Sunday, 15 March 2020

MAAM INSPIRE ಪ್ರಶಸ್ತಿ ಪುರಸ್ಕೃತರ ಅನಿಸಿಕೆ


ಪತ್ರಿಕೋದ್ಯಮದ ಕುರಿತು ಮನಸ್ಥಿತಿಗಳು ಮೂಗು ಮುರಿಯುತ್ತಿರುವ ದಿನಗಳಿವು. ಹೀಗಿರುವಾಗ ಮಂಗಳಗಂಗೋತ್ರಿಯ ಮೀಡಿಯಾ ಅಲುಂನ ಅಸೋಸಿಯೇಶನ್ ಹೆಮ್ಮೆಯ ಹೆಜ್ಜೆಯನ್ನಿತ್ತಿದ್ದೆ. ಅದೂ MAAM Inspire Award ಮೂಲಕ. 
MAAM Inspire Award ಎಂಬ ಪರಿಕಲ್ಪನೆಗೆ ನನ್ನದೊಂದು ದೊಡ್ಡ ಶರಣು. Positive journalism ಎಂಬ ತತ್ವವನ್ನು ವಿದ್ಯಾರ್ಥಿ ದಿಶೆಯಲ್ಲೇ ಬೆಳೆಸುತ್ತಾ, ಈ ಕುರಿತಾಗಿ ತಮ್ಮ ವಿದ್ಯಾರ್ಥಿ ಬದುಕಿನಲ್ಲೇ ಪ್ರಯತ್ನ ಶುರು ಮಾಡಿದವರನ್ನು ಗುರುತಿಸಿ, ಒಂದಷ್ಟು ಸಹೃದಯ ಮನಸ್ಕರೆದುರು ಸಮ್ಮಾನಿಸಿ ಗೌರವಿಸುವುದು ನಿಜಕ್ಕೂ ಶ್ಲಾಘನೀಯ ಕೆಲಸವಲ್ಲವೇ? 
MAAM ನ ಈ ಯೋಚನೆಯು ಪತ್ರಿಕೋದ್ಯಮದ ಭವಿಷ್ಯದಲ್ಲಿ ಬಹುದೊಡ್ಡ ಸಕಾರಾತ್ಮಕ ಬದಲಾವಣೆ ತರಲಿರುವುದಂತೂ ಹೌದು.
2018-19 ರ MAAM inspire ಪ್ರಶಸ್ತಿ ನನಗೆ ಪ್ರದಾನವಾಗಿರುವುದು, ನನ್ನಲ್ಲಿನ ತುಡಿತ, ಸ್ಪೂರ್ತಿ,ಉತ್ಸಾಹ, ಜವಾಬ್ದಾರಿಗಳನ್ನು ಹೆಚ್ಚಿಸಿವೆ ಎನ್ನಬಲ್ಲೆ. ಇದು ನನ್ನ ವೃತ್ತಿ ಜೀವನಕ್ಕೆ ಅತೀವ ಚೈತನ್ಯ ದೊರಕಿಸಿಕೊಟ್ಟಿತು ಎನ್ನುವುದು ಎಷ್ಟು ನಿಜವೋ, ನನ್ನ ಬದುಕಿಗೊಂದು ದೊಡ್ಡ ತಿರುವು ನೀಡಲಿದೆ ಎನ್ನುವುದೂ ಅಷ್ಟೇ ನಿಜ.
ನನ್ನ ಮುಂದಿರುವ ಗುರಿಗಳೆಡೆಗೆ ಇನ್ನಷ್ಟು ದೃಡತೆ ತುಂಬಿದ MAAM ತಂಡಕ್ಕೆ, ಶರಣು ಶರಣಾರ್ಥಿ. 
-ವಿಭಾ ಡೋಂಗ್ರೆ  (PG section winner)
------------------------
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ.ಎಂ ಖಾನ್ ಹಾಗೂ ಇತರ ಎಲ್ಲಾ ಗಣ್ಯ ವ್ಯಕ್ತಿಗಳಿಂದ ಪ್ರಶಸ್ತಿ ಸೀಕರಿಸಲು ಅವಕಾಶ ಮಾಡಿಕೊಟ್ಟ ಮಾಮ್ ತಂಡಕ್ಕೆ ನಾನು ಬಹಳ ಆಭಾರಿಯಾಗಿರುತ್ತೇನೆ. ಪತ್ರಿಕೋಧ್ಯಮ ಕ್ಷೇತ್ರದ ವಿದ್ಯಾರ್ಥಿಗಳು ಮಾತ್ರವಲ್ಲದೆ ಇತರ ಸಾಧಕರ ಪ್ರತಿಭೆಯನ್ನು ಗುರುತಿಸಿರುವುದು ಸಂತಸ ತಂದಿದೆ. ಯುವ ಪೀಳಿಗೆ, ಉತ್ತಮ ಸಮಾಜ ಹಾಗೂ ವ್ಯಕ್ತಿಗತ ಪ್ರೇರಣೆಗೆ ಈ ಕಾರ್ಯಕ್ರಮದ ವೇದಿಕೆ ಅನುವು ಮಾಡಿಕೊಟ್ಟಿದೆ ಎಂಬುದು ಅತಿಶಯೋಕ್ತಿಯೇನಲ್ಲ.  ಈ ಯಶಸ್ವಿ ಕಾರ್ಯಕ್ರಮದ ಹಿಂದಿನ ದಿಟ್ಟ ಸಂಕಲ್ಪದಿಂದ ಇಟ್ಟ ಒಂದು ಹೆಜ್ಜೆ ಇಂದು ನೂರಾರು ಹೆಜ್ಜೆಗಳಾಗಿ ಕಾರ್ಯಪ್ರವೃತರಾಗಲು ಸಹಕರಿಸಿದ ಮಾಮ್ ತಂಡಕ್ಕೆ ನನ್ನ ಅನಂತ ನಮನಗಳು. ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಮಂಗಳಗಂಗೋತ್ರಿ (ಮಾಮ್) ತಂಡವು ಕಾರ್ಯನಿರ್ವಹಿಸಿದ ರೀತಿ ಅತ್ಯಂತ ಶ್ಲಾಘನೀಯವಾಗಿತ್ತು. ಈ ವೇದಿಕೆಯನ್ನು ಸಮರ್ಪಕವಾಗಿ ಬಳಸುವ ಉದ್ದೇಶವನ್ನು ನೆರವೇರಿಸಿದ ಎಲ್ಲಾ ಗಣ್ಯರಿಗೂ ಧನ್ಯವಾದಗಳು. 
- ಚೇತನಾ ನಾಯಕ್ ಕೆ. (PG Section Runner)
-------------
 ನಾವು ಹುಟ್ಟಿದ ಮೇಲೆ ನಮ್ಮ ಜೀವನ ಸಾರ್ಥಕವಾಗಬೇಕಾದರೆ ನಮ್ಮ ಹೆಸರು ಒಂದು ಕ್ಷೇತ್ರದಲ್ಲಿ ಅಚ್ಚಗಾಬೇಕು.ನನ್ನ ಜೀವನದ ಅನುಭವಗಳೇ ಬಹುದೊಡ್ಡ ಪಾಠ.ಬಾಲ್ಯದಿಂದಲೇ ನನಗೆ ಪತ್ರಿಕೆ, ಪುಸ್ತಕ ಓದುವ ಹವ್ಯಾಸ ಇದ್ದುದರಿಂದ ಅದರಲ್ಲಿ ಬರುವ ಲೇಖನ ,ಅಂಕಣವನ್ನು ನಾನು ಕೂಡ ಓದುತ್ತಾ ಇದ್ದೆ.ಪತ್ರಿಕೆ ಯನ್ನು ಓದಿಯೇ ನಾನು ಕೂಡ ಲೇಖನ ಕವನ ಬರೆಯಲು ಆರಂಭ ಮಾಡಿದೆ.ಪತ್ರಿಕೋದ್ಯಮ ವಿಷಯ ಎಂದರೇ ಏನೂ ಅಂತ ಗೊತ್ತಿಲ್ಲದ ನನಗೆ ನಿರಂತರ ಪತ್ರಿಕೆ ಓದುವುದರ ಮುಖಾಂತರ ‌ನಾನೊಬ್ಬ ಲೇಖಕ, ಅಂಕಣಗಾರನಾಗಲು ಸಾಧ್ಯವಾಯಿತು.ಬಾಲ್ಯದಿಂದಲೂ ಮನಸ್ಸಿಗೆ ಬಂದ ಅನುಭವವನ್ನು ಪೇಪರ್ ನಲ್ಲಿ ‌ಬರೆಯುತ್ತಾ ಇದ್ದೆ .ಹಲವು ವರ್ಷಗಳ ಕಾಲ ಪ್ರಯತ್ನ ದ ಬಳಿಕ ಹಲವಾರು ನನ್ನ ಲೇಖನಗಳಿಗೆ ಪತ್ರಿಕೆಯವರು ಜೀವ ತುಂಬಿದರು.ಬರಹಗಾರ ಆಗಬೇಕೆಂಬ ಕನಸು ನನಸಾಯಿತು.ಶಾಲಾ ಕಾಲೇಜಿನಲ್ಲಿ ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿ ಯನ್ನು ನೋಡಿ ಅವರ ಹಾಗೇ ನಾನು ಆಗಬೇಕೆಂಬ ಬಯಕೆ ಅದಕ್ಕಾಗಿ ಇನ್ನೊಬ್ಬರು ಮಾತಾನಾಡುವುದನ್ನು ಕೇಳುತ್ತಿದ್ದೆ ,ಒಂದು ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುತ್ತಿದ್ದೆ ಇವತ್ತು ಅದೆಷ್ಟೋ ಶಾಲಾ ಕಾಲೇಜಿಗೆ ಯುವಕ ಯುವತಿ ಮಂಡಲಗಳಿಗೆ ಸಂಪನ್ಮೂಲ ವ್ಯಕ್ತಿ ಯಾಗಿ ತನ್ನಲ್ಲಿರುವ ವಿಷಯವನ್ನು ಇನ್ನಷ್ಟು ಜನರಿಗೆ ತಿಳಿಸುವ ಮುಂಖಾತರ ಕನಸು ನನಸಾಯಿತು.ಹಲವಾರು ಸೋಲು ಗೆಲುವುಗಳ ಕಷ್ಟ ಸುಖ ಗಳ ಮಧ್ಯೆ ನಾನೊಬ್ಬ ಬರಹಗಾರ‌ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡೆ.ನನ್ನ ತಂದೆ ತಾಯಿ ಜೀವನ ಎಂದರೆ ಏನೂ ಎಂಬುದನ್ನು ತಿಳಿಸಿದವರು.ನನ್ನ ಜೀವನದ ಕಷ್ಟಗಳೇ ಬಹು ದೊಡ್ಡ ಆಸ್ತಿ. ಇನ್ನೂ ‌ಏನಾದರೂ ಮಾಡಬೇಕೆಂಬ ಬಯಕೆ ನನ್ನ ಮನಸ್ಸಲ್ಲಿ ಈಗಲೂ ಮೂಡುತ್ತಾ ಇದೆ.ಒಂದು ಕಿರು ಸಿನಿಮಾದಲ್ಲಿ ‌ನಟಿಸುವ ಅವಕಾಶ ಸಿಕ್ಕಿತು ಅದರಲ್ಲೂ ನಟಿಸಿದೆ.ಶಿಕ್ಷಕ ನಾಗಬೇಕೇಂಬ ಆಸೆ ನನಗಿತ್ತು ಆದರೆ ಅದು ಇಷ್ಟು ಬೇಗ ಈಡೇರುತ್ತೆ ನಾನು ಊಹಿಸಿ ಇರಲಿಲ್ಲ ಜೀವನ ಕೌಶಲ್ಯ ತರಬೇತಿ ‌ಶಿಕ್ಷಕನಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪಾಠ ಮಾಡುವ ಅವಕಾಶ ಸಿಕ್ಕಿತು.ಸಿಕ್ಕ ಅವಕಾಶವನ್ನು ಸಕಾರಾತ್ಮಕ ವಾಗಿ ಬಳಸಿಕೊಂಡೆ. ಕನಸು ಕಾಣುವುದು ಸಹಜ ಅದರೆ ಅದನ್ನು ಪಡೆಯಬೇಕಾದರೆ ಅದರ ಶ್ರಮ‌ ತುಂಬಾನೆ ಇರುತ್ತೆ.ಕಾರ್ಯ ಸಾಧನೆಗೆ ಶ್ರಮ ಪಟ್ಟರೆ ಯಶಸ್ಸು ಖಂಡಿತವಾಗಿ ಸಿಗಲು ಸಾಧ್ಯ. ನಾವು ಮಾಡಬೇಕಾದ ಕೆಲಸ ಮಾಡಬೇಕು ಸಿಕ್ಕಿದ ಸಮಯವನ್ನು ಉಪಯೋಗಿಸಿಕೊಂಡು ತಮ್ಮ ‌ಕೌಶಲ್ಯವನ್ನು ಬಳಸಿಕೊಂಡು ಕೆಲಸ ಮಾಡುವ ಮುಖಾಂತರ ನೆಮ್ಮದಿ ಯ ಜೀವನ‌ ಮಾಡಬಹುದು. ನನ್ನ ಹಲವು ವರ್ಷಗಳ ಪರಿಶ್ರಮಕ್ಕೆ ಮಾಮ್ ತಂಡ ನನ್ನನ್ನು ಗುರುತಿಸಿದರಿಂದ ಇನ್ನಷ್ಟು ಈ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಹುಮ್ಮಸ್ಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನನ್ನ ಮನಸ್ಸಲ್ಲಿ ಆಗುತ್ತಾ ಇತ್ತು.ಎಷ್ಟೊಂದು ಅಚ್ಚುಕಟ್ಟಾಗಿ ಎಲ್ಲರಿಗೂ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದ್ದು ಇನ್ನಿತರಿಗೂ ಮಾದರಿಯಾಗಿದೆ.ಮಾಮ್ ತಂಡಕ್ಕೆ ನಾನು ಎಂದೂ ಚಿರ ಋಣಿ.ಅದೆಷ್ಟೋ ಜನ ಕಷ್ಟ ಪಟ್ಟು ಹಲವಾರು ಕ್ಷೇತ್ರದಲ್ಲಿ ಸಾಧಿಸಿದ ಪ್ರತಿಭೆಗಳನ್ನು ನಿಮ್ಮಂತ ನಿಷ್ಠಾವಂತ ತಂಡ ಗುರುತಿಸಬೇಕಾಗಿದೆ.ಮಾಮ್ ತಂಡದ ಎಲ್ಲಾ ಸದಸ್ಯರಿಗೆ ನಾನು ಈ ಮೂಲಕ ಧನ್ಯವಾದ ತಿಳಿಸುತ್ತಿದ್ದೇನ.


-ವಂದನೆಗಳು 
ಶ್ರೀಕಾಂತ್ ಪೂಜಾರಿ ಬಿರಾವು (UG section winner)

Saturday, 14 March 2020

MAAM INSPIRE AWARD FUNCTION IN MEDIA











YOU TUBE REPORT LINK

https://youtu.be/ZmWNMJo2euM
https://youtu.be/ZmWNMJo2euM
------------------
UPAYUKTHA NEWS LINK:
 https://upayuktha.com/dr-m-mohan-alva-presents-maam-inspire-award-to-4-achievers/
---------------------------
DAIJIWORLDNEWS LINK:

https://www.daijiworld.com/kannada/newsDisplay.aspx?newsID=19227&newsCategory=karvalli

Friday, 13 March 2020

‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭ (On 13.03,2020) @ ALVAS COLLEGE MOODBIDRI





















"ಬದುಕಿನಲ್ಲಿ ನಿರ್ದಿಷ್ಟ ಗುರಿ, ಬದ್ಧತೆ ಇದ್ದರೆ ಸಾಧನೆಯ ಹಾದಿ ಸುಗಮ"
 ‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭದಲ್ಲಿ ಡಾ.ಎಂ.ಮೋಹನ ಆಳ್ವ


ಮಂಗಳೂರು: ಬದುಕಿನಲ್ಲಿ ನಿರ್ದಿಷ್ಟ ಗುರಿ, ಬದ್ಧತೆ ಇದ್ದರೆ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆ
ವಿದ್ಯಾರ್ಥಿ ಸಂಘಟನೆ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ (ಮಾಮ್) ವತಿಯಿಂದ ಶುಕ್ರವಾರ ಆಳ್ವಾಸ್ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ನಡೆದ ೨೦೧೮-೧೯ನೇ ಸಾಲಿನ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪತ್ರಿಕೋದ್ಯಮ ಕ್ಷೇತ್ರ ಇನ್ನಷ್ಟು ಬೆಳೆಯಬೇಕು. ಸಮಾಜಮುಖಿಯಾದ ಹೆಚ್ಚು ಹೆಚ್ಚು ಬರಹಗಳು ಮಾಧ್ಯಮದ ಮೂಲಕ ಹೊರಬರಬೇಕು. ಪತ್ರಿಕೋದ್ಯಮಕ್ಕೆ ಬರುವ ಮಂದಿ ವೃತ್ತಿ ಧರ್ಮವನ್ನು ಮರೆಯಬಾರದು. ಮಾಮ್ ಸಂಘಟನೆ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದೆ. ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಿರುವ ಇನ್‌ಸ್ಪೈರ್ ಅವಾರ್ಡ್ ನಿರಂತರ ಮುಂದುವರಿಯಲಿ ಎಂದು ಡಾ.ಆಳ್ವ ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಮ್ ಪ್ರಶಸ್ತಿ ತೀರ್ಪುಗಾರರು, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿವಿ ಇಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಭಾಷೆಯ ಮೇಲಿನ ಹಿಡಿತದೊಂದಿಗೆ ಹೊಸತನ್ನು ಹುಡುಕುವ, ಶೋಧನೆಯ ಕೆಲಸ ಪತ್ರಕರ್ತರಿಂದ ಆಗಬೇಕು. ಅವಸರದ ಸುದ್ದಿಗಳಿಗೆ ಆದ್ಯತೆ ನೀಡದೆ, ನೈಜತೆಯನ್ನು ತೆರೆದಿಡುವ ಸುದ್ದಿಗಳಿಗೆ ಒತ್ತುನೀಡಬೇಕು. ಮಾಮ್ ಸಂಘಟನೆ ವಿದ್ಯಾರ್ಥಿಗಳ ಬರಹಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಾಮ್ ಅಧ್ಯಕ್ಷ ಸುರೇಶ್ ಪುದುವೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಮ್ ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಸ್ವಾಗತಿಸಿ, ಮಾಮ್ ಕೋಶಾಧಿಕಾರಿ ಕೃಷ್ಣ ಕಿಶೋರ್ ವೈ ವಂದಿಸಿದರು. ಸದಸ್ಯ ಕೃಷ್ಣಮೋಹನ ತಲೆಂಗಳ ಕಾರ್ಯಕ್ರಮ ನಿರೂಪಿಸಿದರು.
ಮಾಮ್ ಉಪಾಧ್ಯಕ್ಷ ವೇಣು ವಿನೋದ್ ಕೆ.ಎಸ್,  ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ. ಪಳ್ಳಿ, ಚಂದ್ರಶೇಖರ ಕುಳಮರ್ವ, ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸಫಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
---

ನಾಲ್ಕು ಮಂದಿಗೆ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನ

ಮಂಗಳೂರು ವಿವಿಯ ಕುಲಸಚಿವ ಡಾ.ಎ.ಎಂ.ಖಾನ್ ಮತ್ತು ಡಾ.ಎಂ.ಮೋಹನ ಆಳ್ವ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನಿಸಿದರು. ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಿಭಾ ಡೋಂಗ್ರೆ (ಪ್ರಥಮ), ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ನ ವಿದ್ಯಾರ್ಥಿನಿ ಚೇತನಾ ನಾಯಕ್ ಕೆ. (ದ್ವಿತೀಯ), ಪದವಿ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಶ್ರೀಕಾಂತ್ ಪಿ. (ಪ್ರಥಮ), ಆಳ್ವಾಸ್ ಕಾಲೇಜಿನ ಸೋನಿಯ ಎಸ್.(ದ್ವಿತೀಯ) ಪ್ರಶಸ್ತಿ ಗಳಿಸಿದರು. ಪ್ರಥಮ ಸ್ಥಾನ ವಿಜೇತರಿಗೆ ರೂ.೫೦೦೦ ನಗದು, ಪ್ರಶಸ್ತಿ ಫಲಕ, ದ್ವಿತೀಯ ಸ್ಥಾನ ವಿಜೇತರಿಗೆ ರೂ.೧೫೦೦ ನಗದು ಪ್ರಶಸ್ತಿ ಫಲಕದೊಂದಿಗೆ ಗೌರವಿಸಲಾಯಿತು.
---
ನಿರಂತರ ಓದಿನಿಂದ ಉತ್ತಮ ಬರಹಗಾರನಾಗಲು ಸಾಧ್ಯ. ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನದೊಂದಿಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗುವಂತೆ ಮಾಡುವ ಮಹತ್ತರ ಜವಾಬ್ದಾರಿ ಮಾಧ್ಯಮದ ಮೂಲೂ ಇದೆ.
-
ಡಾ.ಎ.ಎಂ.ಖಾನ್, ಕುಲಸಚಿವರು ಮಂಗಳೂರು ವಿವಿ.

---
ಯಾವುದೇ ಕ್ಷೇತ್ರವಾದರೂ ಸರಿ, ಅಲ್ಲಿ ಧನಾತ್ಮಕ ಚಿಂತನೆ, ಪ್ರಾಮಾಣಿಕತೆ, ವೃತ್ತಿಧರ್ಮವನ್ನು ಪಾಲನೆ ಮಾಡುವುದು ತುಂಬಾ ಮುಖ್ಯ, ಆಗ ಮಾತ್ರ ನಾವು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಸಾಧ್ಯ.
- ಮಾಮ್ ಅಧ್ಯಕ್ಷ ಸುರೇಶ್ ಪುದುವೆಟ್ಟು


‘ಪತ್ರಿಕೋದ್ಯಮ ಉಳಿಯಬೇಕಾದರೆ ಯಾವುದೇ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಅಗತ್ಯವಿಲ್ಲ, ಬದಲಾಗಿ ಓದುಗರನ್ನು ಸೃಷ್ಠಿ ಮಾಡುವ ಅವಶ್ಯಕತೆಯಿದೆ. ಅವರಿಗೆ ಅಗತ್ಯವಾದ ಮಾಹಿತಿಗಳನ್ನು ನೀಡಿದಾಗ ಮಾತ್ರ ಇದು ಸಾಧ್ಯ
- ವೇಣು ಶರ್ಮ, ಮಾಮ್ ಗೌರವಾಧ್ಯಕ್ಷ
































































ಫೋಟೋ ಕೃಪೆ: ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಕೃಷ್ಣಕಿಶೋರ್, ಸಫಿಯಾ (MAAM)