Wednesday, 11 October 2017

ಮಾಮ್ 2016-17 ಸಾಲಿನ ಚಟುವಟಿಕೆಗಳ ವರದಿ




ಮಾಮ್ ಕಾರ್ಯಕಾರಿ ಸಮಿತಿ ಪರವಾಗಿ ನಾನು 2016-17ನೇ ಸಾಲಿನ ಮಾಮ್ ವಾರ್ಷಿಕ ಚಟುವಟಿಕೆಗಳ ವರದಿಯನ್ನು ನಿಮ್ಮ ಮುಂದಿಡಲು ಹರ್ಷ ವ್ಯಕ್ತಪಡಿಸುತ್ತೇನೆ. ಕಳೆದ ಸಾಲಿನ ಆಗುಹೋಗುಗಳ ಮೇಲೆ ಕಣ್ಣಾಡಿಸುವ ಮೊದಲು ಮಾಮ್ ಹುಟ್ಟಿಕೊಂಡ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲು ಇಚ್ಚಿಸುತ್ತೇನೆ. ಮಂಗಳೂರು ವಿ.ವಿ.ಯ ಎಂಸಿಜೆ ವಿಭಾಗಕ್ಕೆ 25 ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವೃತ್ತಿನಿರತ ಕೆಲವು ಮಂದಿ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಮಂಗಳೂರು ವಿ.ವಿ.ಯಲ್ಲಿ 2014ರ ಡಿಸೆಂಬರ್ 20ರಂದು ನಡೆಸಿದ ಎಂಸಿಜೆ 25 ಸಮ್ಮಿಲನದ ಸಂದರ್ಭ ಮಾಮ್ ಸಂಘಟನೆಯನ್ನು ಸ್ಥಾಪಿಸಲಾಯಿತು. ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ ಅಥವಾ ಮಾಮ್ ಎಂದು ಸಂಸ್ಥೆಗೆ ಹೆಸರಿಡಲಾಯಿತು. ಸಂಘಟನೆಗೆ ಹಳೆ ವಿದ್ಯಾರ್ಥಿಗಳ ಕಡೆಯಿಂದ ಬಂದ ಅಭೂತಪೂರ್ವ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ನಡೆಸಲು ಮಂಗಳೂರು ಕೇಂದ್ರವಾಗಿಟ್ಟು ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿ ಚಟುವಟಿಕೆಗಳನ್ನು ಆರಂಭಿಸಲಾಯಿತು.
-ಮಾಮ್ ನ ದ್ವಿತೀಯ ವಾರ್ಷಿಕ ಮಹಾಸಭೆ 2016ರ ಆಗಸ್ಟ್ 20ರಂದು ಇದೇ ಆಡ್ ಐಡಿಯಾ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಎಂಸಿಜೆ ವಿಭಾಗ ಅಧ್ಯಕ್ಷರ ಪರವಾಗಿ ಪ್ರತಿನಿಧಿ ಪ್ರೊ.ಜಿ.ಪಿ.ಶಿವರಾಂ ಸೇರಿದಂತೆ 20 ಮಂದಿ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು. ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಅವರು ಮಾಮ್ ಕಾರ್ಯಚಟುವಟಿಕೆಗಳ ಕುರಿತು ಸಂಕ್ಷಿಪ್ತ ವರದಿ ಮಂಡನೆ ಮಾಡಿದರು. ಬಳಿಕ ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು ಮಾಮ್ ಆರಂಭವಾದಾಗಿನಿಂದ ಈ ವರೆಗಿನ ಲೆಕ್ಕಪತ್ರ (ಬ್ಯಾಲೆನ್ಸ್ ಶೀಟ್) ಮಂಡಿಸಿದರು. ಮಾಮ್ ಸ್ಥಾಪನೆ ಆದ ಬಳಿಕ ಮೊದಲ ಬಾರಿಗೆ ಲೆಕ್ಕಪರಿಶೋಧಕರ ಮೂಲಕ ಮಾಮ್ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಿದ್ದು ಈ ಆಯವ್ಯಯಕ್ಕೆ ಧ್ವನಿಮತದ ಮೂಲಕ ಸದಸ್ಯರು ಅಂಗೀಕಾರ ಸೂಚಿಸಿದರು. ಲೆಕ್ಕ ಪತ್ರ ಮಂಡನೆ ಬಳಿಕ ವಿವಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಕೋಶಾಧಿಕಾರಿ ಸ್ಮಿತಾ ಶೆಣೈ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಲಾಪ ನಿರ್ವಹಿಸಿದರು.
ಈ ತನಕ 37 ಮಂದಿ ಆಜೀವ ಸದಸ್ಯರು ಹಾಗೂ ಐದು ಮಂದಿ ವಾರ್ಷಿಕ ಸದಸ್ಯರನ್ನು ಕಳೆದ ವರ್ಷ ಫೆಬ್ರವರಿ ತನಕದ ಲೆಕ್ಕಾಚಾರದಂತೆ ನಾವು ಹೊಂದಿದ್ದೇವೆ. ಕಳೆದ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಫೆಬ್ರವರಿಯಲ್ಲಿ ನಡೆದ ಮಾ ಸಂಗಮ ಕಾರ್ಯಕ್ರಮದ ಸಂದರ್ಭದಲ್ಲೂ ನೂತನ ಸದಸ್ಯರು ಸೇರ್ಪಡೆಗೊಂಡಿದ್ದಾರೆ.
........
ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್ ಮಾ ವತಿಯಿಂದ ಕಳೆದ ಫೆ.19ರಂದು ಮಂಗಳೂರು ವಿ.ವಿ. ಕ್ಯಾಂಪಸ್ಸಿನ ಮಂಗಳಾ ಸಭಾಂಗಣದಲ್ಲಿ ಆಯೋಜಿಸಿದ್ದ ಎಲ್ಲ ವಿಭಾಗದವರು ಹಳೆ ವಿದ್ಯಾರ್ಥಿಗಳ ಸಮಾವೇಶ ‘ಮಾ ಸಂಗಮ’ ಇದರ ಮಾಧ್ಯಮ ನಿರ್ವಹಣೆ ಹಾಗೂ ಪ್ರಚಾರದ ಜವಾಬ್ದಾರಿಯನ್ನು ಮಾಮ್ ವಹಿಸಿತ್ತು. ಮಾಮ್ ಕಡೆಯಿಂದ ಕಾರ್ಯಕ್ರಮಕ್ಕೆ ಮಾಧ್ಯಮ ಸಹಯೋಗ ನೀಡಲಾಯಿತು. ಸಮಾರಂಭದಲ್ಲಿ ವಿವಿಧ ವಿಭಾಗಗಳ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು. ಇದೇ ದಿನ, ಅಂದರೆ ಫೆ.19ರಂದು ಮಾಮ್‌ನ ಬಹುದಿನದ ಕನಸು ನನಸಾಯಿತು. ನಮ್ಮದೇ ಆದ ವೆಬ್‌ಸೈಟ್ ಮ್ಯಾಮ್‌ಮಂಗಳೂರು ಡಾಟ್ ಕಾಂ. ಸಿದ್ಧಗೊಂಡು ಹಳೆ ವಿದ್ಯಾರ್ಥಿಗಳ ಸಮಾವೇಶ ಸಂಗಮದ ಭವ್ಯ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿತು. ಮಾ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ವೆಬ್‌ಸೈಟಿಗೆ ಚಾಲನೆ ನೀಡಿದರು. ಇದೇ ಸಂದರ್ಭ ವೇದಿಕೆಯಲ್ಲಿ ಈ ವರ್ಷದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಾಮ್ ಉಪಾಧ್ಯಕ್ಷ ಡಾ.ರೋನಾಲ್ಡ್ ಅನಿಲ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು. ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ವಂದಿಸಿದರು. ಸುಮಾರು 31 ಹಳೆ ವಿದ್ಯಾರ್ಥಿಗಳ ಮಾ ಸಂಗಮದಲ್ಲಿ ಪಾಲ್ಗೊಂಡಿದ್ದರು. ಎಂಸಿಜೆ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಜಿ.ಪಿ.ಶಿವರಾಂ, ಪ್ರಸ್ತುತ ವರ್ಷದ ಎಂಸಿಜೆ ವಿದ್ಯಾರ್ಥಿಗಳು ಹಾಜರಿದ್ದರು. ಮಂಗಳೂರಿನ ವಸಂತ ಕೇದಿಕೆ ಅವರು ವೆಬ್‌ಸೈಟ್ ವಿನ್ಯಾಸಗೊಳಿಸಿದ್ದು, ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಹಾಗೂ ವೇಣುವಿನೋದ್ ಕೆ.ಎಸ್.ಅವರು ವೆಬ್‌ಸೈಟ್ ಸಂಯೋಜನೆಯ ನೇತೃತ್ವ ವಹಿಸಿದ್ದರು. ಈ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲೇ ಸದಸ್ಯತ್ವ ಹೊಂದಲು ಅವಕಾಶವಿದ್ದು, ನಮ್ಮ ಹಳೆ ಬ್ಲಾಗ್‌ಗೂ ಈ ವೆಬ್‌ಸೈಟಿನಲ್ಲಿ ಲಿಂಕ್ ಕಲ್ಪಿಲಾಗಿದೆ, ಮಾಮ್ ಚಟುವಟಿಕೆಗಳ ವಿವರ ಇನ್ನು ಮುಂದೆ ಈ ವೆಬ್‌ಸೈಟಿನಲ್ಲಿ ಮೂಡಿಬರಲಿದೆ. ಮುಂದಿನ ವರ್ಷದ ಮೈಂಟೆನನ್ಸ್ ಶುಲ್ಕವನ್ನು ನಾವು ಈಗಾಗಲೇ ಪಾವತಿಸಿದ್ದು, ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟಿನಲ್ಲಿ ಇನ್ನಷ್ಟೇ ಅಪ್‌ಲೋಡ್ ಮಾಡಬೇಕಿದೆ.
ಅದೇ ದಿನ ಅಪರಾಹ್ನದ ಭೋಜನದ ಬಳಿಕ ಎಂಸಿಜೆ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ಹಳೆ ವಿದ್ಯಾರ್ಥಿಗಳ ಅನೌಪಚಾರಿಕ ಸಭೆ ನಡೆಯಿತು. ಪ್ರಸ್ತುತ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ, ಮುಂದಿನ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಯಿತು. ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಅಧ್ಯಕ್ಷತೆ ವಹಿಸಿದ್ದರು. ಎಂಸಿಜೆ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಜೆ.ಪಿ.ಶಿವರಾಂ, ಉದಯವಾಣಿ ಸಂಪಾದಕ ಎ.ವಿ.ಬಾಲಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ, ಕೋಶಾಧಿಕಾರಿ ಸ್ಮಿತಾ ಶೆಣೈ, ಬೆಂಗಳೂರು ಪ್ರತಿನಿಧಿ ಸೂರ್ಯನಾರಾಯಣ ವಜ್ರಾಂಗಿ, ಉಪಾಧ್ಯಕ್ಷ ಶರತ್ ಹೆಗ್ಡೆ ಕಡ್ತಲ ಮತ್ತಿತರರು ಮಾತನಾಡಿದರು.
ಅಂದಿನ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
-ಮುಂದೆ ಕೈಗೊಳ್ಳುವ ಮಾಮ್ ಪ್ರವಾಸದಲ್ಲಿ ಪ್ರಸ್ತುತ ದ್ವಿತೀಯ ವರ್ಷದ ವಿದ್ಯಾರ್ಥಿಗಳೂ ಪಾಲ್ಗೊಳ್ಳುವುದು.
-ವ್ಯಾಸಂಗ ಮುಗಿಸಿ ಹೊರಹೋಗುವ ವಿದ್ಯಾರ್ಥಿಗಳು ಮಾಮ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವುದು.
-ಬೆಂಗಳೂರಿನಲ್ಲಿ ಮಾಮ್ ಚಾಪ್ಟರ್‌ನ್ನು ಬಲಪಡಿಸುವುದು.
-ಸದಸ್ಯತ್ವ ಅಭಿಯಾನವನ್ನು ವೇಗಗೊಳಿಸುವುದು.
ಈ ಸಂದರ್ಭ ಓರ್ವ ಆಜೀವ ಸದಸ್ಯರು ಸೇರಿದಂತೆ ನಾಲ್ವರು ಸದಸ್ಯರು ಮಾಮ್‌ಗೆ ಶುಲ್ಕ ಪಾವತಿಸಿ ಸೇರ್ಪಡೆಗೊಂಡರು.
ಮಾ ಸಂಗಮದಲ್ಲಿ ಮಾಮ್ ಪ್ರತಿನಿಧಿಗಳಾಗಿ 32 ಮಂದಿ ಹಾಜರಿದ್ದರು.

........................
ಪಣಂಬೂರು: ಮಾಮ್ ಸಹಭಾಗಿತ್ವದಲ್ಲಿ ಮಹಾಲಸಾ ವಿದ್ಯಾರ್ಥಿಗಳಿಂದ ಮರಳು ಕಲಾಕೃತಿ ರಚನೆ
ಮಂಗಳಗಂಗೋತ್ರಿ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸಂಘ (ಮಾಮ್), ಭಾರತೀಯ ರೆಡ್‌ಕ್ರಾಸ್ ಮತ್ತು ಮಂಗಳೂರಿನ ಮಹಾಲಸಾ ಕಲಾ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಜ.27ರಂದು ಮರಳು ಕಲಾಕೃತಿ ರಚನಾ ಕಾರ್ಯಕ್ರಮ ಪಣಂಬೂರು ಕಡಲ ತೀರದಲ್ಲಿ ನಡೆಯಿತು.
ಯುವಜನತೆ ಮತ್ತು ಮಾದಕವಸ್ತುಗಳು’ ಎಂಬ ವಿಷಯದಡಿಯಲ್ಲಿ ಕಲಾಕೃತಿ ರಚನೆಗೊಂಡಿದ್ದು, ಮಹಾಲಸಾ ಕಾಲೇಜ್‌ನ 13 ಜನರ ಕಲಾ ತಂಡದಲ್ಲಿ ಮಹೀಂದ್ರ ಆಚಾರ್ಯ ಹಾಗೂ ಅಶ್ವತ್ ಭಟ್ ಮುಂದಾಳತ್ವ ವಹಿಸಿದರು. ಈ ಕಾರ್ಯಕ್ರಮದ ಉದ್ದೇಶ ಮಾದಕವಸ್ತುಗಳ ನಿರ್ಮೂಲನೆ ಆಗಿದ್ದು, ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ರೆಡ್‌ಕ್ರಾಸ್‌ನ ಜಿಲ್ಲಾವಿಪತ್ತು ನಿರ್ವಹಣಾ ಉಪ ಸಮಿತಿ ಅಧ್ಯಕ್ಷ ವೇಣು ಶರ್ಮಾತಿಳಿಸಿದರು.
ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್ ಮಾತನಾಡಿ, ಸಂವಹನದ ಕುರಿತು ಕಾಲೇಜುಗಳಲ್ಲಿ ತರಬೇತಿ ನೀಡುವ ಬಗ್ಗೆ  ಮಾಮ್ ಕ್ರಿಯಾಶೀಲವಾಗಲಿದೆ ಎಂದರು. ಎಂ.ಆರ್‌ಪಿಎಲ್‌ನ ಡಿಜಿಎಂ (ಎಚ್‌ಆರ್) ಲಕ್ಷ್ಮಿಕುಮಾರನ್ ಮಾತನಾಡಿ, ದಕ್ಷಿಣಕನ್ನಡ ಜಿಲ್ಲೆ ವೈವಿಧ್ಯಮಯ ಕಲಾ ಮಂಡಲ’ ಎಂದರು.
ಮಹಾಲಸಾ ಕಾಲೇಜ್ ಪ್ರಾಂಶುಪಾಲ ಪುರುಷೋತ್ತಮ ನಾಯಕ್ ಶುಭ ಹಾರೈಸಿದರು. ಕುಮಾರಿ ಧನ್ಯ ಕಾರ್ಯಕ್ರಮ ನಿರ್ವಹಿಸಿದರು.

-------------
ಮಾಮ್ ಮತ್ತು ಎಂಸಿಜೆ ವಿಭಾಗದವರ ಒಡಂಬಡಿಕೆಯಂತೆ ಮಾಮ್ ಪ್ರತಿನಿಧಿಗಳಾದ ಸಂಪನ್ಮೂಲ ವ್ಯಕ್ತಿಗಳಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ಮಂಗಳಗಂಗೋತ್ರಿಯ ಎಂಸಿಜೆ ವಿದ್ಯಾರ್ಥಿಗಳಿಗೆ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ನಾಲ್ಕು ಸರಣಿ ಉಪನ್ಯಾಸಗಳು ನಡೆದವು. ಈ ಸರಣಿಯ ಉದ್ಘಾಟನೆ ಫೆ.೮ರಂದು ನಡೆಯಿತು. ಉದಯವಾಣಿ ಮಣಿಪಾಲ ಆವೃತ್ತಿಯ ಸಂಪಾದಕ ಎ.ವಿ.ಬಾಲಕೃಷ್ಣ ಹೊಳ್ಳ ಅವರು ಮೊದಲ ಉಪನ್ಯಾಸ ನೀಡಿ, ಎಡಿಟಿಂಗ್‌ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಬಳಿಕ ಫೆ.14ರಂದು ನಡೆದ ತರಗತಿಯಲ್ಲಿ ಪತ್ರಕರ್ತ, ಬಿಫಸ್ಟ್ ಡಾಟ್ ಇನ್ ವೆಬ್‌ಪೋರ್ಟಲ್ ಮುಖ್ಯಸ್ಥ ನವೀನ್ ಅಮ್ಮೆಂಬಳ ಅವರು ಆನ್‌ಲೈನ್ ಜರ್ನಲಿಸಂ ಸಂಬಂಧಿಸಿದ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಆನ್‌ಲೈನ್ ಜರ್ನಲಿಸಂನ ಪ್ರಾಮುಖ್ಯತೆ, ಮಿತಿಗಳು, ಸಿಜಿಝನ್ ಜರ್ನಲಿಸಂ, ಸವಾಲುಗಳು, ಮುದ್ರಣ ಮಾಧ್ಯಮ ಹಾಗೂ ಆನ್‌ಲೈನ್ ಜರ್ನಲಿಂಸ್‌ಗೆ ಇರುವ ವ್ಯತ್ಯಾಸಗಳು ಇತ್ಯಾದಿಗಳ ಕುರಿತು ಅವರು ಮಾಹಿತಿ ನೀಡಿದರು.


ಮಾ.21ರಂದು ನಡೆದ ತರಗತಿಯಲ್ಲಿ ರೇಡಿಯೋ ಕಾರ್ಯಕ್ರಮ ನಿರ್ಮಾಣ ಕುರಿತು ಮಾಮ್ ಅಧ್ಯಕ್ಷೆ, ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಫ್ಲೋರಿನ್ ರೋಚ್ ಅವರು ಮಾಹಿತಿ ನೀಡಿದರು. ಕಾರ್ಯಕ್ರಮ ನಿರ್ಮಾಣ, ರೇಡಿಯೋ ನಾಟಕ ಸೇರಿದಂತೆ ವಿವಿಧ ವಿಭಾಗಗಳ ಕುರಿತು ಅವರು ಸವಿವರ ಮಾಹಿತಿ ಒದಗಿಸಿದರು.


ಏ.4ರಂದು ನಡೆದ ತರಗತಿಯಲ್ಲಿ ಟಿವಿ9 ಸುದ್ದಿವಾಹಿನಿಯ ಹಿರಿಯ ಕಾರ್ಯಕ್ರಮ ನಿರ್ಮಾಪಕ ಅಹಮದುಲ್ ಕಬೀರ್ ಟೆಲಿವಿಷನ್ ಕಾರ್ಯಕ್ರಮ ನಿರ್ಮಾಣ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು. ಇದರೊಂದಿಗೆ ಸರಣಿ ಉಪನ್ಯಾಸ ಕಾರ್ಯಕ್ರಮ ಕೊನೆಗೊಂಡಿತು. ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣಕಿಶೋರ್ ಹಾಗೂ ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಈ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದರು.
............
ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ ಘೋಷಿಸಿದ ಮಂಗಳೂರು ವಿಶ್ವವಿದ್ಯಾಲಯಮಟ್ಟದ ಮಾಮ್ ಇನ್‌ಸ್ಪೈರ್ ಅವಾರ್ಡ್ - 2017ಗೆ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಿಜೇತರು ಆಯ್ಕೆಯಾಗಿದ್ದಾರೆ. ಕಳೆದ ಆಗಸ್ಟ್ 26ರಂದು ಫಲಿತಾಂಶ ಪ್ರಕಟಿಸಲಾಗಿದೆ. ಮಾಮ್ ಪ್ರಶಸ್ತಿ ಸಮಿತಿ ಅರ್ಜಿ ಸಲ್ಲಿಸಿದ ಸ್ಪರ್ಧಿಗಳ ಪೈಕಿ ಪ್ರತಿ ವಿಭಾಗದಿಂದ ಇಬ್ಬರು ವಿಜೇತರನ್ನು ಆಯ್ಕೆ ಮಾಡಲಾಗಿತ್ತು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಮಂಗಳೂರು ಆವೃತ್ತಿಯ ಬ್ಯೂರೋ ಮುಖ್ಯಸ್ಥ ಎಂ. ರಘುರಾಮ್ ಅವರ ನೇತೃತ್ವದಲ್ಲಿ  ಸುತ್ತಿನ ಮೌಲ್ಯಮಾಪನ ನಡೆದು ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ.
ಪದವಿ ವಿಭಾಗದಲ್ಲಿ: ಪ್ರಥಮ  ಪ್ರೀತಿ ಆರ್. ಭಟ್, ತೃತೀಯ ಬಿ.ಎ. (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆ)
ದ್ವಿತೀಯ ಸ್ಥಾನ: ಸುವರ್ಚಲಾ ಅಂಬೇಕರ್ ಬಿ.ಎಸ್. ತೃತೀಯ ಬಿಎ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆ)
ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ: ಮೇಘಲಕ್ಷ್ಮೀ ಎಂ., ಎಂಸಿಜೆ (ಮಂಗಳೂರು ವಿ.ವಿ.ಕ್ಯಾಂಪಸ್ ಮಂಗಳಗಂಗೋತ್ರಿ), ಪ್ರಕಾಶ್ ಡಿ.ರಾಂಪೂರ್ (ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮೂಡುಬಿದಿರೆ)
ಪ್ರಥಮ ಸ್ಥಾನ ವಿಜೇತರಿಗೆ ಪ್ರಶಸ್ತಿ ಫಲಕ, ನಗದು ಬಹುಮಾನ ನೀಡಲಾಗುವುದು. ದ್ವಿತೀಯ ಸ್ಥಾನ ವಿಜೇತರಿಗೆ ಪ್ರೋತ್ಸಾಹಕ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು. ಪ್ರಶಸ್ತಿ ಪ್ರದಾನ ದಿನಾಂಕ ಶೀಘ್ರ ಪ್ರಕಟಿಸಲಾಗುವುದು. ಒಟ್ಟೂ ಪ್ರಶಸ್ತಿ ಪ್ರಕ್ರಿಯೆಯನ್ನು ಸಂಯೋಜಿಸಿ, ನಿರ್ವಹಿಸಿದವರು ಪ್ರಶಸ್ತಿ ಸಮಿತಿ ಸಂಚಾಲಕರಾದ ಶರತ್ ಹೆಗ್ಡೆ ಅವರು. ಅಂತಿಮ ಹಂತದಲ್ಲಿ ತೀರ್ಪುಗಾರರಾಗಿ ಸಹಕರಿಸಿದವರು ಹಿರಿಯ ಪತ್ರಕರ್ತ ಎಂ.ರಘುರಾಮ್ ಅವರು. ಹಾಗೂ ನಮ್ಮ ಪತ್ರಕ್ಕೆ ಸ್ಪಂದಿಸಿ ಸಹಕರಿಸಿದ ವಿವಿಧ ಕಾಲೇಜುಗಳು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಮುಖ್ಯಸ್ಥರಿಗೆ ಹಾಗೂ ಸ್ಪರ್ಧೆಯನ್ನು ನಿರ್ವಹಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಮಾಮ್ ಕಡೆಯಿಂದ ಅಭಿನಂದನೆಗಳು. ಈ ವರ್ಷವೂ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರಕ್ರಿಯೆ ನಡೆಯಲಿದೆ.

 
ಇದರೊಂದಿಗೆ 2015-17ನೇ ಸಾಲಿನ, ಅಂದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮುಗಿಸಿ ಹೊರಬಂದ ಎಂಸಿಜೆ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಸಂದರ್ಭ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಲು ಮಾಮ್ ಪ್ರತಿನಿಧಿಗಳು ಸಕಾಲದಲ್ಲಿ ನೆರವು ಒದಗಿಸಿದ್ದಾರೆ. ಬೆಂಗಳೂರಿನಲ್ಲಿರುವ ಮಾಧ್ಯಮ ಸಂಸ್ಥೆಗಳ ವಿವಿಧ ಸ್ನೇಹಿತರಿಗೆ ಈ ಸಹಕಾರಕ್ಕಾಗಿ ನಾನು ಆಭಾರಿಯಾಗಿದ್ದೇನೆ. 2015-17 ನೇ ಸಾಲಿನಲ್ಲಿ ವ್ಯಾಸಂಗ ಮುಗಿಸಿ ಹೊರ ಬಂದ ವಿದ್ಯಾರ್ಥಿಗಳಿಗಾಗಿ ಮಾಮ್ 2015-17 ಹೆಸರಿನ ವಾಟ್ಸಪ್ ಗ್ರೂಪ್ ರಚಿಸಿದ್ದು ಅವರನ್ನು ಮಾಮ್ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅವರನ್ನು ನಮ್ಮ ಪ್ರಧಾನ ವಾಟ್ಸಪ್ ಗ್ರೂಪ್ ಮಾಮ್ ಆಕ್ಟಿವ್‌ಗೆ ಸೇರಿಸಿಕೊಳ್ಳಲಾಗುವುದು. ಉದ್ಯೋಗಾಕವಾಶಗಳು ಹಾಗೂ ಮಾಧ್ಯಮ ರಂಗದ ಅವಕಾಶಗಳ ಕುರಿತು ನಮ್ಮನ್ನು ಸಂಪರ್ಕಿಸಿದ ಇತ್ತೀಚಿನ ಹಳೆ ವಿದ್ಯಾರ್ಥಿಗಳಿಗೆ ಮಾಮ್ ಕಡೆಯಿಂದ ಮಾಹಿತಿಗಳನ್ನು ನೀಡುತ್ತಾ ಬರಲಾಗಿದೆ. ನಮ್ಮ ನೂತನ ವೆಬ್‌ಸೈಟಿಗೆ ಎಂಸಿಜೆ ವಿಭಾಗದ ಅಷ್ಟೂ ಹಳೆ ವಿದ್ಯಾರ್ಥಿಗಳ ಪೂರ್ಣ ಮಾಹಿತಿಯನ್ನು ಅಪ್‌ಡೇಟ್ ಮಾಡುವ ಉದ್ದೇಶ ಇರಿಸಿದ್ದು ಎಂಸಿಜೆ ವಿಭಾಗದ ಸಹಯೋಗದಿಂದ ಈ ಕಾರ್ಯಕ್ರಮ ಆರಂಭಿಸಿ ಮಾಹಿತಿ ಸಂಗ್ರಹ ಆರಂಭಿಸಲಾಗಿದೆ. ಮುಂದಿನ ವರ್ಷ ಇದನ್ನೂ ನಾವು ಪೂರ್ತಿಗೊಳಿಸಿ ನಮ್ಮ ವೆಬ್‌ಸೈಟಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಒದಗಿಸಬೇಕಿದೆ.
..................

MAAM MEMBERS LIST -REVISED (Till AUGUST 20th 2016)
List of Life Members for MAAM
(Rs.1000/-.Paid till Feb 2017)

1) Ajith Kumar
2) Ambarish Bhat
3) Ashwani Kumar
4) Balakrishna Holla
5) Florine Roche
6) Gururaj Paniyadi
7) Halimath Sadiya
8) Ishwarachandra
9) Kabeeer Khantila
10) Krishna Mohana T.
11) Krishna Kishore
 12) Navitha Jain
13)  PraveenChandra
14) Raffique Konaje
15) Ramachandra M.
16) Raviprakash.S
17) Ravipraksh Rai
18) Raviprasad Kamila
19) Sadashiva K
20) Shyma Prasad K.
21) Stanley Pinto
22) Sooryanarayana
23) Sukhesha Padibagilu
24) Suprabha N.K.
25) Surendra Shetty
26) Suresh D.Palli
27) Venu Sharma
28) Vivek Nambiar
29) Yogeesh Holla
30)  Mohana.
31) Dr.Ronald Anil Fernandes
32)  Smitha shenoy
33) Vasanth konaje
34) Chandrashekhar kulamaruva
35) Deepak Naik
36) Sharath hegde
37) Prashanth Bisleri
-------------
Yearly Membership - Paying rs.100/-
(till Feb 2017)


1) Harish Motukana
2) Harish Kulkunda
3) Sandeep
4) Nithish Baindoor
5) Shamshir Budoli
.............................


TEAM MAAM 2015-17

1)      Florine Roche –President  (9880810329)
     Programme Executive in All India Radio Mangaluru

2)      Venu Sharma –Hon. President (9620959900)
    Founder & CEO of Add-Idea Consulting  & Founder &     Chairman of Idea-Now Publicity LLP in Bangalore, Mangalore. Working as an outsourced External CEO - an unique model in the industry

3)      Krishnamohana T- General Secretary (9481976969)
     (Senior Sub editor In Kannadaprabha at Mangaluru)

4)      Dr.Ronald Anil Fernandes –Vice President  (9448480323)
     (Beauro Chief, Deccan Herald, Mangaluru)

Sharath Hegde Kadthala –Vice President  (99646770010)
(District correspondant in Prajavani at Koppala)

Deepak Naik –Vice president (8095921921)
SLK Global solutions PVT limited Project Manager at Bengaluru.

5)      Smitha Shenoy –Treaserur (9341881930)
     (Journalism Lecturer in Besant College Mangaluru

6)      Venu vinod K S –Secretary (9448386876)
     (Chief reporter in Vijayvani at Mangaluru)

   Yogish Holla –Secretary (9448500007)
   (Chief Copy editor in VIjayKarnataka at Mangaluru

  Navin Ammembala-Secretary (9449588440)
  (Bfirst .in Chief, Bengaluru)

7)      Krishnakishore-Programme co-ordinator (9448424922)
    (Photography/Self Employed)

Executive Members:
1)      Surendra Shetty-Beauro Chief,  KannadaPrabha at           Mangaluru
2)      A.V. Balakrishna Holla-Editor, Udayavani Manipal
3)      Raviprasad Kamila-Beauro Chief, The Hindu at   Mangaluru
4)      Prashanth Rai- Entrepreneur in the Area Of communication (Creative consultant to Colors Kannada)
5)      Suprabha N K-Chief Editor, Kannadaprabha at Bengaluru
6)      Suresh D palli-Reporter in Hosadigantha at Mangaluru
7)      Harish Kulkunda-Reporter, VIjayvani at Mangaluru
8)      Harish Motukana- Reporter, VIjayvani at Mangaluru
9)      Shravan Kumar Nala- Reporter, VIjayvani at Mangaluru
10)   Vidya Irvattur-Sub Editor in Udayavani at Manipal.

No comments:

Post a Comment