Monday, 19 December 2016

ಮಾಮ್ ಗೆ ಇಂದು ಎರಡನೇ ಜನ್ಮದಿನದ ಸಂಭ್ರಮ....

ಎಲ್ಲ ಸ್ನೇಹಿತರಿಗೆ ನಮಸ್ಕಾರ...
ಹಾಗೂ ಮಾಮ್ ನ ಎರಡನೇ ಜನ್ಮದಿನದ ಶುಭಾಶಯಗಳು...


ಸರಿಯಾಗಿ ಎರಡು ವರ್ಷಗಳ ಹಿಂದೆ, ಅಂದರೆ 2014 ಡಿ.20ರಂದು ಮಂಗಳೂರು ವಿ.ವಿ. ಮಂಗಳಗಂಗೋತ್ರಿಯ ಕ್ಯಾಂಪಸಿನಲ್ಲಿ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ 25ನೇ ವರ್ಷದ ಸಂಭ್ರಮದ ಪ್ರಯುಕ್ತ ಎಂಸಿಜೆ ಅಲ್ಯೂಮ್ನಿಗಳ ಗೆಟ್ ಟುಗೆದರ್ ಹಮ್ಮಿಕೊಳ್ಳಲಾಗಿತ್ತು. ಕಳೆದ 25 ವರ್ಷಗಳ ವಿವಿಧ ಬ್ಯಾಚುಗಳ ಸುಮಾರು 50ಕ್ಕೂ ಹೆಚ್ಚು ಮಂದಿ ಹಳೆ ವಿದ್ಯಾರ್ಥಿಗಳು, ಆಗಿನ ವಿದ್ಯಾರ್ಥಿಗಳು, ಪತ್ರಿಕೋದ್ಯಮ ಕಲಿಸಿದ ಉಪನ್ಯಾಸಕರು, ವಿ.ವಿ. ಅಧಿಕಾರಿಗಳು ಆ ಸಮಾರಂಭದಲ್ಲಿ ಪಾಲ್ಗೊಂಡು ವಿಭಾಗದ ಬೆಳ್ಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.

ಅದೇ ದಿನ ಮಧ್ಯಾಹ್ನ ನಡೆದ ಸಭೆಯಲ್ಲಿ ನಮ್ಮ ಈಗಿನ ಮೀಡಿಯಾ ಆಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಂಸ್ಥೆ ಹುಟ್ಟಿಕೊಂಡಿತು. ವೇಣು ಶರ್ಮ ಅವರ ನೇತೃತ್ವದಲ್ಲಿ ಮೊದಲ ಕಾರ್ಯಕಾರಿ ಸಮಿತಿ ರಚನೆಯಾಯಿತು. ಬಳಿಕ 2015ರಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಫ್ಲೋರಿನ್ ರೋಚ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು. ಪ್ರಸ್ತುತ ಅವರ ನೇತೃತ್ವದ ಪದಾಧಿಕಾರಿಗಳ ಸಮಿತಿ ಮಾಮ್ ನ್ನು ಮುನ್ನಡೆಸುತ್ತಿದೆ. ಹಾಗಾಗಿ ಇಂದು ನಮ್ಮ ಸಂಘಟನೆಗೆ ಎರಡರ ಹರೆಯ...

ಮೊತ್ತಮೊದಲಾಗಿ ಹಳೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವುದೇ ನಮ್ಮೆದುರಿಗಿರುವ ಸವಾಲಾಗಿತ್ತು. ಆದಕ್ಕಾಗಿ ಈ ವಾಟ್ಸಪ್ ಗ್ರೂಪನ್ನು ಹುಟ್ಟುಹಾಕಲಾಯಿತು. ಮಾಮ್ ಆಕ್ಟಿವ್, ಮಾಮ್ ಸೈಲೆಂಟ್, ಮಾಮ್ ಚಾಟ್, ಮಾಮ್ ಬೆಂಗಳೂರು ಚಾಪ್ಟರ್ ಹೆಸರಿನ ನಾಲ್ಕು ಪ್ರಧಾನ ಗುಂಪುಗಳಲ್ಲಿ ನಮ್ಮ ಹಳೆ ವಿದ್ಯಾರ್ಥಿಗಳನ್ನು ಸೇರಿಸುವ ಪ್ರಯತ್ನ ಮಾಡಿದ್ದು, ಎಲ್ಲರನ್ನೂ ಸೌಹಾರ್ದಯುತವಾಗಿ ಸೇರಿಸಿ ಮುಂದೆ ಕರೆದೊಯ್ಯುವ ಪ್ರಯತ್ನ ಇಂದಿಗೂ ಸಾಗಿದೆ. ಜೊತೆಗೆ ಮಾಮ್ ಕಾರ್ಯಕಾರಿ ಸಮಿತ ತನ್ನದೇ ಆದ ವರ್ಕಿಂಗ್ ಕಮಿಟಿ ಹೆಸರಿನ ಪ್ರತ್ಯೇಕ ಗ್ರೂಪ್ ಹೊಂದಿದ್ದು, ಕಾರ್ಯಚಟುವಟಿಕೆಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಿದೆ.


ಹಳೆ ವಿದ್ಯಾರ್ಥಿಗಳ ಸಂಘಟನೆ, ಮಾಧ್ಯಮ ಸಂಬಂಧಿ ವಿಚಾರಗಳ ಕುರಿತ ಅವಲೋಕನ, ತರಬೇತಿ, ಪ್ರಕಾಶನ ಇತ್ಯಾದಿ ಹಲವು ಉದ್ದೇಶಗಳೊಂದಿಗೆ ಮಾಮ್ ಆರಂಭವಾಗಿದ್ದು, ಇನ್ನೂ ಬೆಳವಣಿಗೆ ಹಂತದಲ್ಲಿದೆ. ನಮ್ಮ ಸಂಸ್ಥೆ ರಿಜಿಸ್ಟ್ರರ್ಡ್ ಆಗಿದೆ, ಸ್ವಂತ ಬ್ಯಾಂಕ್ ಖಾತೆ ಹೊಂದಿದೆ, ಲೆಕ್ಕಪರಿಶೋಧನೆ ಕಳೆದ ವಾರ್ಷಿಕ ಮಹಾಸಭೆ ವೇಳೆ ನಡೆದಿದೆ. ಸುಮಾರು 150ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ನಮ್ಮ ಸಂಪರ್ಕದಲ್ಲಿದ್ದು ಸುಮಾರು 40ರಷ್ಟು ಮಂದಿ ಅಧಿಕೃತವಾಗಿ ಚಂದಾ ಕಟ್ಟಿ ಸದಸ್ಯರಾದವರಿದ್ದಾರೆ.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಅಭಿನಂದಿಸುವ ಮನೋಭಿನಂದನ ಕಾರ್ಯಕ್ರಮ 2015 ಏಪ್ರಿಲ್ ನಲ್ಲಿ ನಡೆದಿದ್ದು, ಅದೇ ಸಂದರ್ಭದಲ್ಲಿ ಮಾಮ್ ವತಿಯಿಂದಲೇ ಅಚ್ಚುಕಟ್ಟಾದ ಅಭಿನಂದನಾ ಗ್ರಂಥವನ್ನೂ ಪ್ರಕಟಿಸಿದ್ದು ನಮ್ಮ ಹೆಗ್ಗಳಿಕೆ. ಬಳಿಕ ಸರಣಿ ರಕ್ತದಾನ ಶಿಬಿರಗಳನ್ನು ರೆಡ್ ಕ್ರಾಸ್ ಸೊಸೈಟಿ ಜೊತೆ ಸೇರಿ ನಡೆಸಿರುವುದು ನಮಗೆ ಸಾರ್ಥಕತೆ ತಂದ ವಿಚಾರ.

ಬಳಿಕ ಮಂಗಳೂರು ಪರಿಸರದಲ್ಲಿ ವಿವಿಧ ಮಾಧ್ಯಮ ಸಂಬಂಧಿ ಕಾರ್ಯಾಗಾರಗಳಲ್ಲಿ ನಮ್ಮ ಸದಸ್ಯರು ಪಾಲ್ಗೊಂಡು ಸಂಪನ್ಮೂಲ ವ್ಯಕ್ತಿಗಳಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ. ಮಾಮ್ ವತಿಯಿಂದ ಕಳೆದ ವರ್ಷ ಕಿರು ಪ್ರವಾಸವನ್ನೂ ಹಮ್ಮಿಕೊಳ್ಳಲಾಗಿತ್ತು...

ಮಾಮ್ ನ ಬಹುನಿರೀಕ್ಷಿತ ಮಾಮ್ ಇನ್ ಸ್ಪೈರ್ ಅವಾರ್ಡ್ ನ್ನು 2016ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದ್ದು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರು.5000 ಮೌಲ್ಯದ ನಗದು ಸಹಿತ ಪುರಸ್ಕಾರ ಇದಾಗಿದ್ದು, ಈಗಾಗಲೇ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿಯ ಕುರಿತು ಸೂಚನೆಗಳನ್ನು ಕಳುಹಿಸಲಾಗಿದೆ. ಮಾಧ್ಯಮ ಪ್ರಕಟಣೆಯನ್ನೂ ನೀಡಲಾಗಿದೆ. ಶರತ್ ಹೆಗ್ಡೆ ನೇತೃತ್ವದ ಸಮಿತಿ ಇದರ ಉಸ್ತುವಾರಿ ಹೊತ್ತಿದೆ.

ಮಾಮ್ ನ ಮಹತ್ವಾಕಾಂಕ್ಷೆಯ ವೆಬ್ ಸೈಟ್ ಆರಂಭದ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಲೋಕಾರ್ಪಣೆಯಷ್ಟೇ ಬಾಕಿ ಉಳಿದಿದೆ. ಡಾ. ರೊನಾಲ್ಡ್ ಅನಿಲ್ ಫರ್ನಾಂಡಿಸ್ ನೇತೃತ್ವದ ಸಮಿತಿ ವೆಬ್ ಸೈಟ್ ರಚನೆಯ ಉಸ್ತುವಾರಿ ನಡೆಸುತ್ತಿದೆ.

ಹಳೆ ವಿದ್ಯಾರ್ಥಿಗಳ ಸಮ್ಮಿಲನ, ಮಾಮ್ ಸಹಯೋಗದ ಕಾರ್ಯಾಗಾರ ಮತ್ತಿತರ ಉದ್ದೇಶಿತ ಕಾರ್ಯಕ್ರಮಗಳು ಭವಿಷ್ಯದಲ್ಲಿ ನಡೆಯಲಿದ್ದು, ನಿಮ್ಮೆಲ್ಲರ ಸಹಕಾರ ಅತ್ಯಂತ ಅಗತ್ಯ. ನಾವು ನಮ್ಮ ಸಂಘಟನೆಯ ಹೆಸರಿಗೆ ಪೂರಕವಾಗಿ, ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡುತ್ತಾ ಸಂಸ್ಥೆಯನ್ನು ಬಲಿಷ್ಠವಾಗಿ ಕಟ್ಟಬೇಕಾಗಿದೆ. ನಮ್ಮದೊಂದು ಮಾಧ್ಯಮ ಸಹಯೋಗಿ ಸಂಘಟನೆ. ನಮ್ಮ ಬಳಗದಲ್ಲಾಗಲೀ, ವಾಟ್ಸಪ್ ಗ್ರೂಪುಗಳಲ್ಲಾಗಲಿ ಅನಗತ್ಯ ವಿಚಾರಗಳಿಗೋಸ್ಕರ, ಅಪ್ರಸ್ತುತ ವಿಚಾರಗಳಿಗೋಸ್ಕರ ಚರ್ಚೆ, ಕಾಲಹರಣ ಮಾಡುವುದಕ್ಕಿಂತ ಸಂಘಟನೆಯನ್ನು ಹೇಗೆ ಕಟ್ಟಬಹುದು. ಅದರಲ್ಲಿ ಪ್ರತಿಯೊಬ್ಬರ ಸಹಯೋಗ ಹೇಗಿರಬಹುದು ಎಂದು ಚಿಂತಿಸುವ ಮೂಲಕ ಮಾಮ್ ನ ಹೆಸರನ್ನು ಚಿರಸ್ಥಾಯಿಯಾಗಿಸುವಲ್ಲಿ ಎಲ್ಲರ ಸಹಯೋಗ ಅಪೇಕ್ಷಿಸುತ್ತೇನೆ.

-ಕೃಷ್ಣಮೋಹನ, ಪ್ರಧಾನ ಕಾರ್ಯದರ್ಶಿ, ಮಾಮ್.


2014 ಡಿಸೆಂಬರ್ 20ರಂದು ಮಾಮ್ ಹುಟ್ಟಿದ ದಿನದ ಸಂಭ್ರಮವನ್ನು ಮೆಲುಕು ಹಾಕಲು ಈ ಲಿಂಕ್ ಕ್ಲಿಕ್ ಮಾಡಿ...

http://maammangalore.blogspot.in/search?updated-min=2014-01-01T00:00:00-08:00&updated-max=2014-12-27T03:59:00-08:00&max-results=26&start=1&by-date=false



-------------
ನಮ್ಮೆಲ್ಲಾ ಚಟುವಟಿಕೆಗಳ ಪುನರಾವಲೋಕನಕ್ಕೆ ನಮ್ಮ ಬ್ಲಾಗ್ maammangalore.blogspot.in ಪುಟಗಳನ್ನು ತಿರುವಿ.

No comments:

Post a Comment