![]() |
venu designing invitaion |
![]() |
na.da.damodara shetty with working committee |
![]() |
preparing invitation letters |
![]() |
we met vc prof.bhairappa at campus |
![]() |
inviting MCJ dept head prof.g.p.shivaram.... |
![]() |
rgistrar prof.narayana. |
![]() |
inviting VC pof. ka.bhairappa |
![]() |
udayavani manipal editor balakrishna holla with wc members |
![]() |
maam working committee meet at president venu sharma's office |
![]() |
prof.b.a.vivek rai with us |
ಸ್ನೇಹಿತರೇ...
ನಿಮಗೆಲ್ಲ ಗೊತ್ತಿರುವ ಹಾಗೆ, ಕಳೆದ ವರ್ಷ ಡಿ.20ರಂದು (2014) ಮಂಗಳೂರು ವಿ.ವಿ.ಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ (ಎಂಸಿಜೆ) ಸ್ನಾತಕೋತ್ತರ ಪದವಿ ಪಡೆದು ವಿವಿಧ ರಂಗಗಳಲ್ಲಿ ಉದ್ಯೋಗದಲ್ಲಿ ತೊಡಗಿರುವ ನಮ್ಮಲ್ಲಿ ಕೆಲವರು ಸೇರಿ ವಿಭಾಗದ ಬೆಳ್ಳಿಹಬ್ಬವನ್ನು ಎಂಸಿಜೆ 25 ಹೆಸರಲ್ಲಿ ಮಂಗಳೂರು ವಿ.ವಿ. ಕ್ಯಾಂಪಸ್ನಲ್ಲಿ ಆಚರಿಸಿದೆವು. ಈ ಕಾರ್ಯಕ್ರಮಕ್ಕೆ ಸುಮಾರು 50ಕ್ಕೂ ಮಿಕ್ಕಿ ಹಳೆ ವಿದ್ಯಾರ್ಥಿಗಳು, ಮುಖ್ಯವಾಗಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳೂ ಆಗಮಿಸಿ ಪ್ರೋತ್ಸಾಹಿಸಿದ್ದು ನಮಗೆ ತುಂಬಾ ಸ್ಫೂರ್ತಿ ನೀಡಿದೆ.
ಅದೇ ದಿನ ನಾವೆಲ್ಲ ಸೇರಿ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಹೆಸರಿನಲ್ಲಿ ಎಂಸಿಜೆ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಪುನಶ್ಚೇತನ ನೀಡಿದೆವು. ಆ ದಿನ, ಹಿರಿಯ ವಿದ್ಯಾರ್ಥಿ ವೇಣು ಶರ್ಮ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.
ನಂತರದ ದಿನಗಳಲ್ಲಿ ನಾವು ಮಂಗಳೂರಿನಲ್ಲಿ ಈ ಸಂಘದ ಪದಾಧಿಕಾರಿಗಳಲ್ಲಿ ಕೆಲವರು ಸೇರಿ ವರ್ಕಿಂಗ್ ಕಮಿಟಿ ರಚಿಸಿಕೊಂಡು ಇನ್ನೊಂದು ಬೃಹತ್ ಸಾರ್ವಜನಿಕ ಕಾರ್ಯಕ್ರಮ ಸಂಘಟಿಸಲು ನಿರ್ಧರಿಸಿದೆವು. ಅದರ ಫಲಶೃತಿಯೇ ಮನೋಭಿನಂದನ ಎಂಬ ಕಾರ್ಯಕ್ರಮ ಮೈದಳೆದಿದೆ.
ಏನಿದು ಮನೋಭಿನಂದನ
ಏ.26ರಂದು ಭಾನುವಾರ ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ ಅಪರಾಹ್ನ 1 ಗಂಟೆ ವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಕಾಯಕ್ರಮದಲ್ಲಿ ಒಟ್ಟು ಎರಡು ಪ್ರಮುಖ ಅಂಶಗಳಿವೆ.
-ಮೊದಲನೆಯದಾಗಿ ಮಂಗಳೂರಿನಯ ಹಿರಿಯ ಪತ್ರಕರ್ತ, ಪತ್ರಿಕೋದ್ಯಮದಲ್ಲಿ ಮೂರು ದಶಕ ಪೂರೈಸಿದ, ಉದಯವಾಣಿ ಪತ್ರಿಕೆಯ ಮಂಗಳೂರು ಸುದ್ದಿ ವಿಭಾಗ ಮುಖ್ಯಸ್ಥ ಮನೋಹರ ಪ್ರಸಾದ್ ಅವರನ್ನು ಅಭಿನಂದಿಸಿ, ಸನ್ಮಾನಿಸುವುದು. ಇದೇ ಕಾರಣಕ್ಕೆ ನಮ್ಮ ಸಮಾರಂಭಕ್ಕೆ ಮನೋಭಿನಂದನ ಎಂಬ ಹೆಸರು ಇರಿಸಲಾಗಿದೆ. ಈ ಕಾರ್ಯಕ್ರಮ ಬೆಳಗ್ಗೆ 10ರಿಂದ 11.30ರ ತನಕ ನಡೆಯಲಿದೆ. ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಉದ್ಯಮಿ ಸುಧಾಕರ ಪೇಜಾವರ ದುಬೈ, ಮಂಗಳೂರು ವಿ.ವಿ.ಕುಲಪತಿ ಪ್ರೊ.ಕೆ.ಬೈರಪ್ಪ ಅತಿಥಿಗಳಾಗಿ ಪಾಲ್ಗೊಳ್ಳುವರು. ಈ ಸಮಾರಂಭದಲ್ಲಿ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ವಿಶಿಷ್ಟವಾಗಿ ಅಭಿನಂದಿಸಲಾಗುವುದು. ತರಂಗ ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕರಾದ ಡಾ.ಸಂಧ್ಯಾ ಪೈ ಅವರು ಈ ಸಂದರ್ಭ, ನಾವು ಸಿದ್ಧಪಡಿಸಿದ ಮನೋಭಿನಂದನ ಎಂಬ ಹೆಸರಿನ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸುವರು. ಮಾಮ್ ಅಧ್ಯಕ್ಷ ವೇಣು ಶರ್ಮ ಅಧ್ಯಕ್ಷತೆ ವಹಿಸುವರು.
ಸಮಾಜದ ವಿವಿಧ ರಂಗಗಳ ಗಣ್ಯರು ಶುಭಾಶಂಸನೆ ಕೋರಲಿದ್ದಾರೆ.
-ಎರಡನೆ ಭಾಗ 11.30ರಿಂದ 1 ಗಂಟೆ ತನಕ ನಡೆಯಲಿದೆ. ಪ್ರದೇಶಾಭಿವೃದ್ಧಿಯಲ್ಲಿ ಮಂಗಳೂರು ವಿ.ವಿ. ಕೊಡುಗೆ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಮಂಗಳೂರು ವಿ.ವಿ. ಕರಾವಳಿ, ಕೊಡಗು, ಕಾಸರಗೋಡು ಭಾಗಗಳಿಗೆ ನೀಡಿದ ಕೊಡುಗೆ ಕುರಿತು ಇಲ್ಲಿ ಚರ್ಚೆ ನಡೆಯಲಿದೆ. ಮಂಗಳೂರು ವಿ.ವಿ. ರಿಜಿಸ್ಟ್ರಾರ್ ಪ್ರೊ.ಯಡಪಡಿತ್ತಾಯ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಚಿನ್ನಪ್ಪ ಗೌಡ, ಮಂಗಳೂರು ವಿ.ವಿ.ಸ್ಥಾಪಕ ಸದಸ್ಯ ಪ್ರೊ.ಶ್ರೀಪತಿ ತಂತ್ರಿ, ಸಂತ ಅಲೋಶಿಯಸ್ ಕಾಲೇಜ್ ಕುಲಸಚಿವ ಪ್ರೊ.ಎ.ಎಂ.ನರಹರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮಣಿಪಾಲ ವಿ.ವಿ. ನಿವೃತ್ತ ಕುಲಪತಿ ಪ್ರೊ.ಬಿ.ಎಂ.ಹೆಗ್ಡೆ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿ.ವಿ. ಕುಲಪತಿ ಪ್ರೊ.ಕೆ.ಬೈರಪ್ಪ ಉಪಸಂಹಾರ ನುಡಿ ಆಡುವರು.
--ಇವಿಷ್ಟು ಅಂದು ನಡೆಯುವ ಕಾರ್ಯಕ್ರಮದ ಸ್ಥೂಲ ಚಿತ್ರಣ.
ಹೈಲೈಟ್ಸ್
-ಈ ಕಾರ್ಯಕ್ರಮಕ್ಕೆ ಸುಮಾರು 1000 ಸಭಿಕರನ್ನು ನಿರೀಕ್ಷಿಸಲಾಗಿದೆ.
-ಮಂಗಳೂರಿನ ನಮ್ಮ ಕುಡ್ಲ ವಾಹಿನಿಯಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿಸಲು ಉದ್ದೇಶಿಸಲಾಗಿದೆ.
-ಮಂಗಳೂರಿನ ಪ್ರಮುಖ ನಾಗರಿಕರು, ವಿದ್ಯಾಭಿಮಾನಿಗಳು, ಶಿಕ್ಷಣ ಸಂಸ್ಥೆಗಳ ಪ್ರಮುಖರು, ಮಾಧ್ಯಮ ಮಿತ್ರರು, ವಿ.ವಿ.ಯ ವಿವಿಧ ವಿಭಾಗಗಳ ಪ್ರಮುಖರು, ಎಂಸಿಜೆ ವಿದ್ಯಾರ್ಥಿಗಳು, ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಹಿತ ಹಲವರನ್ನು ಆಹ್ವಾನಿಸಲಾಗುತ್ತಿದೆ.
-ಮನೋಹರ ಪ್ರಸಾದ್ ಸಾಧನೆಯನ್ನು ಬಿಂಬಿಸುವ ಆಕರ್ಷಕವಾದ ಮನೋಭಿನಂದನ ಎಂಬ ಅಭಿನಂದನಾ ಗ್ರಂಥ (ಅಂದಾಜು 150 ಪುಟ) ಮಾಮ್ ಗೌರವಾಧ್ಯಕ್ಷ ಸುರೇಂದ್ರ ಶೆಟ್ಟಿ ಸಂಪಾದಕತ್ವದಲ್ಲಿ ಸಿದ್ಧಗೊಳಿಸುತ್ತಿದೆ. ಮೌಲಿಕ ಲೇಖನ, ಅಪರೂಪದ ಚಿತ್ರಗಳು ಇದರಲ್ಲಿ ಅಡಕವಾಗಿವೆ.
-ಹಲವು ಪ್ರಾಯೋಜಕರ ನೆರವು ನಮಗೆ ಸಕಾಲಕ್ಕೆ ಲಭಿಸುತ್ತಿದ್ದು ಕಾರ್ಯಕ್ರಮದ ಯಶಸ್ಸಿನಲ್ಲಿ ಅವರ ಸಹಕಾರವನ್ನು ಸ್ಮರಸುತ್ತಿದ್ದೇವೆ.
-ಕಾರ್ಯಕ್ರಮದ ದಿನ ನಿಮಗೆಲ್ಲ ಐಸ್ ಕ್ರೀಂ, ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ.
--------------
ನಾವೇನು ಮಾಡುತ್ತಿದ್ದೇವೆ...?
ಕಳೆದ ಜನವರಿಯಿಂದಲೇ ನಾವು ಈ ಕಾಯಕ್ರಮದ ಯಶಸ್ಸಿಗೆ ಪ್ರಯತ್ನದಲ್ಲಿ ತೊಡಗಿದ್ದೇವೆ.
-ಅಧ್ಯಕ್ಷ ವೇಣು ಶರ್ಮ ನೇತೃತ್ವದಲ್ಲಿ ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್, ಸುರೇಂದ್ರ ಶೆಟ್ಟಿ, ಫ್ಲೋರಿನ್ ರೋಚ್, ಯೋಗೀಶ ಹೊಳ್ಳ, ವೇಣು ವಿನೋದ್ ಕೆ.ಎಸ್., ಕೃಷ್ಣ ಕಿಶೋರ್, ಸ್ಮಿತಾ ಶೆಣೈ... ಇಷ್ಟು ಮಂದಿ ನಿಯಮಿತವಾಗಿ ವೇಣು ಶರ್ಮದ ಕಚೇರಿಯಲ್ಲಿ ಸೇರಿ ಸಭೆಗಳನ್ನು ನಡೆಸಿ ಹಲವು ಸ್ತರಗಳಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಕಾರ್ಯತತ್ಪರರಾಗಿದ್ದೇವೆ. ಈ ನಡುವೆ ಸುರೇಶ ಪಳ್ಳಿ, ಹರೀಶ ಮೋಟುಕಾನ, ಗುರುರಾಜ ಪಣಿಯಾಡಿ, ಪ್ರಶಾಂತ ಸುವರ್ಣ, ಚಂದ್ರಶೇಖರ ಕುಳಮರ್ವ, ಸುಶಿಲೇಂದ್ರ, ಜಿನ್ನಪ್ಪ ಮತ್ತಿತರರೂ ಸಕಾಲದಲ್ಲಿ ನಮಗೆ ಸಹಾಯ ನೀಡಿದ್ದಾರೆ.
-ವೇಣು ವಿನೋದ್ ಅವರು ಆಕರ್ಷಕ ಲೋಗೊ, ಲೆಟರ್ ಹೆಡ್, ಆಹ್ವಾನ ಪತ್ರಿಕೆ ರಚಿಸಿದ್ದಾರೆ.
-ಯೋಗೀಶ ಹೊಳ್ಳ ಹಾಗೂ ಅಧ್ಯಕ್ಷ ವೇಣು ಶರ್ಮ ಅವರು ಮಾಮ್ ನೋಂದಣಿ ಪ್ರಕ್ರಿಯೆ, ಪ್ರಾಯೋಜಕತ್ವ ವ್ಯವಸ್ಥೆಯ ಹೊಣೆ ವಹಿಸಿಕೊಂಡಿದ್ದಾರೆ.
-ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿದ್ದು. ಮಾಮ್ ಸದಸ್ಯರಾದ ನಿಮ್ಮೆಲ್ಲರ ಪೂರ್ಣ ಪ್ರಮಾಣದ ಪ್ರೋತ್ಸಾಹ, ತುಂಬು ಹೃದಯದ ಸಹಕಾರ ನಮಗೆ ಬೇಕಿದೆ.
------------
ಸ್ನೇಹಿತರಿಗೆ ಆದಷ್ಟು ಮಟ್ಟಿಗೆ ನಮ್ಮಲ್ಲಿ ಐಡಿ ಇರುವ ಎಲ್ಲರಿಗೂ ಆಹ್ವಾನ ಪತ್ರ ಮೇಲ್ ಮಾಡಿದ್ದೇವೆ. ವಾಟ್ಸಾಪ್ನಲ್ಲಿ ಮಾಹಿತಿ ಹಾಕಿದ್ದೇವೆ. ನಿಮ್ಮ ಎಂಸಿಜೆ ಸ್ನೇಹಿತರಿಗೂ ಈ ವಿಚಾರ ತಿಳಿಸಿ, ಅವರಿಗೂ ಆಹ್ವಾನ ಪತ್ರ ಫಾರ್ವರ್ಡ್ ಮಾಡಿ ಸಹಕರಿಸಿ. ಆಹ್ವಾನ ಸಿಗದವರು, ಇದನ್ನೇ ಆಹ್ವಾನ ಎಂದು ತಿಳಿದು ದಯವಿಟ್ಟು ಏ.26ರಂದು ಮಂಗಳೂರಿಗೆ ಬಂದು ಕೈಜೋಡಿಸಿ.....
ಬೆಂಗಳೂರು ಸೇರಿದಂತೆ ವಿವಿಧೆಡೆ ಇರುವ ನಿಮಗೆ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಬರಲು ಆಗದೆ ಇರಲೂ ಬಹುದು. ಆದರೆ, ಇದು ನಿಮ್ಮ ವೇದಕೆ, ಈ ಬ್ಲಾಗ್, ವಾಟ್ಸಾಪ್ ಗ್ರೂಪಿನಲ್ಲಿ ನಿಮ್ಮ ಅನಿಸಿಕೆ ವ್ಯಕ್ತಪಡಿಸಿ ಪ್ರೋತ್ಸಾಹಿಸಬಹುದು. ಆದಷ್ಟು ಬಿಡುವು ಮಾಡಿಕೊಂಡು ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಕಳೆದ ಬಾರಿ ಎಂಸಿಜೆ 25 ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗದವರಿಗೂ ಇದೊಂದು ಉತ್ತಮ ಅವಕಾಶ, ಹಳೆ ಸ್ನೇಹಿತರನ್ನು ಭೇಟಿಯಾಗಲು... ಅಲ್ಲವೇ....
ಆದ್ದರಿಂದ ಆದಷ್ಟು ಮಟ್ಟಿಗೆ ನಿಮ್ಮ ಉಪಸ್ಥಿತಿ ಇರಲಿ, ಮುಂದೆಯೂ ನಮ್ಮ ಚಟುವಟಿಕೆಗಳು ಸಮಾಜಮುಖಿಯಾಗಿ ಮುಂದುವರಿಯಲಿರುವುದರಿಂದ, ಇದು ನಮ್ಮ ನಿಮ್ಮೆಲ್ಲರ ಕಾರ್ಯಕ್ರಮ ಆಗಿರುವುದರಿಂದ ಪೂರ್ಣ ಸಹಕಾರ ಇರಲಿ.
-ಮಾಮ್ ಕಾರ್ಯಕಾರಿ ಸಮಿತಿ ಪರವಾಗಿ ಕೆಎಂ.
No comments:
Post a Comment