Sunday, 1 November 2015

ಆ ರೇಡಿಯೋ ಕಾರ್ಯಾಗಾರ ತಿಳಿಸಿದ್ದು ಹಲವು ವಿಷಯ....




ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ನಮಗೆ ಮಾದ್ಯಮಗಳ ಕುರಿತು ಮಾಹಿತಿ ಅವಶ್ಯಕ. ಈ ಹಿನ್ನೆಲೆಯಲ್ಲಿ ನಮ್ಮ ವಿಭಾಗದಲ್ಲಿ ಆಯೋಜಿಸಿದ ಕಾರ್ಯಾಗಾರವೊಂದು ನಮಗೆ ಸಾಕಷ್ಟು ವಿಷಯ ತಿಳಿಸುವುದರೊಂದಿಗೆ ಬದುಕಿಗೆ ಮಾರ್ಗದರ್ಶಿಯಾಯಿತು. ನಮ್ಮ ವಿಭಾಗದಲ್ಲಿ ಸಮುದಾಯ ರೇಡಿಯೋ ಆರಂಭಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ಯುದ್ಧಕ್ಕೆ ಮುನ್ನ ಶಸ್ತ್ರಾಭ್ಯಾಸದಲ್ಲಿ  ನಮ್ಮ ಸ್ನೇಹಿತವರ್ಗ ನಿರತವಾಗಿದೆ. ಈ ಅಭ್ಯಾಸದ ಒಂದು ಭಾಗ ಇಲ್ಲಿ ಹೇಳ ಹೊರಟಿರುವ ರೇಡಿಯೋ ಕುರಿತ ಕಾರ್ಯಾಗಾರ.



 ಆರಂಭದಲ್ಲಿ ರೇಡಿಯೋ ಕುರಿತು ಬರವಣಿಗೆ ಹೇಗೆ? ಎಂದು ತಿಳಿಸಲಾಯಿತು. ನಂತರದಲ್ಲಿ ಕಾರ್ಯಕ್ರಮ ನಿರ್ವಹಣೆ, ಅಯೋಜನೆ ಮತ್ತು ಸಂಕಲನ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಾಹಿತಿ ದೊರಕಿತು. ಇಲ್ಲಿ ಸಂಪನ್ಮೂಲ ವ್ಯಕ್ತಿಗಳ ಕುರಿತು ಹೇಳುವುದಾದರೆ ಮಾಮ್ ಎಂಬ ಹೆಸರಿನ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆವಿದ್ಯಾರ್ಥಿ ಸಂಘದ ಸದಸ್ಯರು ಈ ಕಾರ‌್ಯಾಗಾರದಲ್ಲಿ ಮಾಹಿತಿ ಒದಗಿಸಿದ್ದರು.



ರೇಡಿಯೋದಲ್ಲಿ ಕಾರ್ಯಕ್ರಮ ಬಿತ್ತರಿಸುವಾಗ ಸರಳತೆ, ಕೇಳುಗನನ್ನು ಸಮರ್ಪಕವಾಗಿ ತಲುಪುವುದು ಮತ್ತು ಪದಬಳಕೆಗಳ ಕುರಿತು ಚಿಂತನೆ ಮಾಡಲಾಯಿತು. ಇದೇವೇಳೆ ರೇಡಿಯೋ ಕೇಳುಗನ ಮನಸ್ಥಿತಿ ಜೊತೆಗೆ ಕಾರ್ಯಕ್ರಮದ ಟಾರ್ಗೆಟ್ ಆಡಿಯೆನ್ಸ್ ಕುರಿತಾಗಿ ಅವಲೋಕನ ನಡೆಸಲಾಯಿತು.ಬಹುಷಃ ಈ ವಿಷಯ ಬಹಳ ಸೂಕ್ಷ್ಮವಾಗಿದ್ದರಿಂದ ಇದರ ಮಹತ್ವದ ಅರಿವು ಆವರೆಗೆ ನಮಗಾಗಿರಲಿಲ್ಲ.



ಈಗಾಗಲೇ ಸುಸಜ್ಜಿತ ಸ್ಟುಡಿಯೋ ಒಂದು ನಮ್ಮ ಕಾಲೇಜಿನಲ್ಲಿದೆಯಾದರೂ ಅಲ್ಲಿ ಕೆಲವು ಸಾಮನ್ಯ ವಿಷಯಗಳ ಬಳಕೆ ಕುರಿತು ನಮಗೆ ಸಮರ್ಪಕ ವಿಧಾನ ತಿಳಿಸಿದ್ದು ಇದೇ ಕಾರ್ಯಾಗಾರ. 2 ಗೋಷ್ಠಿಯಲ್ಲಿ ವಿಷಯಗಳ ಕುರಿತು ಸಂವಾದವಾದರೆ ನಂತರದ ಗೋಷ್ಠಿಯಲ್ಲಿ  ಪ್ರಯೋಗಿಕ ಅಧ್ಯಯನ ನಮ್ಮಲ್ಲಿನ ಭರವಸೆಯನ್ನು ಇಮ್ಮಡಿಗೊಳಿಸಿತ್ತು.

ಸ್ಥಳದಲ್ಲೇ ಸ್ಕ್ರಿಪ್ಟ್ ರೈಟಿಂಗ್:
 ಹೌದು ಹೀಗೊಂದು ಸವಾಲು ನಮ್ಮ ಮುಂದೆ ಇಟ್ಟವರು 2ನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ. ಮೊದಲು ಅವರ ಸವಾಲು ಸ್ವೀಕರಿಸಲು ಭಯವಾದರೂ ನಮ್ಮ ವಿದ್ಯಾರ್ಥಿ ತಂಡ ತಿಳಿದಷ್ಟು ಬರೆದು ಸೈ ಎನಿಸಿಕೊಂಡೆವು. ತಪ್ಪುಗಳನ್ನು ತಿಳಿಸಿ ಹೇಳಲು ಈ ಪ್ರಯೋಗ ಸಾಕಷ್ಟು ಅವಕಾಶ ಮಾಡಿಕೊಟ್ಟಿತ್ತು. ಈ ವೇಳೆ ಬರವಣಿಗೆಯ ಮೇಲೆ ನಮಗರಿವಿಲ್ಲದೆ ಒಂದು ಹಿಡಿತ ಸಿಕ್ಕತ್ತು ಮತ್ತು ಈ ತೆರನಾಗಿ ಬರೆಯಲು ನಮ್ಮಂದ ಸಾಧ್ಯ ಎಂಬ ಆತ್ಮವಿಶ್ವಾಸವೂ ಮೂಡಿತ್ತು.



ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಕೇವಲ ಮಾಹಿತಿ ನೀಡದೆ ನಮ್ಮನ್ನೂ ಸಂಪನ್ಮೂಲಗಳಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಎಂಬುದು ಬಹಳ ಮುಖ್ಯ ವಿಷಯ. ಮಾಧ್ಯಮ ಜಗತ್ತಿನಲ್ಲಿ. ಜನರಿಗೆ ಮಾಹಿತಿ ಮತ್ತು ಮನರಂಜನೆ ನೀಡುವುದು ಮಾಧ್ಯಮಗಳ ಉದ್ದೇಶವಾದರೂ ರೇಡಿಯೋ ಕ್ಷೇತ್ರದಲ್ಲಿ ಒಂದು ಪರಿಧಿಯೊಳಗಿನ ಮಾಹಿತಿ ಅವಶ್ಯಕ ವಾಗಿರುತ್ತದೆ. ಮತ್ತು ನಮ್ಮ ಸಮುದಾಯ ರೇಡಿಯೋ ಚಾನೆಲ್‌ಅನ್ನು ವಿದ್ಯಾರ್ಥಿಗಳಾದ ನಾವು ಸ್ವತಂತ್ರವಾಗಿ ನಡೆಸಿಕೊಂಡು ಮುನ್ನಡೆಯುವಲ್ಲಿ ಈ ಕಾರ‌್ಯಾಗಾರದ ಸಹಕಾರ ಮಹತ್ವವಾದದ್ದು.


-ಎನ್ ಪೂಜಾ. ಪಕ್ಕಳ. ದ್ವಿತೀಯ ಎಮ್.ಸಿ.ಜೆ ಎಸ್.ಡಿ.ಎಂ ಕಾಲೇಜು ಉಜಿರೆ.

No comments:

Post a Comment