![]() |
NEW PRESIDENT FLORINE ROCHE |
![]() |
AGM... |
ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಮೊದಲ ವಾರ್ಷಿಕ ಮಹಾಸಭೆ ದಿನಾಂಕ 18.07.2015 ಶನಿವಾರ ಪೂರ್ವಾಹ್ನ ಸರಿಯಾಗಿ 11.30ರಿಂದ
ಬಿಜೈಯಲ್ಲಿರುವ ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಅವರ ಗೃಹ ಕಚೇರಿಯಲ್ಲಿ ನಡೆಯಿತು.
ಕಾರ್ಯಕಾರಿ ಸಮಿತಿ ಸದಸ್ಯರ ನಿರೀಕ್ಷೆಯಂತೆ ಸುಮಾರು 24 ಮಂದಿ ಸಕ್ರಿಯ ಅಲ್ಯೂಮ್ನಿ ಸದಸ್ಯರು ಸಭೆಗೆ ಹಾಜರಾಗಿದ್ದಲ್ಲದೆ, ಸೂಕ್ತ ಸಲಹೆ ಸೂಚೆಗಳನ್ನು ನೀಡಿದ್ದಲ್ಲದೆ, ಹೊಸ ಪದಾಧಿಕಾರಿಗಳ ಆಯ್ಕೆ, ಭವಷ್ಯ ಕಾರ್ಯಯೋಜನೆಗಳ ಕುರಿತು ಅನಿಸಿಕೆ, ಅಭಿಪ್ರಾಯಗಳನ್ನು ನೀಡಿ ಸಭೆಯನ್ನು ಅರ್ಥಪೂರ್ಣ ಆಗಿಸಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಸಭೆ ನಡೆಯಿತು.
--------------------
ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಜಿ.ಪಿ.ಶಿವರಾಮ್, ಮಂಗಳೂರು ವಿವಿ ರಾಜಕೀಯಶಾಸ್ತ್ರ ವಿಭಾಗ ಉಪನ್ಯಾಸಕ ಡಾ.ಪಿ.ಎಲ್.ಧರ್ಮ ಹಾಜರಿದ್ದರು.
--------------------------
ಮಾಮ್ ಆರಂಭಗೊಂಡ ಕೆಲ ತಿಂಗಳಲ್ಲೇ ಪತ್ರಕರ್ತ ಮನೋಹರ ಪ್ರಸಾದ್ ಅವರ ಅಭಿನಂದನೆ ಮತ್ತು ಪ್ರದೇಶಾಭಿವೃದ್ಧಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪಾತ್ರ ಕುರಿತ ವಿಚಾರಗೋಷ್ಠಿಯನ್ನು ಐದು ಸಂಸ್ಥೆ ಹಾಗೂ ನಾಲ್ವರು ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಸಲಾಗಿದೆ. ಈಗಾಗಲೇ ಮಾಮ್ನ್ನು ನೋಂದಣಿ ಮಾಡಲಾಗಿದೆ, ಒಂದು ಲಕ್ಷ ರೂ. ಮೊತ್ತವನ್ನು ಸಾಧಕ ಮಾಧ್ಯಮ ವಿದ್ಯಾರ್ಥಿಗಳಿಗೆ ಪುರಸ್ಕಾರವಾಗಿ ನೀಡುವುದಕ್ಕೆ ದತ್ತಿ ನಿಧಿಯಾಗಿ ಇರಿಸಲು ನಿರ್ಧರಿಸಲಾಗಿದೆ ಎಂದು ನಿಕಟ ಪೂರ್ವ ಅಧ್ಯಕ್ಷ ವೇಣು ಶರ್ಮಾ ವಿವರ ನೀಡಿದರು.
ಅಲ್ಲದೆ ಮಾಮ್ ವತಿಯಿಂದ ಮುಂದಿನ ದಿನಗಳಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸುವುದು, ಮಾಮ್ ವೆಬ್ಸೈಟ್ ಆರಂಭಿಸಿ,ಅದರ ಮುಖೇನ ಸಂಶೋಧನಾ ಪ್ರಬಂಧಗಳನ್ನು ಆಹ್ವಾನಿಸಿ ಬಹುಮಾನ ನೀಡುವುದೇ ಮುಂತಾದ ಚಟುವಟಿಕೆ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದೂ ತಿಳಿಸಿದರು.
--------------------
ಎಂಸಿಜೆ ವಿಭಾಗ ಮುಖ್ಯಸ್ಥರಾದ ಡಾ.ಜಿ.ಪಿ.ಶಿವರಾಂ ಅವರು ತಮ್ಮ ಅನಿಸಿಕೆಗಳನ್ನು ಮುಂದಿಟ್ಟು, ಮಾಮ್ ವೃತ್ತಿಪರ ಸಂಘಟನೆಯಾಗಿ ಬೆಳೆಯಬೇಕು. ವಿಭಾಗದ ಜೊತೆ ಜೊತೆಯಾಗಿ ಕೆಲಸ ಮಾಡಬೇಕು, ವಿಭಾಗದ ಕುರಿತು ಯಾವುದೇ ಸಲಹೆ, ಸೂಚನೆ ಆಕ್ಷೇಪಗಳಿದ್ದಲ್ಲಿ ನೇರವಾಗಿ ಚರ್ಚಿಸಬಹುದು, ಹಳೆ ವಿದ್ಯಾರ್ಥಿಗಳು ಎಂಸಿಜೆ ವಿಭಾಗದ ರಾಯಭಾರಿಗಳಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭ ಮಾತನಾಡಿದ ಗೌರವಾಧ್ಯಕ್ಷ ವೇಣು ಶರ್ಮ ಅವರು, ಎಂಸಿಜೆ ವಿಭಾಗ ಜೊತೆಯಲ್ಲೇ ಮಂಗಳಗಂಗೋತ್ರಿಯಲ್ಲೇ ವಾರ್ಷಿಕವಾಗಿ ಮಾಮ್ ಗೆಟ್ ಟುಗೆದರ್ ಆಯೋಜಿಸುವ ಪ್ರಸ್ತಾಪ ಮುಂದಿಟ್ಟರು.
---------------------
ಮಂಗಳಗಂಗೋತ್ರಿ ಹಳೆ ವಿದ್ಯಾರ್ಥಿಗಳ ಸಂಘಟನೆ (ಮಾ) ಇದರ ಪ್ರತಿನಿಧಿಯಾಗಿ ಆಗಮಿಸಿದ ಪ್ರೊ.ಪಿ.ಎಲ್.ಧರ್ಮ ಅವರು ಮಾತನಾಡಿ, ಮಾಮ್ ಹಾಗೂ ಮಾ ಸಂಘಟನೆಗಳು ಜೊತೆ ಜೊತೆಯಾಗಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಮಂಗಳೂರು ವಿ.ವಿ.ರಾಜಕೀಯ ಶಾಸ್ತ್ರ ವಿದ್ಯಾರ್ಥಿಗಳಿಗೂ ಪತ್ರಿಕೋದ್ಯಮದಲ್ಲಿ ಆಸಕ್ತಿಯಿದ್ದು, ಈ ಕುರಿತು ಮಾರ್ಗದರ್ಶನ ನೀಡಲು ಮಾಮ್ ಸದಸ್ಯರ ಸಹಕಾರ ಬೇಕಿದೆ. ಮಾ ಯೋಜಿಸಿರುವ ಕೆಲವು ಸಮಾಜಮುಖಿ ಚಟುವಟಿಕೆಗಳಿಗೆ ಮಾಮ್ ಸಹಯೋಗ ಸೂಕ್ತ ಹಾಗೂ ಹಳೆ ವಿದ್ಯಾರ್ಥಿಗಳ ಸಂಘಟನೆಗೆ ಯುಜಿಸಿ ವತಿಯಿಂದ ಧನಸಹಾಯವೂ ಸಿಗುತ್ತಿದ್ದು, ಈ ಕುರಿತು ಪ್ರಯತ್ನಿಸಬಹುದು ಎಂದು ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭ ಮಾಮ್ ವಾರ್ಷಿಕ ಮಹಾಸಭೆಗೆ ಮಾ ಕಡೆಯಿಂದ ಓರ್ವ ಪ್ರತಿನಿಧಿಯನ್ನು ಆಹ್ವಾನಿಸುವ ಕುರಿತು ಸದಸ್ಯರು ನಿರ್ಧಾರ ಕೈಗೊಂಡರು.
---------------------
ಮಾಮ್ ಭವಿಷ್ಯದ ಚಟುವಟಿಕೆಗಳ ಕುರಿತು ಸಭೆಯಲ್ಲಿ ವ್ಯಾಪಕವಾಗಿ ಚರ್ಚೆಗಳು ನಡೆದಿದ್ದು ಅವುಗಳ ಮುಖ್ಯಾಂಶಗಳು ಈ ರೀತಿ ಇವೆ...
-ಮಾಮ್ ವತಿಯಿಂದ ಮಂಗಳೂರು ವಿ.ವಿ. ಎಂಸಿಜೆ ವಿಭಾಗದ ಅತಿ ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗೆ ಅರ್ಹತೆ ಆಧಾರದಲ್ಲಿ ಪ್ರತಿ ವರ್ಷ ದತ್ತಿ ನಿಧಿ ಮಾದರಿಯಲ್ಲಿ ನಗದು ಬಹುಮಾನ ನೀಡುವುದು ಹಾಗೂ ಮಂಗಳೂರು ವಿ.ವಿ. ವ್ಯಾಪ್ತಿಯ ಎಲ್ಲಾ ಪತ್ರಿಕೋದ್ಯಮ ಶಿಕ್ಷಣ ನೀಡುವ ಕಾಲೇಜುಗಳ ಪೈಕಿ ಓರ್ವ ಉತ್ತಮ ವಿದ್ಯಾರ್ಥಿಯನ್ನು ಆರಿಸಿ ನಗದು ಬಹುಮಾನ ನೀಡುವುದು. ಇದಕ್ಕೆ ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ಶರತ್ ಹೆಗ್ಡೆ ಕಡ್ತಲ ನೇತೃತ್ವದ ಸಮಿತಿ ಇದಕ್ಕೆ ಅಂತಿಮ ರೂಪ ನೀಡಲಿದೆ.
-ಸದಸ್ಯತ್ವ ಸ್ವೀಕಾರಕ್ಕೆ ಚಾಲನೆ ನೀಡಲಾಯಿತು.
ವಾರ್ಷಿಕ ಸದಸ್ಯತ್ವ ಶುಲ್ಕ 100 ರು. ಹಾಗೂ ಆಜೀವ ಸದಸ್ಯತ್ವ ಶುಲ್ಕ 1000 ರು.ಗಳು. ಇದನ್ನು ಪರವೂರಿನಲ್ಲಿರುವ ಸದಸ್ಯರು ಆರ್ ಟಿ ಜಿ ಎಸ್ (ಆನ್ ಲೈನ್ ಬ್ಯಾಂಕಿಂಗ್ ವಿಧಾನ) ಮೂಲಕ ಪಾವತಿಸಿ ಸದಸ್ಯರಾಗಬಹುದು. ಇದಕ್ಕೆ ಸಮಯ ಮಿತಿ ನಿಗದಿಪಡಿಸಿಲ್ಲ.
ಮಾಮ್ ಹೆಸರಲ್ಲಿ ಮಂಗಳೂರು ಎಸ್ ಸಿ ಡಿ ಸಿ ಸಿ ಬ್ಯಾಂಕಿನಲ್ಲಿ ಅಕೌಂಟ್ ತೆರೆಯಲಾಗಿದ್ದು ಮುಂದಿನ ದಿನಗಳಲ್ಲಿ ಅದರ ಸಂಖ್ಯೆ ನೀಡುತ್ತೇವೆ. ಆದರೆ, ದುಡ್ಡು ಕಟ್ಟಿದವರ ಹೆಸರು ನಮಗೆ ಕ್ಲಪ್ತ ಸಮಯದಲ್ಲಿ ಸಿಗಬೇಕಾಗಿರುವುದರಿಂದ ಅದರ ವಿಧಿ ವಿಧಾನಗಳನ್ನು ಕೆಲ ಸಮಯದಲ್ಲೇ ಪ್ರಕಟಿಸಲಾಗುವುದು. ನಂತರ ಸದಸ್ಯತ್ವ ಶುಲ್ಕ ಸಂಗ್ರಹಿಸಲಾಗುವುದು.
-ಮಂಗಳೂರು ವಿ.ವಿ.ಯ ನೂತನ ವಿದ್ಯಾರ್ಥಿಗಳಿಗೆ ಮಾಮ್ ಸಹಯೋಗದಲ್ಲಿ ಓರಿಯೆಂಟೇಶನ್ ನೀಡಲು ನಿರ್ಧರಿಸಲಾಯಿತು.
-ಹಿರಿಯ ವಿದ್ಯಾರ್ಥಿ ಸ್ಟ್ಯಾನ್ಲಿ ಪಿಂಟೊ ಮಾತನಾಡಿ, ವಿ.ವಿ. ಎಂಸಿಜೆ ವಿಭಾಗದಲ್ಲಿರುವ ಹಳೆ ಪಠ್ಯಕ್ರಮ ಬದಲಾಯಿಸಿ, ಇಂದಿನ ಅಗತ್ಯಕ್ಕೆ ತಕ್ಕ ಸಿಲಬಸ್ ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಈ ಕುರಿತು ಸದಸ್ಯರು ಆಸಕ್ತಿ ವಹಿಸಿ ಅಗತ್ಯ ಸಿಲಬಸ್ ರೂಪಿಸುವ ಕುರಿತು ಆಗ್ರಹಿಸುವ ಬಗ್ಗೆ ಕೆಲಸ ಮಾಡಲು ನಿರ್ಧರಿಸಲಾಯಿತು.
-ಮಾಮ್ ಗೆ ನೂತನ ವೆಬ್ ಸೈಟ್ ರೂಪಿಸಲಾಗುವುದು. ಡಾ.ರೋನಾಲ್ಡ್ ಅನಿಲ್ ಫೆರ್ನಾಂಡಿಸ್ ಹಾಗೂ ವೇಣು ವಿನೋದ್ ಇದರ ನೇತೃತ್ವ ವಹಿಸುವರು.
-ವಿವಿಧ ಪತ್ರಿಕೋದ್ಯಮ ಪದವಿ ಕಾಲೇಜುಗಳಲ್ಲಿ ಮಾಮ್ ವತಿಯಿಂದ ಉಪನ್ಯಾಸ ಕಾರ್ಯಕ್ರಮ ಹಾಗೂ ಸಂವಾದ ಏರ್ಪಡಿಸಲಾಗುವುದು. ಇದರ ಮೊದಲ ಕಾರ್ಯಕ್ರಮ ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ ನಡೆಯಲಿದೆ.
-ಬೆಂಗಳೂರನಲ್ಲಿರುವ ನಮ್ಮ ಹಳೆ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಅಲ್ಲೂ ಕ್ರಿಯಾಶೀಲರಾಗಿರುವಂತೆ ಮಾಡಲು ಬೆಂಗಳೂರನಲ್ಲಿರುವ ದೀಪಕ್ ಹಾಗೂ ನವೀನ್ ಅಮ್ಮೆಂಬಳ ನೇತೃತ್ವದಲ್ಲಿ ಸೆಪ್ಟೆಂಬಲ್ ಮೊದಲು ಬೆಂಗಳೂರಿನಲ್ಲೇ ಒಂದು ಬ್ರೇಕ್ ಫಾಸ್ಟ್ ಸಭೆ ಏರ್ಪಡಿಸಿ, ಅಲ್ಲಿನ ಹಳೆ ವಿದ್ಯಾರ್ಥಿಗಳನ್ನು ಆಹ್ವಾನಿಸಲು ಹಾಗೂ ಮಂಗಳೂರಿನ ಪದಾಧಿಕಾರಿಗಳು ಅಲ್ಲಿಗೆ ತೆರಳಿ ಸಂವಾದ ನಡೆಸಿ ಅಲ್ಲಿಯೂ ಕಾರ್ಯಕ್ರಮಗಳನ್ನು ರೂಪಿಸುವಂತೆ ಮಾಡಲು ನಿರ್ಧರಿಸಲಾಯಿತು.
---------------------
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಫ್ಲೋರಿನ್ ರೋಚ್,
ಗೌರವಾಧ್ಯಕ್ಷರಾಗಿ ವೇಣುಶರ್ಮ,
ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಮೋಹನ ತಲೆಂಗಳ,
ಉಪಾಧ್ಯಕ್ಷರಾಗಿ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಶರತ್ ಹೆಗ್ಡೆ ಕಡ್ತಲ ಮತ್ತು ದೀಪಕ್,
ಖಜಾಂಚಿ (ಕೋಶಾಧಿಕಾರಿ)ಯಾಗಿ ಯೋಗೀಶ್ ಹೊಳ್ಳ,
ಕಾರ್ಯದರ್ಶಗಳಾಗಿ ವೇಣುವಿನೋದ್ ಕೆ.ಎಸ್, ಸ್ಮಿತಾ ಶೆಣೈ, ನವೀನ್ ಅಮ್ಮೆಂಬಳ
ಕಾರ್ಯಕ್ರಮ ಸಂಘಟಕರಾಗಿ ಕೃಷ್ಣ ಕಿಶೋರ್,
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರೇಂದ್ರ ಶೆಟ್ಟಿ, ಹರೀಶ್ ಕುಲ್ಕುಂದ, ಹರೀಶ್ ಮೋಟುಕಾನ, ಶ್ರವಣ್ ಕುಮಾರ್ ನಾಳ, ರವಿ ಪ್ರಸಾದ್ ಕಮಿಲ, ಸುರೇಶ್ ಡಿ.ಪಳ್ಳಿ, ವಿದ್ಯಾ ಇರ್ವತ್ತೂರು, ಸುಪ್ರಭಾ ಆಯ್ಕೆಯಾದರು. ಪ್ರಶಾಂತ ರೈ, ಬಾಲಕೃಷ್ಣ ಹೊಳ್ಳ ಆಯ್ಕೆಯಾದರು.
--------------
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಲ್ಲದೆ ಹಿರಿಯ ವಿದ್ಯಾರ್ಥಿಗಳಾದ ಗುರುರಾಜ್ ಪಣಿಯಾಡಿ, ಸ್ಟ್ಯಾನ್ಲಿ ಪಿಂಟೊ, ಚಂದನಾ ನಾಯಕ್ ಹಾಗೂ ಅಕ್ಷತಾ ರೈ ಹಾಜರಿದ್ದರು.
ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್.ವಂದಿಸಿದರು.
ಸಭೆಯ ಬಳಿಕ ಹೊಟೈಲ್ ದೀಪಾ ಕಂಫರ್ಟನಲ್ಲಿ ಭೋಜನ ವ್ಯವಸ್ಥೆಯಿತ್ತು.
ಮಾಮ್ ಆರಂಭವಾದಂದಿನಿಂದ ನಿಯಮಿತ ಸಭೆಗೆ ಸ್ಥಳಾವಕಾಶ ನೀಡುತ್ತಿರುವ ಹಾಗೂ ಆತಿಥ್ಯ ನೀಡುತ್ತಿರುವ ಗೌರವಾಧ್ಯಕ್ಷ ವೇಣು ಶರ್ಮ ಹಾಗೂ ಅವರ ಶ್ರೀಮತಿ ರಶ್ಮಿ ಹಾಗೂ ಪುತ್ರಿ ಅವನಿ ಶರ್ಮ ಅವರ ಔದಾರ್ಯವನ್ನು ಸ್ಮರಿಸುವುದು ನಮ್ಮ ಕರ್ತವ್ಯ.
----------------
ಮೊದಲ ಬಾರಿಗೆ ಟೈಂಮ್ಸ್ ಆಫ್ ಇಂಡಿಯಾದ ಮಂಗಳೂರು ಬ್ಯೂರೋ ಮುಖ್ಯಸ್ಥ ಸ್ಟ್ಯಾನ್ಲಿ ಪಿಂಟೊ, ದಿ ಹಿಂದೂವಿನ ಬ್ಯೂರೋ ಮುಖ್ಯಸ್ಥ ರವಿಪ್ರಸಾದ್ ಕಮಿಲ, ಬೆಂಗಳೂರಿನ ಸುಪ್ರಭಾ ಹಾಗೂ ಪತ್ರಕರ್ತರಾದ ಚಂದನಾ ನಾಯಕ್, ಶ್ರವಣ್ ಕುಮಾರ್ ನಾಳ, ರವಿರಾಜ್ ಕಟೀಲು, ಹರೀಶ್ ಕುಲ್ಕುಂದ, ಉಪನ್ಯಾಸಕ ಪರಶುರಾಮ ಕಾಮತ್ ಮತ್ತಿತರರು ನಮ್ಮೊಂದಿಗೆ ಸಭೆಯಲ್ಲಿ ಕೈಜೋಡಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಲಿದೆ ಎಂಬ ಆಶಯ ನಮ್ಮದು.
--------------------
ಸೂಚನೆ-
ನಮ್ಮ ಈ ಹಿಂದಿನ ಲೆಕ್ಕಪತ್ರ ವಿವರಗಳನ್ನು ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿದ್ದು, ಅದರ ವಿವರವಾದ ಮಾಹಿತಿ, ಬ್ಯಾಂಕ್ ಅಕೌಂಟ್ ಸಂಖ್ಯೆ, ಐಎಫ್ ಎಸ್ ಸಿ ಕೋಡ್ ಇತ್ಯಾದಿಗಳನ್ನು ಪ್ರತ್ಯೇಕ ಪೋಸ್ಟ್ ರೂಪಿಸಿ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು.
----------------------
No comments:
Post a Comment