ಮಂಗಳೂರು: ಮೀಡಿಯಾ
ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ರಕ್ತದಾನ ಅಭಿಯಾನ ಸರಣಿಯ ಏಳನೇ ಶಿಬಿರ ಅ.24ರಂದು ಶನಿವಾರ ಮೇರಿಹಿಲ್ ಲ್ಯಾಂಡ್ ಲಿಂಕ್ಸ್‌ನ ‘ಲ್ಯಾಂಡ್ ಲಿಂಕ್ಸ್ ಎಲೈಟ್’ ಅಪಾರ್ಟ್‌ಮೆಂಟ್ ಆವರಣದಲ್ಲಿ ನಡೆಯಲಿದೆ. ಭಾರತೀಯ ರೆಡ್
ಕ್ರಾಸ್ ಸೊಸೈಟಿಯ ಮಂಗಳೂರು ಘಟಕದ ನೇತೃತ್ವದಲ್ಲಿ ನಡೆಯುವ ಶಿಬಿರಕ್ಕೆ ಲ್ಯಾಂಡ್ ಲಿಂಕ್ಸ್ ಎಲೈಟ್
ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಶನ್ ಸಹಯೋಗ ನೀಡಲಿದೆ.
ಅಂದು ಬೆಳಗ್ಗೆ 9 ಗಂಟೆಗೆ ಆರಂಭವಾಗುವ ಶಿಬಿರವನ್ನು ಮಾಜಿ ಸಚಿವ
ಜೆ.ಕೃಷ್ಣ ಪಾಲೇಮಾರ್ ಉದ್ಘಾಟಿಸುವರು. ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಶರತ್
ಶೆಟ್ಟಿ, ರೆಡ್‌ಕ್ರಾಸ್
ಸೊಸೈಟಿ ಮಂಗಳೂರು ಘಟಕ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಮತ್ತಿತರರು
ಪಾಲ್ಗೊಳ್ಳುವರು. ಮಾಮ್ ಸಹಯೋಗದಲ್ಲಿ ನಗರದ ವಿವಿಧೆಡೆ ಈಗಾಗಲೇ ಆರು ರಕ್ತದಾನ ಶಿಬಿರಗಳನ್ನು
ಯಶಸ್ವಿಯಾಗಿ ಆಯೋಜಿಸಲಾಗಿದೆ. ಎಂದು ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಪ್ರಕಟಣೆ ತಿಳಿಸಿದೆ.
No comments:
Post a Comment