Friday, 27 September 2019

ಸದಸ್ಯತ್ವ ಅಭಿಯಾನಕ್ಕೆ ಸಹಕರಿಸಲು ಮನವಿ

ಸ್ನೇಹಿತರೇ...

ನಮ್ಮ ಮಾಮ್ ಸಂಸ್ಥೆ ಆರಂಭವಾಗಿ ಇದೇ ಡಿಸೆಂಬರ್ ಗೆ ಐದು ವರ್ಷ ಪೂರ್ಣಗೊಳ್ಳುತ್ತಿದೆ. ಈ ಐದು ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರ ಮತ್ತು ಮಾಧ್ಯಮ ವಿದ್ಯಾರ್ಥಿಗಳಿಗೋಸ್ಕರ ಸಾಕಷ್ಟು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಸಂತೃಪ್ತಿ ನಮಗಿದೆ. 14.09.2019ರಂದು ನಾಲ್ಕನೇ ವಾರ್ಷಿಕ ಮಹಾಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಸಂಘಟನೆ ಬಲಪಡಿಸುವ ಕುರಿತು ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ಈ ಪೈಕಿ ಸದಸ್ಯತ್ವ ಅಭಿಯಾನವೂ ಒಂದು. 


ನಿಮಗೆಲ್ಲ ಗೊತ್ತಿರುವ ಹಾಗೆ ಮಾಮ್ ಸಂಘಟನೆಗೆ ಸಂಬಂಧಿಸಿದ ವಿವಿಧ ವಾಟ್ಸಪ್ ಗ್ರೂಪುಗಳ ಮೂಲಕ ಸುಮಾರು 250ಕ್ಕೂ ಅಧಿಕ ಎಂಸಿಜೆ ಹಳೆ ವಿದ್ಯಾರ್ಥಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಶುಲ್ಕ ಪಾವತಿಸಿ ಆಜೀವ ಸದಸ್ಯರಾದ ಸದಸ್ಯರ ಸಂಖ್ಯೆ ಕೇವಲ 38 ಮಾತ್ರ.
ನಮ್ಮದು ರಿಜಿಸ್ಟರ್ಡ್ ಸಂಸ್ಥೆ. ಲೆಕ್ಕಾಚಾರ ಮತ್ತು ವ್ಯವಹಾರಗಳು ಪಾರದರ್ಶಕವಾಗಿ ನಡೆಯುತ್ತಿದೆ. ಮುಂದೆ ನಾವು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಹಾಗಾಗಿ
1) ಸಂಸ್ಥೆಯ ಅಧಿಕೃತ ಸದಸ್ಯರ ಸಂಖ್ಯೆ ಹೆಚ್ಚಿಸಲು
2) ಸಂಸ್ಥೆಯನ್ನು ಆರ್ಥಿಕವಾಗಿ ಬಲಪಡಿಸಲು
ನೀವೆಲ್ಲರೂ ಪ್ರೋತ್ಸಾಹಿಸಬೇಕಾಗಿ ವಿನಂತಿಸುತ್ತೇನೆ.

ನೀವು ರು.1000 ಆಜೀವ ಸದಸ್ಯತ್ವ ಶುಲ್ಕವನ್ನು ಪಾವತಿಸಿ (ನೆಫ್ಟ್, ಚೆಕ್ ಮೂಲಕ) ಸಂಘಟನೆಗೆ ಪ್ರೋತ್ಸಾಹ ನೀಡಬೇಕು, ಸಂಘಟನೆ ಬೆಳವಣಿಗೆಗೆ ನಿಮ್ಮ ಕಡೆಯಿಂದ ಸಲಹೆ, ಸೂಚನೆಗಳನ್ನು ನೀಡಬೇಕು ಹಾಗೂ ಸಂಘಟನೆಗಳ ಸಭೆಗಳು, ಸಮಾರಂಭಗಳು ಹಾಗೂ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಸದಾ ನಮ್ಮೊಂದಿಗಿರಬೇಕು ಎಂದು ಈ ಮೂಲಕ ತಮ್ಮನ್ನು ವಿನಂತಿಸುತ್ತಿದ್ದೇನೆ.

ನೀವು ನೀಡುವ ಆಜೀವ ಸದಸ್ಯತ್ವ ಶುಲ್ಕ ನಮ್ಮ ಬ್ಯಾಂಕ್ ಖಾತೆಯಲ್ಲಿ ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿರುತ್ತದೆ. ನೀವು ನೀಡು ಸದಸ್ಯತ್ವ ಶುಲ್ಕಕ್ಕೆ ನಾವು ರಶೀದಿಯನ್ನು ನೀಡುತ್ತೇವೆ. ಪ್ರತಿ ವರ್ಷ ನಮ್ಮ ವ್ಯವಹಾರಗಳನ್ನು ಲೆಕ್ಕ ಪರಿಶೋಧಕರಿಂದ ಆಡಿಟಿಂಗ್ ಮಾಡಿಸಿ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸುತ್ತಿದ್ದೇವೆ. ನಮ್ಮ ಅಧಿಕೃತ ಬ್ಲಾಗ್ ಪುಟದಲ್ಲಿ ನಮ್ಮೆಲ್ಲ ಚಟುವಟಿಕೆಗಳನ್ನು ಕಾಲ ಕಾಲಕ್ಕೆ ಅಪ್ಡೇಟ್ ಮಾಡುತ್ತಿದ್ದೇವೆ. ಹಾಗಾಗಿ ನೀವು ಪಾವತಿಸುವ ಸದಸ್ಯತ್ವ ಶುಲ್ಕ, ನೀವೆ ಕಲಿತ ಸಂಸ್ಥೆಯೊಂದರ ಹಳೆ ವಿದ್ಯಾರ್ಥಿಗಳ ಸಂಘಟನೆಗೆ ಸಂದಾಯವಾಗಿ ಬಹಳಷ್ಟು ಉತ್ತಮ ಕೆಲಸಗಳಿಗೆ ಬಳಕೆಯಾಗಲಿದೆ ಎಂದು ಈ ಮೂಲಕ ನಾನು ಸ್ಪಷ್ಟಪಡಿಸುತ್ತಿದ್ದೇನೆ.

ನಮ್ಮ ಬ್ಯಾಂಕ್ ಖಾತೆ ವಿವರ ಈ ಕೆಳಗಿನಂತಿದೆ.
ನೀವು ಸದಸ್ಯತ್ವ ಶುಲ್ಕ ಪಾವತಿಸಿದ ತಕ್ಷಣ ದಯವಿಟ್ಟು, ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಎಸ್ ಎಂಎಸ್ ಅಥವಾ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ಹಾಗೂ ನಮ್ಮ ಅಧಿಕೃತ ಇ ಮೇಲ್ ಖಾತೆಗೆ ಈ ಮೇಲ್ ಮಾಡಿ ಕಡ್ಡಾಯವಾಗಿ ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದೇನೆ.


ಸಂಪರ್ಕ ಸಂಖ್ಯೆ: ಕೃಷ್ಣಕಿಶೋರ್ ವೈ. (ಕೋಶಾಧಿಕಾರಿ)-9480004549
ಈ ಮೇಲ್ ವಿಳಾಸ-reachtomaam@gmail.com
--
ಬ್ಯಾಂಕ್ ಖಾತೆ ಮಾಹಿತಿ:

ACCOUNT DETAIL:

SCDCC bank, kodialbail MANGALORE.

  ACCOUNT NUMBER:
00143520006764  (IFSC code: IBKL078SCDC)

  ---

(ನೀವು ಈಗಾಗಲೇ
1000 ರುಪಾಯಿ ಪಾವತಿಸಿ ಆಜೀವ ಸದಸ್ಯರಾಗಿದ್ದಲ್ಲಿ ದಯವಿಟ್ಟು ಈ ಸಂದೇಶವನ್ನು ಉಪೇಕ್ಷಿಸಿ)

MAAM LIFE MEMBERS

MAAM MEMBERS LIST -REVISED (Till AUGUST 20th 2016)
List of Life Members for MAAM
(Rs.1000/-.Paid till Feb 2017)

 
1) Ajith Kumar
2) Ambarish Bhat
3) Ashwani Kumar
4) Balakrishna Holla
5) Florine Roche
6) Gururaj Paniyadi
7) Halimath Sadiya
8) Ishwarachandra
9) Kabeeer Khantila
10) Krishna Mohana T.
11) Krishna Kishore
 12) Navitha Jain
13)  PraveenChandra
14) Raffique Konaje
15) Ramachandra M.
16) Raviprakash.S
17) Ravipraksh Rai
18) Raviprasad Kamila
19) Sadashiva K
20) Shyma Prasad K.
21) Stanley Pinto
22) Sooryanarayana
23) Sukhesha Padibagilu
24) Suprabha N.K.
25) Surendra Shetty
26) Suresh D.Palli
27) Venu Sharma

28) Venuvinod KS
29) Vivek Nambiar
30) Yogeesh Holla
31)  Mohana.
32) Dr.Ronald Anil Fernandes
33)  Smitha shenoy
34) Vasanth konaje
35) Chandrashekhar kulamaruva
36) Deepak Naik
37) Sharath hegde
38) Prashanth Bisleri

-----------

ACCOUNT DETAIL:
00143520006764 
(IFSC code: IBKL078SCDC)
SCDCC bank, kodialbail MANGALORE.

Tuesday, 24 September 2019

ಮಾಮ್ 2019-20 ಗ್ರೂಪಿಗೆ ಸ್ವಾಗತ...

ನಮಸ್ತೆ ಸ್ನೇಹಿತರೇ...

ನಿಮಗೆಲ್ಲ ಈ MAAM 2019-20 ಹೆಸರಿನ ವಾಟ್ಸಪ್ ಗ್ರೂಪಿಗೆ ಸ್ವಾಗತ. ಈ ಗ್ರೂಪು ಯಾವುದಕ್ಕೋಸ್ಕರ ಇದೆ. ಇಲ್ಲಿ ನಾವೇನು ಮಾಡಬಹುದು ಎಂಬುದರ ಕುರಿತಾದ ಸಂದೇಶ ಇದು. ದಯವಿಟ್ಟು ನೀವೆಲ್ಲರೂ ಈ ಸುದೀರ್ಘ ಮೆಸೇಜನ್ನು ಕೊನೆ ತನಕ ಓದಿ ಸ್ಪಂದಿಸಬೇಕಾಗಿ ವಿನಂತಿ...
...
1) ಈ ಗ್ರೂಪನ್ನು ನಿರ್ವಹಿಸುವವರು ಯಾರು?
ಈ ಗ್ರೂಪನ್ನು ನಿರ್ವಹಿಸುತ್ತಿರುವವರು ಮಾಮ್. MAAM ಎಂದರೆ ಮೀಡಿಯಾ ಅಲ್ಯುಮ್ನೈ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (MEDIA ALUMNI ASSOCIATION OF MANAGALAGANGOTHRI) (ಮಂಗಳೂರು ವಿ.ವಿ.ಯಲ್ಲಿ ಎಂಸಿಜೆ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳ ಸಂಘ).

2) ಮಾಮ್ ಎಂದರೇನು?
ಈಗಾಗಲೇ ಹೇಳಿದ ಹಾಗೆ MAAM ಎಂದರೆ ಮಂಗಳೂರು ವಿ.ವಿ.ಯಲ್ಲಿ ನಿಮ್ಮ ಹಾಗೆ ಈ ಹಿಂದೆ ಕಳೆದ 30 ವರ್ಷಗಳಲ್ಲಿ ಎಂಸಿಜೆ ಕಲಿತ ಹಳೆ ವಿದ್ಯಾರ್ಥಿಗಳ ಸಂಘಟನೆ ಮಾಮ್. 2014ರಲ್ಲಿ ನಮ್ಮ ವಿಭಾಗಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾವೆಲ್ಲ ಸೇರಿ MAAM ನ್ನು ಸ್ಥಾಪಿಸಿದ್ದೇವೆ. ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಹಾಗೂ ಸ್ವಂತ ಉದ್ಯೋಗ ನಿರ್ವಹಿಸುತ್ತಿರುವ 250ಕ್ಕೂಅಧಿಕ ಹಳೆ ವಿದ್ಯಾರ್ಥಿಗಳು ಮಾಮ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಮ್ ಗೆ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳಿದ್ದಾರೆ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದು, ಹಳೆ ವಿದ್ಯಾರ್ಥಿಗಳನ್ನು ಸಂಘಟಿಸುವುದು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಮ್ಮಿಂದಾದ ಸಹಾಯ ಮಾಡುವುದು ಇವು ಮೂಲಭೂತವಾಗಿ ಮಾಮ್ ಸಂಘಟನೆಯ ಉದ್ದೇಶಗಳು.

3) ಈ ಗ್ರೂಪು ಮಾಡಿದ್ದು ಯಾಕೆ?
ಈ ಗ್ರೂಪಿನಲ್ಲಿ 2018-21ನೇ ಸಾಲಿನ ತನಕ ಎಂಸಿಜೆ ವ್ಯಾಸಂಗ ಮಾಡುತ್ತಿರುವ ಎರಡೂ ವರ್ಷದ ವಿದ್ಯಾರ್ಥಿಗಳಿದ್ದೀರಿ. ನಿಮಗೆ ನಿಮ್ಮ ತರಗತಿಗಳಲ್ಲಿ ಥಿಯರಿ ಹಾಗೂ ಪ್ರಾಕ್ಟಿಕಲ್ ಪಾಠಗಳು ನಡೆಯುತ್ತಿರುತ್ತವೆ. ಜೊತೆಗೆ ನಿಮಗೆ ಕೆಲವೊಂದು ಬಾರಿ ಪ್ರಾಕ್ಟಿಕಲ್ ಅನುಭವ ಅಥವಾ ಮಾರ್ಗದರ್ಶನ ಬೇಕಾಗುತ್ತದೆ. ವೃತ್ತಿಪರವಾಗಿ ಕೆಲವು ವಿಚಾರಗಳನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬ ಕುರಿತು ಮಾಹಿತಿಗಳು ಬೇಕಾಗುತ್ತವೆ. ಲೇಖನ ಬರವಣಿಗೆ, ಇಂಟರ್ನ್ ಶಿಪ್, ಡೆಸರ್ಟೇಶನ್ ಇತ್ಯಾದಿ ಕೆಲಸಗಳೂ ಇರುತ್ತವೆ. ಈ ಎಲ್ಲ ಸಂದರ್ಭಗಳಲ್ಲಿ ವೃತ್ತಿಪರರ ಸಂಘಟನೆಯಾಗಿರುವ ಮಾಮ್ ನಿಮಗೆ ನಮ್ಮ ಕೈಲಾದ ಸಹಾಯ ಮಾಡುವುದಕ್ಕೋಸ್ಕರ ಈ ಗ್ರೂಪ್ ರಚಿಸಲಾಗಿದೆ. ನಿಮ್ಮ ಕಲಿಕೆ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ನೀವಿಲ್ಲಿ ಪ್ರಸ್ತಾಪಿಸಿ, ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಮಾಮ್ ಚಟುವಟಿಕೆಗಳ ಕುರಿತೂ ನಾವಿಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತೇವೆ. ಒಟ್ಟಿನಲ್ಲಿ ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ನಡುವಿನ ಕೊಂಡಿಯಾಗಿ ಈ ಗ್ರೂಪು ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ. ನಿಮ್ಮ ಕೋರ್ಸ್ ಮುಗಿದ ತಕ್ಷಣ ನೀವು ಕೂಡಾ ಮಾಮ್ ಸಂಘಟನೆಯ ಭಾಗಗಳಾಗಿರುತ್ತೀರಿ.

4) ಈ ಗ್ರೂಪಿನಲ್ಲಿ ಯಾರ್ಯಾರು ಇದ್ದಾರೆ?
ಈ ಗ್ರೂಪಿನಲ್ಲಿ ಎಂಸಿಜೆಯ ಎಲ್ಲಾ ಸೆಮಿಸ್ಟರ್ ಗಳ ವಿದ್ಯಾರ್ಥಿಗಳು ಇರಬೇಕು. ವಿಭಾಗ ಮುಖ್ಯಸ್ಥರಾದ (ಪ್ರಭಾರ) ಪ್ರೊ.ಪಿ.ಎಲ್.ಧರ್ಮ ಸರ್ ಇದ್ದಾರೆ. ಮೇಡಂ ಸಫಿಯಾ ನಯೀಂ ಅವರು ಇಡೀ ಗ್ರೂಪಿನ ಸಮನ್ವಯಕಾರರಾಗಿರುತ್ತಾರೆ. ಮಾಮ್ ಕಡೆಯಿಂದ ಅಧ್ಯಕ್ಷ ಸುರೇಶ್ ಪುದುವೆಟ್ಟು (ಉದಯವಾಣಿ ಮಂಗಳೂರು ಬ್ಯೂರೋ ಉಪಮುಖ್ಯಸ್ಥ), ಪ್ರಧಾನ ಕಾರ್ಯದರ್ಶಿ
ಸುರೇಶ್ ಡಿ.ಪಳ್ಳಿ (ಹೊಸದಿಗಂತ ಪತ್ರಿಕೆಯ ಹಿರಿಯ ವರದಿಗಾರ), ಕೋಶಾಧಿಕಾರಿ ಕೃಷ್ಣಕಿಶೋರ್
ವೈ.
(ಮಂಗಳೂರು ದೃಷ್ಟಿ ಆಪ್ಟಿಕಲ್ಸ್ ಮಾಲೀಕ ಮತ್ತು ವೃತ್ತಿಪರ ಛಾಯಾಗ್ರಾಹಕ) ಇಷ್ಟು ಮಂದಿ ಇರುತ್ತಾರೆ.

5) ಗ್ರೂಪಿನಲ್ಲಿ ಏನೇನು ಮಾಡಬೇಕು?
ಗ್ರೂಪಿನಲ್ಲಿ ಕಲಿಕೆ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಪ್ರಸ್ತಾಪಿಸಬಹುದು, ಶೇರ್ ಮಾಡಬಹುದು. ಪತ್ರಿಕೆಗಳಲ್ಲಿ ನೀವು ಪ್ರಕಟಿಸಿದ ಬೈಲೈನ್ ಲೇಖನಗಳು, ವಿಚಾರಗಳನ್ನು ಇಲ್ಲಿ ಶೇರ್ ಮಾಡಬಹುದು, ವೃತ್ತಿಪರವಾದ ಸಂಶಯಗಳಿದ್ದರೆ ಗ್ರೂಪಿನಲ್ಲಿ ಪ್ರಸ್ತಾಪಿಸಿ ಉತ್ತರ ಪಡೆಯಬಹುದು, ಮಾಧ್ಯಮ ಕ್ಷೇತ್ರದ ಕುರಿತಾಗಿರುವ ಸಂಶಯಗಳನ್ನು ಪ್ರಸ್ತಾಪಿಸಬಹುದು, ನಮಗೆ ಉತ್ತರ ಗೊತ್ತಿರುವಂಥ ವಿಚಾರವಾದರೆ ಸೂಕ್ತ ಉತ್ತರಗಳನ್ನು ನೀಡಲು ಪ್ರಯತ್ನಿಸುತ್ತೇವೆ. ನಿಮ್ಮಲ್ಲಿ ತುಂಬಾ ಚೆನ್ನಾಗಿ ಬರೆಯುವ ಬರಹಗಾರರು ಇರಬಹುದು, ಏನೂ ಬರೆಯದವರೂ ಇರಬಹುದು, ಈಗಷ್ಟೇ ಬರೆಯಲು ತೊಡಗಿದವರು ಇರಬಹುದು. ಮುಂದಿನ ದಿನಗಳಲ್ಲಿ ನಿಮ್ಮ ಪೈಕಿ ಯಾರಿಗೆಲ್ಲ ಗಂಭೀರವಾಗಿ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸುವ ಇಚ್ಛೆ ಇದೆಯೋ ನೀವೆಲ್ಲ ಬರಹವನ್ನು ಇಂಪ್ರೂವ್ ಮಾಡಲು, ಐಡಿಯಾಗಳನ್ನು ಕೇಳಿಕೊಳ್ಳಲು ಗ್ರೂಪನ್ನು ಬಳಸಬಹುದು. ನೀವೊಂದು ಒಳ್ಳೆ ಫೋಟೋ ತೆಗೆದರೆ ವಿವರ ಸಹಿತ ಗ್ರೂಪಿನಲ್ಲಿ ಹಂಚಿಕೊಳ್ಳಬಹುದು. ಆ ಕುರಿತು ನಾವು ಚರ್ಚಿಸಬಹುದು. ಇಂತಹ ಸಾಕಷ್ಟು ವಿಚಾರಗಳು ಕಲಿಕೆಗೆ ಪೂರಕವಾಗಿ ಗ್ರೂಪಿನಲ್ಲಿ ಚರ್ಚೆಗೊಳಗಾಗಬಹುದು.

6) ಗ್ರೂಪಿನಲ್ಲಿ ಏನು ಮಾಡಬಾರದು?
ಈ ಗ್ರೂಪನ್ನು ದಯವಿಟ್ಟು ಹುಡುಗಾಟಿಕೆಯ ಅಥವಾ ಹತ್ತರಲ್ಲಿ ಹನ್ನೊಂದು ಎಂಬಂಥ ಉಡಾಫೆ ಮನೋಭಾವದಿಂದ ಕಾಣಬೇಡಿ. ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರ ಪತ್ರಕರ್ತರ ನಡುವಿನ ಸೇತುವಾಗಿ ಕಾರ್ಯನಿರ್ವಹಿಸಬೇಕೆಂಬ ಗಂಭೀರ ಉದ್ದೇಶದಿಂದ ಶುರು ಮಾಡಿರುವ ಗ್ರೂಪು. ಹಾಗಾಗಿ ಪರಸ್ಪರ ಕಾಲೆಳೆಯುವುದು, ಹಗುರ ಮಾತುಗಳು, ರಾಜಕಾರಣಿಗಳು, ಧರ್ಮ, ಜಾತಿ, ಲಿಂಗ ದೂಷಣೆ, ಅನಗತ್ಯ ಜೋಕುಗಳು, ಗ್ರೂಪಿನ ಉದ್ದೇಶಕ್ಕೇ ಸಂಬಂಧವೇ ಇಲ್ಲದ ಫೋಟೋ, ವಿಡಿಯೋ, ಉದ್ದುದ್ದ ಮೆಸೇಜುಗಳು, ಗುಡ್ ಮಾರ್ನಿಂಗು, ಗುಡ್ ನೈಟು, ಬರ್ತ್ ಡೇ ವಿಶಸ್, ವೈಯಕ್ತಿಕ ಸಂಭಾಷಣೆ ಇದು ಯಾವುದಕ್ಕೂ ಗ್ರೂಪಿನಲ್ಲಿ ಕಡ್ಡಾಯವಾಗಿ ಅವಕಾಶವಿಲ್ಲ. ಗ್ರೂಪಿನಲ್ಲಿ ಫನ್ ಇರಲಿ, ಆದರೆ ಅದು ನಮ್ಮ ಗ್ರೂಪು ಆರಂಭಿಸಿದ ಚೌಕಟ್ಟನ್ನು ಮೀರಿ ಹೋಗುವಂತಿಲ್ಲ. ಈ ವಿಚಾರದಲ್ಲಿ ರಾಜಿಯಿಲ್ಲ.

7) ಗ್ರೂಪು ಜೀವಂತವಾಗಿಡುವುದು ಹೇಗೆ?
ನಮಗೆಲ್ಲ ಗೊತ್ತು. ಪ್ರತಿ ಗ್ರೂಪು ಕೂಡಾ ಒಳ್ಳೆ ಉತ್ಸಾಹದಿಂದ ಶುರುವಾಗುತ್ತದೆ. ಹೋಗ್ತಾ ಹೋಗ್ತಾ ಅದರಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಎಷ್ಟೋ ಸಲ ಗ್ರೂಪಿಗೆ ಸಂಬಂಧಪಡದ ವಿಚಾರಗಳಿಂದ ತುಂಬಿರುತ್ತದೆ. ಒಂದು ದಿನ ಪೂರ್ತಿ ಸ್ತಬ್ಧವಾಗುತ್ತದೆ, ಒಬ್ಬೊಬ್ಬರೇ ಗ್ರೂಪನ್ನು ತ್ಯಜಿಸುತ್ತಾರೆ. ಈ ಗ್ರೂಪು ಹಾಗಾಗಬಾರದು ಎಂಬುದು ನಮ್ಮ ಆಶಯ. ನಿಮಗೆಲ್ಲ ಬಹುತೇಕ 20 ವರ್ಷ ದಾಟಿದೆ. ಪ್ರಬುದ್ಧರಿದ್ದೀರಿ. ಕಲಿಯುವ ಉತ್ಸಾಹದಿಂದ ಎಂಸಿಜೆ ಗ್ರೂಪಿಗೆ ಸೇರಿದ್ದೀರಿ. ಗ್ರೂಪನ್ನು ಆಕ್ಟಿವ್ ಆಗಿ ಇರಿಸುವ ಹೊಣೆ ನಿಮ್ಮ ಮೇಲಿದೆ. ಸಮಯವಿಲ್ಲ, ಆಸಕ್ತಿಯಿಲ್ಲ ಎಂಬಿತ್ಯಾದಿ ನೆಪಗಳು ನಮ್ಮನ್ನು ನಾವು ವಂಚಿಸಿದ ಹಾಗಾಗುತ್ತದೆ. ಸಮಯ ಹಾಗೂ ಆಸಕ್ತಿಯನ್ನು ಬೆಳೆಸಿಕೊಳ್ಳುವುದು ನಮ್ಮ ಕೈಲಿದೆ. ಈ ಅಮೂಲ್ಯ ಎರಡು ವರ್ಷಗಳು ನಿಮ್ಮ ಭವಿಷ್ಯವನ್ನು ರೂಪಿಸುವ ಬೆಲೆ ಬಾಳುವ ಅವಧಿ. ಈ ಅವಧಿಯನ್ನು ಫಲಪ್ರದಗೊಳಿಸುವಲ್ಲಿ ನಮ್ಮ ಈ ಪುಟ್ಟ ಪ್ರಯತ್ನದ ಫಲವಾದ ಗ್ರೂಪು ಕೂಡಾ ಜೊತೆಗಿರುತ್ತದೆ ಎಂಬ ಕಳಕಳಿಯ ಮಾಹಿತಿ ನಮ್ಮದು.

8) ನಿಮ್ಮ ಜೊತೆ ಇಷ್ಟೆಲ್ಲ ವಿಚಾರ ಹಂಚಿಕೊಂಡ ನನ್ನ ಹೆಸರು ಕೃಷ್ಣಮೋಹನ. ನಾನು 2002ನೇ ಸಾಲಿನ ಎಂಸಿಜೆ ಹಳೆ ವಿದ್ಯಾರ್ಥಿ. ಪ್ರಸ್ತುತ ಕನ್ನಡಪ್ರಭ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಹಿರಿಯ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದೇನೆ. ಮಾಮ್ ಸಂಘಟನೆಯ ವಿವಿಧ ವಾಟ್ಸಪ್ ಗ್ರೂಪುಗಳ ಸಮನ್ವಯಕಾರನಾಗಿ ಕೆಲಸ ಮಾಡುತ್ತಿದ್ದೇನೆ.
ವಂದನೆಗಳು, ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

-KM (9482976969)

Saturday, 14 September 2019

ಮಾಮ್ ಮತ್ತಷ್ಟು ಗಟ್ಟಿಗೊಳಿಸುವ ಸಂಕಲ್ಪ ಮತ್ತು ಯಶಸ್ವಿ ಎಜಿಎಂ....























ಕಳೆದ ಸಲ 2017ರಲ್ಲಿ ನಡೆದ ಮಾಮ್ ವಾರ್ಷಿಕ ಮಹಾಸಭೆಗೆ ಆಗಮಿಸಿದ್ದವರು 30 ಮಂದಿ, ಈ ಸಲ 2019ರಲ್ಲಿ ಪಾಲ್ಗೊಂಡ ಸ್ನೇಹಿತರ ಸಂಖ್ಯೆ 15. ತಮ್ಮ ಕಾರ್ಯಭಾರ, ಕೆಲಸದೊತ್ತಡದ ನಡುವೆ ಬಹಳಷ್ಟು ಮಂದಿಗೆ ಮಹಾಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ನಿಗದಿತ ಸಮಯಕ್ಕಿಂತ ಸುಮಾರು ಅರ್ಧ ಗಂಟೆ ತಡವಾಗಿ 10.30ಕ್ಕೆ ಆರಂಭವಾದ ಸಭೆಯನ್ನು ನಿಯಮದ ಪ್ರಕಾರ ಕೋರಂ ಕೊರತೆ ಹಿನ್ನೆಲೆಯಲ್ಲಿ ಅರ್ಧ ಗಂಟೆ ಮುಂದೂಡಲಾಯಿತು. ಅಷ್ಟು ಹೊತ್ತಿಗೆ ಎಂಸಿಜೆ ವಿಭಾಗದ ಪ್ರಭಾರ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಜೊತೆ ಸೇರಿದರು.
ಬಳಿಕ ಚಹಾ, ಬಿಸ್ಕತ್ತು ಸೇವನೆ, ಸ್ವಾಗತ, ವರದಿ ವಾಚನವಾಗಿ, ನಿರ್ಗಮನ ಅಧ್ಯಕ್ಷ ಬಾಲಕೃಷ್ಣ ಹೊಳ್ಳ ಮಾತನಾಡಿದರು. ನೂತನ ಪದಾಧಿಕಾರಿಗಳ ಆಯ್ಕೆಯಾಯಿತು. ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ.ಪಳ್ಳಿ ಅವರು ಪುನರಾಯ್ಕೆಗೊಂಡರು. ನೂತನ ಅಧ್ಯಕ್ಷ ಸುರೇಶ್ ಪುದುವೆಟ್ಟು ಸಭೆಯನ್ನು ಮುನ್ನಡೆಸಿದರು. ಎಂಸಿಜೆ ವಿಭಾಗ ಪ್ರಭಾರ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಮಾತನಾಡಿದರು. ಮಾಮ್ ಇನ್ ಸ್ಪೈಯರ್ ಅವಾರ್ಡ್ ಕುರಿತು ಶರತ್ ಹೆಗ್ಡೆ ಕಡ್ತಲ ಮಾತನಾಡಿದರು. ಎಂಸಿಜೆ ಕಾರ್ಯಚಟುವಟಿಕೆಗಳ ಬೆಳವಣಿಗೆ, ಚಟುವಟಿಕೆಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು. ಮಾಮ್ ಪ್ರವಾಸ, ಗೆಟ್ ಟುಗೆದರ್, ಎಂಸಿಜೆ ವಿಭಾಗದ ಜೊತೆಗಿನ ಜಂಟಿ ಕಾರ್ಯಕ್ರಮಗಳ ಆಯೋಜನೆ ಮತ್ತಿತರ ವಿಚಾರಗಳ ಕುರಿತು ಸದಸ್ಯರು, ಉಪನ್ಯಾಸಕರು, ಪದಾಧಿಕಾರಿಗಳು ಚರ್ಚಿಸಿದರು. ನಿರ್ಣಯಗಳನ್ನು ಅಂಗೀಕರಿಸಲಾಯಿತು. 
ಬಳಿಕ ಬಿಜೈ ಕಾಪಿಕಾಡು ನ್ಯೂ ಓಶಿಯನ್ ಪರ್ಲಿನಲ್ಲಿ ಸಹಭೋಜನ ನಡೆಯಿತು.
ಹೊಸ ತಂಡ, ಹೊಸ ಉತ್ಸಾಹ, ಹೊಸ ಸಂಕಲ್ಪಗಳೊಂದಿಗೆ ಮತ್ತೆ ತಮ್ಮ ತಮ್ಮ ಕಚೇರಿಗಳಿಗೆ ಮರಳಿದರು.

---
ಮಾಮ್ ಜೊತೆಗಿದೆ ಎಂಸಿಜೆ ವಿಭಾಗ-ಪ್ರೊ.ಪಿ.ಎಲ್.ಧರ್ಮ

......

ಮಂಗಳೂರು ವಿ.ವಿ.ಯ ಹಳೆ ವಿದ್ಯಾರ್ಥಿಗಳ ಸಂಘ ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್ (ಮಾ) ಇದರ ಕಾರ್ಯಚಟುವಟಿಕೆಗಳಿಗೆ ಮಾಮ್ ಸ್ಫೂರ್ತಿ ಸಾಕಷ್ಟಿದೆ. ಇದನ್ನು ತಾವು ಕೃತಜ್ಞತೆಯಿಂದ ಸ್ಮರಿಸುವುದಾಗಿ ಮಂಗಳೂರು ವಿ.ವಿ. ಎಂಸಿಜೆ ವಿಭಾಗದ ಪ್ರಭಾರ ಅಧ್ಯಕ್ಷ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ಸೆ.14ರಂದು ಶನಿವಾರ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ನಡೆದ ಮಾಮ್ ನ ನಾಲ್ಕನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಪತ್ರಿಕೋದ್ಯಮ ರಂಗದಲ್ಲಿ ಬದಲಾಗಿರುವ ತಂತ್ರಜ್ಞಾನ, ಕಾರ್ಯಶೈಲಿ ಇತ್ಯಾದಿಗಳಿಗೆ ಪೂರಕವಾದ ಪಠ್ಯಕ್ರಮ ರೂಪಿಸಬೇಕಾದ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಮಂಗಳೂರು ವಿ.ವಿ. ಸಿಲಬಸ್ ರೂಪುರೇಷೆಗಾಗಿ ಬೋರ್ಡ್ ಆಫ್ ಸ್ಟಡೀಸ್ (ಬಿಒಎಸ್) ರೂಪಿಸಿದ್ದು, ಇದರ ಪಠ್ಯಕ್ರಮ ಸಿದ್ಧತೆಗೆ ಮಾಮ್ ಸಹಕಾರ ಪಡೆಯುವುದಾಗಿ ತಿಳಿಸಿದರು. ಮಾಮ್ ಸಹಯೋಗದಲ್ಲಿ ಮಂಗಳೂರಿನಲ್ಲಿ ಶೀಘ್ರದಲ್ಲಿ ಮಾಧ್ಯಮ ಸಂಬಂಧಿ ಕಾರ್ಯಾಗಾರ ನಡೆಸುವುದಾಗಿ ಮಾಹಿತಿ ನೀಡಿದರು.
ಮಂಗಳೂರು ವಿ.ವಿ. ಎಂಸಿಜೆ ವಿದ್ಯಾರ್ಥಿಗಳಿಗೆ ಸೆಲ್ಫ್ ಲರ್ನಿಂಗ್ ಗೆ ಒತ್ತು ನೀಡಲಾಗುತ್ತಿದೆ. ನೂತನ ಸ್ಟುಡಿಯೋ ತಯಾರಿಸುವ ಅಗತ್ಯವಿದೆ. ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವಾಗುವ ಕುರಿತು ಮಾಮ್ ಕೈಜೋಡಿಸುವ ಅವಕಾಶವಿದೆ. ಎಂಸಿಜೆ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು ತನ್ನಿಂತಾನೆ ಮಾಮ್ ಸದಸ್ಯರಾಗುವ ಸಾಧ್ಯತು ಕುರಿತು ಚಿಂತಿಸಲಾಗುತ್ತಿದೆ, ಮಾಮ್ ಚಟುವಟಿಕೆಗಳಲ್ಲಿ ಎಂಸಿಜೆ ವಿದ್ಯಾರ್ಥಿಗಳ ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸುವುದಾಗಿ ಅವರು ಭರವಸೆ ನೀಡಿದರು.
ವಿ.ವಿ.ಯಲ್ಲೂ ಮಾಸಿವ್ ಆನ್ ಲೈನ್ ಕೋರ್ಸ್ ವ್ಯವಸ್ಥೆ ಅಳವಡಿಕೆಯಾಗುವ ದಿನಗಳು ದೂರವಿಲ್ಲ. ಇದು ಜಾರಿಗೆ ಬಂದಲ್ಲಿ ಮಾಮ್ ಸದಸ್ಯರಿಗೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶವಿದೆ. ಎಂಸಿಜೆ ವಿಭಾಗಕ್ಕೆ ಪಿಎಚ್ ಡಿ ಗೈಡ್ ಗಳ ನೇಮಕಕ್ಕೆ ಪ್ರಯತ್ನ ನಡೆಯುತ್ತಿದ್ದು, ಇಂದು ಅಂತಿಮ ಹಂತದಲ್ಲಿದೆ. ಮಾಮ್ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಮಾಮ್ ನೂತನ ಅಧ್ಯಕ್ಷ ಸುರೇಶ್ ಪುದುವೆಟ್ಟು ಮಾತನಾಡಿ, 2002ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಮಾಮ್ ಸಂಘಟನೆ ಬಳಿಕ ಕಾರಣಾಂತರಗಳಿಂದ ಚಟುವಟಿಕೆ ಸ್ಥಗಿತಗೊಳಿಸಿತು. ನಾವಿದನ್ನು ಈಗ ಪುನಶ್ಚೇತನಗೊಳಿಸಿ ಹೆಚ್ಚಿನ ಕೆಲಸ ಕಾರ್ಯ ನಡೆಸುವ ಸಂಕಲ್ಪ ತೊಟ್ಟಿದ್ದೇವೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಇಂದಿನ ಹೊಸ ಸವಾಲುಗಳಿಗೆ ಸಜ್ಜುಗೊಳಿಸಬೇಕು, ಒಂದು ತಂಡವಾಗಿ ಕೆಲಸ ಮಾಡುವ ಅವಕಾಶ ನಮಗಿದೆ, ಎಲ್ಲರನ್ನೂ ಒಳಗೊಳ್ಳುವಂತೆ ಮುಂದೆ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಗಮನ ಅಧ್ಯಕ್ಷ ಎ.ವಿ.ಬಾಲಕೃಷ್ಣ ಹೊಳ್ಳ ಅವರು ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ವಂದಿಸಿದರು. 

---
ಹಲವು ದಿನಗಳ ಬಳಿಕ ಒಟ್ಟು ಸೇರಿದ ಮಾಮ್ ಸದಸ್ಯರು ಪಕ್ಷ ಸಂಘಟನೆ ಕುರಿತು ಸಾಕಷ್ಟು ಚರ್ಚಿಸಿದ್ದಲ್ಲದೆ, ಹೊಸ ಉತ್ಸಾಹದೊಂದಿಗೆ ಮುನ್ನಡೆಯುವ ಸಂಕಲ್ಪ ಕೈಗೊಂಡರು.

-ವರದಿ: ಕೆ.ಎಂ.


MAAM AGM REPORT (14/09/2019)


ಮಾಮ್ ನೂತನ ಅಧ್ಯಕ್ಷ ಸುರೇಶ್ ಪುದುವೆಟ್ಟು

--------
ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ(ಮಾಮ್) ಇದರ 2019-21ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಉದಯವಾಣಿ ಮಂಗಳೂರು ಬ್ಯೂರೋ ಉಪ ಮುಖ್ಯಸ್ಥ ಸುರೇಶ್ ಪುದುವೆಟ್ಟು ಅವಿರೋಧ ಆಯ್ಕೆಯಾಗಿದ್ದಾರೆ.

ಸೆ.14ರಂದು ಶನಿವಾರ ಮಂಗಳೂರು ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ನಡೆದ ಮಾಮ್ ಸಂಘಟನೆಯ ನಾಲ್ಕನೇ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಆಡ್ ಐಡಿಯಾದ ವೇಣು ಶರ್ಮ ಮುಂದುವರಿದಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ಸುರೇಶ್ ಡಿ.ಪಳ್ಳಿ ಹಾಗೂ ಕೋಶಾಧಿಕಾರಿಯಾಗಿ ಮಂಗಳೂರು ದೃಷ್ಟಿ ಆಪ್ಟಿಕಲ್ಸ್ ಮಾಲೀಕ ಕೃಷ್ಣ ಕಿಶೋರ್ ವೈ. ಆಯ್ಕೆಯಾದರು.
ಬೆಂಗಳೂರು ಘಟಕದ ಉಪಾಧ್ಯಕ್ಷರಾಗಿ ನವೀನ್ ಅಮ್ಮಂಬಳ, ಮಂಗಳೂರು ಘಟಕದ ಉಪಾಧ್ಯಕ್ಷರಾಗಿ ಬಿ.ಎ.ಖಾದರ್ ಶಾ, ಕಾರ್ಯದರ್ಶಿಗಳಾಗಿ ಸಫಿಯಾ ನಯೀಮ್, ಮೇಘಲಕ್ಷ್ಮೀ ಮರುವಾಳ, ಗಣೇಶ್ ಪೈಚಾರು, ಮಾಮ್ ಇನ್ ಸ್ಪಯರ್ ಪ್ರಶಸ್ತಿ ಸಂಚಾಲಕರಾಗಿ ಶರತ್ ಹೆಗ್ಡೆ ಕಡ್ತಲ, ಕಾರ್ಯಕ್ರಮ ಸಂಯೋಜಕರಾಗಿ ಮಹಾಂತೇಶ್ ಹಿರೇಮಠ್ ಅವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಹಮದ್ ಬಾವಾ, ಕೃಷ್ಣಮೋಹನ ಟಿ., ವೇಣು ವಿನೋದ್ ಕೆ.ಎಸ್., ಹರೀಶ್ ಮೋಟುಕಾನ, ದೇವಿಪ್ರಸಾದ್ ಕಾರ್ಕಳ, ಹರೀಶ್ ಕುಲ್ಕುಂದ, ಧೀರಜ್ ಪೊಯ್ಯಕಂಡ, ಸಂತೋಷ್ ಕುಮಾರ್ ವರ್ಕಾಡಿ, ಕಾವ್ಯಾ, ಕೆವಿನ್ ಮೆಂಡೋನ್ಸಾ ಆಯ್ಕೆಯಾದರು.
ನಿರ್ಗಮನ ಅಧ್ಯಕ್ಷ ಎ.ವಿ.ಬಾಲಕೃಷ್ಣ ಹೊಳ್ಳ, ಮಂಗಳೂರು ವಿ.ವಿ.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಭಾರ ಅಧ್ಯಕ್ಷ ಪ್ರೊ.ಪಿ.ಎಲ್.ಧರ್ಮ, ಉಪನ್ಯಾಸಕಿ ಸಫಿಯಾ ನಯೀಮ್, ಮಂಗಳೂರು ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಮತ್ತಿತರರು ಹಾಜರಿದ್ದರು.
ಪದಾಧಿಕಾರಿಗಳಾದ ವೇಣು ವಿನೋದ್ ಕೆ.ಎಸ್. ಸ್ವಾಗತಿಸಿದರು. ಕೃಷ್ಣಕಿಶೋರ್ ವೈ.ವರದಿ ಮಂಡಿಸಿದರು. ವೇಣು ಶರ್ಮ ವಂದಿಸಿದರು. ಶರತ್ ಹೆಗ್ಡೆ ಕಡ್ತಲ ನಿರೂಪಿಸಿದರು. 



TEAM MAAM @ ADD IDEA BEJAI

ಮಾಮ್ ನಾಲ್ಕನೇ ವಾರ್ಷಿಕ ಮಹಾಸಭೆ ಸಂಪನ್ನ

------

ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ(ಮಾಮ್) ಇದರ 2019ನೇ ಸಾಲಿನ ವಾರ್ಷಿಕ ಮಹಾಸಭೆ (ನಾಲ್ಕನೇ ಎಜಿಎಂ) ಶನಿವಾರ (14.09.2019)ಮಂಗಳೂರು ಬಿಜೈ ಭಾರತೀನಗರದ ಆಡ್‌ಐಡಿಯಾ ಕಚೇರಿಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್. ಅವರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್ ಹಾಗೂ ಸದಸ್ಯ ಕೃಷ್ಣಮೋಹನ  ಅವರು ಕಳೆದ ಎರಡು ವರ್ಷಗಳ ಚಟುವಟಿಕೆಗಳ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ಸಂಘದಲ್ಲಿರುವ ಎರಡು ನಿರಖು ಠೇವಣಿಯ ಹೊರತಾಗಿ ಮಹಾಸಭೆಯ ದಿನದ ವರೆಗೆ ರು.21,518 ಉಳಿತಾಯ ಖಾತೆಯಲ್ಲಿರುವ ಮಾಹಿತಿ ನೀಡಲಾಯಿತು.
ಬಳಿಕ ಸಂಘದ ನಿರ್ಗಮನ ಅಧ್ಯಕ್ಷ ಎ.ವಿ.ಬಾಲಕೃಷ್ಣ ಹೊಳ್ಳ ಅವರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

 
ನಂತರ 2019- 21ನೇ ಅವಧಿಯ ಮುಂದಿನ ಎರಡು ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಬಳಿಕ ನೂತನ ಅಧ್ಯಕ್ಷ ಸುರೇಶ್ ಪುದುವೆಟ್ಟು ಅಧ್ಯಕ್ಷತೆಯಲ್ಲಿ ಮುಂದಿನ ಸಾಲಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚೆಗಳು ನಡೆದವು.
ಮಂಗಳೂರು ವಿ.ವಿ. ಎಂಸಿಜೆ ವಿಭಾಗದ ಪ್ರಭಾರ ಅಧ್ಯಕ್ಷ ಪ್ರೊ.ಪಿ.ಎಲ್.ಧರ್ಮ ಮಾತನಾಡಿದರು. ಮಾಮ್ ಇನ್ ಸ್ಪೈಯರ್ ಅವಾರ್ಡ್ ಕುರಿತು ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಕಾರ್ಯಕ್ರಮ ನಿರೂಪಿಸಿ, ಇನ್ ಸ್ಪೈಯರ್ ಅವಾರ್ಡ್ ಕುರಿತು ಮಾಹಿತಿ ನೀಡಿದರು.
ಎಂಸಿಜೆ ವಿಭಾಗದ ಉಪನ್ಯಾಸಕಿ ಸಫಿಯಾ ನಯೀಮ್, ದ.ಕ., ಉಡುಪಿ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಮತ್ತಿತರರು ಹಾಜರಿದ್ದರು.

ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ವಂದಿಸಿದರು.
ಸಭೆಯಲ್ಲಿ 15 ಮಂದಿ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು. ಬಳಿಕ ಮಂಗಳೂರು ಬಿಜೈ ಕಾಪಿಕಾಡಿನ ನ್ಯೂ ಓಶನ್ ಪರ್ಲಿನಲ್ಲಿ ಸಹ ಭೋಜನ ಮಾಡಲಾಯಿತು.
......
ಮಹಾಸಭೆಯಲ್ಲಿ ಪಾಲ್ಗೊಂಡ ಸದಸ್ಯರು

1) ಪ್ರೊ.ಪಿ.ಎಲ್.ಧರ್ಮ
2) ಎ.ವಿ.ಬಾಲಕೃಷ್ಣ ಹೊಳ್ಳ
3) ವೇಣು ಶರ್ಮ
4) ಮೇಘಲಕ್ಷ್ಮೀ
5) ಸಫಿಯಾ ನಯೀಮ್
6) ಶರತ್ ಹೆಗ್ಡೆ ಕಡ್ತಲ
7) ಸುರೇಶ್ ಪುದುವೆಟ್ಟು
8) ಬಿ.ಎ.ಖಾದರ್ ಶಾ
9) ಮಹಾಂತೇಶ್ ಹಿರೇಮಠ್
10) ಹರೀಶ್ ಕುಲ್ಕುಂದ
11) ಹರೀಶ್ ಮೋಟುಕಾನ
12) ವೇಣುವಿನೋದ್ ಕೆ.ಎಸ್.
13) ಕೃಷ್ಣಕಿಶೋರ್ ವೈ
14) ಅಹಮದ್ ಬಾವಾ
15) ಕೃಷ್ಣ ಮೋಹನ ಟಿ.
16) ಕೆವಿನ್ ಮೆಂಡೋನ್ಸ


......

ಮೂರನೇ ವಾರ್ಷಿಕ ಮಹಾಸಭೆಯ ನಿರ್ಣಯಗಳು

1) ಮಂಗಳೂರು ವಿ.ವಿ.ಹಳೆ ವಿದ್ಯಾರ್ಥಿಗಳ ಸಂಘ ಮಾ ಸಹಯೋಗದಲ್ಲಿ ಮಂಗಳೂರು ಬೆಸೆಂಟ್ ಕಾಲೇಜಿನಲ್ಲಿ ನಡೆಯುವ ಮಾಧ್ಯಮ ವಿಚಾರಸಂಕಿರಣದಲ್ಲಿ ಮಾಮ್ ಸಹಯೋಗ ವಹಿಸುವ ಕುರಿತು ತೀರ್ಮಾನಿಸಲಾಯಿತು.

2) ಈಗಿರುವ ಸದಸ್ಯರ ಸಂಖ್ಯೆಯನ್ನು ಹೆಚ್ಚಿನ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲು ನಿರ್ಧರಿಸಲಾಯಿತು. ಪ್ರತಿ ಮಾಧ್ಯಮ ಸಂಸ್ಥೆಯಲ್ಲಿರುವ ಹಿರಿಯ ಸದಸ್ಯರು ತಮ್ಮ ಸಂಸ್ಥೆಯಲ್ಲಿರುವ ಎಂಸಿಜೆ ಹಳೆ ವಿದ್ಯಾರ್ಥಿಗಳನ್ನು ಸದಸ್ಯರಾಗಿಸಲು ಶ್ರಮಿಸಲು ಸೂಚನೆ ನೀಡಲಾಯಿತು.

3) ಮಾಮ್ ಸದಸ್ಯರ ಪ್ರವಾಸ ಮುಂಬರುವ ದಿನದಲ್ಲಿ ಏರ್ಪಡಿಸಲು ನಿರ್ಧರಿಸಲಾಯಿತು.

4) ಮಾಮ್ ಬೆಂಗಳೂರು ಚಾಪ್ಟರ್ ಚಟುವಟಿಕೆಯನ್ನು ಚುರುಕುಗೊಳಿಸಲು ಶೀಘ್ರದಲ್ಲಿ ನೂತನ ಪದಾಧಿಕಾರಿಗಳ ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧರಿಸಲಾಯಿತು.

6) ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳ ಜೊತೆಗೆ ಮಾಮ್ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು.

7) ಮಾಮ್ ಚಟುವಟಿಕೆಗಳ ಮಾಹಿತಿ ಪ್ರಸಾರಕ್ಕೆ ತೆರೆಯಲಾಗಿರುವ ವೆಬ್ ಸೈಟ್ ಬಳಕೆ ಮತ್ತು ನಿರ್ವಹಣೆ ಅವಶ್ಯಕತೆ ಕಡಿಮೆ ಎಂದು ಕಂಡುಕೊಂಡ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವೆಬ್ ಸೈಟ್ ನಿರ್ವಹಣೆಯನ್ನು ನಿರ್ವಹಿಸುವ ಕುರಿತು ತೀರ್ಮಾನಿಸಲಾಯಿತು.

8) ಈ ವರ್ಷದ ಮಾಮ್ ಇನ್ ಸ್ಪೈಯರ್ ಅವಾರ್ಡ್ ನಲ್ಲಿ ಡಿಜಿಟಲ್ ಭೂಮಿಕೆಗೂ ಒತ್ತು ನೀಡಲು ನಿರ್ಧರಿಸಲಾಯಿತು.
---
ನೂತನಅಧ್ಯಕ್ಷರಾಗಿ ಉದಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಶ್ ಪುದುವೆಟ್ಟು ಅವಿರೋಧ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ಸುರೇಶ್ ಡಿ.ಪಳ್ಳಿ ಹಾಗೂ ಕೋಶಾಧಿಕಾರಿಯಾಗಿ ಮಂಗಳೂರು ದೃಷ್ಟಿ ಆಪ್ಟಿಕಲ್ಸ್ ಮಾಲೀಕ ಕೃಷ್ಣ ಕಿಶೋರ್ ವೈ. ಆಯ್ಕೆಯಾದರು.

@ New Ocean pearl Hotel Bejai



















Thursday, 12 September 2019

ದಿನಾಂಕ 14.09.2019 ರಂದು ನಡೆದ ಮಾಮ್ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಲಾದ 2017-19ನೇ ಸಾಲಿನ ವರದಿ


ಮಾಮ್ ಕಾರ್ಯಕಾರಿ ಸಮಿತಿ ಪರವಾಗಿ ನಾನು 2017-19ನೇ ಸಾಲಿನ ಮಾಮ್ ವಾರ್ಷಿಕ ಚಟುವಟಿಕೆಗಳ ವರದಿಯನ್ನು ನಿಮ್ಮ ಮುಂದಿಡಲು ಹರ್ಷ ವ್ಯಕ್ತಪಡಿಸುತ್ತೇನೆ. ಕಳೆದ ಸಾಲಿನ ಆಗುಹೋಗುಗಳ ಮೇಲೆ ಕಣ್ಣಾಡಿಸುವ ಮೊದಲು ಮಾಮ್ ಹುಟ್ಟಿಕೊಂಡ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲು ಇಚ್ಚಿಸುತ್ತೇನೆ. ಮಂಗಳೂರು ವಿ.ವಿ. ಎಂಸಿಜೆ ವಿಭಾಗಕ್ಕೆ 25 ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವೃತ್ತಿನಿರತ ಕೆಲವು ಮಂದಿ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಮಂಗಳೂರು ವಿ.ವಿ.ಯಲ್ಲಿ 2014 ಡಿಸೆಂಬರ್ 20ರಂದು ನಡೆಸಿದ ಎಂಸಿಜೆ 25 ಸಮ್ಮಿಲನದ ಸಂದರ್ಭ ಮಾಮ್ ಸಂಘಟನೆಯನ್ನು ಸ್ಥಾಪಿಸಲಾಯಿತು. ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ ಅಥವಾ ಮಾಮ್ ಎಂದು ಸಂಸ್ಥೆಗೆ ಹೆಸರಿಡಲಾಯಿತು. ಸಂಘಟನೆಗೆ ಹಳೆ ವಿದ್ಯಾರ್ಥಿಗಳ ಕಡೆಯಿಂದ ಬಂದ ಅಭೂತಪೂರ್ವ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ನಡೆಸಲು ಮಂಗಳೂರು ಕೇಂದ್ರವಾಗಿಟ್ಟು ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿ ಚಟುವಟಿಕೆಗಳನ್ನು ಆರಂಭಿಸಲಾಯಿತು. ಸದ್ಯ ನಮ್ಮಲ್ಲಿ ಆಜೀವ ಸದಸ್ಯರಾಗಿ ಅಧಿಕೃತವಾಗಿ ಸದಸ್ಯತ್ವ ಶುಲ್ಕ ಪಾವತಿಸಿದ 37 ಮಂದಿ ಸದಸ್ಯರಿದ್ದಾರೆ. ನಾವು ಮಾಮ್ ಆಕ್ಟಿವ್, ಮಾಮ್ ಸೈಲೆಂಟ್, ಮಾಮ್ ಬೆಂಗಳೂರು ಚಾಪ್ಟರ್ ಹೆಸರಿನ ಮೂರು ಸಕ್ರಿಯ ವಾಟ್ಸಪ್ ಗ್ರೂಪುಗಳನ್ನು ಹೊಂದಿದ್ದೇವೆ. ಇದರ ಜೊತೆಗೆ ಮಾಮ್ ವರ್ಕಿಂಗ್ ಕಮಿಟಿ ಸದಸ್ಯರಿಗಾಗಿ ಮಾಮ್ ವರ್ಕಿಂಗ್ ಕಮಿಟಿ ಹಾಗೂ ಅಂತಿಮ ಸೆಮಿಸ್ಟರಿನಲ್ಲಿರುವ ವಿದ್ಯಾರ್ಥಿಗಳ ಜೊತೆಗಿನ ಸಂಪರ್ಕಕ್ಕಾಗಿ ಪ್ರತ್ಯೇಕ ವಾಟ್ಸಪ್ ಗ್ರೂಪುಗಳನ್ನು ಹೊಂದಿದ್ದೇವೆ. ಮಾಮ್ ಆಕ್ಟಿವಿನಲ್ಲಿ 137 ಹಾಗೂ ಮಾಮ್ ಸೈಲೆಂಟ್ ಗ್ರೂಪಿನಲ್ಲಿ 41, ಬೆಂಗಳೂರು ಚಾಪ್ಟರ್ ಗ್ರೂಪಿನಲ್ಲಿ 43 ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿ ಎಂಸಿಜೆ ಹಳೆ ವಿದ್ಯಾರ್ಥಿಗಳ ಸಂಪರ್ಕದಲ್ಲಿ ನಾವಿದ್ದೇವೆ. ನಮ್ಮದೆ ಆದ ಸಕ್ರಿಯಾ ಬ್ಲಾಗ್, ವೆಬ್ ಸೈಟ್, ಬ್ಯಾಂಕ್ ಖಾತೆಗಳನ್ನು ನಾವು ಹೊಂದಿದ್ದೇವೆ. ನಮ್ಮ ಸಂಘಟನೆ ನೋಂದಣಿಯಾಗಿದೆ.
----
ಕಳೆದ ವಾರ್ಷಿಕ ಮಹಾಸಭೆ:

(
ಮಾಮ್) 2017ನೇ ಸಾಲಿನ ವಾರ್ಷಿಕ ಮಹಾಸಭೆ (ಮೂರನೇ ಎಜಿಎಂ) ಶನಿವಾರ (14.10.2017)ಮಂಗಳೂರು ಬಿಜೈ ಭಾರತೀನಗರದ ಆಡ್ಐಡಿಯಾ ಕಚೇರಿಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್. ಅವರು ಸ್ವಾಗತಿಸಿದರು. ನಿರ್ಗಮನ ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಳೆದ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ನಿರ್ಗಮನ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು 2015-16ನೇ ಸಾಲಿನ ಪರಿಶೋಧನೆಗೊಳಗಾದ ಲೆಕ್ಕಪತ್ರ ಮಂಡಿಸಿದರು
ಸಂಘದಲ್ಲಿರುವ ಎರಡು ನಿರಖು ಠೇವಣಿಯ ಹೊರತಾಗಿ ಮಹಾಸಭೆಯ ದಿನದ ವರೆಗೆ ರು.12012 ಉಳಿತಾಯ ಖಾತೆಯಲ್ಲಿರುವ ಮಾಹಿತಿ ನೀಡಲಾಯಿತು.
ಬಳಿಕ ಸಂಘದ ನಿರ್ಗಮನ ಅಧ್ಯಕ್ಷೆ ಫ್ಲೋರಿನ್ ರೋಚ್ ಅವರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ನಂತರ 2017 19ನೇ ಅವಧಿಯ ಮುಂದಿನ ಎರಡು ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಉದಯವಾಣಿ ಮಣಿಪಾಲ ಆವೃತ್ತಿ ಸಂಪಾದಕ .ವಿ.ಬಾಲಕೃಷ್ಣ ಹೊಳ್ಳ ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ಸುರೇಶ್ ಡಿ.ಪಳ್ಳಿ ಹಾಗೂ ಕೋಶಾಧಿಕಾರಿಯಾಗಿ ವಿಜಯಕರ್ನಾಟಕ ಪತ್ರಿಕೆಯ ಮುಖ್ಯ ಕಾಪಿ ಎಡಿಟರ್ ಯೋಗೀಶ್ ಹೊಳ್ಳ ಆಯ್ಕೆಯಾದರು.
ಬಳಿಕ ನೂತನ ಅಧ್ಯಕ್ಷ ಬಾಲಕೃಷ್ಣ ಹೊಳ್ಳರ ಅಧ್ಯಕ್ಷತೆಯಲ್ಲಿ ಮುಂದಿನ ಸಾಲಿ ಕಾರ್ಯಚಟುವಟಿಕೆಗಳ ಕುರಿತು ಚರ್ಚೆಗಳು ನಡೆದವು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ವಂದಿಸಿದರು. ಕಳೆದ ಜೂನ್ ನಲ್ಲಿ ವಿವಾಹ ಬಂಧನಕ್ಕೊಳಗಾದ ನೂತನ ಪ್ರಧಾನ ಕಾರ್ಯದರ್ಶಿ ಸುರೇಶ್ ಪಳ್ಳಿ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು. ಸಭೆಯ ಬಳಿಕ ಕದ್ರಿಯ ಡಿಂಕಿ ಡೈನ್ ನಲ್ಲಿ ಭೋಜನ ಮಾಡಲಾಯಿತು.
ಸಭೆಯಲ್ಲಿ 2017ರಲ್ಲಿ ವ್ಯಾಸಂಗ ಮುಗಿಸಿದವರ ಸಹಿತ ಒಟ್ಟು 30 ಮಂದಿ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು.
ಮಹಾಸಭೆಯಲ್ಲಿ ಓರ್ವರು ಆಜೀವ ಸದಸ್ಯರಾಗಿ ಹಾಗೂ ಇತರ 10 ಮಂದಿ ವಾರ್ಷಿಕ ಸದಸ್ಯರಾಗಿ ಶುಲ್ಕ ಪಾವತಿಸಿ ಸೇರ್ಪಡೆಗೊಂಡರು.
---
ಮಾಮ್ ವಿಚಾರಸಂಕಿರಣ
ದಿನಾಂಕ 21.11.2017ರಂದು
ಮಂಗಳೂರು ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಳೆ ವಿದ್ಯಾರ್ಥಿ ಸಂಘ (ಮಾಮ್) ಮಂಗಳೂರು ಹಾಗೂ ಸಂದೇಶ ಪ್ರತಿಷ್ಠಾನ ಸಹಯೋಗದಲ್ಲಿ ಮಂಗಳೂರು ನಗರದ ನಂತೂರು ಸಂದೇಶ ಪ್ರತಿಷ್ಠಾನದಲ್ಲಿಮಾಧ್ಯಮಗಳಿಗೆ ಬೇಕೇ ಲಗಾಮುಎಂಬ ವಿಷಯದ ಕುರಿತ ಸಂವಾದ ಗೋಷ್ಠಿ ನಡೆಯಿತು. ಮಂಗಳೂರು ವಿವಿ ಎಂಸಿಜೆ ವಿಭಾಗ ಪ್ರಾಧ್ಯಾಪಕ ಪ್ರೊ.ಡಾ. ಜಿ.ಪಿ.ಶಿವರಾಮ್ ಸಂವಾದ ಉದ್ಘಾಟಿಸಿದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ.ವಿಕ್ಟರ್ ವಿಜಯ್ ಲೋಬೊ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಮಾಧ್ಯಮ ಚಿಂತಕ ರಿಚರ್ಡ್ ಡಿಸೋಜ, ವಕೀಲ ಸಂತೋಷ್ ಪೀಟರ್ ಡಿಸೋಜ, ಪರಿಸರ ಹೋರಾಟಗಾರ ದಿನೇಶ ಹೊಳ್ಳ ಮಾತನಾಡಿದರು. ಮಾಮ್ ಅಧ್ಯಕ್ಷ ಬಾಲಕೃಷ್ಣ ಹೊಳ್ಳ ಸಮಾರೋಪ ಭಾಷಣ ಮಾಡಿದರು. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು. ಮಾಮ್ ಉಪಾಧ್ಯಕ್ಷ ಡಾ. ರೊನಾಲ್ಡ್ ಅನಿಲ್ ಫರ್ನಾಂಡಿಸ್, ಗೌರವಾಧ್ಯಕ್ಷ ವೇಣು ಶರ್ಮ ಸಂವಾದ ನಿರ್ವಹಿಸಿದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರನ್ನು ಸಂದರ್ಭ ಗೌರವಿಸಲಾಯಿತು. ಕಾರ್ಯದರ್ಶಿ ವೇಣುವಿನೋದ್ ಕೆ.ಎಸ್.ಸ್ವಾಗತಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಹೋದರ ವಿಕ್ಟರ್ ಕ್ರಾಸ್ತಾ ವಂದಿಸಿದರು.
----
ವಿದ್ಯಾರ್ಥಿಗಳಿಗೆ ವಿಚಾರಸಂಕಿರಣ

ಮಂಗಳಾ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಡಿ.16, 2017 ಶನಿವಾರ ಕುತ್ತಾರುಪದವು ಬಾಲಸಂರಕ್ಷಣಾ ಕೇಂದ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಭಾರತೀಯ ಪ್ರಜಾತಂತ್ರದ ಚತುರ್ಥ ಸ್ತಂಭ ಮಾಧ್ಯಮ ಒಂದು ವಿಚಾರಸಂಕಿರಣ ನಡೆಯಿತು. ಸಮಾರಂಭದ ಅಪರಾಹ್ನದ ಮುಖ್ಯ ಸಂವಾದ ಕಾರ್ಯಕ್ರಮಕ್ಕೆ ಮಾಮ್ ಸಹಯೋಗ ನೀಡಿತ್ತು. ಬೆಳಗ್ಗೆ ನಡೆದ ದ್ವಿತೀಯ ಗೋಷ್ಠಿ ಮಾಧ್ಯಮ ಹಾಗೂ ಸಾಮಾಜಿಕ ಬದ್ಧತೆ ವಿಚಾರದಲ್ಲಿ ಮಾಮ್ ಪ್ರತಿನಿಧಿ, ಸುವರ್ಣ ನ್ಯೂಸ್ ವಾಹಿನಿಯ ವಿಶೇಷ ಪ್ರತಿನಿಧಿ ವಿಜಯಲಕ್ಷ್ಮೀ ಶಿಬರೂರು ಪಾಲ್ಗೊಂಡು ವಿಚಾರ ಮಂಡಿಸಿದರು.
ಅಪರಾಹ್ನ ನಡೆದ ಮುಕ್ತ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಜಾವಾಣಿ ಮಂಗಳೂರು ಆವೃತ್ತಿ ಮುಖ್ಯಸ್ಥ ಶ್ರೀ ಬಾಲಕೃಷ್ಣ ಎಂ.ಜಿ., ವಿಜಯಕರ್ನಾಟಕ ಮಂಗಳೂರು ಆವೃತ್ತಿ ಮುಖ್ಯಸ್ಥ ಯು.ಕೆ.ಕುಮಾರನಾಥ, ವಿಜಯಕರ್ನಾಟಕದ ಮಂಗಳೂರಿನ ಚೀಫ್ ಕಾಪಿ ಎಡಿಟರ್ ಬಿ.ರವೀಂದ್ರ ಶೆಟ್ಟಿ, ಸುರ್ವಣ ನ್ಯೂಸ್ ವಿಶೇಷ ಪ್ರತಿನಿಧಿ ವಿಜಯಲಕ್ಷ್ಮೀ ಶಿಬರೂರು ಪಾಲ್ಗೊಂಡರು. ಮಾಮ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಟಿ.ಪ್ರಾಸ್ತಾವಿಕ ಮಾತನಾಡಿ, ಸಂವಾದದಲ್ಲಿ ಪಾಲ್ಗೊಂಡರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಸಂವಾದ ನಿರ್ವಹಿಸಿದರು.
ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. ಮಂಗಳಾ ಸೇವಾ ಸಮಿತಿ ಟ್ರಸ್ಟ್ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಿದರು. ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್ ವೈ., ವಸಂತ ಕೊಣಾಜೆ, ಮಹಾಂತೇಶ ಹಿರೇಮಠ್, ಸ್ಮಿತಾ ಶೆಣೈ ಮತ್ತಿತರರು ಪಾಲ್ಗೊಂಡರು.
--
ಮಂಗಳೂರಿನ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ....10, 2018 ಶನಿವಾರ ಪೂರ್ವಾಹ್ನ. ಮಂಗಳೂರು ವಿ.ವಿ.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ (ಎಂಸಿಜೆ) ಸಂಘ (ಮಾಮ್) ವತಿಯಿಂದ ಪ್ರಥಮ ವರ್ಷದ ಮಾಮ್ ಇನ್ ಸ್ಪೈರ್ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು. ಸ್ನಾತಕೋತ್ತರ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮಂಗಳೂರು ವಿ.ವಿ. ಕ್ಯಾಂಪಸ್ ಮೇಘಲಕ್ಷ್ಮೀ ಮುರುವಾಳ, ಪದವಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಪ್ರಥಮ  ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರೀತಿ ಆರ್ ಭಟ್, ಸ್ನಾತಕೋತ್ತರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ  ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮೂಡುಬಿದಿರೆಇಲ್ಲಿನ ಪ್ರಕಾಶ್ ಡಿ.ರಾಂಪುರ್, ಪದವಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆ ಇಲ್ಲಿನ ಸುವರ್ಚಲಾ ಅಂಬೇಕರ್ ಬಿ.ಎಸ್.ಇವರನ್ನು ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಮಾಮ್ ದತ್ತಿ ನಿಧಿಯಿಂದ ಪ್ರಥಮ ಸ್ಥಾನ ವಿಜೇತರಿಗೆ ತಲಾ 5 ಸಾವಿರ ಹಾಗೂ ದ್ವಿತೀಯ ಸ್ಥಾನ ವಿಜೇತರಿಗೆ ತಲಾ 2,500 ರು. ನಗದು ಪುರಸ್ಕಾರ ಹಸ್ತಾಂತರಿಸಲಾಯಿತು.
ಸ್ವರ್ಧೆಯ ತೀರ್ಪುಗಾರ, ಹಿರಿಯ ಪತ್ರಕರ್ತ ರಘುರಾಮ್ ಎಂ. , ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿದರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಮ್ ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ.ಪಳ್ಳಿ ವಂದಿಸಿದರು. ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಶಸ್ತಿ ವಿಜೇತರ ವಿವರ ನೀಡಿದರು. ಸದಸ್ಯ ಕೃಷ್ಣ ಮೋಹನ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದಲ್ಲಿ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಶಶಿಧರ್ ವಿಭಾಗದ ಪರವಾಗಿ ಹಾಜರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಮಾಮ್ ಸದಸ್ಯರು ಹಾಜರಿದ್ದರು. ಮಾಮ್ ಪದಾಧಿಕಾರಿಗಳಾ ವೇಣು ವಿನೋದ್ ಕೆ.ಎಸ್. ಹಾಗೂ ಕೃಷ್ಣಕಿಶೋರ್ ಸಹಕರಿಸಿದರು. ಬಳಿಕ ಸಹಭೋಜನ ಏರ್ಪಡಿಸಲಾಗಿತ್ತು. ಪ್ರಸ್ತುತ ವರ್ಷದ ಮಾಮ್ ಇನ್ ಸ್ಪೈರ್ ಅವಾರ್ಡ್ ಸ್ಪರ್ಧೆಯನ್ನು ಸಮಾರಂಭದಲ್ಲಿ ಘೋಷಿಸಲಾಯಿತು.
  2014ರಲ್ಲಿ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ 25ನೇ ವರ್ಷಾಚರಣೆ ಸಂದರ್ಭ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಅಸ್ತಿತ್ವಕ್ಕೆ ಬಂತು. ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ಅನೇಕ ಚಟುವಟಿಕೆಗಳನ್ನು ಮಾಮ್ ಹಮ್ಮಿಕೊಳ್ಳುತ್ತಾ ಬಂದಿದೆ. ಮಂಗಳೂರು ವಿ.ವಿ. ವ್ಯಾಪ್ತಿಯ ಮಂಗಳಗಂಗೋತ್ರಿ ಕ್ಯಾಂಪಸ್ ಹಾಗೂ ಪದವಿ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭೆಯನ್ನು ಪರಿಗಣಿಸಿ ಮಾಮ್ ಇನ್ ಸ್ಪೈರ್ ಪ್ರಶಸ್ತಿ ಸ್ಪರ್ಧೆ ನಡೆಸಲಾಗುತ್ತಿದ್ದು. .10ರಂದು ನೀಡಿರುವುದು ಸರಣಿಯ ಪ್ರಥಮ ಪ್ರಶಸ್ತಿಯಾಗಿದೆ. ಪ್ರಶಸ್ತಿ ನೀಡುವುದಕ್ಕೋಸ್ಕರ ಮಾಮ್ ಪ್ರತ್ಯೇಕ ದತ್ತಿ ನಿಧಿ ಸ್ಥಾಪಿಸಿದೆ. ವಿವಿಧ ಶಿಕ್ಷಣ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿ, ಹಿರಿಯ ಪತ್ರಕರ್ತರ ತಂಡ ವಿಜೇತರನ್ನು ಆರಿಸುತ್ತಿದೆ ಎಂದು ಮಾಮ್ ಪ್ರಕಟಣೆ ತಿಳಿಸಿದೆ.
----------------
ಮಾ ಉತ್ಸವ 2019
ಮಂಗಳೂರು ವಿ.ವಿ.ಸ್ನಾತಕೋತ್ತರ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ (ಮಂಗಳಾ ಆಲ್ಯೂಮ್ನಿ ಅಸೋಸಿಯೇಶನ್ -MAA) ಫೆ.17, 2019 ಭಾನುವಾರ ಮಂಗಳಗಂಗೋತ್ರಿಯ ಮಂಗಳಾ ಆಡಿಟೋರಿಯಂ ಅಂಗಣದಲ್ಲಿ ಆಯೋಜಿಸಿದ್ದ ಮಾ ಉತ್ಸವ 2019 ಹಲವು ಆಹ್ಲಾದಕರ ಕ್ಷಣಗಳಿಗೆ ಸಾಕ್ಷಿಯಾಯಿತು. ಸುಮಾರು 550ಕ್ಕೂ ಮಿಕ್ಕದ ಹಳೆ ವಿದ್ಯಾರ್ಥಿಗಳು ನಾನಾ ಕಡೆಗಳಿಂದ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಂದ ಹೆಚ್ಚಿಸಿದರು. ಮಾ ಸಂಗಮ ಕಾರ್ಯಕ್ರಮಕ್ಕೆ ಮಾಮ್ ಮಾಧ್ಯಮ ಸಹಯೋಗ ನೀಡಿತ್ತು. ಜೊತೆಗೆ ಮಾ ಸಂಗಮದ ಎರಡು ಕ್ರೀಡಾ ಸ್ಪರ್ಧೆಗಳಲ್ಲಿ ಮಾಮ್ ತಂಡಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು ಎಂದು ತಿಳಿಸಲು ಖುಷಿ ಪಡುತ್ತೇನೆ.
---
ಹಣಕಾಸು ಸ್ಥಿತಿಗತಿಗಳ ಸಂಕ್ಷಿಪ್ತ ವರದಿ

..ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ನಾವು ಉಳಿತಾಯ ಖಾತೆಯನ್ನು ಮಾಮ್ ಹೆಸರಿನಲ್ಲಿ ಹೊಂದಿದ್ದೇವೆ. ಮಾಮ್ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಖಾತೆಯ ಸಂಯುಕ್ತ ಖಾತೆದಾರರಾಗಿದ್ದು, ಪೈಕಿ ಯಾವುದೇ ಇಬ್ಬರ ಸಹಿ ಮೂಲಕ ನಾವು ಚೆಕ್ ವ್ಯವಹಾರ ನಡೆಸುವ ಅಧಿಕಾರ ಹೊಂದಿದ್ದೇವೆ. ದಿನಾಂಕ 5.9.2019 ತನಕ ನಾವು ನಮ್ಮ ಉಳಿತಾಯ ಖಾತೆಯಲ್ಲಿ 21,518 ರು. ನಗದು ಹೊಂದಿದ್ದೇವೆ. ಜೊತೆಗೆ ನಮ್ಮಲ್ಲಿ 2,25,000 ಮೊತ್ತದ ಎರಡು ಫಿಕ್ಸೆಡ್ ಡೆಪಾಸಿಟ್ ಖಾತೆಗಳಿವೆ. 1 ಲಕ್ಷ ರು.ಮೊತ್ತದ ಶೇ.8.25 ಬಡ್ಡಿ ದರದ ಒಂದು ಫಿಕ್ಸೆಡ್ ಡೆಪಾಸಿಟ್ ನ್ನು 10.05.2021 ಅವಧಿಗೆ ಇರಿಸಲಾಗಿದೆ. ಎಫ್ ಡಿ ಬಡ್ಡಿಯನ್ನು ನಾವು ಮಾಮ್ ಇನ್ ಸ್ಪೈಯರ್ ಪ್ರಶಸ್ತಿಗೆ ನಗದು ಬಹುಮಾನ ನೀಡಲು ಬಳಸಲಿದ್ದೇವೆ. ಇನ್ನೊಂದು 1,25,000 ರು. ಮೊತ್ತದ ಅಲ್ಪಾವಧಿ ಎಫ್ ಡಿ 16.11.2019ರಂದು ಅವಧಿ ಕೊನೆಗೊಳ್ಳಲಿದ್ದು, ಅದನ್ನು ಮತ್ತೆ ನವೀಕರಿಸಲಿದ್ದೇವೆ. ಸದ್ಯ, ಸದಸ್ಯತ್ವ ಶುಲ್ಕ ಹೊರತುಪಡಿಸಿ ಮತ್ಯಾವುದೇ ಆದಾಯದ ಮೂಲ ಮಾಮ್ ಗೆ ಇರುವುದಿಲ್ಲ. ತಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಜೀವ ಸದಸ್ಯತ್ವವನ್ನು ರು.1000 ಪಾವತಿಸುವ ಮೂಲಕ ಪಡೆದು ಆರ್ಥಿಕವಾಗಿಯೂ ನಮಗೆ ಪ್ರೋತ್ಸಾಹ ನೀಡಬೇಕೆಂದು ಕೋರುತ್ತೇನೆ.

ಉಪ ಸಂಹಾರ

ಇದರೊಂದಿಗೆ, 2017-18 ಹಾಗೂ 2018-19ನೇ ಸಾಲಿನ, ಅಂದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮುಗಿಸಿ ಹೊರಬಂದ ಎಂಸಿಜೆ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಸಂದರ್ಭ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಲು ಮಾಮ್ ಪ್ರತಿನಿಧಿಗಳು ಸಕಾಲದಲ್ಲಿ ನೆರವು ಒದಗಿಸಿದ್ದಾರೆ. ಬೆಂಗಳೂರಿನಲ್ಲಿರುವ ಮಾಧ್ಯಮ ಸಂಸ್ಥೆಗಳ ವಿವಿಧ ಸ್ನೇಹಿತರಿಗೆ ಸಹಕಾರಕ್ಕಾಗಿ ನಾನು ಆಭಾರಿಯಾಗಿದ್ದೇನೆ. 2015-17
ನೇ ಸಾಲಿನಲ್ಲಿ ವ್ಯಾಸಂಗ ಮುಗಿಸಿ ಹೊರ ಬಂದ ವಿದ್ಯಾರ್ಥಿಗಳಿಗಾಗಿ ಮಾಮ್ 2015-17 ಹೆಸರಿನ ವಾಟ್ಸಪ್ ಗ್ರೂಪ್ ರಚಿಸಿದ್ದು ಅವರನ್ನು ಮಾಮ್ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರತಿ ವರ್ಷ ಗ್ರೂಪನ್ನ ಅಪ್ಡೇಟ್ ಮಾಡಿ ಆಯಾ ವರ್ಷಗಳ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಜೊತೆ ಸಂಪರ್ಕ ಇರಿಸುವ ಪ್ರಯತ್ನ ಮಾಡಲಾಗುವುದು. ಕಾರ್ಯಕ್ಕೆ ನಮಗೆ ಎಂಸಿಜೆ ವಿಭಾಗದ ಬೋಧಕ ಸಿಬ್ಬಂದಿ ಸಹಕಾರವನ್ನು ಕೋರುತ್ತೇವೆ. ಉದ್ಯೋಗಾಕವಾಶಗಳು ಹಾಗೂ ಮಾಧ್ಯಮ ರಂಗದ ಅವಕಾಶಗಳ ಕುರಿತು ನಮ್ಮನ್ನು ಸಂಪರ್ಕಿಸಿದ ಇತ್ತೀಚಿನ ಹಳೆ ವಿದ್ಯಾರ್ಥಿಗಳಿಗೆ ಮಾಮ್ ಕಡೆಯಿಂದ ಮಾಹಿತಿಗಳನ್ನು ನೀಡುತ್ತಾ ಬರಲಾಗಿದೆ. ಕೆಲವು ಹಳೆ ವಿದ್ಯಾರ್ಥಿಗಳಿಗೆ ಮಾಮ್ ಚಟುವಟಿಕೆಗಳ ಪರಿಚಯದ ಹಿನ್ನೆಲೆಯಲ್ಲೇ, ಅಲ್ಲಿ ಮಾಮ್ ಸ್ನೇಹಿತರ ಶಿಫಾರಸ್ ಮೇರೆಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ನೇರ ನೇಮಕಾತಿ ನಡೆದಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
--
ಇದರೊಂದಿಗೆ 2017-19ನೇ ಸಾಲಿನ ವರದಿಯನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ.
-
ವಂದನೆಗಳು...
-ಕೃಷ್ಣಮೋಹನ (ಮಾಮ್ ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಪರವಾಗಿ ಸಲ್ಲಿಸಿದ ವರದಿ)