Wednesday, 19 August 2015

ಮಾಮ್ ಬೆಂಗಳೂರು ಶಾಖೆಗೆ ಚಾಲನೆ

ಮಂಗಳೂರು: ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ(ಮಾಮ್) ಇದರ ಬೆಂಗಳೂರು ಶಾಖೆಗೆ ಚಾಲನೆ ನೀಡಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಶಾಖೆ ಆರಂಭಿಸಲಾಗಿದ್ದು ಬೆಂಗಳೂರು ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ರೈ, ಸದಸ್ಯರಾಗಿ ಅಂಬರೀಶ್ ಭಟ್, ಸೂರ್ಯನಾರಾಯಣ, ಶ್ರೀನಿವಾಸ್, ನವಿತಾ ಜೈನ್, ರಾಘವೇಂದ್ರ ಭಟ್, ಸದಾಶಿವ, ರಾಮಚಂದ್ರ ಮುಳಿಯಾಲ, ಅಜಿತ್ ಕುಮಾರ್, ಮಂಜುನಾಥ ಹೆಬ್ಬಾರ್ ಹಾಗೂ ವಿವೇಕ್ ನಂಬಿಯಾರ್ ಅಲ್ಲದೆ ಕಳೆದ ಸಾಮಾನ್ಯಸಭೆಯಲ್ಲಿ ನಾಮನಿರ್ದೇಶನ ಮಾಡಲಾಗಿದ್ದ ನವೀನ್ ಅಮ್ಮೆಂಬಳ, ಸುಪ್ರಭಾ ಮತ್ತು ದೀಪಕ್ ಅವರನ್ನು ಕಾರ್ಯಕಾರಿ ಸಮಿತಿಗೆ ಅಂತಿಮಗೊಳಿಸಲಾಯಿತು.
ಮಾಮ್ ಅಧ್ಯಕ್ಷೆ ಫೆÇ್ಲೀರಿನ್ ರೋಶ್, ಗೌರವಾಧ್ಯಕ್ಷ ವೇಣು ಶರ್ಮ, ಪ್ರಧಾನ ಕಾರ್ಯದರ್ಶಿ ಕೃಷ್ಣ ಮೋಹನ್, ಉಪಾಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಹಾಗೂ ಪಿಆರ್‍ಒ ಕೃಷ್ಣಕಿಶೋರ್ ಹಾಜರಿದ್ದರು.

No comments:

Post a Comment