ನಮಸ್ತೆ ಸ್ನೇಹಿತರೇ...
ನಿಮಗೆಲ್ಲ ಈ MAAM 2019-20 ಹೆಸರಿನ ವಾಟ್ಸಪ್ ಗ್ರೂಪಿಗೆ ಸ್ವಾಗತ. ಈ ಗ್ರೂಪು ಯಾವುದಕ್ಕೋಸ್ಕರ ಇದೆ. ಇಲ್ಲಿ ನಾವೇನು ಮಾಡಬಹುದು ಎಂಬುದರ ಕುರಿತಾದ ಸಂದೇಶ ಇದು. ದಯವಿಟ್ಟು ನೀವೆಲ್ಲರೂ ಈ ಸುದೀರ್ಘ ಮೆಸೇಜನ್ನು ಕೊನೆ ತನಕ ಓದಿ ಸ್ಪಂದಿಸಬೇಕಾಗಿ ವಿನಂತಿ...
...
1) ಈ ಗ್ರೂಪನ್ನು ನಿರ್ವಹಿಸುವವರು ಯಾರು?
ಈ ಗ್ರೂಪನ್ನು ನಿರ್ವಹಿಸುತ್ತಿರುವವರು ಮಾಮ್. MAAM ಎಂದರೆ ಮೀಡಿಯಾ ಅಲ್ಯುಮ್ನೈ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (MEDIA ALUMNI ASSOCIATION OF MANAGALAGANGOTHRI) (ಮಂಗಳೂರು ವಿ.ವಿ.ಯಲ್ಲಿ ಎಂಸಿಜೆ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳ ಸಂಘ).
2) ಮಾಮ್ ಎಂದರೇನು?
ಈಗಾಗಲೇ ಹೇಳಿದ ಹಾಗೆ MAAM ಎಂದರೆ ಮಂಗಳೂರು ವಿ.ವಿ.ಯಲ್ಲಿ ನಿಮ್ಮ ಹಾಗೆ ಈ ಹಿಂದೆ ಕಳೆದ 30 ವರ್ಷಗಳಲ್ಲಿ ಎಂಸಿಜೆ ಕಲಿತ ಹಳೆ ವಿದ್ಯಾರ್ಥಿಗಳ ಸಂಘಟನೆ ಮಾಮ್. 2014ರಲ್ಲಿ ನಮ್ಮ ವಿಭಾಗಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾವೆಲ್ಲ ಸೇರಿ MAAM ನ್ನು ಸ್ಥಾಪಿಸಿದ್ದೇವೆ. ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಹಾಗೂ ಸ್ವಂತ ಉದ್ಯೋಗ ನಿರ್ವಹಿಸುತ್ತಿರುವ 250ಕ್ಕೂಅಧಿಕ ಹಳೆ ವಿದ್ಯಾರ್ಥಿಗಳು ಮಾಮ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಮ್ ಗೆ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳಿದ್ದಾರೆ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದು, ಹಳೆ ವಿದ್ಯಾರ್ಥಿಗಳನ್ನು ಸಂಘಟಿಸುವುದು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಮ್ಮಿಂದಾದ ಸಹಾಯ ಮಾಡುವುದು ಇವು ಮೂಲಭೂತವಾಗಿ ಮಾಮ್ ಸಂಘಟನೆಯ ಉದ್ದೇಶಗಳು.
3) ಈ ಗ್ರೂಪು ಮಾಡಿದ್ದು ಯಾಕೆ?
ಈ ಗ್ರೂಪಿನಲ್ಲಿ 2018-21ನೇ ಸಾಲಿನ ತನಕ ಎಂಸಿಜೆ ವ್ಯಾಸಂಗ ಮಾಡುತ್ತಿರುವ ಎರಡೂ ವರ್ಷದ ವಿದ್ಯಾರ್ಥಿಗಳಿದ್ದೀರಿ. ನಿಮಗೆ ನಿಮ್ಮ ತರಗತಿಗಳಲ್ಲಿ ಥಿಯರಿ ಹಾಗೂ ಪ್ರಾಕ್ಟಿಕಲ್ ಪಾಠಗಳು ನಡೆಯುತ್ತಿರುತ್ತವೆ. ಜೊತೆಗೆ ನಿಮಗೆ ಕೆಲವೊಂದು ಬಾರಿ ಪ್ರಾಕ್ಟಿಕಲ್ ಅನುಭವ ಅಥವಾ ಮಾರ್ಗದರ್ಶನ ಬೇಕಾಗುತ್ತದೆ. ವೃತ್ತಿಪರವಾಗಿ ಕೆಲವು ವಿಚಾರಗಳನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬ ಕುರಿತು ಮಾಹಿತಿಗಳು ಬೇಕಾಗುತ್ತವೆ. ಲೇಖನ ಬರವಣಿಗೆ, ಇಂಟರ್ನ್ ಶಿಪ್, ಡೆಸರ್ಟೇಶನ್ ಇತ್ಯಾದಿ ಕೆಲಸಗಳೂ ಇರುತ್ತವೆ. ಈ ಎಲ್ಲ ಸಂದರ್ಭಗಳಲ್ಲಿ ವೃತ್ತಿಪರರ ಸಂಘಟನೆಯಾಗಿರುವ ಮಾಮ್ ನಿಮಗೆ ನಮ್ಮ ಕೈಲಾದ ಸಹಾಯ ಮಾಡುವುದಕ್ಕೋಸ್ಕರ ಈ ಗ್ರೂಪ್ ರಚಿಸಲಾಗಿದೆ. ನಿಮ್ಮ ಕಲಿಕೆ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ನೀವಿಲ್ಲಿ ಪ್ರಸ್ತಾಪಿಸಿ, ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಮಾಮ್ ಚಟುವಟಿಕೆಗಳ ಕುರಿತೂ ನಾವಿಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತೇವೆ. ಒಟ್ಟಿನಲ್ಲಿ ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ನಡುವಿನ ಕೊಂಡಿಯಾಗಿ ಈ ಗ್ರೂಪು ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ. ನಿಮ್ಮ ಕೋರ್ಸ್ ಮುಗಿದ ತಕ್ಷಣ ನೀವು ಕೂಡಾ ಮಾಮ್ ಸಂಘಟನೆಯ ಭಾಗಗಳಾಗಿರುತ್ತೀರಿ.
4) ಈ ಗ್ರೂಪಿನಲ್ಲಿ ಯಾರ್ಯಾರು ಇದ್ದಾರೆ?
ಈ ಗ್ರೂಪಿನಲ್ಲಿ ಎಂಸಿಜೆಯ ಎಲ್ಲಾ ಸೆಮಿಸ್ಟರ್ ಗಳ ವಿದ್ಯಾರ್ಥಿಗಳು ಇರಬೇಕು. ವಿಭಾಗ ಮುಖ್ಯಸ್ಥರಾದ (ಪ್ರಭಾರ) ಪ್ರೊ.ಪಿ.ಎಲ್.ಧರ್ಮ ಸರ್ ಇದ್ದಾರೆ. ಮೇಡಂ ಸಫಿಯಾ ನಯೀಂ ಅವರು ಇಡೀ ಗ್ರೂಪಿನ ಸಮನ್ವಯಕಾರರಾಗಿರುತ್ತಾರೆ. ಮಾಮ್ ಕಡೆಯಿಂದ ಅಧ್ಯಕ್ಷ ಸುರೇಶ್ ಪುದುವೆಟ್ಟು (ಉದಯವಾಣಿ ಮಂಗಳೂರು ಬ್ಯೂರೋ ಉಪಮುಖ್ಯಸ್ಥ), ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ.ಪಳ್ಳಿ (ಹೊಸದಿಗಂತ ಪತ್ರಿಕೆಯ ಹಿರಿಯ ವರದಿಗಾರ), ಕೋಶಾಧಿಕಾರಿ ಕೃಷ್ಣಕಿಶೋರ್
ವೈ. (ಮಂಗಳೂರು ದೃಷ್ಟಿ ಆಪ್ಟಿಕಲ್ಸ್ ಮಾಲೀಕ ಮತ್ತು ವೃತ್ತಿಪರ ಛಾಯಾಗ್ರಾಹಕ) ಇಷ್ಟು ಮಂದಿ ಇರುತ್ತಾರೆ.
5) ಗ್ರೂಪಿನಲ್ಲಿ ಏನೇನು ಮಾಡಬೇಕು?
ಗ್ರೂಪಿನಲ್ಲಿ ಕಲಿಕೆ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಪ್ರಸ್ತಾಪಿಸಬಹುದು, ಶೇರ್ ಮಾಡಬಹುದು. ಪತ್ರಿಕೆಗಳಲ್ಲಿ ನೀವು ಪ್ರಕಟಿಸಿದ ಬೈಲೈನ್ ಲೇಖನಗಳು, ವಿಚಾರಗಳನ್ನು ಇಲ್ಲಿ ಶೇರ್ ಮಾಡಬಹುದು, ವೃತ್ತಿಪರವಾದ ಸಂಶಯಗಳಿದ್ದರೆ ಗ್ರೂಪಿನಲ್ಲಿ ಪ್ರಸ್ತಾಪಿಸಿ ಉತ್ತರ ಪಡೆಯಬಹುದು, ಮಾಧ್ಯಮ ಕ್ಷೇತ್ರದ ಕುರಿತಾಗಿರುವ ಸಂಶಯಗಳನ್ನು ಪ್ರಸ್ತಾಪಿಸಬಹುದು, ನಮಗೆ ಉತ್ತರ ಗೊತ್ತಿರುವಂಥ ವಿಚಾರವಾದರೆ ಸೂಕ್ತ ಉತ್ತರಗಳನ್ನು ನೀಡಲು ಪ್ರಯತ್ನಿಸುತ್ತೇವೆ. ನಿಮ್ಮಲ್ಲಿ ತುಂಬಾ ಚೆನ್ನಾಗಿ ಬರೆಯುವ ಬರಹಗಾರರು ಇರಬಹುದು, ಏನೂ ಬರೆಯದವರೂ ಇರಬಹುದು, ಈಗಷ್ಟೇ ಬರೆಯಲು ತೊಡಗಿದವರು ಇರಬಹುದು. ಮುಂದಿನ ದಿನಗಳಲ್ಲಿ ನಿಮ್ಮ ಪೈಕಿ ಯಾರಿಗೆಲ್ಲ ಗಂಭೀರವಾಗಿ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸುವ ಇಚ್ಛೆ ಇದೆಯೋ ನೀವೆಲ್ಲ ಬರಹವನ್ನು ಇಂಪ್ರೂವ್ ಮಾಡಲು, ಐಡಿಯಾಗಳನ್ನು ಕೇಳಿಕೊಳ್ಳಲು ಗ್ರೂಪನ್ನು ಬಳಸಬಹುದು. ನೀವೊಂದು ಒಳ್ಳೆ ಫೋಟೋ ತೆಗೆದರೆ ವಿವರ ಸಹಿತ ಗ್ರೂಪಿನಲ್ಲಿ ಹಂಚಿಕೊಳ್ಳಬಹುದು. ಆ ಕುರಿತು ನಾವು ಚರ್ಚಿಸಬಹುದು. ಇಂತಹ ಸಾಕಷ್ಟು ವಿಚಾರಗಳು ಕಲಿಕೆಗೆ ಪೂರಕವಾಗಿ ಗ್ರೂಪಿನಲ್ಲಿ ಚರ್ಚೆಗೊಳಗಾಗಬಹುದು.
6) ಗ್ರೂಪಿನಲ್ಲಿ ಏನು ಮಾಡಬಾರದು?
ಈ ಗ್ರೂಪನ್ನು ದಯವಿಟ್ಟು ಹುಡುಗಾಟಿಕೆಯ ಅಥವಾ ಹತ್ತರಲ್ಲಿ ಹನ್ನೊಂದು ಎಂಬಂಥ ಉಡಾಫೆ ಮನೋಭಾವದಿಂದ ಕಾಣಬೇಡಿ. ಇದು ವಿದ್ಯಾರ್ಥಿಗಳು ಮತ್ತು ವೃತ್ತಿಪರ ಪತ್ರಕರ್ತರ ನಡುವಿನ ಸೇತುವಾಗಿ ಕಾರ್ಯನಿರ್ವಹಿಸಬೇಕೆಂಬ ಗಂಭೀರ ಉದ್ದೇಶದಿಂದ ಶುರು ಮಾಡಿರುವ ಗ್ರೂಪು. ಹಾಗಾಗಿ ಪರಸ್ಪರ ಕಾಲೆಳೆಯುವುದು, ಹಗುರ ಮಾತುಗಳು, ರಾಜಕಾರಣಿಗಳು, ಧರ್ಮ, ಜಾತಿ, ಲಿಂಗ ದೂಷಣೆ, ಅನಗತ್ಯ ಜೋಕುಗಳು, ಗ್ರೂಪಿನ ಉದ್ದೇಶಕ್ಕೇ ಸಂಬಂಧವೇ ಇಲ್ಲದ ಫೋಟೋ, ವಿಡಿಯೋ, ಉದ್ದುದ್ದ ಮೆಸೇಜುಗಳು, ಗುಡ್ ಮಾರ್ನಿಂಗು, ಗುಡ್ ನೈಟು, ಬರ್ತ್ ಡೇ ವಿಶಸ್, ವೈಯಕ್ತಿಕ ಸಂಭಾಷಣೆ ಇದು ಯಾವುದಕ್ಕೂ ಗ್ರೂಪಿನಲ್ಲಿ ಕಡ್ಡಾಯವಾಗಿ ಅವಕಾಶವಿಲ್ಲ. ಗ್ರೂಪಿನಲ್ಲಿ ಫನ್ ಇರಲಿ, ಆದರೆ ಅದು ನಮ್ಮ ಗ್ರೂಪು ಆರಂಭಿಸಿದ ಚೌಕಟ್ಟನ್ನು ಮೀರಿ ಹೋಗುವಂತಿಲ್ಲ. ಈ ವಿಚಾರದಲ್ಲಿ ರಾಜಿಯಿಲ್ಲ.
7) ಗ್ರೂಪು ಜೀವಂತವಾಗಿಡುವುದು ಹೇಗೆ?
ನಮಗೆಲ್ಲ ಗೊತ್ತು. ಪ್ರತಿ ಗ್ರೂಪು ಕೂಡಾ ಒಳ್ಳೆ ಉತ್ಸಾಹದಿಂದ ಶುರುವಾಗುತ್ತದೆ. ಹೋಗ್ತಾ ಹೋಗ್ತಾ ಅದರಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಎಷ್ಟೋ ಸಲ ಗ್ರೂಪಿಗೆ ಸಂಬಂಧಪಡದ ವಿಚಾರಗಳಿಂದ ತುಂಬಿರುತ್ತದೆ. ಒಂದು ದಿನ ಪೂರ್ತಿ ಸ್ತಬ್ಧವಾಗುತ್ತದೆ, ಒಬ್ಬೊಬ್ಬರೇ ಗ್ರೂಪನ್ನು ತ್ಯಜಿಸುತ್ತಾರೆ. ಈ ಗ್ರೂಪು ಹಾಗಾಗಬಾರದು ಎಂಬುದು ನಮ್ಮ ಆಶಯ. ನಿಮಗೆಲ್ಲ ಬಹುತೇಕ 20 ವರ್ಷ ದಾಟಿದೆ. ಪ್ರಬುದ್ಧರಿದ್ದೀರಿ. ಕಲಿಯುವ ಉತ್ಸಾಹದಿಂದ ಎಂಸಿಜೆ ಗ್ರೂಪಿಗೆ ಸೇರಿದ್ದೀರಿ. ಗ್ರೂಪನ್ನು ಆಕ್ಟಿವ್ ಆಗಿ ಇರಿಸುವ ಹೊಣೆ ನಿಮ್ಮ ಮೇಲಿದೆ. ಸಮಯವಿಲ್ಲ, ಆಸಕ್ತಿಯಿಲ್ಲ ಎಂಬಿತ್ಯಾದಿ ನೆಪಗಳು ನಮ್ಮನ್ನು ನಾವು ವಂಚಿಸಿದ ಹಾಗಾಗುತ್ತದೆ. ಸಮಯ ಹಾಗೂ ಆಸಕ್ತಿಯನ್ನು ಬೆಳೆಸಿಕೊಳ್ಳುವುದು ನಮ್ಮ ಕೈಲಿದೆ. ಈ ಅಮೂಲ್ಯ ಎರಡು ವರ್ಷಗಳು ನಿಮ್ಮ ಭವಿಷ್ಯವನ್ನು ರೂಪಿಸುವ ಬೆಲೆ ಬಾಳುವ ಅವಧಿ. ಈ ಅವಧಿಯನ್ನು ಫಲಪ್ರದಗೊಳಿಸುವಲ್ಲಿ ನಮ್ಮ ಈ ಪುಟ್ಟ ಪ್ರಯತ್ನದ ಫಲವಾದ ಗ್ರೂಪು ಕೂಡಾ ಜೊತೆಗಿರುತ್ತದೆ ಎಂಬ ಕಳಕಳಿಯ ಮಾಹಿತಿ ನಮ್ಮದು.
8) ನಿಮ್ಮ ಜೊತೆ ಇಷ್ಟೆಲ್ಲ ವಿಚಾರ ಹಂಚಿಕೊಂಡ ನನ್ನ ಹೆಸರು ಕೃಷ್ಣಮೋಹನ. ನಾನು 2002ನೇ ಸಾಲಿನ ಎಂಸಿಜೆ ಹಳೆ ವಿದ್ಯಾರ್ಥಿ. ಪ್ರಸ್ತುತ ಕನ್ನಡಪ್ರಭ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಹಿರಿಯ ಉಪಸಂಪಾದಕನಾಗಿ ಕೆಲಸ ಮಾಡುತ್ತಿದ್ದೇನೆ. ಮಾಮ್ ಸಂಘಟನೆಯ ವಿವಿಧ ವಾಟ್ಸಪ್ ಗ್ರೂಪುಗಳ ಸಮನ್ವಯಕಾರನಾಗಿ ಕೆಲಸ ಮಾಡುತ್ತಿದ್ದೇನೆ.
ವಂದನೆಗಳು, ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
-KM (9482976969)

No comments:
Post a Comment