Sunday, 10 September 2023
'ಮಾಮ್' ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ | ಭಾವೀ ಪತ್ರಕರ್ತರು ಪರಿಷ್ಕರಣೆಗೊಳಗಾಗಲಿ: ಖಾದರ್ | MAAM INSPIRE AWARD CEREMONY HELD ON 10.09.2023 AT BENGALURU RAVINDRA KALAKSHETHRA
Thursday, 25 November 2021
MAAM INSPIRE AWARD CEREMONY HELD ON 22.11.2021 AT MANGALURU PRESSCLUB
ನಿರಂತರ ಓದಿನೊಂದಿಗೆ ಉನ್ನತ ಅಧಿಕಾರಿಗಳಾಗುವತ್ತ ಗಮನ ಹರಿಸಿ: ಹರೇಕಳ ಹಾಜಬ್ಬ
`ಮಾಮ್ ಇನ್‌ಸ್ಪೈರ್
ಅವಾರ್ಡ್' ಪ್ರದಾನ
ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಕಿವಿಮಾತು
ಮಂಗಳೂರು:
ವಿದ್ಯಾರ್ಥಿಗಳು ಜ್ಞಾನ ಹೊಂದುವ ಜತೆಗೆ ಉನ್ನತ ಅಧಿಕಾರಿಗಳಾಗಿ ದೇಶಕ್ಕೆ ಕೀರ್ತಿ ತರುವ
ಕೆಲಸದತ್ತ ಗಮನ ಹರಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಹೇಳಿದರು.
ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಂಘಟನೆ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ
ನ.22ರಂದು ಸೋಮವಾರ `ಮಾಮ್ ಇನ್‌ಸ್ಪೈರ್
ಅವಾರ್ಡ್' ಪ್ರಶಸ್ತಿ
ಪ್ರದಾನ ಮಾಡಿ ಅವರು ಮಾತನಾಡಿದರು.
ಹರೇಕಳದ
ಮೂಲೆಯಲ್ಲಿದ್ದ ನನ್ನನ್ನು ಮಾಧ್ಯಮ ಗುರುತಿಸಿ ಇದುವರೆಗೆ ಬೆಳೆಸಿದೆ. ಸಾಮಾನ್ಯ ಮನುಷ್ಯನಾದ ನನಗೆ
ಪದ್ಮಶ್ರೀಯಂತಹ ಪ್ರಶಸ್ತಿ ದೊರೆಯುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾದುದು. ಮಾಧ್ಯಮದ ಎಲ್ಲರಿಗೂ
ನನ್ನ ಕೃತಜ್ಞತೆಗಳು ಎಂದರು.
ಮುಖ್ಯ
ಅತಿಥಿಯಾಗಿದ್ದ ಹೊಸ ದಿಗಂತ ದಿನಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಎನ್.ಟಿ.ಬಾಳೇಪುಣಿ
ಮಾತನಾಡಿ, ಸರಳತೆ, ಮುಗ್ದತೆ, ಪ್ರಾಂಜಲ ಮನಸ್ಸು ಹಾಜಬ್ಬ ಅವರ
ಆಭರಣಗಳಾಗಿವೆ. ಅವರು ತಮ್ಮ ವೈಯಕ್ತಿಕ ಬದುಕಿಗಿಂತ ಹರೇಕಳದ ಶಾಲೆಗೆ ಮಹತ್ವ ನೀಡಿ, ಶಾಲೆಯೇ ಸರ್ವಸ್ವ ಎನ್ನುವ ರೀತಿಯಲ್ಲಿ
ಜೀವಿಸುತ್ತಿದ್ದಾರೆ. ಹಾಜಬ್ಬ ಅವರಂತಹ ಹತ್ತಾರು ಮಂದಿ ಸಮಾಜದಲ್ಲಿ ಇದ್ದಾರೆ. ಮಾಧ್ಯಮಗಳು
ಅಂತವರನ್ನು ಬೆಳಕಿಗೆ ತಂದು ಪ್ರೋತ್ಸಾಹಿಸಬೇಕಿದೆ ಎಂದರು.
ಮಾಮ್
ಗೌರವಾಧ್ಯಕ್ಷ ವೇಣು ಶರ್ಮ ಮಾತನಾಡಿ, ಪತ್ರಿಕೋದ್ಯಮ ಶಿಕ್ಷಣ ಹೊಸ ಚಿಂತನೆ, ಬದಲಾವಣೆಗಳೊಂದಿಗೆ ಹೊಸ ರೂಪವನ್ನು
ಪಡೆಯಬೇಕೆಂದು ಆಶಯ ವ್ಯಕ್ತಪಡಿಸಿದರು.
ಪತ್ರಿಕೋದ್ಯಮ
ಸ್ನಾತಕೋತ್ತರ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಶ್ರೀರಕ್ಷಾ ರಾವ್
ಪುನರೂರು ಪ್ರಥಮ ಸ್ಥಾನ, ಪದವಿ
ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ದುರ್ಗಾ ಪ್ರಸನ್ನ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಎಸ್‌ಡಿಎಂ
ಕಾಲೇಜಿನ ಪ್ರಜ್ಞಾ
ಓಡಿಲ್ನಾಳ ಪಡೆದುಕೊಂಡಿದ್ದು, ಅವರಿಗೆ
ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಮ್
ಅಧ್ಯಕ್ಷ ಸುರೇಶ್
ಪುದುವೆಟ್ಟು ಅಧ್ಯಕ್ಷತೆ ವಹಿಸಿದ್ದರು. `ಮಾಮ್ ಇನ್‌ಸ್ಪೈರ್ ಅವಾರ್ಡ್' ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ
ಕಡ್ತಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಾಮ್ ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ. ಪಳ್ಳಿ ಪ್ರಶಸ್ತಿ ಪುರಸ್ಕೃತರ
ವಿವರ ನೀಡಿದರು. ಉಪಾಧ್ಯಕ್ಷ ವೇಣುವಿನೋದ್ ಕೆ.ಎಸ್. ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ
ಕೃಷ್ಣಮೋಹನ್ ತಲೆಂಗಳ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕೃಷ್ಣ ಕಿಶೋರ್, ಹರೀಶ್ ಮೋಟುಕಾನ ಸಹಕರಿಸಿದರು.
MEDIA COVERAGE
Sunday, 15 March 2020
MAAM INSPIRE ಪ್ರಶಸ್ತಿ ಪುರಸ್ಕೃತರ ಅನಿಸಿಕೆ
Saturday, 14 March 2020
MAAM INSPIRE AWARD FUNCTION IN MEDIA
YOU TUBE REPORT LINK
https://youtu.be/ZmWNMJo2euM
https://youtu.be/ZmWNMJo2euM
------------------
UPAYUKTHA NEWS LINK:
https://upayuktha.com/dr-m-mohan-alva-presents-maam-inspire-award-to-4-achievers/
---------------------------
DAIJIWORLDNEWS LINK:
https://www.daijiworld.com/kannada/newsDisplay.aspx?newsID=19227&newsCategory=karvalli
Friday, 13 March 2020
‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭ (On 13.03,2020) @ ALVAS COLLEGE MOODBIDRI
ಮಂಗಳೂರು: ಬದುಕಿನಲ್ಲಿ ನಿರ್ದಿಷ್ಟ ಗುರಿ, ಬದ್ಧತೆ ಇದ್ದರೆ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆ
ವಿದ್ಯಾರ್ಥಿ ಸಂಘಟನೆ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ (ಮಾಮ್) ವತಿಯಿಂದ ಶುಕ್ರವಾರ ಆಳ್ವಾಸ್ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ನಡೆದ ೨೦೧೮-೧೯ನೇ ಸಾಲಿನ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಕ್ಷೇತ್ರ ಇನ್ನಷ್ಟು ಬೆಳೆಯಬೇಕು. ಸಮಾಜಮುಖಿಯಾದ ಹೆಚ್ಚು ಹೆಚ್ಚು ಬರಹಗಳು ಮಾಧ್ಯಮದ ಮೂಲಕ ಹೊರಬರಬೇಕು. ಪತ್ರಿಕೋದ್ಯಮಕ್ಕೆ ಬರುವ ಮಂದಿ ವೃತ್ತಿ ಧರ್ಮವನ್ನು ಮರೆಯಬಾರದು. ಮಾಮ್ ಸಂಘಟನೆ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದೆ. ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಿರುವ ಇನ್‌ಸ್ಪೈರ್ ಅವಾರ್ಡ್ ನಿರಂತರ ಮುಂದುವರಿಯಲಿ ಎಂದು ಡಾ.ಆಳ್ವ ಆಶಿಸಿದರು.
ಮುಖ್ಯ ಅತಿಥಿಯಾಗಿದ್ದ ಮಾಮ್ ಪ್ರಶಸ್ತಿ ತೀರ್ಪುಗಾರರು, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿವಿ ಇಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಭಾಷೆಯ ಮೇಲಿನ ಹಿಡಿತದೊಂದಿಗೆ ಹೊಸತನ್ನು ಹುಡುಕುವ, ಶೋಧನೆಯ ಕೆಲಸ ಪತ್ರಕರ್ತರಿಂದ ಆಗಬೇಕು. ಅವಸರದ ಸುದ್ದಿಗಳಿಗೆ ಆದ್ಯತೆ ನೀಡದೆ, ನೈಜತೆಯನ್ನು ತೆರೆದಿಡುವ ಸುದ್ದಿಗಳಿಗೆ ಒತ್ತುನೀಡಬೇಕು. ಮಾಮ್ ಸಂಘಟನೆ ವಿದ್ಯಾರ್ಥಿಗಳ ಬರಹಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಾಮ್ ಅಧ್ಯಕ್ಷ ಸುರೇಶ್ ಪುದುವೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಮ್ ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಸ್ವಾಗತಿಸಿ, ಮಾಮ್ ಕೋಶಾಧಿಕಾರಿ ಕೃಷ್ಣ ಕಿಶೋರ್ ವೈ ವಂದಿಸಿದರು. ಸದಸ್ಯ ಕೃಷ್ಣಮೋಹನ ತಲೆಂಗಳ ಕಾರ್ಯಕ್ರಮ ನಿರೂಪಿಸಿದರು.
ಮಾಮ್ ಉಪಾಧ್ಯಕ್ಷ ವೇಣು ವಿನೋದ್ ಕೆ.ಎಸ್, ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ. ಪಳ್ಳಿ, ಚಂದ್ರಶೇಖರ ಕುಳಮರ್ವ, ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸಫಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
---
ನಾಲ್ಕು ಮಂದಿಗೆ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನ
ಮಂಗಳೂರು ವಿವಿಯ ಕುಲಸಚಿವ ಡಾ.ಎ.ಎಂ.ಖಾನ್ ಮತ್ತು ಡಾ.ಎಂ.ಮೋಹನ ಆಳ್ವ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನಿಸಿದರು. ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಿಭಾ ಡೋಂಗ್ರೆ (ಪ್ರಥಮ), ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ನ ವಿದ್ಯಾರ್ಥಿನಿ ಚೇತನಾ ನಾಯಕ್ ಕೆ. (ದ್ವಿತೀಯ), ಪದವಿ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಶ್ರೀಕಾಂತ್ ಪಿ. (ಪ್ರಥಮ), ಆಳ್ವಾಸ್ ಕಾಲೇಜಿನ ಸೋನಿಯ ಎಸ್.(ದ್ವಿತೀಯ) ಪ್ರಶಸ್ತಿ ಗಳಿಸಿದರು. ಪ್ರಥಮ ಸ್ಥಾನ ವಿಜೇತರಿಗೆ ರೂ.೫೦೦೦ ನಗದು, ಪ್ರಶಸ್ತಿ ಫಲಕ, ದ್ವಿತೀಯ ಸ್ಥಾನ ವಿಜೇತರಿಗೆ ರೂ.೧೫೦೦ ನಗದು ಪ್ರಶಸ್ತಿ ಫಲಕದೊಂದಿಗೆ ಗೌರವಿಸಲಾಯಿತು.
---
ನಿರಂತರ ಓದಿನಿಂದ ಉತ್ತಮ ಬರಹಗಾರನಾಗಲು ಸಾಧ್ಯ. ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನದೊಂದಿಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗುವಂತೆ ಮಾಡುವ ಮಹತ್ತರ ಜವಾಬ್ದಾರಿ ಮಾಧ್ಯಮದ ಮೂಲೂ ಇದೆ.
-ಡಾ.ಎ.ಎಂ.ಖಾನ್, ಕುಲಸಚಿವರು ಮಂಗಳೂರು ವಿವಿ.
---
ಯಾವುದೇ ಕ್ಷೇತ್ರವಾದರೂ ಸರಿ, ಅಲ್ಲಿ ಧನಾತ್ಮಕ ಚಿಂತನೆ, ಪ್ರಾಮಾಣಿಕತೆ, ವೃತ್ತಿಧರ್ಮವನ್ನು ಪಾಲನೆ ಮಾಡುವುದು ತುಂಬಾ ಮುಖ್ಯ, ಆಗ ಮಾತ್ರ ನಾವು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಸಾಧ್ಯ.
- ಮಾಮ್ ಅಧ್ಯಕ್ಷ ಸುರೇಶ್ ಪುದುವೆಟ್ಟು
‘ಪತ್ರಿಕೋದ್ಯಮ ಉಳಿಯಬೇಕಾದರೆ ಯಾವುದೇ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಅಗತ್ಯವಿಲ್ಲ, ಬದಲಾಗಿ ಓದುಗರನ್ನು ಸೃಷ್ಠಿ ಮಾಡುವ ಅವಶ್ಯಕತೆಯಿದೆ. ಅವರಿಗೆ ಅಗತ್ಯವಾದ ಮಾಹಿತಿಗಳನ್ನು ನೀಡಿದಾಗ ಮಾತ್ರ ಇದು ಸಾಧ್ಯ
- ವೇಣು ಶರ್ಮ, ಮಾಮ್ ಗೌರವಾಧ್ಯಕ್ಷ
ಫೋಟೋ ಕೃಪೆ: ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಕೃಷ್ಣಕಿಶೋರ್, ಸಫಿಯಾ (MAAM)








































































