ರೇಡಿಯೋ ಕಾರ್ಯಕ್ರಮ ನಿರ್ಮಾಣದಲ್ಲಿ
ಸಮಯಪ್ರಜ್ಞೆ ಅಗತ್ಯ: ಫ್ಲೋರಿನ್ ರೋಚ್
-----------------------
ಮಂಗಳಗಂಗೋತ್ರಿ: ರೇಡಿಯೊ ಕಾರ್ಯಕ್ರಮ ನಿರ್ಮಾಣದಲ್ಲಿ ಕಾರ್ಯಕ್ರಮ ನಿರ್ಮಾಪಕನ ಪಾತ್ರ ಪ್ರಮುಖವಾದುದು. ಕಾರ್ಯಕ್ರಮ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಸಮಯ ಪ್ರಜ್ಞೆ ಅತಿ ಅಗತ್ಯ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಫ್ಲೋರಿನ್ ರೋಚ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಮಾಮ್ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ-ಮಾಮ್) ವತಿಯಿಂದ ಆಯೋಜಿಸಲಾಗಿದ್ದ ಉಪನ್ಯಾಸ ಸರಣಿಯಲ್ಲಿ, ಮಂಗಳವಾರ ರೇಡಿಯೋ ಕಾರ್ಯಕ್ರಮ ನಿರ್ಮಾಣ ಕುರಿತು ಅವರು ಮಾಹಿತಿ ನೀಡಿದರು.
ರೇಡಿಯೋದಲ್ಲಿ ಚರ್ಚೆ, ಸಂದರ್ಶನ, ರೂಪಕ, ನಾಟಕ, ಸುದ್ದಿ ಹೀಗೆ ವಿವಿಧ ಪ್ರಕಾರದ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ವಿಭಿನ್ನವಾದ ನಿರ್ಮಾಣ ಪ್ರಕ್ರಿಯೆಗಳಿವೆ. ಪ್ರತಿಯೊಂದು ಹಂತದಲ್ಲಿಯೂ ಕಾರ್ಯಕ್ರಮ ನಿರ್ಮಾಣ ಸಿಬ್ಬಂದಿಯ ಪಾತ್ರ ಮುಖ್ಯವಾಗಿರುತ್ತದೆ. ಆಕಾಶವಾಣಿಯು ದೇಶದ ಸುಮಾರು ಶೇ. ೯೮ ರಷ್ಟು ಜನರನ್ನು ತಲುಪುವ ಏಕೈಕ ಮಾಧ್ಯಮವಾಗಿದ್ದು, ಸರ್ಕಾರದ ಯೋಜನೆಗಳ ಕುರಿತಾಗಿ ಉತ್ತಮ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡುತ್ತಿದೆ. ಆಕಾಶವಾಣಿಯ ಕಾರ್ಯಕ್ರಮಗಳನ್ನು ಆಲಿಸುವುದರಿಂದ ನಮ್ಮ ಭಾಷಾ ಸಾಮರ್ಥ್ಯದ ವೃದ್ಧಿಯ ಜೊತೆಗೆ ಭಾಷಾ ಶುದ್ಧತೆಯನ್ನು ಕಾಣಬಹುದು ಎಂದು ಅವರು ವಿವರಿಸಿದರು.
ಬಾನುಲಿ ನಾಟಕ: ರೇಡಿಯೊ ನಾಟಕ ನಿರ್ಮಾಣದ ಕುರಿತು ಮಾತನಾಡುತ್ತಾ ಅವರು, ರೇಡಿಯೋ ನಾಟಕಗಳನ್ನು ನಿರ್ಮಾಣ ಮಾಡುವುದು ಸವಾಲಿನ ಕೆಲಸ. ಇದು ಇತರ ನಾಟಕಗಳಂತೆ ಅಲ್ಲ. ರೇಡಿಯೋದಲ್ಲಿ ಕೇವಲ ಧ್ವನಿಯ ಮೂಲಕ ಸನ್ನಿವೇಷಗಳನ್ನು ಶ್ರೋತೃಗಳಿಗೆ ವಿವರಿಸಬೇಕಾಗುತ್ತದೆ. ಇದಕ್ಕಾಗಿಯೇ ಅನೇಕ ವಿಧದ ಧ್ವನಿಗಳ ಸಂಗ್ರಹವಿರುವುದು ಅಗತ್ಯ. ಇಲ್ಲಿ ಸಂಕಲನದ ಪಾತ್ರ ಮಹತ್ವವಾದದ್ದು. ಎಂದರು.
ನೇರ ಪ್ರಸಾರದ ಕಾರ್ಯಕ್ರಮಗಳಲ್ಲಿ ನಿರೂಪಕರು ಎಚ್ಚರಿಕೆಯಿಂದಿರಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಪೂರ್ವತಯಾರಿಯನ್ನು ಮಾಡಿಕೊಂಡಿರಬೇಕು. ಮತ್ತು ಕಾರ್ಯಕ್ರಮಗಳಲ್ಲಿ ಎದುರಾಗುವ ಅನಿರೀಕ್ಷತ ಸಂದರ್ಭಗಳನ್ನು ನಿರ್ವಹಿಸುವ ಕೌಶಲ್ಯ ಕಾರ್ಯಕ್ರಮ ನಿರೂಪಕರಿಗೆ ಇರಬೇಕಾಗುತ್ತದೆ. ಎಂದು ಹೇಳಿದರು
ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರತಿನಿತ್ಯ ಕನಿಷ್ಠ ೧೫ ನಿಮಿಷಗಳ ಕಾಲವಾದರೂ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸುವ ಅಗತ್ಯವಿದೆ. ರೇಡಿಯೋ ಕಾರ್ಯಕ್ರಮಗಳು ಕೇಳುಗರನ್ನು ಯೋಚಿಸುವಂತೆ ಮತ್ತು ವಿಮರ್ಶಿಸುವಂತೆ ಪ್ರಚೋದಿಸುತ್ತದೆ ಎಂದು ಅವರು ನುಡಿದರು.
ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರೊ. ಜಿ.ಪಿ. ಶಿವರಾಂ ಉಪಸ್ಥಿತರಿದ್ದರು.
ವರದಿ: ಜಯರಾಜ್, ಎಂಸಿಜೆ ವಿದ್ಯಾರ್ಥಿ.
-------------------------------------------
ಸರಣಿ ಉಪನ್ಯಾಸಕ್ಕೆ ವಿದ್ಯಾರ್ಥಿನಿಯ ಪ್ರತಿಕ್ರಿಯೆ....
ಮನದಾಳದಿಂದ...
ನೀವು ನೀಡುತ್ತಿರುವ ಸರಣಿ ಉಪನ್ಯಾಸ ಕಾರ್ಯಕ್ರಮಗಳು ನಮಗೆ ತಲುಪುತ್ತಿವೆ ಎಂದು ಹೇಳಲು ಖುಷಿ ಪಡುತ್ತೇನೆ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದಸ್ದು ಹಾಲು ಅನ್ನ ಎನ್ನುವ ಮಾತಿನಂತೆ, ನಾವು ಗೆಳೆಯರೆಲ್ಲಾ ಸೇರಿ ಚರ್ಚಿಸಿದ್ದ ವಿಷಯದಂತೆಯೇ ಈಗ ಕಾರ್ಯಕ್ರಮ ನಡೆಯುತ್ತಿವೆ ಎಂದರೆ ತಪ್ಪಾಗಲಾರದು. ಅದೇನೆಂದರೆ ಬೇರೆ ಬೇರೆ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಜೊತೆಗೆ ಏಳು ಬೀಳಿನ ಅನುಭವಗಳ ಮಹಾಪೂರವನ್ನೇ ತಮ್ಮ ಯಶಸ್ಸಿನ ಜೋಳಿಗೆಯಲ್ಲಿ ತುಂಬಿಕೊಂಡಿರುವ ಅನೇಕ ಪತ್ರಕರ್ತರಿದ್ದಾರೆ. ಅವರನ್ನು ಕರೆಸಿ, ಎಲ್ಲರನ್ನಲ್ಲವಾದರೂ ನಮ್ಮಿಂದ ಸಾಧ್ಯವಾದವರನ್ನಾದರೂ ಕರೆಸಿ ಅವರ ಅನುಭವಗಳ ಮಾತುಗಳ ಜೊತೆ ಜೊತೆಗೆ ಮಾರ್ಗದರ್ಶನದ ಎಳೆಯನ್ನೂ ಪಡೆದುಕೊಳ್ಳುವಂತಹ ಕಾರ್ಯಕ್ರಮಗಳನ್ನು ನಮ್ಮ ಕಮ್ಯುನಿಕೇಶನ್ ಕ್ಲಬ್‌ನಿಂದ ಮಾಡಿಸಬೇಕು ಎನ್ನುವ ಮಹಾದಾಸೆಯನ್ನು ನಾವು ಆರಂಭದಲ್ಲಿ ಹೊಂದಿದ್ದೆವು. ಆದರೆ ಅನಿವಾರ‌್ಯ ಕಾರಣಗಳಿಂದ ಸಾಧ್ಯವಾಗಲಿಲ್ಲ. ಆದರೆ ಅದನ್ನು ನೀವು ಮಾಮ್‌ನ ಸರಣಿ ಕಾರ್ಯಕ್ರಮಗಳ ಮೂಲಕ ನೀಡುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು.
ಇದರೊಂದಿಗೆ ಇನ್ನೊಂದು ಮಾತು ಹೇಳಬಯಸುತ್ತೇನೆ. ಒಂದು ತಿಂಗಳೊಳಗೆ ಅಥವಾ ಎರಡು ತಿಂಗಳುಗಳೊಳಗೆ ಹಲವು ಕಾರ್ಯಕ್ರಮಗಳನ್ನು ಮಾಡುವ ಬದಲಾಗಿ. ಒಂದು ತಿಂಗಳಲ್ಲಿ ಎರಡು ಕಾರ್ಯಕ್ರಮಗಳಂತೆ, ಮುಂದಿನ ತಿಂಗಳುಗಳಲ್ಲಿ ಪ್ರತೀ ವರ್ಷವೂ ಇದು ಮುಂದುವರಿದರೆ ತುಂಬಾ ಸಂತೋಷ. ಒಂದು ಪುಟ್ಟ ಕಿವಿಮಾತು ಹೇಳಬಯಸುತ್ತೇನೆ, ಪಿಪಿಟಿಯಲ್ಲಿರುವುದನ್ನು ಓದಿ ಅಲ್ಪ ಸ್ವಲ್ಪ ವಿವರಿಸುವ ಬದಲು, ಮಾತುಕತೆಯಂತೆ ವಿಚಾರ ವಿನಿಮಯ ನಡೆದರೆ, ನಮ್ಮ ಏಕಾಗ್ರತೆ ಚಂಚಲವಾಗುವುದನ್ನೂ ತಪ್ಪಿಸಬಹುದು. ಯಾಕೆಂದರೆ ಹೆಚ್ಚಿನವರು ಅದರತ್ತ ಗಮನ ಕೊಡುವುದೇ ಇಲ್ಲ. ಮತ್ತು ಡಯಾಸ್ ಹತ್ರವೇ ನಿಂತು ಮಾತನಾಡುವ ಬದಲು ತರಗತಿಯೆಲ್ಲೆಡೆ, ವಿದ್ಯಾರ್ಥಿಗಳ ಬಳಿ ಬಂದು ಸಂಭಾಷಣೆ ಗೈದರೆ, ಅನುಭವಗಳನ್ನು ಹಂಚುತ್ತಾ ಹೋದರೆ ಅವರ ಅನುಭವಗಳೊಳಗೆ ನಾವು ಒಬ್ಬರಾಗಲು ಸಾಧ್ಯ ಮತ್ತು ಅಂತಹ ವಾತಾವರಣ ಸೃಷ್ಟಿಯಾಗಲು ಸಾಧ್ಯ ಎನ್ನುವಂತಹದು ನನ್ನ ಅಭಿಪ್ರಾಯವೂ ಒಟ್ಟಿಗೆ ಕೋಲಿಕೆಯೂ ಹೌದು.
ಧನ್ಯವಾದಗಳೊಂದಿಗೆ,
-ಮೇಘಲಕ್ಷ್ಮಿ ಮರುವಾಳ

No comments:
Post a Comment