕಕಜೆಕಾರು ನವೋದಯ ಯುವಕ ಮಂಡಲಗಳ ಸಹಯೋಗವಿತ್ತು.
ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ರಕ್ತನಿಧಿ ಮೇಲ್ವಿಚಾರಕ ಎಡ್ವರ್ಡ್ ವಾಸ್ ರಕ್ತದಾನ ಮಹತ್ವದ ಮಾಹಿತಿ ನೀಡಿದರು.
ಬಡಗಕಜೆಕಾರು ಗ್ರಾ.ಪಂ. ಅಧ್ಯಕ್ಷ ವಜ್ರ ಪೂಜಾರಿ, ಸದಸ್ಯ ಸುರೇಶ್ ಬಾರ್ದೊಟ್ಟು, ಮಾಜಿ ಅಧ್ಯಕ್ಷ ಡೀಕಯ್ಯ ಬಂಗೇರ, ಧ.ಗ್ರಾ.ಯೋಜನೆ ಸೇವಾ ಪ್ರತಿನಿಧಿ ಸುಧಾ ರೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಾಬು, ರಥಬೀದಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರಾದ ನವೀನ್ ಕೊಣಾಜೆ, ಜೆಫ್ರಿ ರೋಡ್ರಿಗಸ್ ಮತ್ತಿತರರು ಪಾಲ್ಗೊಂಡರು.
ಎನ್ ಎಸ್ ಎಸ್ ಘಟಕ ಸೆಕ್ರೆಟರಿ ಸಿಂಧೂರ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯ ಪ್ರಾರ್ಥಿಸಿದರು. ಲಿಖಿತಾ ಸ್ವಾಗತಿಸಿದರು. ಅಭಿಷೇಕ್ ವಂದಿಸಿದರು.
ಈ ಸಂದರ್ಭ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ನಾಗರಿಕರೂ ರಕ್ತದಾನದಲ್ಲಿ ಪಾಲ್ಗೊಂಡರು.
No comments:
Post a Comment