Friday, 25 September 2015

MEGHA BLOOD DONATION CAMP ON SEPTEMBER 25, 2015 IN MEDIA VIEW



MEGHA BLOOD DONATION CAMP ON SEPTEMBER 25, 2015 @ LADY GOSHAN HOSPITAL


ಮಾಮ್‍ ಮಕ್ಕಳ ಮಾತು

ನಮಸ್ತೆ,

ನಿಮಗೆಲ್ಲ ಗೊತ್ತಿರುವ ಹಾಗೆ ಮಾಮ್ ಆರಂಭಿಸಿದ ರಕ್ತದಾನ ಅಭಿಯಾನ ಸರಣಿ ಐದು ಶಿಬಿರಗಳನ್ನು ನಿನ್ನೆಯಷ್ಟೇ ಪೂರೈಸಿದೆ. ಒಟ್ಟು 415ರಷ್ಟು ಯೂನಿಟ್ ರಕ್ತ ಐದು ಶಿಬಿರಗಳಲ್ಲಿ ಸಂಗ್ರಹವಾಗಿದೆ. ವಿವಿಧ ಸಂಘ ಸಂಸ್ಥೆಗಳ ಆಯೋಜನೆಯಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ನೇತೃತ್ವದಲ್ಲಿ ನಡೆಯುವ ಶಿಬಿರಗಳಿಗೆ ಮಾಮ್ ಸಹಯೋಗ ನೀಡುತ್ತಿದ್ದು, ನಮ್ಮ ನಿರೀಕ್ಷೆಗೂ ಮೀರಿ ರಕ್ತದಾನಿಗಳ ಪ್ರೋತ್ಸಾಹ ಪಡೆಯುವಲ್ಲಿ ಸಹಕಾರಿಯಾಗಿದೆ.ಅಂದೆ ಹಾಗೆ, ನೀವು ಮಾಮ್ ವಾಟ್ಸಾಪ್ ಗ್ರೂಪಿನಲ್ಲಿ ಪ್ರತಿ ಶಿಬಿರ ನಡೆಯುವ ಮೊದಲು ಹಾಗೂ ನಂತರ ಮಾಧ್ಯಮ ವರದಿಗಳ ಕಟ್ಟಿಂಗ್ ಗಳನ್ನು ನೋಡಿರುತ್ತೀರಿ. ಆದರೆ, ಈ ಶಿಬಿರಗಳಿಗೆ ಸಹಯೋಗ ನೀಡುವುದರ ಹಿಂದೆ ಮಾಮ್ ವರ್ಕಿಂಗ್ ಕಮಿಟಿ ಸದಸ್ಯರ ಶ್ರಮ ಇದೆ. ನಿಮಗೆ ಗೊತ್ತೋ ಇಲ್ಲವೋ, ಗೊತ್ತಿಲ್ಲ. ಮಾಮ್ ಆಕ್ಟಿವ್, ಮಾಮ್ ಸೈಲೆಂಟ್ ಹಾಗೂ ಮಾಮ್ ಬೆಂಗಳೂರು ಚಾಪ್ಟರ್ ಅಂತ ಮೂರು ಮಾಮ್ ರಿಲೇಟೆಡ್ ವಾಟ್ಸಾಪ್ ಗ್ರೂಪುಗಳಲ್ಲಿ ಸುಮಾರು 150ರಷ್ಟು ಹಳೆ ವಿದ್ಯಾರ್ಥಿಗಳ ಸಂಪರ್ಕ ನಮಗಿದೆ. ಇದರ ಹೊರತಾಗಿ ಇನ್ನೊಂದು ಗ್ರೂಪ್ ಇದೆ. ಅದು ಮಾಮ್ ವರ್ಕಿಂಗ್ ಕಮಿಟಿ ಅಂತ. ಸುಮಾರು 10 ಮಂದಿ ಸಕ್ರಿಯ ಕಾರ್ಯಕಾರಿ ಸದಸ್ಯರು ಅದರಲ್ಲಿದ್ದು ಮಾಮ್ ಚಟುವಟಿಕೆಗಳ ಎಲ್ಲಾ ಆಗುಹೋಗುಗಳ ಬಗ್ಗೆ ಗಂಟೆ ಗಂಟೆಗೂ ಎಂಬಂತೆ ಅಪ್ ಡೇಟ್ ಗಳು ಅಲ್ಲಿ ಪೋಸ್ಟ್ ಆಗುತ್ತಲೇ ಇರುತ್ತವೆ. ಒಂದು ಕಾರ್ಯಕ್ರಮ ನಡೆಯಬೇಕಿದ್ದರೆ ಜವಾಬ್ದಾರಿ ಹಂಚಿಕೆಯಾಗಿರುತ್ತದೆ. ಒಬ್ಬರು ಸಂಘಟನೆಗಳನ್ನು ಸಂಪರ್ಕಿಸಿದರೆ ಇನ್ನೊಬ್ಬರು ಪ್ರೆಸ್ ನೋಟ್ ಸಿದ್ಧಪಡಿಸುತ್ತಾರೆ, ಮತ್ತೊಬ್ಬರು ಅದನ್ನು ಮಾಧ್ಯಮಗಳಿಗೆ ಕಳುಹಿಸುತ್ತಾರೆ, ಇನ್ನೊಬ್ಬರು ಬ್ಯಾನರ್ ಡಿಸೈನ್ ಮಾಡ್ತಾರೆ, ಅದನ್ನು ಮೇಲ್ ಮೂಲಕ ಪಡೆದು ಮತ್ತೊಬ್ಬರು ಪ್ರಿಂಟ್ ಗೆ ಕಳುಹಿಸುತ್ತಾರೆ,  ಮತ್ತೊಬ್ಬರು ಅದನ್ನು ಕಲೆಕ್ಟ್ ಮಾಡಿ ತಂದು ಕಾರ್ಯಕ್ರಮ ನಡೆಸುವಲ್ಲಿಗೆ ತಲುಪಿಸುತ್ತಾರೆ. ಕೊನೆಗೆ ಮಾಮ್  ಪ್ರತಿನಿಧಿಯೊಬ್ಬರು ಶಿಬಿರಕ್ಕೆ ತೆರಳಿ ವರದಿ ಮಾಡಿ ಸೂಕ್ತ ಪ್ರಚಾರ ನೀಡುತ್ತಾರೆ...
ದೂರದ ಕೊಪ್ಪಳದಲ್ಲಿರೋ ಸ್ನೇಹಿತರೊಬ್ಬರು ಎಲ್ಲ ಬೆಳವಣಿಗೆಗಳನ್ನು ಬ್ಲಾಗಲ್ಲಿ ಅಪ್‍ಡೇಟ್‍ ಮಾಡುತ್ತಾರೆ.
ನಂತರ ಇನ್ನೊಂದು ಕಾರ್ಯಕ್ರಮ.... ಹೀಗೆ ತಂಡದ ಪ್ರಯತ್ನ ಈ ಯಶಸ್ಸಿನ ಹಿಂದಿದೆ. ಈ ಎಲ್ಲಾ ಆಗು ಹೋಗುಗಳು ನಮ್ಮ ವರ್ಕಿಂಗ್ ಕಮಿಟಿ ಗ್ರೂಪಿನಲ್ಲಿ ಚರ್ಚೆ ಆಗುತ್ತಲೇ ಇರುತ್ತವೆ. ವಯಸ್ಸಿನಲ್ಲಿ, ಹುದ್ದೆಗಳಲ್ಲಿ ತುಂಬ ವ್ಯತ್ಯಾಸವಿರುವ ನಾವೆಲ್ಲ ಮಾಮ್ ವಿಚಾರಕ್ಕೆ ಬಂದಾಗ ಸಮಯ ಹೊಂದಿಸಿ, ಅಭಿಪ್ರಾಯ ಭೇದಗಳು, ಕೆಲಸ ಒತ್ತಡ ಬದಿಗಿಟ್ಟು ಕೆಲಸ ಮಾಡಿ ಸಾರ್ಥಕತೆ ಕಾಣಲು ಸಾಧ್ಯವಾಗಿದೆ. ವೈಯಕ್ತಿಕಾಗಿ ಒಬ್ಬೊಬ್ಬರನ್ನೇ ಸ್ಮರಿಸುತ್ತಾ ಹೋದರೆ ಬರಹ ಉದ್ದವಾದೀತು.ನಮ್ಮ ಬೆಂಗಳೂರು ಚಾಪ್ಟರಿನಲ್ಲಿ ಮಂಗಳೂರಿನ ತಂಡಕ್ಕಿಂತಲೂ ಹೆಚ್ಚು ಉತ್ಸಾಹಿಗಳು ಇದ್ದೀರಿ. ನೀವೂ ತಂಡ ಪ್ರಯತ್ನವಾಗಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಮಾಮ್ ಚಟುವಟಿಕೆ ನಿರಂತರವಾಗಿರುವಂತೆ ನೋಡಿಕೊಳ್ಳಿ ಎಂಬ ಮನವಿ ನನ್ನದು.ಎಷ್ಟೋ ಬಾರಿ ಗುಂಪಿನಲ್ಲಿರುವವರಿಗೆ ಶ್ರಮದ ಹಿಂದಿನ ಕೈಗಳ ಕೊಡುಗೆ ಗೊತ್ತಿರುವುದಿಲ್ಲ. ನಮ್ಮ ಕಾರ್ಯವಿಧಾನ ನಿಮಗೂ ಸ್ಫೂರ್ತಿಯಾಗಲಿ ಎಂಬ ಆಶಯವಷ್ಟೇ ಈ ಬರಹದ ಉದ್ದೇಶ ಹೊರತು ನಮ್ಮ ಬೆನ್ನು ತಟ್ಟಿಕೊಳ್ಳುವುದಲ್ಲ....ವಂದನೆಗಳು
-KM, admin.(ವಾಟ್ಸ್ ಆ್ಯಪ್‍ ಗ್ರೂಪ್‍)

Monday, 21 September 2015

MAAM @ LUNCH @ DEEPA COMFORTS after AGM on 18.07.2015




ಸೆ. 20, 2015ರಂದು ನಡೆದ ರಕ್ತದಾನ ಶಿಬಿರ

ಸೆ. 20, 2015ರಂದು ಮಂಗಳೂರು ತಾಲ್ಲೂಕು ಜೋಕಟ್ಟೆಯಲ್ಲಿ  ‘ಮಾಮ್‌’,  ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಶ್ರೀದೇವಿ ಭಕ್ತ ಸಂಘದ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದ ನೋಟ. ಭಕ್ತ ವೃಂದದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಶಿಬಿರ ಉದ್ಘಾಟಿಸಿದರು.



Monday, 14 September 2015

BLOOD DONATION CAMP: SEPTEMBER 14th @ DHAVALA COLLEGE MOODBIDRI

Inaugural programme of Blood Donation camp at Dhavala college Moodbidri. Principal Mr.Ravish kumar. Tashildar Mr.Mohammad ishak.Venu sharma.from MAAM.  NSS coordinater  of Dhavala Collage Ms.Padmaja. Red Cross president Dr. Ronald fernadiz are in picture.

ಮಾಮ್ ರಕ್ತದಾನ ಅಭಿಯಾನ ಮೂರನೇ ಶಿಬಿರ ಸಂಪನ್ನ

ಮಂಗಳೂರು:-ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ನೇತೃತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ನಡೆಯುತ್ತಿರುವ ರಕ್ತದಾನ ಅಭಿಯಾನ ಸರಣಿಯ ಮೂರನೇ ಶಿಬಿರ ಸೋಮವಾರ ಮೂಡುಬಿದಿರೆಯ ಶ್ರೀ ಧವಳಾ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಿಬಿರ ಉದ್ಘಾಟಿಸಿದ ತಹಸೀಲ್ದಾರ್ ಮೊಹಮ್ಮದ್ ಇಸಾಕ್ ಮಾತನಾಡಿರಕ್ತದಾನ ಮಹಾದಾನ ಎಂದರಲ್ಲದೆಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಧವಳಾ ಕಾಲೇಜಿನ ಪ್ರಾಂಶುಪಾಲ ರವೀಶ್ ಕುಮಾರ್ಮಾಮ್ ಗೌರವಾಧ್ಯಕ್ಷ ವೇಣು ಶರ್ಮಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಘಟಕದ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ಕಾಲೇಜಿನ ಎನ್ ಎಸ್ ಎಸ್ ಸಂಯೋಜನಾ ಅಧಿಕಾರಿ ಪದ್ಮಜಾ ಮತ್ತಿತರರು ಹಾಜರಿದ್ದರು.
ಬಳಿಕ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಮಾಮ್ ಸಹಭಾಗಿತ್ವದಲ್ಲಿ ಈಗಾಗಲೇ ಮೂರು ರಕ್ತದಾನ ಶಿಬಿರಗಳು ನಡೆದಿದ್ದುಮಂಗಳೂರು ವಿ.ವಿ. ವ್ಯಾಪ್ತಿಯ ವಿವಿಧ ಕಾಲೇಜುಗಳು ಹಾಗೂ ಸಂಘಟನೆಗಳ ಸಹಕಾರದಲ್ಲಿ ಶಿಬಿರಗಳನ್ನು ನಡೆಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ರಕ್ತದಾನ ಜಾಗೃತಿ ಮೂಡಿಸಿ ರಕ್ತದಾನ ಸರಣಿ ಶಿಬಿರಗಳನ್ನು ಸಂಘಟಿಸುವುದು ಅಭಿಯಾನದ ಉದ್ದೇಶ.
ಸರಣಿಯ ಮುಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬಯಸುವವರು ಮಾಮ್ ಪದಾಧಿಕಾರಿಗಳನ್ನು (9481976969, 9448424922, 9448480323) ಸಂಪರ್ಕಿಸಬಹುದು ಎಂದು ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್  ತಿಳಿಸಿದ್ದಾರೆ.

Monday, 7 September 2015

ಮಂಗಳೂರಿನ ಮಾಮ್‌ ಕಚೇರಿಗೆ ಉದಯವಾಣಿ ಸಂಪಾದಕ ಶ್ರೀ ಬಾಲಕೃಷ್ಣ ಹೊಳ್ಳ ಅವರು ಸೆ. 7ರಂದು ಭೇಟಿ ನೀಡಿ ಚರ್ಚಿಸಿದರು. ಇದೇ ಸಂದರ್ಭ ಅವರು ಮಾಮ್‌ ಸದಸ್ಯತ್ವ ಪಡೆದರು. ಮಾಮ್‌ ಅಧ್ಯಕ್ಷೆ ಫ್ಲೋರಿನ್‌ ರೋಚ್‌, ಗೌರವಾಧ್ಯಕ್ಷ ವೇಣು ಶರ್ಮ, ವೇಣುವಿನೋದ್‌ ಚಿತ್ರದಲ್ಲಿದ್ದಾರೆ.

ಸೆ.14ರಂದು ಮೂರನೇ ‘ರಕ್ತದಾನ ಅಭಿಯಾನ’

ಮಂಗಳೂರು: ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆ ಫ್ ಮಂಗಳಗಂಗೋತ್ರಿ (ಮಾಮ್) ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸೊಸೈಟಿ ಸಹಯೋಗದಲ್ಲಿ ಆರಂಭವಾಗಿರುವ ರಕ್ತದಾನ ಅಭಿಯಾನ ಸರಣಿಯ ಮೂರನೇ ಶಿಬಿರ ಸೆ.14ರಂದು ಸೋಮವಾರ ಮೂಡುಬಿದಿರೆ ಶ್ರೀ ಧವಳಾ ಕಾಲೇಜಿನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 9.30ರಿಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯುವುದು. ಮಾಮ್ ಸಹಭಾಗಿತ್ವದಲ್ಲಿ ಈಗಾಗಲೇ ಮಂಗಳೂರು ಮಿಲಾಗ್ರಿಸ್ ಕಾಲೇಜ್ ಹಾಗೂ ಮಿಫ್ಸೆ ಸಂಸ್ಥೆಗಳಲ್ಲಿ ಎರಡು ರಕ್ತದಾನ ಶಿಬಿರಗಳು ನಡೆದಿದ್ದು, ಮಂಗಳೂರು ವಿ.ವಿ. ವ್ಯಾಪ್ತಿಯ ವಿವಿಧ ಕಾಲೇಜುಗಳು ಹಾಗೂ ಸಂಘಟನೆಗಳ ಸಹಕಾರದಲ್ಲಿ ಶಿಬಿರಗಳನ್ನು ನಡೆಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ರಕ್ತದಾನ ಜಾಗೃತಿ ಮೂಡಿಸಿ ರಕ್ತದಾನ ಸರಣಿ ಶಿಬಿರಗಳನ್ನು ಸಂಘಟಿಸುವುದು ಅಭಿಯಾನದ ಉದ್ದೇಶ.ಸರಣಿಯ ಮುಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬಯಸುವವರು ಮಾಮ್ ಪದಾಧಿಕಾರಿಗಳನ್ನು (೯೪೮೧೯೭೬೯೬೯, ೯೪೪೮೪೨೪೯೨೨, ೯೪೪೮೪೮೦೩೨೩) ಸಂಪರ್ಕಿಸಬಹುದು ಎಂದು ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್  ಪ್ರಕಟಣೆ ತಿಳಿಸಿದೆ.