Inaugural programme of Blood Donation camp at Dhavala college Moodbidri. Principal Mr.Ravish kumar. Tashildar Mr.Mohammad ishak.Venu sharma.from MAAM. NSS coordinater of Dhavala Collage Ms.Padmaja. Red Cross president Dr. Ronald fernadiz are in picture.
ಮಾಮ್ ರಕ್ತದಾನ ಅಭಿಯಾನ ಮೂರನೇ ಶಿಬಿರ ಸಂಪನ್ನ
ಮಂಗಳೂರು:-ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ನೇತೃತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ನಡೆಯುತ್ತಿರುವ ರಕ್ತದಾನ ಅಭಿಯಾನ ಸರಣಿಯ ಮೂರನೇ ಶಿಬಿರ ಸೋಮವಾರ ಮೂಡುಬಿದಿರೆಯ ಶ್ರೀ ಧವಳಾ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಿಬಿರ ಉದ್ಘಾಟಿಸಿದ ತಹಸೀಲ್ದಾರ್ ಮೊಹಮ್ಮದ್ ಇಸಾಕ್ ಮಾತನಾಡಿ, ರಕ್ತದಾನ ಮಹಾದಾನ ಎಂದರಲ್ಲದೆ, ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಧವಳಾ ಕಾಲೇಜಿನ ಪ್ರಾಂಶುಪಾಲ ರವೀಶ್ ಕುಮಾರ್, ಮಾಮ್ ಗೌರವಾಧ್ಯಕ್ಷ ವೇಣು ಶರ್ಮ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಘಟಕದ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್, ಕಾಲೇಜಿನ ಎನ್ ಎಸ್ ಎಸ್ ಸಂಯೋಜನಾ ಅಧಿಕಾರಿ ಪದ್ಮಜಾ ಮತ್ತಿತರರು ಹಾಜರಿದ್ದರು.
ಬಳಿಕ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಮಾಮ್ ಸಹಭಾಗಿತ್ವದಲ್ಲಿ ಈಗಾಗಲೇ ಮೂರು ರಕ್ತದಾನ ಶಿಬಿರಗಳು ನಡೆದಿದ್ದು, ಮಂಗಳೂರು ವಿ.ವಿ. ವ್ಯಾಪ್ತಿಯ ವಿವಿಧ ಕಾಲೇಜುಗಳು ಹಾಗೂ ಸಂಘಟನೆಗಳ ಸಹಕಾರದಲ್ಲಿ ಶಿಬಿರಗಳನ್ನು ನಡೆಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ರಕ್ತದಾನ ಜಾಗೃತಿ ಮೂಡಿಸಿ ರಕ್ತದಾನ ಸರಣಿ ಶಿಬಿರಗಳನ್ನು ಸಂಘಟಿಸುವುದು ಅಭಿಯಾನದ ಉದ್ದೇಶ.
ಸರಣಿಯ ಮುಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬಯಸುವವರು ಮಾಮ್ ಪದಾಧಿಕಾರಿಗಳನ್ನು (9481976969, 9448424922, 9448480323) ಸಂಪರ್ಕಿಸಬಹುದು ಎಂದು ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ತಿಳಿಸಿದ್ದಾರೆ.
No comments:
Post a Comment