Monday, 23 January 2017

ಫೆ.19 ರಂದು ವಿ.ವಿ. ಕ್ಯಾಂಪಸ್‍ನಲ್ಲಿ ಹಳೆ ವಿದ್ಯಾರ್ಥಿಗಳ `ಸಂಗಮ': ನೀವು ಬರ್ತೀರಲ್ವ?

ಸ್ನೇಹಿತರೇ,

ನೀವು ಕಲಿತ ವಿದ್ಯಾಸಂಸ್ಥೆಗೆ ಭೇಟಿ ಕೊಡೋದು, ಅಲ್ಲಿ ಒಂದಷ್ಟು ಸುತ್ತಾಡೋದು, ಹಳೆ ಸ್ನೇಹಿತರನ್ನು ಭೇಟಿಯಾಗೋದು... ಈಗ ನೀವು ಏನಾಗಿದ್ದೀರಿ ಎಂಬ, ನಿಮ್ಮ ಗೆಳೆಯರು ಹೇಗಿದ್ದಾರೆ ಅಂತ ತಿಳ್ಕೊಳ್ಳೋದು, ನಿಮಗೆ ಪಾಠ ಮಾಡಿದ ಶಿಕ್ಷಕರ ಜೊತೆ ಹಳೆ ನೆನಪುಗಳನ್ನು ಹಂಚಿಕೊಳ್ಳೋದು, ನಿಮ್ಮ ಹಳೆ ಕ್ಲಾಸ್ ರೂಂ ಹೇಗಿದೆ ಅಂತ ನೋಡ್ಕೊಂಡು ಅಲ್ಲಿ ಮತ್ತೊಮ್ಮೆ ಕುಳಿತು ಕಳೆದ ದಿನಗಳ ಮೆಲುಕು ಹಾಕುವುದು ಎಷ್ಟೊಂದು ಖುಷಿಯ ವಿಚಾರ ಅಲ್ವ?







ಮಂಗಳೂರು ವಿ.ವಿ.ಯ ಹಳೆ ವಿದ್ಯಾರ್ಥಿಯಾಗಿರುವ ನಿಮಗೆ ಇಂಥದ್ದೊಂದು ಸದಾವಕಾಶವನ್ನು ಮಾ (ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್) ಕಲ್ಪಿಸಿಕೊಡುತ್ತಿದೆ. ನಾವು-ನೀವು ಕಲಿತ ಮಂಗಳೂರು ವಿ.ವಿ.ಯ ಹಳೆ ವಿದ್ಯಾರ್ಥಿ ಸಂಘಟನೆ `ಮಾ' ಸಂಗಮ' (SANGAMAA) ಹೆಸರಿನಲ್ಲಿ ಫೆ.19 ರಂದು ಭಾನುವಾರ ನಾವೆಲ್ಲ, ಅಂದರೆ ಮಂಗಳೂರು ವಿ.ವಿ. ಕ್ಯಾಂಪಸ್‍ನಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಸೇರಿ ಹಳೆ ದಿನಗಳ ಮೆಲುಕು ಹಾಕಲಿದ್ದೇವೆ. ನೀವೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕೆಂಬ ನಿರೀಕ್ಷೆ, ಆಸೆ ನಮ್ಮದು. ಅಂದು ಬೆಳಗ್ಗೆ 9 ರಿಂದ ಅಪರಾಹ್ನ 2 ಗಂಟೆ ತನಕ ಹಳೆ ವಿದ್ಯಾರ್ಥಿಗಳ ಸಮ್ಮಿಲನ ನಡೆಯಲಿದೆ. 



ಮಂಗಳೂರು ವಿ.ವಿ.ಯ ಹಳೆ ವಿದ್ಯಾರ್ಥಿಗಳಾದ ತಾವೆಲ್ಲಾ ಈ ಬೃಹತ್ ಸಂಗಮಕ್ಕಾಗಿ ಮಾ ಜೊತೆ ಕೈಜೋಡಿಸಲು ಕೋರಿಕೆ. ಈ ಮೂಲಕ ಮಾ ಸಂಘಟನೆಯ ಧ್ಯೇಯೋದ್ದೇಶಗಳಾದ ಅಶಕ್ತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ಸಹಾಯ ನೀಡಿಕೆ, ಉದ್ಯೋಗಾವಕಾಶ, ಅಂತಾರಾಷ್ಟ್ರೀಯ ವಿದ್ಯಾರ್ಥಿ ನಿಲಯ ಸ್ಥಾಪನೆ, ಶೈಕ್ಷಣಿಕ ವಿನಿಮಯ ಮತ್ತಿತರ ಕಾರ್ಯಕ್ರಮಗಳನ್ನು ಈಡೇರಿಸುವಲ್ಲಿ ನೀವೂ ಕೈಜೋಡಿಸಬೇಕೆಂಬ ವಿನಂತಿ ನಮ್ಮದು. 


ಇಂದೇ ನಿಮ್ಮ ಕ್ಯಾಲೆಂಡರ್‍ನಲ್ಲಿ ಫೆ. 19ರ ದಿನವನ್ನು ಗುರುತಿಸಿಟ್ಟುಕೊಳ್ಳಿ. ನಿತ್ಯ ಬದುಕಿನ ವ್ಯಸ್ತ ಚಟುವಟಿಕೆಗಳಿಗೆ ಒಂದಿಷ್ಟು ಬಿಡುವು ನೀಡಿ ಕಳೆದು ಹೋದ ವಿದ್ಯಾರ್ಥಿ ಬದುಕಿನ ಸುವರ್ಣ ಘಳಿಗೆಗಳನ್ನು ಮತ್ತೊಮ್ಮೆ ಸವಿಯಲು ಪುರುಸೊತ್ತು ಮಾಡಿ ಬನ್ನಿ. 



ದಯವಿಟ್ಟು ಫೆ. 19ರ ದಿನವನ್ನು ಈ `ಸಂಗಮ' ಕಾರ್ಯಕ್ರಮಕ್ಕಾಗಿ ಮೀಸಲಿಡಿ. ಈ ಅಪರೂಪದ ಕಾರ್ಯಕ್ರಮದ ಮಾಹಿತಿ ಪ್ರಸಾರ ಜವಾಬ್ದಾರಿಯನ್ನು ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ (ಎಂಸಿಜೆ)ದ ಹಳೆ ವಿದ್ಯಾರ್ಥಿಗಳ ಸಂಘಟನೆ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ-MAAM ) ವಹಿಸಿಕೊಂಡಿದ್ದು, ಕಾರ್ಯಕ್ರಮಕ್ಕೆ ನಿಮ್ಮ ಪೂರ್ಣ ಸಹಕಾರ ಬಯಸುತ್ತಿದ್ದೇವೆ. 


ದಯವಿಟ್ಟು  ಮಂಗಳಗಂಗೋತ್ರಿಯ ವಿ.ವಿ. ಕ್ಯಾಂಪಸ್‍ಗೆ ಬರುವಾಗ ನಿಮ್ಮ ಸಹಪಾಠಿಗಳಿಗೆ, ಬ್ಯಾಚ್‍ಮೇಟ್‍ಗಳಿಗೂ ಈ ಕಾರ್ಯಕ್ರಮದ ಮಾಹಿತಿ ತಲುಪಿಸಿ ಅವರೂ ಬರುವಂತೆ ನೋಡಿಕೊಳ್ಳಿ. ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ. ನೀವು ಕಲಿತ ವಿಭಾಗದ ಸಾಮಾಜಿಕ ಜಾಲ ತಾಣಗಳ ಗುಂಪುಗಳಲ್ಲಿ,  ಹಾಗೂ ಸ್ನೇಹಿತರ ವಲಯದಲ್ಲೂ ಈ ಮಾಹಿತಿಯನ್ನು ಪ್ರಸರಿಸಿ. ಹೆಚ್ಚಿನ ಮಾಹಿತಿಗೆ ಈ ಸಂಖ್ಯೆಗೆ ಕರೆ ಮಾಡಬಹುದು: 8618587992.
ಈಮೇಲ್ maasangamaa@gmail.com
 ಅಥವಾ ತಮ್ಮ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸಬಹುದು.

Warm Regards,                  
Dr P L Dharma & Venu Sharma
Conveners of “Sangamaa” 

-------------------------------------------- -MAAM (Media Partner SANGAMAA)

No comments:

Post a Comment