ಮಾಮ್ ನೂತನ ಅಧ್ಯಕ್ಷ ಸುರೇಶ್ ಪುದುವೆಟ್ಟು
--------
--------
ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ(ಮಾಮ್) ಇದರ 2019-21ನೇ ಅವಧಿಗೆ ನೂತನ ಅಧ್ಯಕ್ಷರಾಗಿ
ಉದಯವಾಣಿ ಮಂಗಳೂರು ಬ್ಯೂರೋ ಉಪ ಮುಖ್ಯಸ್ಥ ಸುರೇಶ್ ಪುದುವೆಟ್ಟು ಅವಿರೋಧ ಆಯ್ಕೆಯಾಗಿದ್ದಾರೆ.
ಸೆ.14ರಂದು
ಶನಿವಾರ ಮಂಗಳೂರು ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ನಡೆದ ಮಾಮ್ ಸಂಘಟನೆಯ ನಾಲ್ಕನೇ
ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ
ನಡೆಯಿತು.
ಗೌರವಾಧ್ಯಕ್ಷರಾಗಿ ಆಡ್ ಐಡಿಯಾದ ವೇಣು ಶರ್ಮ ಮುಂದುವರಿದಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ಸುರೇಶ್ ಡಿ.ಪಳ್ಳಿ ಹಾಗೂ
ಕೋಶಾಧಿಕಾರಿಯಾಗಿ ಮಂಗಳೂರು ದೃಷ್ಟಿ ಆಪ್ಟಿಕಲ್ಸ್ ಮಾಲೀಕ ಕೃಷ್ಣ ಕಿಶೋರ್ ವೈ.
ಆಯ್ಕೆಯಾದರು.
ಬೆಂಗಳೂರು ಘಟಕದ ಉಪಾಧ್ಯಕ್ಷರಾಗಿ ನವೀನ್ ಅಮ್ಮಂಬಳ, ಮಂಗಳೂರು ಘಟಕದ
ಉಪಾಧ್ಯಕ್ಷರಾಗಿ ಬಿ.ಎ.ಖಾದರ್ ಶಾ, ಕಾರ್ಯದರ್ಶಿಗಳಾಗಿ ಸಫಿಯಾ ನಯೀಮ್, ಮೇಘಲಕ್ಷ್ಮೀ
ಮರುವಾಳ, ಗಣೇಶ್ ಪೈಚಾರು, ಮಾಮ್ ಇನ್ ಸ್ಪಯರ್ ಪ್ರಶಸ್ತಿ ಸಂಚಾಲಕರಾಗಿ ಶರತ್ ಹೆಗ್ಡೆ
ಕಡ್ತಲ, ಕಾರ್ಯಕ್ರಮ ಸಂಯೋಜಕರಾಗಿ ಮಹಾಂತೇಶ್ ಹಿರೇಮಠ್ ಅವರನ್ನು ಆರಿಸಲಾಯಿತು.
ಕಾರ್ಯಕಾರಿ
ಸಮಿತಿ ಸದಸ್ಯರಾಗಿ ಅಹಮದ್ ಬಾವಾ, ಕೃಷ್ಣಮೋಹನ ಟಿ., ವೇಣು ವಿನೋದ್ ಕೆ.ಎಸ್., ಹರೀಶ್
ಮೋಟುಕಾನ, ದೇವಿಪ್ರಸಾದ್ ಕಾರ್ಕಳ, ಹರೀಶ್ ಕುಲ್ಕುಂದ, ಧೀರಜ್ ಪೊಯ್ಯಕಂಡ, ಸಂತೋಷ್
ಕುಮಾರ್ ವರ್ಕಾಡಿ, ಕಾವ್ಯಾ, ಕೆವಿನ್ ಮೆಂಡೋನ್ಸಾ ಆಯ್ಕೆಯಾದರು.
ನಿರ್ಗಮನ ಅಧ್ಯಕ್ಷ ಎ.ವಿ.ಬಾಲಕೃಷ್ಣ ಹೊಳ್ಳ, ಮಂಗಳೂರು
ವಿ.ವಿ.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಭಾರ ಅಧ್ಯಕ್ಷ
ಪ್ರೊ.ಪಿ.ಎಲ್.ಧರ್ಮ, ಉಪನ್ಯಾಸಕಿ ಸಫಿಯಾ ನಯೀಮ್, ಮಂಗಳೂರು ವಾರ್ತಾಧಿಕಾರಿ ಬಿ.ಎ.ಖಾದರ್
ಶಾ ಮತ್ತಿತರರು ಹಾಜರಿದ್ದರು.
ಪದಾಧಿಕಾರಿಗಳಾದ ವೇಣು ವಿನೋದ್ ಕೆ.ಎಸ್.
ಸ್ವಾಗತಿಸಿದರು. ಕೃಷ್ಣಕಿಶೋರ್ ವೈ.ವರದಿ ಮಂಡಿಸಿದರು. ವೇಣು ಶರ್ಮ ವಂದಿಸಿದರು. ಶರತ್
ಹೆಗ್ಡೆ ಕಡ್ತಲ ನಿರೂಪಿಸಿದರು.
![]() |
TEAM MAAM @ ADD IDEA BEJAI |
ಮಾಮ್ ನಾಲ್ಕನೇ ವಾರ್ಷಿಕ ಮಹಾಸಭೆ ಸಂಪನ್ನ
------
ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ(ಮಾಮ್) ಇದರ 2019ನೇ ಸಾಲಿನ ವಾರ್ಷಿಕ ಮಹಾಸಭೆ (ನಾಲ್ಕನೇ ಎಜಿಎಂ) ಶನಿವಾರ (14.09.2019)ಮಂಗಳೂರು ಬಿಜೈ ಭಾರತೀನಗರದ ಆಡ್‌ಐಡಿಯಾ ಕಚೇರಿಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್. ಅವರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್ ಹಾಗೂ ಸದಸ್ಯ ಕೃಷ್ಣಮೋಹನ ಅವರು ಕಳೆದ ಎರಡು ವರ್ಷಗಳ ಚಟುವಟಿಕೆಗಳ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಸಂಘದಲ್ಲಿರುವ ಎರಡು ನಿರಖು ಠೇವಣಿಯ ಹೊರತಾಗಿ ಮಹಾಸಭೆಯ ದಿನದ ವರೆಗೆ ರು.21,518 ಉಳಿತಾಯ ಖಾತೆಯಲ್ಲಿರುವ ಮಾಹಿತಿ ನೀಡಲಾಯಿತು.
ಬಳಿಕ ಸಂಘದ ನಿರ್ಗಮನ ಅಧ್ಯಕ್ಷ ಎ.ವಿ.ಬಾಲಕೃಷ್ಣ ಹೊಳ್ಳ ಅವರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ನಂತರ 2019- 21ನೇ ಅವಧಿಯ ಮುಂದಿನ ಎರಡು ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಬಳಿಕ ನೂತನ ಅಧ್ಯಕ್ಷ ಸುರೇಶ್ ಪುದುವೆಟ್ಟು ಅಧ್ಯಕ್ಷತೆಯಲ್ಲಿ ಮುಂದಿನ ಸಾಲಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚೆಗಳು ನಡೆದವು.
ಮಂಗಳೂರು ವಿ.ವಿ. ಎಂಸಿಜೆ ವಿಭಾಗದ ಪ್ರಭಾರ ಅಧ್ಯಕ್ಷ ಪ್ರೊ.ಪಿ.ಎಲ್.ಧರ್ಮ ಮಾತನಾಡಿದರು. ಮಾಮ್ ಇನ್ ಸ್ಪೈಯರ್ ಅವಾರ್ಡ್ ಕುರಿತು ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಕಾರ್ಯಕ್ರಮ ನಿರೂಪಿಸಿ, ಇನ್ ಸ್ಪೈಯರ್ ಅವಾರ್ಡ್ ಕುರಿತು ಮಾಹಿತಿ ನೀಡಿದರು.
ಎಂಸಿಜೆ ವಿಭಾಗದ ಉಪನ್ಯಾಸಕಿ ಸಫಿಯಾ ನಯೀಮ್, ದ.ಕ., ಉಡುಪಿ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಮತ್ತಿತರರು ಹಾಜರಿದ್ದರು.
ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ವಂದಿಸಿದರು.ಸಭೆಯಲ್ಲಿ 15 ಮಂದಿ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು. ಬಳಿಕ ಮಂಗಳೂರು ಬಿಜೈ ಕಾಪಿಕಾಡಿನ ನ್ಯೂ ಓಶನ್ ಪರ್ಲಿನಲ್ಲಿ ಸಹ ಭೋಜನ ಮಾಡಲಾಯಿತು.
......
ಮಹಾಸಭೆಯಲ್ಲಿ ಪಾಲ್ಗೊಂಡ ಸದಸ್ಯರು
1) ಪ್ರೊ.ಪಿ.ಎಲ್.ಧರ್ಮ
2) ಎ.ವಿ.ಬಾಲಕೃಷ್ಣ ಹೊಳ್ಳ
3) ವೇಣು ಶರ್ಮ
4) ಮೇಘಲಕ್ಷ್ಮೀ
5) ಸಫಿಯಾ ನಯೀಮ್
6) ಶರತ್ ಹೆಗ್ಡೆ ಕಡ್ತಲ
7) ಸುರೇಶ್ ಪುದುವೆಟ್ಟು
8) ಬಿ.ಎ.ಖಾದರ್ ಶಾ
9) ಮಹಾಂತೇಶ್ ಹಿರೇಮಠ್
10) ಹರೀಶ್ ಕುಲ್ಕುಂದ
11) ಹರೀಶ್ ಮೋಟುಕಾನ
12) ವೇಣುವಿನೋದ್ ಕೆ.ಎಸ್.
13) ಕೃಷ್ಣಕಿಶೋರ್ ವೈ
14) ಅಹಮದ್ ಬಾವಾ
15) ಕೃಷ್ಣ ಮೋಹನ ಟಿ.
16) ಕೆವಿನ್ ಮೆಂಡೋನ್ಸ
......
ಮೂರನೇ ವಾರ್ಷಿಕ ಮಹಾಸಭೆಯ ನಿರ್ಣಯಗಳು
1) ಮಂಗಳೂರು ವಿ.ವಿ.ಹಳೆ ವಿದ್ಯಾರ್ಥಿಗಳ ಸಂಘ ಮಾ ಸಹಯೋಗದಲ್ಲಿ ಮಂಗಳೂರು ಬೆಸೆಂಟ್ ಕಾಲೇಜಿನಲ್ಲಿ ನಡೆಯುವ ಮಾಧ್ಯಮ ವಿಚಾರಸಂಕಿರಣದಲ್ಲಿ ಮಾಮ್ ಸಹಯೋಗ ವಹಿಸುವ ಕುರಿತು ತೀರ್ಮಾನಿಸಲಾಯಿತು.
2) ಈಗಿರುವ ಸದಸ್ಯರ ಸಂಖ್ಯೆಯನ್ನು ಹೆಚ್ಚಿನ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲು ನಿರ್ಧರಿಸಲಾಯಿತು. ಪ್ರತಿ ಮಾಧ್ಯಮ ಸಂಸ್ಥೆಯಲ್ಲಿರುವ ಹಿರಿಯ ಸದಸ್ಯರು ತಮ್ಮ ಸಂಸ್ಥೆಯಲ್ಲಿರುವ ಎಂಸಿಜೆ ಹಳೆ ವಿದ್ಯಾರ್ಥಿಗಳನ್ನು ಸದಸ್ಯರಾಗಿಸಲು ಶ್ರಮಿಸಲು ಸೂಚನೆ ನೀಡಲಾಯಿತು.
3) ಮಾಮ್ ಸದಸ್ಯರ ಪ್ರವಾಸ ಮುಂಬರುವ ದಿನದಲ್ಲಿ ಏರ್ಪಡಿಸಲು ನಿರ್ಧರಿಸಲಾಯಿತು.
4) ಮಾಮ್ ಬೆಂಗಳೂರು ಚಾಪ್ಟರ್ ಚಟುವಟಿಕೆಯನ್ನು ಚುರುಕುಗೊಳಿಸಲು ಶೀಘ್ರದಲ್ಲಿ ನೂತನ ಪದಾಧಿಕಾರಿಗಳ ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧರಿಸಲಾಯಿತು.
6) ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳ ಜೊತೆಗೆ ಮಾಮ್ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು.
7) ಮಾಮ್ ಚಟುವಟಿಕೆಗಳ ಮಾಹಿತಿ ಪ್ರಸಾರಕ್ಕೆ ತೆರೆಯಲಾಗಿರುವ ವೆಬ್ ಸೈಟ್ ಬಳಕೆ ಮತ್ತು ನಿರ್ವಹಣೆ ಅವಶ್ಯಕತೆ ಕಡಿಮೆ ಎಂದು ಕಂಡುಕೊಂಡ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವೆಬ್ ಸೈಟ್ ನಿರ್ವಹಣೆಯನ್ನು ನಿರ್ವಹಿಸುವ ಕುರಿತು ತೀರ್ಮಾನಿಸಲಾಯಿತು.
8) ಈ ವರ್ಷದ ಮಾಮ್ ಇನ್ ಸ್ಪೈಯರ್ ಅವಾರ್ಡ್ ನಲ್ಲಿ ಡಿಜಿಟಲ್ ಭೂಮಿಕೆಗೂ ಒತ್ತು ನೀಡಲು ನಿರ್ಧರಿಸಲಾಯಿತು.
---ನೂತನಅಧ್ಯಕ್ಷರಾಗಿ ಉದಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಶ್ ಪುದುವೆಟ್ಟು ಅವಿರೋಧ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ಸುರೇಶ್ ಡಿ.ಪಳ್ಳಿ ಹಾಗೂ ಕೋಶಾಧಿಕಾರಿಯಾಗಿ ಮಂಗಳೂರು ದೃಷ್ಟಿ ಆಪ್ಟಿಕಲ್ಸ್ ಮಾಲೀಕ ಕೃಷ್ಣ ಕಿಶೋರ್ ವೈ. ಆಯ್ಕೆಯಾದರು.
![]() |
@ New Ocean pearl Hotel Bejai |
MAAM inspires me to inspire my young friends. Great work dear friends. MAAM has lasting impact on the younger generation. Build character to build Nation
ReplyDeleteCongratulations & best wishes to the newly elected body of MAAM.
ReplyDeleteCongrats for MAAM new committee members ,💐💐💐💐💐💐💐💐
ReplyDelete