Tuesday, 10 November 2015

ಮಾಮ್ ಚಾಟ್ ಗ್ರೂಪಿಗೆ ವರ್ಷ ತುಂಬುತ್ತಿದೆ....

ನಮಸ್ಕಾರ ಸ್ನೇಹಿತರೇ...








ಒಂದು ಖುಷಿಯ ವಿಚಾರ ನಿಮ್ಮ ಜೊತೆ ಹಂಚಿಕೊಳ್ಳಲು ಈ ಬರಹ.
ನಿಮಗೆಲ್ಲಾ ಗೊತ್ತಿರುವ ಹಾಗೆ ನಾವು ಕಲಿತ ಮಂಗಳೂರು ವಿ.ವಿ. ಎಂಸಿಜೆ ವಿಭಾಗಕ್ಕೆ ಕಳೆದ ವರ್ಷ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾವು 2014 ಡಿ.20ರಂದು ಮಂಗಳಗಂಗೋತ್ರಿಯಲ್ಲಿ ಎಂಸಿಜೆ 25 ಎಂಬ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡೆವು. ಅದೇ ದಿನ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಹೆಸರಿನ ಸಂಘಟನೆ ರಚಿಸಲಾಯಿತು.

ಎಂಸಿಜೆ 25 ಕಾರ್ಯಕ್ರಮಕ್ಕೂ ಎರಡು ತಿಂಗಳು ಹಿಂದೆಯೇ ಇದರ ಪೂರ್ವಭಾವಿ ಸಿದ್ಧತೆ ಆರಂಭವಾಗಿತ್ತು. ಫ್ಲೋರಿನ್ ರೋಚ್, ಕೃಷ್ಣಕಿಶೋರ್, ಸುರೇಂದ್ರ ಶೆಟ್ಟಿ, ಹರೀಶ್ ಮೋಟುಕಾನ, ಶರತ್ ಹೆಗ್ಡೆ ಮತ್ತಿತರರ ಆಸಕ್ತಿ ಫಲವಾಗಿ ಆರಂಭಿಕ ಹಂತದಲ್ಲಿ ಈ ಕಲ್ಪನೆ ಮಂಗಳೂರಲ್ಲಿ ಒಂದು ಸಣ್ಣ ಮೀಟಿಂಗ್ ಮೂಲಕ ಹುಟ್ಟಿಕೊಂಡಿತು. ಬಳಿಕ ಮಂಗಳೂರಿನ ಇತರ ಪತ್ರಕರ್ತ ಮಿತ್ರರು ಸೇರಿಕೊಂಡು ವರ್ಕಿಂಗ್ ಕಮಿಟಿ ರಚಿಸಿ ಕಾರ್ಯಕ್ರಮಕ್ಕೆ ಸಿದ್ಧತೆ ಶುರುವಾಯಿತು. 
ಈ ಹಂತದಲ್ಲಿ ನಮಗೆ ಹಳೆ ವಿದ್ಯಾರ್ಥಿಗಳನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ತಲುಪಲು ಸುಲಭ ಮಾರ್ಗವಾಗಿ ಕಂಡುಬಂದಿದ್ದು ವಾಟ್ಸಾಪ್. ಹಳೆ ವಿದ್ಯಾರ್ಥಿಗಳನ್ನು ರೀಚ್ ಆಗಲು ನಾವು ಕಳೆದ ವರ್ಷ ಎಂಸಿಜೆ 25 (ಈಗಿನ ಮಾಮ್ ಆಕ್ಟಿವ್) ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ಶುರು ಮಾಡಿದೆವು. ಆ ಗ್ರೂಪ್ ಆರಂಭಿಸಿ ನ.12ಕ್ಕೆ ಒಂದು ವರ್ಷ ತುಂಬಿತು....

ಇದೇ ಖುಷಿಯಲ್ಲಿ, ಒಂದು ಪುಟ್ಟ ಸಿಂಹಾವಲೋಕನ.

ನಾವು ಶುರು ಮಾಡಿದ ಚಾಟ್ ಗ್ರೂಪಿಗೆ ತುಂಬಾ ಅದ್ಭುತ ಅನ್ನುವಂತಹ ಪ್ರತಿಕ್ರಿಯೆ ಸಿಕ್ಕಿತು. ಸುಮಾರು 80ಕ್ಕೂ ಹೆಚ್ಚು ಮಂದಿ ಹಳೆ ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಯಲ್ಲಿ ಗ್ರೂಪಿಗೆ ಸೇರಿಸಲಾಯಿತು. ಆರಂಭದ ದಿನಗಳಲ್ಲಿ ಪ್ರತಿದಿನ ಅತ್ಯಂತ ಹುರುಪಿನಿಂದ (ಈಗಿನ ಮಾಮ್ ಚಾಟ್ ಗ್ರೂಪ್ ಮಾದರಿಯಲ್ಲಿ) ಚರ್ಚೆಗಳು ನಡೆಯುತ್ತಿದ್ದವು. ವರ್ಕಿಂಗ್ ಕಮಿಟಿಯವರ ಕೋರಿಕೆ ಮನ್ನಿಸಿ ಹಲವರು ಧನಸಹಾಯ ಮಾಡಿದರು, ಸಲಹೆಗಳನ್ನು ನೀಡಿದರು. ಸುಮಾರು 30 ಮಂದಿ ಹಳೆ ವಿದ್ಯಾರ್ಥಿಗಳು ಹೊರ ಭಾಗದಿಂದಲೂ ಬಂದು ಎಂಸಿಜೆ 25 ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿದರು. 

ಡಿ.20, 2014ರಂದು ಮಾಮ್ ರಚನೆಯಾದ ಬಳಿಕವೂ ವಾಟ್ಸಾಪ್ ಗ್ರೂಪ್ ಮುಂದುವರಿಯಿತು. ಮತ್ತಷ್ಟು ಸದಸ್ಯರ ಸೇರ್ಪಡೆಯಾಯಿತು. ಈ ನಡುವೆ, ಸದ್ದುಗದ್ದಲ ಬಯಸದೆ ಮೌನವಾಗಿರಬಯಸುವವರಿಗೆ ಮಾಮ್ ಸೈಲೆಂಟ್ ಎಂಬ ಪ್ರತ್ಯೇಕ ಗ್ರೂಪ್ ರಚಿಸಲಾಯಿತು. ಬೆಂಗಳೂರಿನಲ್ಲಿರವ ಸ್ನೇಹಿತರಿಗಾಗಿ ಮಾಮ್ ಬೆಂಗಳೂರು ಚಾಪ್ಟರ್ ರಚಿಸಲಾಯಿತು. ಇತ್ತೀಚೆಗೆ ಮಾಮ್ ಆಕ್ಟಿವ್ ಗುಂಪಿನಲ್ಲಿ ಚರ್ಚೆಗಳು ಅಧಿಕವಾದಾಗ ಚರ್ಚೆಗಳನ್ನು ಇಷ್ಟಪಡುವವರಿಗಾಗಿಯೇ ಮಾಮ್ ಚಾಟ್ ಎಂಬ ಗ್ರೂಪ್ ಹುಟ್ಟ ಹಾಕಲಾಯಿತು. ಹೀಗೆ ನಮ್ಮ ನಾಲ್ಕು ಗ್ರೂಪುಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ವರ್ಕಿಂಗ್ ಕಮಿಟಿ ಸಂಪರ್ಕದಲ್ಲಿದ್ದಾರೆ. ಹಾಗೂ ನಿರಂತರವಾಗಿ ನಮ್ಮ ಚಟುವಟಿಕೆಗಳನ್ನು ಗಮನಿಸುತ್ತಿದ್ದಾರೆ. ಮಾಮ್ ಸಂಬಂಧಿ ಎಲ್ಲ ಪ್ರಮುಖ ಸಂದೇಶಗಳು, ವರದಿ, ಫೋಟೊ, ಸೂಚನೆಗಳನ್ನು ಮಾಮ್ ಚಾಟ್ ಗ್ರೂಪ್ ಹೊರತುಪಡಿಸಿ ಇತರ ಎಲ್ಲಾ ಗ್ರೂಪುಗಳಲ್ಲಿ ಸಮಾನವಾಗಿ ಶೇರ್ ಮಾಡಲಾಗುತ್ತಿದೆ. ಅದನ್ನು ಎಲ್ಲಾ ಹಿರಿಯ, ಕಿರಿಯ ಸ್ನೇಹಿತರು ಗಮನಿಸುತ್ತಿರುತ್ತಾರೆ ಎಂದುಕೊಳ್ಳುತ್ತೇನೆ.

ಮಾಮ್ ರಚನೆಯಾದ ಬಳಿಕ ನಾವು ಏಪ್ರಿಲ್ ನಲ್ಲಿ ಪತ್ರಕರ್ತ ಮನೋಹರ್ ಪ್ರಸಾದ್ ಅವರನ್ನು ಅಭಿನಂದಿಸುವ ಮನೋಭಿನಂದನ ಕಾರ್ಯಕ್ರಮ ನಡೆಸಿದೆವು, ಮನೋಭಿನಂದನ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದೆವು, ಜುಲೈನಲ್ಲಿ ವಾರ್ಷಿಕ ಮಹಾಸಭೆ ನಡೆಸಿ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ಬಳಿಕ ಸರಣಿ ರಕ್ತದಾನ ಶಿಬಿರಗಳನ್ನು ನಡೆಸಿದ್ದು ಈ ಸರಣಿ ಇನ್ನೂ ಮುಂದುವರಿಯುತ್ತಿದೆ. ಮಾಮ್ ಸಹಯೋಗದಲ್ಲಿ ಎರಡು ಕಾಲೇಜುಗಳಲ್ಲಿ ಕಾರ್ಯಾಗಾರ ನಡೆದಿವೆ....ಬೆಂಗಳೂರಿನಲ್ಲೂ ಮಾಮ್ ಸಹಯೋಗದಲ್ಲಿ ಒಂದು ಕಾರ್ಯಾಗಾರ ನಡೆದಿದೆ. ಬೆಂಗಳೂರಿನಲ್ಲಿ ಸಭೆ ನಡೆಸಿ ಅಲ್ಲಿನ ಎಂಸಿಜೆ ಹಳೆ ವಿದ್ಯಾರ್ಥಿಗಳನ್ನು ಸಂಘಟಿಸುವ ಕಾರ್ಯಕ್ಕೆ ಚಾಲನೆ ದೊರಕಿದೆ.

ನಾವೆಲ್ಲಾ ವೃತ್ತಿಪರರಾಗಿರುವ ಹಿನ್ನೆಲೆಯಲ್ಲಿ ಲಭ್ಯ ಸಮಯಾವಕಾಶದಲ್ಲೇ ಇಷ್ಟೆಲ್ಲಾ ಚಟುವಟಿಕೆ ನಡೆಸಿದ್ದೇವೆ. ಇನ್ನಷ್ಟು ಗುರಿಗಳು ನಮ್ಮೆದುರಿಗಿವೆ. ಅದರ ಜಾರಿಗೆ ಲಭ್ಯ ಸಮಯಾವಕಾಶದಲ್ಲೇ ಕಾರ್ತತತ್ಪರರಾಗಿದ್ದೇವೆ.
ಈ ನಾಲ್ಕು ಗ್ರೂಪುಗಳ ಹೊರತು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಮಾಮ್ ಚಟುವಟಿಕೆಗಳ ಕುರಿತು ಚರ್ಚಿಸಲು ಪ್ರತ್ಯೇಕವಾಗಿ ವರ್ಕಿಂಗ್ ಕಮಿಟಿ ಗ್ರೂಪುಗಳೂ ಇವೆ. ಇಲ್ಲಿ ನಾವು ದೈನಂದಿನ ಚಟುವಟಿಕೆಗಳ ಕುರಿತು ಚರ್ಚಿಸುತ್ತಿರುತ್ತೇವೆ. ಮಂಗಳೂರಿನ ವರ್ಕಿಂಗ್ ಕಮಿಟಿ ಸಭೆ ನಿಯಮಿತವಾಗಿ ನಡೆಯುತ್ತಲೇ ಇದೆ. 
--------------
ವಾಟ್ಸಾಪ್ ಗ್ರೂಪ್ ಗಳ ಬಗ್ಗೆ
1) MAAM ACTIVE
2) MAAM SILENT
3) MAAM CHAT
4) MAAM BENGALURU CHAPTER
5) MAAM WORKING COMMITTEE
6) MAAM WORKING COMMITEE BLORE

ನಮಗೆ ಎಲ್ಲಾ ಎಂಸಿಜೆ ಹಳೆ ವಿದ್ಯಾರ್ಥಿಗಳ ಸಂಪರ್ಕವೂ ಅಮೂಲ್ಯ. ಎಲ್ಲಾ ಹಿರಿಯ, ಕಿರಿಯ ಸ್ನೇಹಿತರು ನಮಗೆ ಸಮಾನರು. ವೈಯಕ್ತಿಕ ಐಡಿಯಾಲಜಿ, ಕೆಲಸ ಮಾಡುವ ಸಂಸ್ಥೆ, ವಯಸ್ಸು, ಲಿಂಗ, ಆರ್ಥಿಕ ಹಿನ್ನೆಲೆ, ಕೋಮು ಯಾವುದೂ ನಮ್ಮ ಸಂಘಟನೆಗೆ ಮುಖ್ಯ ಮಾನದಂಡವಲ್ಲ. ಎಂಸಿಜೆ ಹಳೆ ವಿದ್ಯಾರ್ಥಿಯೆಂಬುದೇ ನಮ್ಮೆಲ್ಲರೊಳಗಿರುವ ಸಂಪರ್ಕಕ್ಕೆ ಭಾವನಾತ್ಮಕ ಕೊಂಡಿ. ನಮ್ಮ ಗ್ರೂಪಿನಲ್ಲಿ ಎಷ್ಟೋ ಬಾರಿ ಬಿಸಿ ಬಿಸಿ ಚರ್ಚೆ, ಉದ್ವಿಗ್ನತೆ, ಟೀಕೆ ಎಲ್ಲಾ ಕಂಡು ಬಂದಿದೆ. ಕಾಲ ಕಾಲಕ್ಕೆ ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಗುಂಪಿನಲ್ಲಿ ಎಲ್ಲಾ ವಯೋಮಾನದವರು, ಮನಸ್ಥಿತಿಯವರು, ಗಂಭೀರರು, ಹಾಸ್ಯಪ್ರವೃತ್ತಿಯವರು....ಇದ್ದಾರೆ.
-ಕೆಲವರಿಗೆ ತುಂಬಾ ಚರ್ಚೆ ಇಷ್ಟ (ಮಾಮ್ ಚಾಟ್)
-ಕೆಲವರಿಗೆ ಕೇವಲ ಮಾಹಿತಿ ವಿನಿಮಯ ಮಾತ್ರ ಇಷ್ಟ, ಉದ್ದುದ್ದ ಚರ್ಚೆ, ಮೆಸೇಜ್ ಶೇರಿಂಗ್ ಇಷ್ಟ ಇಲ್ಲ (ಮಾಮ್ ಆಕ್ಟಿವ್)
-ಕೆಲವರಿಗೆ ಮೌನವಾಗಿದ್ದು, ಬರುವ ಪೋಸ್ಟ್ ಗಳನ್ನು ನೋಡುವುದು ಇಷ್ಟ. ಚರ್ಚೆ ಬೇಡವೇ ಬೆಡ (ಮಾಮ್ ಸೈಲಂಟ್)

ಇದು ಒಬ್ಬೊಬ್ಬರ ಸ್ವಭಾವ. ಹಾಗಂತ ಎಲ್ಲರೂ ನಮ್ಮವರೇ. ಎಲ್ಲರನ್ನೂ ಮೆಚ್ಚಿಸಿ ಬದುಕಲು ಅಸಾಧ್ಯ. ಆದರೂ ಚಾಟಿಂಗ್ ವಿಚಾರವೊಂದಕ್ಕೆ ಯಾರೂ ಗ್ರೂಪ್ ತೊರೆದು ಹೋಗುವುದು ಬೇಡ ಎನ್ನುವ ಕಾರಣಕ್ಕೆ ಮೂರು ಪ್ರತ್ಯೇಕ ಗ್ರೂಪುಗಳನ್ನು ರಚಿಸಿದ್ದೇವೆ. ಅವರವರ ಇಷ್ಟಾನುಸಾರ ಚಾಟಿಂಗ್ ನಡೆಯುತ್ತಿದೆ. ಅದರಲ್ಲೂ ಮಾಮ್ ಚಾಟ್ ಗ್ರೂಪಿನಲ್ಲಿ ನಾವು ಯಾವತ್ತೂ ಮಧ್ಯಪ್ರವೇಶ ಮಾಡಿದ್ದಿಲ್ಲ. ಅಲ್ಲಿ ಶೇರ್ ಆಗುವ ಮಾಹಿತಿಗಳಿಗೆ ಮಾಹಿತಿ ಶೇರ್ ಮಾಡಿದವರೇ ಜವಾಬ್ದಾರರು. ಮೂವರು ಅಡ್ಮಿನ್ ಗಳು ಹೊಣೆಯಲ್ಲ. ಆದರೆ, ಮಾಮ್ ಆಕ್ಟಿವ್ ಹಾಗೂ ಮಾಮ್ ಸೈಲೆಂಟ್ ಗ್ರೂಪಿನಲ್ಲಿ ಅನಗತ್ಯ ದೀರ್ಘ ಮೆಸೇಜ್ ಶೇರಿಂಗ್ ಹಾಗೂ ವೈಯಕ್ತಿಕ ನಿಂದನೆ, ಪ್ರಚೋದನಕಾರಿ ಬರಹಗಳನ್ನು ಉದ್ದೇಶಪೂರ್ವಕ ಹಾಕುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇದರ ಅರ್ಥ ಮಾಮ್ ಚಾಟ್ ನಲ್ಲಿ ಅವಹೇಳನಕಾರಿ ಸಂದೇಶ ಹಾಕಲು ಪರವಾನಗಿ ನೀಡಿದೆ ಎಂತಲ್ಲ. ಅಲ್ಲಿ ಮುಕ್ತವಾಗಿ ಚರ್ಚೆಗಳನ್ನು ಮಾಡಬಹುದು ಅಂತ ಅಷ್ಟೆ.
ಮುಂದೆಯೂ ಇದೇ ನಿಯಮ ಜಾರಿಯಲ್ಲಿರುತ್ತದೆ.

ತುಂಬ ಸಮಯ ಶ್ರಮ ಹಾಗೂ ಸಂಪರ್ಕದ ಮೂಲಕ ಇಷ್ಟು ಜನರನ್ನು ಒಟ್ಟು ಸೇರಿಸಿದ್ದೇವೆ. ಸಂಘಟನೆಗೆ ಒಂದು  ವರ್ಷ ತುಂಬುತ್ತಿದೆ. ಕ್ಷುಲ್ಲಕ ಕಾರಣಗಳಿಗೆ, ಸಣ್ಣಪುಟ್ಟ ವಿಚಾರಗಳಿಗೆ ಗುಂಪು ತೊರೆಯುವುದು, ತಪ್ಪು ಕಲ್ಪನೆಗಳನ್ನು ಹರಡುವುದು ಮಾಡಬೇಡಿ. ಸಂಘಟನೆ ಕಟ್ಟುವುದು ಅಂದ ಮೇಲೆ ಸರಸ, ವಿರಸ ಇದ್ದದ್ದೇ.. ಆದರೆ ಅದು ಧನಾತ್ಮಕವಾಗಿರಲಿ. ನಾವು ಸಾಧಿಸಬೇಕಾಗಿದ್ದು ತುಂಬಾ ಇದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಮಾತ್ರವಲ್ಲ, ಪ್ರತಿಯೊಬ್ಬರೂ ಕೈಜೋಡಿಸಬೇಕು.

ವಾಟ್ಸಾಪ್ ಗ್ರೂಪ್ ಗಳ ಬಗ್ಗೆ ಹೇಳುವುದಾದರೆ, ದಯವಿಟ್ಟು  ಗುಂಪಿನ ನಿಯಮಗಳಿಗೆ ಬೆಲೆ ಕೊಡಿ. ನೀವೇಲ್ಲರೂ ಮೂಲಭೂತವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು. ಸಾಮಾಜಿಕ ಶಾಂತಿ, ಸಾಮರಸ್ಯ ಪಾಲನೆ ಬಗ್ಗೆ ಯಾರಿಗೂ ಹೇಳಬೇಕಿಲ್ಲ. ನಮ್ಮ ಮೂರೂ ಗುಂಪುಗಳಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ದುಡಿಯುವ, ಪ್ರಮುಖ ಹುದ್ದೆಗಳಲ್ಲಿರುವವರು ಇದ್ದಾರೆ, ಸಂಪಾದಕರು ಇದ್ದಾರೆ, ಬ್ಯೂರೋ ಮುಖ್ಯಸ್ಥರಿದ್ದಾರೆ, ಪ್ರಧಾನ ವರದಿಗಾರರಿದ್ದಾರೆ, ಸ್ವಉದ್ಯೋಗ ನಿರತರಿದ್ದಾರೆ, ಬಿಝಿ ಶೆಡ್ಯೂಲ್ ಗಳಲ್ಲಿ ದುಡಿಯುವವರಿದ್ದಾರೆ. ನಮ್ಮ ಒಂದು ಅನಗತ್ಯ ಮೆಸೇಜ್ ಅವರೆಲ್ಲರ ಮೊಬೈಲ್ ಗಳನ್ನು ತಲಪುತ್ತದೆ, ಡಿಸ್ಟರ್ಬ್ ಮಾಡಬಹುದು ಎಂಬ ಪ್ರಜ್ಞೆ ಇರಲಿ. ನಾನು  ಬೇಕಾದ್ದು ಹಾಕುತ್ತೇೆನೆ, ಬೇಡದವರು ಬಿಟ್ಟು ತೊಲಗಿ ಎಂಬಿತ್ಯಾದಿ ಅಸಡ್ಡೆ ಬೇಡ. ಎಲ್ಲರ ಖಾಸಗಿತನ, ಭಾನೆಗಳಿಗೂ ಬೆಲೆ ಕೊಡಿ. ಮುಂದೆಯೂ ನಿಮ್ಮ ಸಹಕಾರವಿರಲಿ.
ವಂದನೆಗಳು....
-ಕೆಎಂ, ಮಾಮ್ ಮಂಗಳೂರು ವರ್ಕಿಂಗ್ ಕಮಿಟಿ ಪರವಾಗಿ.

No comments:

Post a Comment