Thursday, 2 July 2015

ಆತ್ಮೀಯ ಎಂಸಿಜೆ ಹಳೆ ವಿದ್ಯಾರ್ಥಿ ಸ್ನೇಹಿತರೇ,

ಆತ್ಮೀಯ ಎಂಸಿಜೆ ಹಳೆ ವಿದ್ಯಾರ್ಥಿ ಸ್ನೇಹಿತರೇ,
ನಿಮಗೆಲ್ಲ ಗೊತ್ತಿರುವ ಹಾಗೆ, ಮಂಗಳೂರು ವಿ.ವಿ. ಎಂಸಿಜೆ ವಿಭಾಗ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿಸೆಂಬರಿನಲ್ಲಿ ನಾವು ಕೆಲವಷ್ಟು ಮಂದಿ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಂಘಟನೆ ಹುಟ್ಟುಹಾಕಿದ್ದೇವೆ. ಸ್ಥಾಪಕಾಧ್ಯಕ್ಷರಾಗಿ ಮಂಗಳೂರಿನಲ್ಲಿರುವ ವೇಣು ಶರ್ಮ ಆಯ್ಕೆಯಾಗಿದ್ದು ಸುಮಾರು 8-10 ಮಂದಿ ಸಮಾನಸಕ್ತು ಸೇರಿ ವರ್ಕಿಂಗ್ ಕಮಿಟಿ ರಚಿಸಿಕೊಂಡು ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುತ್ತಿದ್ದೇವೆ. ಮಾಮ್ ರಚನೆಯಾದ ಬಳಿಕ ಕಳೆದ ವರ್ಷ ಏಪ್ರಿಲ್ ನಲ್ಲಿ ಮಂಗಳೂರಿನಲ್ಲಿ ಮನೋಭಿನಂದನ ಎಂಬ ಕಾರ್ಯಕ್ರಮ ಸಂಘಟಿಸಿದ್ದೇವೆ. ಮಾಧ್ಯಮ ವಲಯದಲ್ಲಿ ಸಾಕಷ್ಟು ಧನಾತ್ಮಕ ಚಟುವಟಿಕೆಗಳ ಮೂಲಕ ಮಾಮ್ ಸಂಘಟನೆ ಗುರುತಿಸುವಂತೆ ಮಾಡುವುದು ಹಾಗೂ ಸಂಘಟನೆ ಸದಾ ಕ್ರಿಯಾಶೀಲವಾಗಿರುವಂತೆ ಮಾಡುವುದು ನಮ್ಮ ಆಶಯವೂ ಹೌದು. ಇದಕ್ಕೆ ಹಳೆ ವಿದ್ಯಾರ್ಥಿಗಳಾದ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನ ಖಂಡಿತ ಅಗತ್ಯ. ಮಾಮ್ ಸಂಘಟನೆ ಎಂಸಿಜೆಯ ಎಲ್ಲ ಹಳೆ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹಾಗೂ ಅಭಿಪ್ರಾಯಗಳ ಸಹಿತ ಬಲಯುತ ಹಾಗೂ ಉತ್ತಮ ಚಟುವಟಿಕೆಗಳ ಮೂಲಕ ಚಿರಸ್ಥಾಯಿಯಾಗಬೇಕು ಎಂಬುದು ನಮ್ಮ ಗುರಿ. ಸಂಘಟನೆ ಸ್ಥಾಪನೆಯಾದಲ್ಲಿಗೇ ನಿಂತ ನೀರಾಗಿ ಉಳಿಯದೆ, ಕಾಲ ಕಾಲಕ್ಕೆ ವಿವಿಧ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸುವ ಮೂಲಕ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಮಾಧ್ಯಮ ರಂಗಕ್ಕೆ ಸಹಕಾರಿಯಾಗುವಂತಹ ಚಟುವಟಿಕೆಗಳ ಮೂಲಕ ನಮ್ಮ ಸಂಘಟನೆ ಸಾಮಾಜಿಕವಾಗಿ ಗುರುತಿಸಿಕೊಳ್ಳಬೇಕಿದೆ. ಮಾಮ್ ರಿಜಿಸ್ಟ್ರೇಶನ್ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾಂಕ್ ಅಕೌಂಟ್ ಓಪನ್ ಆಗಿದೆ.ವೆಬ್ ಸೈಟ್ ಆರಂಭಿಸಲು ಪ್ರಾಥಮಿಕ ಹಂತದ ಚಿಂತನೆ ನಡೆದಿದೆ.

--------------------------
ಸಂಘಟನೆಯ ವಾರ್ಷಿಕ ಮಹಾಸಭೆ ಇದೇ ಜುಲೈ 18ರಂದು ಶನಿವಾರ ಬೆಳಗ್ಗೆ 11.30ರಿಂದ ಮಂಗಳೂರು ಬಿಜೈಯಲ್ಲಿರುವ ಆಡ್ ಐಡಿಯಾ ಕಚೇರಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಹಾಗೂ ಮುಂದೆ ನಮ್ಮ ಚಟುವಟಿಕೆಗಳೇನು ಎಂಬ ಕುರಿತು ವಿಸ್ತೃತ ಚರ್ಚೆಗಳೂ ನಡೆಯಬೇಕಿದೆ. ನಮ್ಮ ಸದಸ್ಯತ್ವ ವಿಸ್ತರಣೆ, ವೆಬ್ ಸೈಟ್ ರೂಪಿಸುವುದು....ಇತ್ಯಾದಿ ವಿಷಯಗಳ ಕುರಿತು ಚಿಂತಿಸುತ್ತಿದ್ದೇವೆ. ಈ ಸಭೆಗೆ ಹಳೆ ವಿದ್ಯಾರ್ಥಿಗಳಾದ ತಾವು ಅಲ್ಪ ಬಿಡುವು ಮಾಡಿಕೊಂಡು ಆಗಮಿಸಿ ಸರ್ವಸಮ್ಮತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಗೆ ಸಹಕರಿಸಬೇಕು ಹಾಗೂ ಸಭೆಯಲ್ಲಿ ಪಾಲ್ಗೊಂಡು ಮುಂದಿನ ಚಟುವಟಿಕೆಗಳ ಬಗ್ಗೆ ಚರ್ಚಿಸಿ ಸಕ್ರಿಯರಾಗಬೇಕು ಎಂಬುದು ಕಳಕಳಿಯ ವಿನಂತಿ.

--------------------------
ನಮಗೆಲ್ಲ ಗೊತ್ತಿರುವ ಹಾಗೆ ನಾವು ಬಹುತೇಕರು ಕಾರ್ಯನಿರತ ಪತ್ರಕರ್ತರು. ತುಂಬಾ ಕಮಿಟ್ ಮೆಂಟ್ಸ್ ಇರುತ್ತವೆ. ಸಮಯದ ಹೊಂದಾಣಿಕೆಯ ನಡುವೆಯೇ ನಾವು ಕೆಲಸ ಮಾಡಬೇಕಾಗುತ್ತದೆ. (ನಾವು ವರ್ಕಿಂಗ್ ಕಮಿಟಿಯವರು ಸಮಯ ಹೊಂದಾವಣೆಯೊಂದಿಗೆ ಕೆಲಸ ಮಾಡುತ್ತಿದ್ದೇವೆ). ಆದರೂ ಸ್ವಲ್ಪ ಬಿಡುವು ಮಾಡಿಕೊಂಡು ವರ್ಷಕ್ಕೆ ಒಮ್ಮೆ ನಡೆಯುವ ಮಹಾಸಭೆಗೆ ತಾವು ಆಗಮಿಸಿ ಸಂಘಟನೆ ಬಲಪಡಿಸಬೇಕು, ನಮ್ಮದು ವಿಭಿನ್ನ ಸಂಘಟನೆಯೆಂದು ರೂಪಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂಬುದು ನಮ್ಮ ವಿನಂತಿ.
ಕೆಲಸದ ಒತ್ತಡದಿಂದ ಪಾಲ್ಗೊಳ್ಳಲು ಆಗದಿದ್ದರೂ ದಯವಿಟ್ಟು ನಮ್ಮ ವಾಟ್ಸಾಪ್ ಸಂದೇಶ, ಮೈಲ್, ಎಸ್ಎಂಎಸ್ ಗಳಿಗೆ ಪ್ರತಿಕ್ರಿಯಿಸಲು ಪ್ರಯತ್ನಿಸಿ, ವೈಯಕ್ತಿಕವಾಗಿ ಸಭೆಗಳಿಗೆ ಹಾಜರಾಗಲು ಅಸಾಧ್ಯವಾದ ಸಂದರ್ಭಗಳಲ್ಲಿ ದಯವಿಟ್ಟು ಮಾಮ್ ಜೊತೆ ಸಂವಹನ ಇಟ್ಟುಕೊಂಡು ವರ್ಕಿಂಗ್ ಕಮಿಟಿಯ ಪ್ರಯತ್ನಗಳಿಗೆ ನಿಮ್ಮ ಅನಿಸಿಕೆಗಳನ್ನು ರವಾನಿಸಿ ಅಥವಾ ನಿಮ್ಮ ಕೈಲಾದ ರೀತಿಯಲ್ಲಿ ಸಂಘಟನೆಗೆ ನಿಮ್ಮ ಪ್ರೋತ್ಸಾಹವಿರಲಿ ಎಂಬುದು ನಮ್ಮ ಕೋರಿಕೆ. ನಿಮ್ಮ ಸಂವಹನವನ್ನು ದಯವಿಟ್ಟು....
reachtomaam@gmail.com
ಈ ಮೇಲ್ ಐಡಿಗೆ ರವಾನಿಸಿ...

----------------------
ದಯವಿಟ್ಟು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು, ಸಂಘಟನೆ ಬಗ್ಗೆ ಮುಕ್ತವಾಗಿ ನಿಮ್ಮ ಅನಿಸಿಕೆಗಳನ್ನು ಚರ್ಚಿಸಿ, ಸಹಕರಿಸಿ. ಈ ಒಕ್ಕಣೆಯ ಇಂಗ್ಲಿಷ್ ಅಂಶಗಳನ್ನು ನಿಮಗೆ ಕಳುಹಿಸಲಾಗಿದೆ. ನಿಮ್ಮ ಪಾಲ್ಗೊಳ್ಳುವಿಕೆಯನ್ನು ಮೇಲ್ ಮೂಲಕ ದೃಢಪಡಿಸಿ.
-.ಮಾಮ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪರವಾಗಿ(communicator)
03.07.2015.

------------------------
Dear members

The first Annual General Meeting of Media Alumni Association of Mangalagangotri (MAAM) is scheduled to be held on Saturday  July 18, 2015 at 11.30 am at the residence of President Venu Sharma to transact the following agenda.

a.      Election of new president  and other office bearers

b.     Planning events for the year ahead

c.      Creating a road map for MAAM in association with MCJ dept of University

d.     Fund utilisation

e.     Giving Corpus fund to journalism colleges

f.       Forming Bangalore Committee and planning programmes

g.     Any other matter



The meeting will be followed by a lunch.  All the members are requested to attend the meeting without fail
-------------

President and Working Comittee

- MAAM
for any clarification you can feel free to call


KRISHNA MOHAN  9481976969

KRISHNA KISHOR  9448424922

RONALD FERNANDES 9448480323

FLORINE 9880810329

VENUVINOD 9448386876

No comments:

Post a Comment