Saturday, 14 September 2019

ಮಾಮ್ ಮತ್ತಷ್ಟು ಗಟ್ಟಿಗೊಳಿಸುವ ಸಂಕಲ್ಪ ಮತ್ತು ಯಶಸ್ವಿ ಎಜಿಎಂ....























ಕಳೆದ ಸಲ 2017ರಲ್ಲಿ ನಡೆದ ಮಾಮ್ ವಾರ್ಷಿಕ ಮಹಾಸಭೆಗೆ ಆಗಮಿಸಿದ್ದವರು 30 ಮಂದಿ, ಈ ಸಲ 2019ರಲ್ಲಿ ಪಾಲ್ಗೊಂಡ ಸ್ನೇಹಿತರ ಸಂಖ್ಯೆ 15. ತಮ್ಮ ಕಾರ್ಯಭಾರ, ಕೆಲಸದೊತ್ತಡದ ನಡುವೆ ಬಹಳಷ್ಟು ಮಂದಿಗೆ ಮಹಾಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ನಿಗದಿತ ಸಮಯಕ್ಕಿಂತ ಸುಮಾರು ಅರ್ಧ ಗಂಟೆ ತಡವಾಗಿ 10.30ಕ್ಕೆ ಆರಂಭವಾದ ಸಭೆಯನ್ನು ನಿಯಮದ ಪ್ರಕಾರ ಕೋರಂ ಕೊರತೆ ಹಿನ್ನೆಲೆಯಲ್ಲಿ ಅರ್ಧ ಗಂಟೆ ಮುಂದೂಡಲಾಯಿತು. ಅಷ್ಟು ಹೊತ್ತಿಗೆ ಎಂಸಿಜೆ ವಿಭಾಗದ ಪ್ರಭಾರ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಜೊತೆ ಸೇರಿದರು.
ಬಳಿಕ ಚಹಾ, ಬಿಸ್ಕತ್ತು ಸೇವನೆ, ಸ್ವಾಗತ, ವರದಿ ವಾಚನವಾಗಿ, ನಿರ್ಗಮನ ಅಧ್ಯಕ್ಷ ಬಾಲಕೃಷ್ಣ ಹೊಳ್ಳ ಮಾತನಾಡಿದರು. ನೂತನ ಪದಾಧಿಕಾರಿಗಳ ಆಯ್ಕೆಯಾಯಿತು. ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ.ಪಳ್ಳಿ ಅವರು ಪುನರಾಯ್ಕೆಗೊಂಡರು. ನೂತನ ಅಧ್ಯಕ್ಷ ಸುರೇಶ್ ಪುದುವೆಟ್ಟು ಸಭೆಯನ್ನು ಮುನ್ನಡೆಸಿದರು. ಎಂಸಿಜೆ ವಿಭಾಗ ಪ್ರಭಾರ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಮಾತನಾಡಿದರು. ಮಾಮ್ ಇನ್ ಸ್ಪೈಯರ್ ಅವಾರ್ಡ್ ಕುರಿತು ಶರತ್ ಹೆಗ್ಡೆ ಕಡ್ತಲ ಮಾತನಾಡಿದರು. ಎಂಸಿಜೆ ಕಾರ್ಯಚಟುವಟಿಕೆಗಳ ಬೆಳವಣಿಗೆ, ಚಟುವಟಿಕೆಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು. ಮಾಮ್ ಪ್ರವಾಸ, ಗೆಟ್ ಟುಗೆದರ್, ಎಂಸಿಜೆ ವಿಭಾಗದ ಜೊತೆಗಿನ ಜಂಟಿ ಕಾರ್ಯಕ್ರಮಗಳ ಆಯೋಜನೆ ಮತ್ತಿತರ ವಿಚಾರಗಳ ಕುರಿತು ಸದಸ್ಯರು, ಉಪನ್ಯಾಸಕರು, ಪದಾಧಿಕಾರಿಗಳು ಚರ್ಚಿಸಿದರು. ನಿರ್ಣಯಗಳನ್ನು ಅಂಗೀಕರಿಸಲಾಯಿತು. 
ಬಳಿಕ ಬಿಜೈ ಕಾಪಿಕಾಡು ನ್ಯೂ ಓಶಿಯನ್ ಪರ್ಲಿನಲ್ಲಿ ಸಹಭೋಜನ ನಡೆಯಿತು.
ಹೊಸ ತಂಡ, ಹೊಸ ಉತ್ಸಾಹ, ಹೊಸ ಸಂಕಲ್ಪಗಳೊಂದಿಗೆ ಮತ್ತೆ ತಮ್ಮ ತಮ್ಮ ಕಚೇರಿಗಳಿಗೆ ಮರಳಿದರು.

---
ಮಾಮ್ ಜೊತೆಗಿದೆ ಎಂಸಿಜೆ ವಿಭಾಗ-ಪ್ರೊ.ಪಿ.ಎಲ್.ಧರ್ಮ

......

ಮಂಗಳೂರು ವಿ.ವಿ.ಯ ಹಳೆ ವಿದ್ಯಾರ್ಥಿಗಳ ಸಂಘ ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್ (ಮಾ) ಇದರ ಕಾರ್ಯಚಟುವಟಿಕೆಗಳಿಗೆ ಮಾಮ್ ಸ್ಫೂರ್ತಿ ಸಾಕಷ್ಟಿದೆ. ಇದನ್ನು ತಾವು ಕೃತಜ್ಞತೆಯಿಂದ ಸ್ಮರಿಸುವುದಾಗಿ ಮಂಗಳೂರು ವಿ.ವಿ. ಎಂಸಿಜೆ ವಿಭಾಗದ ಪ್ರಭಾರ ಅಧ್ಯಕ್ಷ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ಸೆ.14ರಂದು ಶನಿವಾರ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ನಡೆದ ಮಾಮ್ ನ ನಾಲ್ಕನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಪತ್ರಿಕೋದ್ಯಮ ರಂಗದಲ್ಲಿ ಬದಲಾಗಿರುವ ತಂತ್ರಜ್ಞಾನ, ಕಾರ್ಯಶೈಲಿ ಇತ್ಯಾದಿಗಳಿಗೆ ಪೂರಕವಾದ ಪಠ್ಯಕ್ರಮ ರೂಪಿಸಬೇಕಾದ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಮಂಗಳೂರು ವಿ.ವಿ. ಸಿಲಬಸ್ ರೂಪುರೇಷೆಗಾಗಿ ಬೋರ್ಡ್ ಆಫ್ ಸ್ಟಡೀಸ್ (ಬಿಒಎಸ್) ರೂಪಿಸಿದ್ದು, ಇದರ ಪಠ್ಯಕ್ರಮ ಸಿದ್ಧತೆಗೆ ಮಾಮ್ ಸಹಕಾರ ಪಡೆಯುವುದಾಗಿ ತಿಳಿಸಿದರು. ಮಾಮ್ ಸಹಯೋಗದಲ್ಲಿ ಮಂಗಳೂರಿನಲ್ಲಿ ಶೀಘ್ರದಲ್ಲಿ ಮಾಧ್ಯಮ ಸಂಬಂಧಿ ಕಾರ್ಯಾಗಾರ ನಡೆಸುವುದಾಗಿ ಮಾಹಿತಿ ನೀಡಿದರು.
ಮಂಗಳೂರು ವಿ.ವಿ. ಎಂಸಿಜೆ ವಿದ್ಯಾರ್ಥಿಗಳಿಗೆ ಸೆಲ್ಫ್ ಲರ್ನಿಂಗ್ ಗೆ ಒತ್ತು ನೀಡಲಾಗುತ್ತಿದೆ. ನೂತನ ಸ್ಟುಡಿಯೋ ತಯಾರಿಸುವ ಅಗತ್ಯವಿದೆ. ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವಾಗುವ ಕುರಿತು ಮಾಮ್ ಕೈಜೋಡಿಸುವ ಅವಕಾಶವಿದೆ. ಎಂಸಿಜೆ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು ತನ್ನಿಂತಾನೆ ಮಾಮ್ ಸದಸ್ಯರಾಗುವ ಸಾಧ್ಯತು ಕುರಿತು ಚಿಂತಿಸಲಾಗುತ್ತಿದೆ, ಮಾಮ್ ಚಟುವಟಿಕೆಗಳಲ್ಲಿ ಎಂಸಿಜೆ ವಿದ್ಯಾರ್ಥಿಗಳ ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸುವುದಾಗಿ ಅವರು ಭರವಸೆ ನೀಡಿದರು.
ವಿ.ವಿ.ಯಲ್ಲೂ ಮಾಸಿವ್ ಆನ್ ಲೈನ್ ಕೋರ್ಸ್ ವ್ಯವಸ್ಥೆ ಅಳವಡಿಕೆಯಾಗುವ ದಿನಗಳು ದೂರವಿಲ್ಲ. ಇದು ಜಾರಿಗೆ ಬಂದಲ್ಲಿ ಮಾಮ್ ಸದಸ್ಯರಿಗೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶವಿದೆ. ಎಂಸಿಜೆ ವಿಭಾಗಕ್ಕೆ ಪಿಎಚ್ ಡಿ ಗೈಡ್ ಗಳ ನೇಮಕಕ್ಕೆ ಪ್ರಯತ್ನ ನಡೆಯುತ್ತಿದ್ದು, ಇಂದು ಅಂತಿಮ ಹಂತದಲ್ಲಿದೆ. ಮಾಮ್ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಮಾಮ್ ನೂತನ ಅಧ್ಯಕ್ಷ ಸುರೇಶ್ ಪುದುವೆಟ್ಟು ಮಾತನಾಡಿ, 2002ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಮಾಮ್ ಸಂಘಟನೆ ಬಳಿಕ ಕಾರಣಾಂತರಗಳಿಂದ ಚಟುವಟಿಕೆ ಸ್ಥಗಿತಗೊಳಿಸಿತು. ನಾವಿದನ್ನು ಈಗ ಪುನಶ್ಚೇತನಗೊಳಿಸಿ ಹೆಚ್ಚಿನ ಕೆಲಸ ಕಾರ್ಯ ನಡೆಸುವ ಸಂಕಲ್ಪ ತೊಟ್ಟಿದ್ದೇವೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಇಂದಿನ ಹೊಸ ಸವಾಲುಗಳಿಗೆ ಸಜ್ಜುಗೊಳಿಸಬೇಕು, ಒಂದು ತಂಡವಾಗಿ ಕೆಲಸ ಮಾಡುವ ಅವಕಾಶ ನಮಗಿದೆ, ಎಲ್ಲರನ್ನೂ ಒಳಗೊಳ್ಳುವಂತೆ ಮುಂದೆ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಗಮನ ಅಧ್ಯಕ್ಷ ಎ.ವಿ.ಬಾಲಕೃಷ್ಣ ಹೊಳ್ಳ ಅವರು ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ವಂದಿಸಿದರು. 

---
ಹಲವು ದಿನಗಳ ಬಳಿಕ ಒಟ್ಟು ಸೇರಿದ ಮಾಮ್ ಸದಸ್ಯರು ಪಕ್ಷ ಸಂಘಟನೆ ಕುರಿತು ಸಾಕಷ್ಟು ಚರ್ಚಿಸಿದ್ದಲ್ಲದೆ, ಹೊಸ ಉತ್ಸಾಹದೊಂದಿಗೆ ಮುನ್ನಡೆಯುವ ಸಂಕಲ್ಪ ಕೈಗೊಂಡರು.

-ವರದಿ: ಕೆ.ಎಂ.


No comments:

Post a Comment