ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ(ಮಾಮ್) ಇದರ 2017ನೇ ಸಾಲಿನ ವಾರ್ಷಿಕ ಮಹಾಸಭೆ (ಮೂರನೇ ಎಜಿಎಂ) ಶನಿವಾರ (14.10.2017)ಮಂಗಳೂರು ಬಿಜೈ ಭಾರತೀನಗರದ ಆಡ್‌ಐಡಿಯಾ ಕಚೇರಿಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್. ಅವರು ಸ್ವಾಗತಿಸಿದರು. ನಿರ್ಗಮನ ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಳೆದ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ನಿರ್ಗಮನ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು 2015 16ನೇ ಸಾಲಿನ ಪರಿಶೋಧನೆಗೊಳಗಾದ ಲೆಕ್ಕಪತ್ರ ಮಂಡಿಸಿದರು.
ಸಂಘದಲ್ಲಿರುವ ಎರಡು ನಿರಖು ಠೇವಣಿಯ ಹೊರತಾಗಿ ಮಹಾಸಭೆಯ ದಿನದ ವರೆಗೆ ರು.12012 ಉಳಿತಾಯ ಖಾತೆಯಲ್ಲಿರುವ ಮಾಹಿತಿ ನೀಡಲಾಯಿತು.
ಬಳಿಕ ಸಂಘದ ನಿರ್ಗಮನ ಅಧ್ಯಕ್ಷೆ ಫ್ಲೋರಿನ್ ರೋಚ್ ಅವರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ನಂತರ 2017 19ನೇ ಅವಧಿಯ ಮುಂದಿನ ಎರಡು ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಉದಯವಾಣಿ ಮಣಿಪಾಲ ಆವೃತ್ತಿ ಸಂಪಾದಕ ಎ.ವಿ.ಬಾಲಕೃಷ್ಣ ಹೊಳ್ಳ ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ಸುರೇಶ್ ಡಿ.ಪಳ್ಳಿ ಹಾಗೂ ಕೋಶಾಧಿಕಾರಿಯಾಗಿ ವಿಜಯಕರ್ನಾಟಕ ಪತ್ರಿಕೆಯ ಮುಖ್ಯ ಕಾಪಿ ಎಡಿಟರ್ ಯೋಗೀಶ್ ಹೊಳ್ಳ ಆಯ್ಕೆಯಾದರು.
ಬಳಿಕ ನೂತನ ಅಧ್ಯಕ್ಷ ಬಾಲಕೃಷ್ಣ ಹೊಳ್ಳರ ಅಧ್ಯಕ್ಷತೆಯಲ್ಲಿ ಮುಂದಿನ ಸಾಲಿ ಕಾರ್ಯಚಟುವಟಿಕೆಗಳ ಕುರಿತು ಚರ್ಚೆಗಳು ನಡೆದವು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ವಂದಿಸಿದರು. ಕಳೆದ ಜೂನ್ ನಲ್ಲಿ ವಿವಾಹ ಬಂಧನಕ್ಕೊಳಗಾದ ನೂತನ ಪ್ರಧಾನ ಕಾರ್ಯದರ್ಶಿ ಸುರೇಶ್ ಪಳ್ಳಿ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು. ಸಭೆಯ ಬಳಿಕ ಕದ್ರಿಯ ಡಿಂಕಿ ಡೈನ್ ನಲ್ಲಿ ಭೋಜನ ಮಾಡಲಾಯಿತು.
ಸಭೆಯಲ್ಲಿ 2017ರಲ್ಲಿ ವ್ಯಾಸಂಗ ಮುಗಿಸಿದವರ ಸಹಿತ ಒಟ್ಟು 30 ಮಂದಿ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು.
ಮಹಾಸಭೆಯಲ್ಲಿ ಓರ್ವರು ಆಜೀವ ಸದಸ್ಯರಾಗಿ ಹಾಗೂ ಇತರ 10 ಮಂದಿ ವಾರ್ಷಿಕ ಸದಸ್ಯರಾಗಿ ಶುಲ್ಕ ಪಾವತಿಸಿ ಸೇರ್ಪಡೆಗೊಂಡರು.
ಈ ವರ್ಷ ವ್ಯಾಸಂಗ ಮುಗಿಸಿ ಬಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
......
ಮಹಾಸಭೆಯಲ್ಲಿ ಪಾಲ್ಗೊಂಡ ಸದಸ್ಯರು
1) ಅಹ್ಮದ್ ಬಾವಾ (ದೈಜಿ ವರ್ಲ್ಡ್)
2) ಹರೀಶ್ ಮೋಟುಕಾನ (ವಿಜಯವಾಣಿ)
3) ಇರ್ಫಾನ್ (ವಾರ್ತಾಭಾರತಿ)
4) ಕಾರ್ತಿಕ್ (ಇಂಟರ್ನ್ ಶಿಪ್)
5) ಕುಶನ್ ಕೆ. (ಪ್ರಜಾವಾಣಿ)
6) ಮಹಾಂತೇಶ್ ಹಿರೇಮಠ್ (ಉಪನ್ಯಾಸಕರು, ಟಿ.ವಿ.ಆಂಕರ್)
7) ಹರೀಶ್ ಕುಲ್ಕುಂದ (ವಿಜಯವಾಣಿ)
8) ಕಾವ್ಯಾ
9) ಮೋಹನ್ ಗೇರುಕಟ್ಟೆ (ಕನ್ನಡಪ್ರಭ)
10) ಸುರೇಶ್ ಪುದುವೆಟ್ಟು (ಉದಯವಾಣಿ)
11) ರೊನಾಲ್ಡ್ ಅನಿಲ್ ಫರ್ನಾಂಡಿಸ್ (ಡೆಕ್ಕನ್ ಹೆರಾಲ್ಡ್)
12) ಈಶ್ವರಚಂದ್ರ (ಉದಯವಾಣಿ)
13) ವೇಣುವಿನೋದ್ ಕೆ.ಎಸ್.(ವಿಜಯವಾಣಿ)
14) ಶರತ್ ಹೆಗ್ಡೆ (ಪ್ರಜಾವಾಣಿ)
15) ಅಭಿಲಾಶ್ ಬಿ.ಸಿ.
16) ಸುರೇಶ್ ಡಿ.ಪಳ್ಳಿ (ಹೊಸದಿಗಂತ)
17) ಚೈತ್ರೇಶ್ ಸಿ. (ವಿಜಯವಾಣಿ)
18) ಸದಾಶಿವ ಕೆ. (ಉದಯವಾಣಿ)
19) ಗುರುರಾಜ್ ಡಿ.ಪಣಿಯಾಡಿ (ಡೆಕ್ಕನ್ ಕ್ರಾನಿಕಲ್)
20) ಕೃಷ್ಣಮೋಹನ (ಕನ್ನಡಪ್ರಭ)
21) ವೇಣು ಶರ್ಮ (ಆಡ್ ಐಡಿಯಾ)
22) ಸ್ಮಿತಾ ಶೆಣೈ (ಉಪನ್ಯಾಸಕರು)
23) ಎ.ವಿ.ಬಾಲಕೃಷ್ಣ ಹೊಳ್ಳ (ಉದಯವಾಣಿ)
24) ದೇವಿಪ್ರಸಾದ್ ಕೆ. (ಕನ್ನಡಪ್ರಭ)
25) ಫ್ಲೋನ್ ರೋಚ್ (ಆಕಾಶವಾಣಿ ಕಾರವಾರ)
26) ಸಂಶೀರ್ ಬುಡೋಳಿ (ರಾಜ್ ಟಿವಿ)
27) ಕೃಷ್ಣಕಿಶೋರ್ ವೈ (ಸ್ವ ಉದ್ಯೋಗಿ)
28) ರಾಜೇಶ್ ಫೆರಾವೋ (ಪ್ರಜಾವಾಣಿ)
29) ಕಿರಣ್ (ಟಿವಿ7)
30) ಖಾದರ್ ಶಾ (ವಾರ್ತಾ ಇಲಾಖೆ)
......
ಮೂರನೇ ವಾರ್ಷಿಕ ಮಹಾಸಭೆಯ ನಿರ್ಣಯಗಳು
1) 2016 17ನೇ ಸಾಲಿನ ಮಾಮ್ ಇನ್ ಸ್ಪೈರ್ ಅವಾರ್ಡ್ ವಿಜೇತರಿಗೆ ಮುಂದಿನ ಡಿಸೆಂಬರ್ ಅಥವಾ ಜನವರಿಯಲ್ಲಿ ಮಂಗಳೂರು ನಗರದಲ್ಲಿ ಒಂದು ಸಮಾರಂಭ ನಡೆಸಿ ಅದರಲ್ಲಿ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಯಿತು. ಇದೇ ಸಮಾರಂಭದಲ್ಲಿ ಮಂಗಳೂರು ವಿ.ವಿ.ಪತ್ರಿಕೋದ್ಯಮ ವಿಭಾಗ ಪ್ರಾಧ್ಯಾಪಕರಾಗಿ ನಿವೃತ್ತರಾಗುತ್ತಿರುವ ಪ್ರೊ.ಜಿ.ಪಿ.ಶಿವರಾಂ ಅವರನ್ನು ಬೀಳ್ಕೊಡಲನಿ ನಿರ್ಧರಿಸಲಾಯಿತು. ಈ ಕುರಿತು ಹೆಚ್ಚಿನ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮಾಮ್ ಮಂಗಳೂರಿನ ಕಾರ್ಯಕಾರಿ ಸಮಿತಿಗೆ ವಹಿಸಲಾಯಿತು.
2) ಈಗಿರುವ ಸದಸ್ಯರ ಸಂಖ್ಯೆಯನ್ನು ಹೆಚ್ಚಿನ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲು ನಿರ್ಧರಿಸಲಾಯಿತು. ಪ್ರತಿ ಮಾಧ್ಯಮ ಸಂಸ್ಥೆಯಲ್ಲಿರುವ ಹಿರಿಯ ಸದಸ್ಯರು ತಮ್ಮ ಸಂಸ್ಥೆಯಲ್ಲಿರುವ ಎಂಸಿಜೆ ಹಳೆ ವಿದ್ಯಾರ್ಥಿಗಳನ್ನು ಸದಸ್ಯರಾಗಿಸಲು ಶ್ರಮಿಸಲು ಸೂಚನೆ ನೀಡಲಾಯಿತು.
3) ಮಾಮ್ ಸದಸ್ಯರ ಪ್ರವಾಸ ಮುಂಬರುವ ದಿನದಲ್ಲಿ ಏರ್ಪಡಿಸಲು ನಿರ್ಧರಿಸಲಾಯಿತು.
4) ಮಾಮ್ ಬೆಂಗಳೂರು ಚಾಪ್ಟರ್ ಚಟುವಟಿಕೆಯನ್ನು ಚುರುಕುಗೊಳಿಸಲು ಶೀಘ್ರದಲ್ಲಿ ವಾರಾಂತ್ಯದಲ್ಲಿ ನೂತನ ಪದಾಧಿಕಾರಿಗಳ ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧರಿಸಲಾಯಿತು.
5) ಮಾ ಸಂಘಟನೆ ಜೊತೆ ಸೇರಿ ಶೈಕ್ಷಣಿಕ ವಿಚಾರವಾಗಿ ವಿಚಾರಸಂಕಿರಣ ನಡೆಸುವಲ್ಲಿ ಮಾಮ್ ಸಹಭಾಗಿತ್ವ ವಹಿಸುವ ಕುರಿತು ತೀರ್ಮಾನಿಸಲಾಯಿತು. ಜೊತೆಗೆ ಮಂಗಳೂರು ಬೆಸೆಂಟ್ ಕಾಲೇಜ್ ಸಹಯೋಗದಲ್ಲಿ ಕಾರ್ಯಕ್ರಮವೊಂದನ್ನು ನಡೆಸಲು ನಿರ್ಣಯಿಸಲಾಯಿತು.
6) ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳ ಜೊತೆಗೆ ಮಾಮ್ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು.
ಮಾಮ್ 2017-19ನೇ ಸಾಲಿನ ನೂತನ ಪದಾಧಿಕಾರಿಗಳು
ಅಧ್ಯಕ್ಷ: ಎ.ವಿ.ಬಾಲಕೃಷ್ಣ ಹೊಳ್ಳ (Udayavani) (988015580)
ಗೌರವಾಧ್ಯಕ್ಷ: ವೇಣು ಶರ್ಮಾ (AdDidea) (9620959900)
ಪ್ರಧಾನ ಕಾರ್ಯದರ್ಶಿ: ಸುರೇಶ್ ಡಿ.ಪಳ್ಳಿ (Hosadigantha) (9964025940)
ಕೋಶಾಧಿಕಾರಿ: ಯೋಗೀಶ್ ಹೊಳ್ಳ (Vijayakarnataka)
ಕಾರ್ಯದರ್ಶಿಗಳು: ವೇಣು ವಿನೋದ್ ಕೆ.ಎಸ್, ಹರೀಶ್ ಮೋಟುಕಾನ, ರಾಮಚಂದ್ರ ಮುಳಿಯಾಲ (ಬೆಂಗಳೂರು)
ಉಪಾಧ್ಯಕ್ಷರು: ಡಾ.ರೊನಾಲ್ಡ್ ಅನಿಲ್ ಪೆರ್ನಾಂಡಿಸ್, ಶರತ್ ಹೆಗ್ಡೆ ಕಡ್ತಲ, ಸದಾಶಿವ ಖಂಡಿಗೆ (ಬೆಂಗಳೂರು)
ಕಾರ್ಯಕ್ರಮ ಸಂಯೋಜಕ: ಕೃಷ್ಣ ಕಿಶೋರ್
ಕಾರ್ಯಕಾರಿ ಸಮಿತಿ ಸದಸ್ಯರು: ಸುರೇಶ್ ಪುದುವೆಟ್ಟು, ಹರೀಶ ಕುಲ್ಕುಂದ, ಚೈತ್ರೇಶ್, ದೇವಿಪ್ರಸಾದ್, ಮೋಹನ್ ಗೇರುಕಟ್ಟೆ, ಸಂಶೀರ್ ಬುಡೋಳಿ, ಅಹ್ಮದ್ ಬಾವಾ, ರಾಜೇಶ್, ಕಾವ್ಯಾ ಮತ್ತು ಅಭಿಲಾಷ್.
ಮಾಮ್ ಇನ್‌ಸ್ಪೈರ್ ಅವಾರ್ಡ್ ಕಮಿಟಿ:
ಶರತ್ ಹೆಗ್ಡೆ ಕಡ್ತಲ (ಸಂಯೋಜಕರು)
ಸದಸ್ಯರು: ಸ್ಮಿತಾ ಶೆಣೈ, ಮಹಾಂತೇಶ ಹಿರೇಮಠ್, ಇರ್ಫಾನ್ ಮತ್ತು ಈಶ್ವರಚಂದ್ರ
---------------------------------------
PHOTO GALLERY:
(PHOTOS: Venuvinod KS and Krishnakishore Y)
(Report: KM)
No comments:
Post a Comment