Sunday, 28 August 2016

ಮಾಮ್ ಎರಡನೇ ವಾರ್ಷಿಕ ಮಹಾಸಭೆ (20.08.2016)ಯ ನಿರ್ಣಯಗಳ ವರದಿ



ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್)ಇದರ ಎರಡನೇ ವಾರ್ಷಿಕ ಮಹಾಸಭೆ (ಎಜಿಎಂ) ದಿನಾಂಕ 20.08.2016ರಂದು ಮಂಗಳೂರಿನ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ನಡೆಯಿತು.


ಎಜಿಎಂ ಅಜೆಂಡಾಗಳು

1) ಸ್ವಾಗತ
2) ವರದಿ ವಾಚನ
3) ಮಾಮ್ ಲೆಕ್ಕಪತ್ರ ಮಂಡನೆ
4) ಮಾಮ್ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸಮಾಲೋಚನೆ
5) ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಚಾರಗಳು

ಎಜಿಎಂ ನಡಾವಳಿಗಳು:

1) ಮಾಮ್ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್. ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

2) ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಅವರು ಮಾಮ್ ಸ್ಥಾಪನೆ ಆರಂಭವಾದಂದಿನಿಂದ ಈ ವರೆಗಿನ ಕಾರ್ಯಚಟುವಟಿಕೆಗಳ ಕುರಿತು ಸಂಕ್ಷಿಪ್ತ ವರದಿ ಮಂಡನೆ ಮಾಡಿದರು.

3) ಬಳಿಕ ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು ಮಾಮ್ ಆರಂಭವಾದಾಗಿನಿಂದ ಈ ವರೆಗಿನ ಲೆಕ್ಕಪತ್ರ (ಬ್ಯಾಲೆನ್ಸ್ ಶೀಟ್) ಮಂಡಿಸಿದರು. ಮಾಮ್ ಸ್ಥಾಪನೆ ಆದ ಬಳಿಕ ಮೊದಲ ಬಾರಿಗೆ ಲೆಕ್ಕಪರಿಶೋಧಕರ ಮೂಲಕ ಮಾಮ್ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಿದ್ದು ಈ ಆಯವ್ಯಯಕ್ಕೆ ಧ್ವನಿಮತದ ಮೂಲಕ ಸದಸ್ಯರು ಅಂಗೀಕಾರ ಸೂಚಿಸಿದರು.
ಲೆಕ್ಕ ಪತ್ರ ಮಂಡನೆ ಬಳಿಕ ಈ ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಲಾಯಿತು:

a) ಇನ್ನು ಮುಂದೆ ಮಾಮ್ ಚಟುವಟಿಕೆಗಳ ಎಲ್ಲಾ ಪಾವತಿ ಬ್ಯಾಂಕ್ ಮೂಲಕವನೇ ನಡೆಯುತ್ತದೆ. ಆದರೆ, ಕೋಶಾಧಿಕಾರಿ ತಮ್ಮ ಬಳಿ ರುಪಾಯಿ 5000 ವರೆಗೆ ಪೆಟ್ಟಿ ಕ್ಯಾಶ್ ಇರಿಸಿಕೊಂಡು ಚಿಲ್ಲರೆ ಪಾವತಿಗಳನ್ನು (ರು.1000 ವರೆಗಿನದ್ದು) ಮಾಡಬಹುದು.


b) ರು.1000ಕ್ಕಿಂತ ಮೇಲಿನ ಎಲ್ಲಾ ಪಾವತಿಗಳನ್ನು ಚೆಕ್ ಮುಖಾಂತರವೇ ಮಾಡುವುದು.

c) ಮಾಮ್ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಿದ (ಎರಡು ವರ್ಷದ್ದು) ಲೆಕ್ಕ ಪರಿಶೋಧಕರಿಗೆ (ಸಿಎ) ರು.3000 ಫೀಸ್ ಪಾವತಿಸಲು ಸಭೆ ಅಂಗೀಕರಿಸಿತು.

d) ಮಾಮ್ ಸದಸ್ಯ ಶುಲ್ಕ ಹಾಗೂ ಸದಸ್ಯತ್ವ ನವೀಕರಣ ಶುಲ್ಕವನ್ನು ಯಾವುದೇ ಖರ್ಚುಗಳಿಗೆ ಬಳಸುವಂತಿಲ್ಲ. ಆ ದುಡ್ಡನ್ನು ಫಿಕ್ಸೆಡ್ ಡೆಪಾಸಿಟ್ ಆಗಿ ನಮ್ಮ ಬ್ಯಾಂಕಿನಲ್ಲಿ ಇರಿಸಿ ಅದರ ಬಡ್ಡಿಯ ಹಣವನ್ನು ಮಾತ್ರ ಖರ್ಚಿಗೆ ಬಳಸುವುದು.

4) ಮಂಗಳೂರು ವಿ.ವಿ. ಎಂಸಿಜೆ ವಿಭಾಗದಲ್ಲಿ ವ್ಯಾಸಂಗ ಮಾಡಿದ 1988ರ ನಂತರದ ಲಭ್ಯವಿರುವ ಎಲ್ಲ ಹಳೆ ವಿದ್ಯಾರ್ಥಿಗಳ ಪಟ್ಟಿ ಹಾಗೂ ಸಂಪರ್ಕ ಸಂಖ್ಯೆಗಳು ಹಾಗೂ ವಿಳಾಸವನ್ನು ವಿಭಾಗ ಮುಖ್ಯಸ್ಥರ ಸಹಾಯದಿಂದ ಸಂಗ್ರಹಿಸುವುದು. ಆಯಾ ಬ್ಯಾಚ್ ಪ್ರಕಾರ ಹಳೆ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಅದನ್ನು ನಮ್ಮ ನೂತನ ವೆಬ್ ಸೈಟಿನಲ್ಲಿ ಪ್ರಕಟಿಸುವುದು. ಈ ಜವಾಬ್ದಾರಿಯನ್ನು ವಸಂತ್ ಕೊಣಾಜೆ ಹಾಗೂ ಕೃಷ್ಣ ಕಿಶೋರ್ ಅವರಿಗೆ ವಹಿಸಲಾಯಿತು.

ಮಂಗಳೂರು ಮತ್ತು ಬೆಂಗಳೂರು ಸಹಿತ ವಿವಿಧೆಡೆ ಮಾಧ್ಯಮ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಎಂಸಿಜೆ ಹಳೆ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ಅವರನ್ನು ಮಾಮ್ ಅಧಿಕೃತ ಸದಸ್ಯರನ್ನಾಗಿಸುವ ಪ್ರಯತ್ನ ಮಾಡುವುದು.


5) ಉಜಿರೆ ಎಸ್ ಡಿಎಂ ಕಾಲೇಜಿನ ಸುವರ್ಣ ಮಹೋತ್ಸವ ಹಾಗೂ ಪತ್ರಿಕೋದ್ಯಮ ವಿಭಾಗದ 30ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸರಣಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಮಾತುಕತೆ ಮುಂದುವರಿಸುವ ಹೊಣೆಯನ್ನು ಬಾಲಕೃಷ್ಣ ಹೊಳ್ಳ ಅವರಿಗೆ ವಹಿಸಲಾಯಿತು.

6) ಮಾಮ್ ಮಂಗಳೂರಿನ ಎಸ್ ಸಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಇರಿಸಿದ 1 ಲಕ್ಷ ರುಪಾಯಿ ಫಿಕ್ಸೆಡ್ ಡೆಪಾಸಿಟ್ ನ ಬಡ್ಡಿ ಹಣದಿಂದ ನೀಡುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗೆ ಮಾಮ್ ಇನ್ ಸ್ಪೈರ್ ಅವಾರ್ಡ್ ಎಂದು ಹೆಸರಿಸಲು ನಿರ್ಧರಿಸಲಾಯಿತು. ಉಪಾಧ್ಯಕ್ಷ ಶರತ್ ಹೆಗ್ಡೆ ಅವರು ದತ್ತಿನಿಧಿ ಮಾರ್ಗಸೂಚಿಗಳ ಕರಡು ಪ್ರತಿಯನ್ನು ಸಭೆಯಲ್ಲಿ ಮಂಡಿಸಿದರು. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಸಭೆ ಕರಡುಪ್ರತಿಗೆ ಅನುಮೋದನೆ ನೀಡಿತು. ದತ್ತಿನಿಧಿ ಕುರಿತು ಈ ಕೆಳಗಿನ ನಿರ್ದಾರಗಳನ್ನು ಕೈಗೊಳ್ಳಲಾಯಿತು:

a) ಪ್ರಾಯೋಜಕರ ಸಹಕಾರದಿಂದ ಮಂಗಳೂರು, ಕೊಡಗು, ಉಡುಪಿ ಭಾಗದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ (ಯಾವುದೇ ಪದವಿ) ಒಂದು ಹಾಗೂ ಮಂಗಳೂರು ವಿ.ವಿ. ಸಹಿತ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇನ್ನೊಂದು ನಗದು ಪ್ರಶಸ್ತಿ ನೀಡುವುದು.

b) ದತ್ತಿನಿಧಿ ಕುರಿತ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಶರತ್ ಹೆಗ್ಡೆ ನೇತೃತ್ವದ ದತ್ತಿನಿಧಿ ಕಾರ್ಯಕಾರಿ ಸಮಿತಿಗೆ ನೀಡಲು ಸಭೆ ನಿರ್ಣಯಿಸಿತು.


7) ಮಂಗಳೂರಿನ ಬೆಸೆಂಟ್ ಕಾಲೇಜಿನ ಸಹಯೋಗದಲ್ಲಿ ನಡೆಸಲು ಉದ್ದೇಶಿಸಿರುವ ಆಟೋ ಚಾಲಕರಿಗೆ ಮಾಧ್ಯಮ ತರಬೇತಿ ಕಾರ್ಯಾಗಾರಕ್ಕೆ ತಗಲಬಹುದಾದ ಅಂದಾಜು ವೆಚ್ಚ ರು.3000ವನ್ನು ಮಾಮ್ ಭರಿಸುವ ತೀರ್ಮಾನ ಕೈಗೊಳ್ಳಲಾಯಿತು. ಸಾಧ್ಯವಾದರೆ ಪ್ರೆಸ್ ಕ್ಲಬ್ ಸಹಾಯ ಪಡೆಯಲು ನಿರ್ಧರಿಸಲಾಯಿತು. ಇದರೊಂದಿಗೆ ಮಂಗಳೂರಿನ ಮಹಾಲಸಾ ಕಲಾ ಕಾಲೇಜು ಮತ್ತು ಮಾಮ್ ಸಹಯೋಗದಲ್ಲಿ ನಡೆಸಲು ಉದ್ದೇಶಿಸಿದ ಜಂಟಿ ಕಾರ್ಯಕ್ರಮಕ್ಕೆ (ಕಲಾಕೃತಿ ರಚನೆ ಹಿನ್ನೆಲೆಯಲ್ಲಿ) ಸುಮಾರು 5000 ರು. ಖರ್ಚು ಮಾಮ್ ವಹಿಸಲು ತೀರ್ಮಾನಿಸಲಾಯಿತು.

8) ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್ (ಮಾ) ಸಹಯೋಗದಲ್ಲಿ ಮಂಗಳೂರು ವಿ.ವಿ. ಹಳೆ ವಿದ್ಯಾರ್ಥಿಗಳ ಬೃಹತ್ ಗೆಟ್ ಟುಗೆದರ್ ಮಾಡುವುದಾದರೆ ಮಾಮ್ ಸಹಯೋಗ ನೀಡಲು ಮಾ ಪದಾಧಿಕಾರಿಗಳೊಂದಿಗೆ ಚರ್ಚಿಸಲು ನಿರ್ಧರಿಸಲಾಯಿತು

9) ಮಾಮ್ ಬೆಂಗಳೂರು ಘಟಕದ ಸದಸ್ಯರನ್ನು ಒಟ್ಟು ಸೇರಿಸುವ ಮತ್ತು ಸದಸ್ಯತ್ವ ಅಭಿಯಾನವನ್ನು ನಡೆಸುವ ಸಹಯೋಗ ನೀಡುವ ಜವಾಬ್ದಾರಿಯನ್ನು ಉಪಾಧ್ಯಕ್ಷ ದೀಪಕ್ ನಾಯ್ಕ್ ಅವರಿಗೆ ನೀಡಲಾಯಿತು.

10) ಎಂಸಿಜೆ ವಿಭಾಗ ಸಹಯೋಗದಲ್ಲಿ ಎಂಸಿಜೆ ವಿದ್ಯಾರ್ಥಿಗಳಿಗಾಗಿ ಪ್ರತಿ ತಿಂಗಳು ಮಾಮ್ ಸಂಪನ್ಮೂಲ ವ್ಯಕ್ತಿಗಳು ನಿಯಮಿತ ಪ್ರಾಕ್ಟಿಕಲ್ ತರಗತಿಗಳನ್ನು ನಡೆಸಲು ವಿಭಾಗ ಪ್ರತಿನಿಧಿ ಪ್ರೊ.ಜಿ.ಪಿ.ಶಿವರಾಂ ಸಮ್ಮತಿಸಿದರು. ಇದಕ್ಕೋಸ್ಕರ ಮಾಮ್ ಸಂಪನ್ಮೂಲ ವ್ಯಕ್ತಿಗಳ ಪಟ್ಟಿಯನ್ನು ವಿಭಾಗಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.

11) ಕೋಶಾಧಿಕಾರಿ ಸ್ಮಿತಾ ಶೆಣೈ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಲಾಪ ನಿರ್ವಹಿಸಿದರು. ಎಂಸಿಜೆ ವಿಭಾಗ ಅಧ್ಯಕ್ಷರ ಪರವಾಗಿ ಪ್ರತಿನಿಧಿ ಪ್ರೊ.ಜಿ.ಪಿ.ಶಿವರಾಂ ಸೇರಿದಂತೆ 20 ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು.








Thursday, 25 August 2016

MAAM AGM coveraage in MEDIA

HOSA DIGANTHA

UDAYAVAANI

KANNADAPRABHA

VISHWA VAANI

DECCAN HERALD

SAMYUKTHA KARNATAKA

PRAJA VAANI

VARTHA BHARATHI

VIJAYAVAANI

THE HINDU
ದಿನಾಂಕ 20.08.2016 ಶನಿವಾರ ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯ ವರದಿಯ ತುಣುಕುಗಳು, ವಿವಿಧ ಪತ್ರಿಕೆಗಳಲ್ಲಿ ಕಂಡಂತೆ... (ಸಹಕಾರ ಸುರೇಶ್ ಡಿ.ಪಳ್ಳಿ)

MAAM MEMBERS LIST -REVISED (Till AUGUST 20th 2016)

List of Life Members for MAAM 
(Rs.1000/-.Paid till Aug-2016)

1) Ajith Kumar
2) Ambarish Bhat
3) Ashwani Kumar
4) Balakrishna Holla

5) Florine Roche
6) Gururaj Paniyadi
7) Halimath Sadiya
8) Ishwarachandra
9) Kabeeer Khantila
10) Krishna Mohana T.
11) Krishna Kishore
 12) Navitha Jain
13)  PraveenChandra
14) Raffique Konaje
15) Ramachandra M.
16) Raviprakash.S
17) Ravipraksh Rai
18) Raviprasad Kamila
19) Sadashiva K
20) Shyma Prasad K.
21) Stanley Pinto
22) Sooryanarayana
23) Sukhesha Padibagilu
24) Suprabha N.K.
25) Surendra Shetty
26) Suresh D.Palli
27) Venu Sharma
28) Vivek Nambiar
29) Yogeesh Holla
30)  Mohana.
31) Dr.Ronald Anil Fernandes
32)  Smitha shenoy
33) Vasanth konaje
34) Chandrashekhar kulamaruva
35) Deepak Naik
36) Sharath hegde
-------------
Yearly Membership - Paying rs.100/-

(till August 2016)

1) Harish Motukana
2) Harish Kulkunda

Saturday, 20 August 2016

MAAM second AGM Report held on 20th AUGUST 2016


ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ MAAM) ಇದರ ಎರಡನೇ ವಾರ್ಷಿಕ ಮಹಾಸಭೆ (AGM) ಶನಿವಾರ ಪೂರ್ವಾಹ್ನ ಮಂಗಳೂರಿನ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ಸಂಪನ್ನಗೊಂಡಿತು.

-ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
-ಮಂಗಳೂರು ವಿ.ವಿ. ಎಂಸಿಜೆ ವಿಭಾಗ ಪ್ರತಿನಿಧಿಯಾಗಿ ಪ್ರೊ.ಜಿ.ಪಿ.ಶಿವರಾಂ ಹಾಗೂ ಬೆಂಗಳೂರು ಘಟಕದ ಪ್ರತಿನಿಧಿಯಾಗಿ ದೀಪಕ್ ನಾಯ್ಕ್ ಪಾಲ್ಗೊಂಡಿದ್ದರು.
-ಇವರಲ್ಲದೆ ಮಾಮ್ ಕಾರ್ಯಕಾರಿ ಸಮಿತಿ ಹಾಗೂ ಇತರ ಸದಸ್ಯರು ಸೇರಿದಂತೆ 20 ಮಂದಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.


............................
-ಮಾಮ್ ಕಾರ್ಯದರ್ಶಿ ವೇಣು ವಿನೋದ್ ಸ್ವಾಗತಿಸಿದರು.
-ಅಧ್ಯಕ್ಷೆ ಫ್ಲೋರಿನ್ ರೋಚ್ ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
 (ಈ ವರದಿಯ ಪೂರ್ಣ ಪಾಠವನ್ನು ನೀವು ನಮ್ಮ ಬ್ಲಾಗಿನ ಈ ಹಿಂದಿನ ಪೋಸ್ಟಿನಲ್ಲಿ ನೋಡಬಹುದು)
2015-16 MAAM report in kannada uploaded in our blog:
please click following link:

http://maammangalore.blogspot.in/2016/08/maam-2015-16.html

 
-ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು ಮಾಮ್ ಆರಂಭವಾದಾಗಿನಿಂದ ಈ ವರೆಗಿನ ಲೆಕ್ಕಪತ್ರದ ವಿವರಗಳನ್ನು ಮಂಡಿಸಿದರು. ಆಡಿಟ್ ಆದ ಲೆಕ್ಕಪತ್ರಕ್ಕೆ ಸಭೆ ಅಂಗೀಕಾರ ಸೂಚಿಸುವ ನಿರ್ಣಯ ಕೈಗೊಂಡಿತು
 (ಈ ಲೆಕ್ಕಪತ್ರದ ಮುಖ್ಯಾಂಶಗಳನ್ನು ನಮ್ಮ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು)
-ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಲಾಪ ನಿರ್ವಹಿಸಿದರು.
-ಸಭೆಯ ಬಳಿಕ ಕುಂಟಿಕಾನ ಬಿಎಂಎಸ್ ಹೊಟೇಲಿನಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
-ಆರು ಮಂದಿ ಸಂಘದ ಆಜೀವ ಸದಸ್ಯತ್ವ ಸ್ವೀಕರಿಸಿದರು. ಓರ್ವರು ವಾರ್ಷಿಕ ಸದಸ್ಯತ್ವ ಪಡೆದರು.
..................................

ಆಗಸ್ಟ್ 20ರಂದು ನಡೆದ ಈ ವಾರ್ಷಿಕ ಮಹಾಸಭೆಯ ನಿರ್ಣಯಗಳನ್ನು (ಮಿನಿಟ್ಸ್) ಯಥಾವತ್ತಾಗಿ ಪ್ರತ್ಯೇಕ ಪೋಸ್ಟ್ ರೂಪದಲ್ಲಿ ಈ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು.
ಸಭೆಯ ಮುಖ್ಯ ನಿರ್ಣಯಗಳು ಈ ಕೆಳಗಿನಂತಿವೆ:


-ಮಾಮ್ ದತ್ತಿನಿಧಿ ರೂಪದಲ್ಲಿ ರು.1 ಲಕ್ಷಗಳನ್ನು ನಿರಖು ಠೇವಣಿಯಾಗಿ ಇರಿಸಿದ್ದು, ಇದರ ಬಡ್ಡಿಯ ಹಣ ಹಾಗೂ ಪ್ರಾಯೋಜಕರ ನೆರವಿನಿಂದ ನೀಡಲಾಗುವ ದತ್ತಿನಿಧಿ ಪುರಸ್ಕಾರಕ್ಕೆ ಮಾಮ್ ಇನ್ ಸ್ಪೈರ್ ಅವಾರ್ಡ್ ಎಂದು ಹೆಸರಿಡಲು ನಿರ್ಧಾರಿಸಲಾಯಿತು.
-ಮಾಮ್ ಸಂಘಟನೆಯು ದತ್ತಿ ನಿಧಿ ರೂಪದಲ್ಲಿ ಪ್ರತಿ ವರ್ಷ ಮಂಗಳೂರು, ಉಡುಪಿ ಕೊಡಗು ಭಾಗದ ಇಬ್ಬರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಿದೆ. ಮಂಗಳೂರು ವಿ.ವಿ. ಸೇರಿದಂತೆ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಂದು ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ಪ್ರಶಸ್ತಿ ನೀಡಲಾಗುವುದು. ಇದಕ್ಕೋಸ್ಕರ ವಿದ್ಯಾರ್ಥಿಗಳ ಬರವಣಿಗೆ, ಸಾಂಸ್ಕೃತಿಕ ಸಾಧನೆ, ಕಲಿಕೆಯಲ್ಲಿ ಸಾಧನೆ ಸೇರಿದಂತೆ ಸರ್ವತೋಮುಖ ಪ್ರತಿಭೆಯನ್ನು ಪ್ರಶಸ್ತಿ ಆಯ್ಕೆ ಸಮಿತಿ ಗುರುತಿಸಿ ನಗದು ಪುರಸ್ಕಾರ ನೀಡಲಿದೆ. ಈ ಕುರಿತು ಅಗತ್ಯ ಸುತ್ತೋಲೆಗಳನ್ನು ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಲು ನಿರ್ಧರಿಸಲಾಯಿತು. ಈ ಪ್ರಶಸ್ತಿಯ ಪ್ರಕ್ರಿಯೆಗಳನ್ನು ಪೂರೈಸಲು ಪ್ರತ್ಯೇಕ ಕಾರ್ಯಕಾರಿ ಸಮಿತಿ ರಚಿಸಲಾಗುವುದು, ಇದರ ನೇತೃತ್ವವನ್ನು ಉಪಾಧ್ಯಕ್ಷ ಶರತ್ ಹೆಗ್ಡೆ ಕಡ್ತಲ ವಹಿಸುವರು. ಈ ಕಾರ್ಯಕಾರಿ ಸಮಿತಿಯು ಪ್ರಶಸ್ತಿ ಕುರಿತ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಭೆ ಅಂಗೀಕಾರ ಸೂಚಿಸಿತು.

-ಮಂಗಳೂರು ವಿ.ವಿ.ಯಲ್ಲಿ 1988ರಿಂದ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪಡೆದು ಹೋಗಿದ್ದಾರೆ. ಆದರೆ ಮಾಮ್ ಸಂಘಟನೆಯ ಸದಸ್ಯರಾಗಿರುವವರು ಹಾಗೂ ಸಂಪರ್ಕಕ್ಕೆ ಸಿಕ್ಕಿರುವ ಸಂಖ್ಯೆ ತುಂಬಾ ಕಡಿಮೆ. ಈ ಹಿನ್ನೆಲೆಯಲ್ಲಿ ಎಂಸಿಜೆ ವಿಭಾಗ ಸಹಾಯದಿಂದ ಹಳೆ ವಿದ್ಯಾರ್ಥಿಗಳ ವಿಳಾಸ, ಸಂಪರ್ಕ ಸಂಖ್ಯೆಗಳನ್ನು ಪತ್ತೆಹಚ್ಚಿ ಪಟ್ಟಿ ತಯಾರಿಸುವುದು, ಹಾಗೂ ಸದಸ್ಯತ್ವ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಯಿತು.

-ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಹಾಗೂ ವೇಣುವಿನೋದ್ ನೇತೃತ್ವದಲ್ಲಿ ಮಾಮ್ ಗೆ ಸ್ವಂತ ವೆಬ್ ಸೈಟ್ ರೂಪಿಸುವ ಕಾರ್ಯಕ್ಕೆ ಚಾಲನೆ ದೊರಕಿದ್ದು, ತಿಂಗಳೊಳಗೆ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಈ ವೆಬ್ ಸೈಟ್ ಸಹಾಯದಿಂದ ಹಳೆ ವಿದ್ಯಾರ್ಥಿಗಳ ಸಂಘಟನೆ ಹಾಗೂ ಸಂಪರ್ಕಕ್ಕೆ ನಿರ್ಧರಿಸಲಾಯಿತು.

-ಈಗಾಗಲೇ ಮಾಮ್ ಬೆಂಗಳೂರು ಘಟಕವನ್ನು ಕಳೆದ ವರ್ಷ ಅಸ್ತಿತ್ವಕ್ಕೆ ತರಲಾಗಿದೆ. ಇದರ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಲು ಅಲ್ಲಿನ ಪ್ರತಿನಿಧಿ ದೀಪಕ್ ನಾಯ್ಕ್ ನೇತೃತ್ವದಲ್ಲಿ ಶೀಘ್ರದಲ್ಲಿ ಸಭೆ ನಡೆಸಲು ನಿರ್ಧಾರ. ಮಂಗಳೂರು ಘಟಕದ ಪ್ರತಿನಿಧಿಗಳು ಬೆಂಗಳೂರಿಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಲು ತೀರ್ಮಾನ.

-ಮಂಗಳೂರಿನ ಎರಡು ಕಾಲೇಜುಗಳ ಸಹಯೋಗದಲ್ಲಿ ವಿಶಿಷ್ಟವಾದ ಎರಡು ಕಾರ್ಯಕ್ರಮಗಳನ್ನು ನಡೆಸಲು ಸಭೆ ಅಂಗೀಕಾರ ನೀಡಿತು.

-ಮಂಗಳೂರು ಎಂಸಿಜೆ ವಿಭಾಗದಲ್ಲಿ ವರ್ಷಪೂರ್ತಿ ಮಾಮ್ ಸಂಪನ್ಮೂಲ ವ್ಯಕ್ತಿಗಳ ಸಹಯೋಗದಲ್ಲಿ ನಿರಂತರ ಕಾರ್ಯಾಗಾರಗಳನ್ನು  ನಡೆಸುವ ಕುರಿತು ಪ್ರೊ.ಜಿ.ಪಿ.ಶಿವರಾಂ ಅವರು ಸಮ್ಮತಿ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಕಾರ್ಯಕ್ರಮಗಳನ್ನು ನಡೆಸಲು ನಿರ್ಧಾರ.

-ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್ (MAA) ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲು ಸಭೆ ಅಂಗೀಕಾರ.

-ರು.5000 ಸಾವಿರ ವರೆಗಿನ ನಗದನ್ನು ಕೋಶಾಧಿಕಾರಿ ಇರಿಸಿಕೊಂಡು ಸಣ್ಣಪುಟ್ಟ ಖರ್ಚುಗಳನ್ನು ನಗದು ರೂಪದಲ್ಲಿ ಹಾಗೂ ರು.1000ಕ್ಕಿಂತ ಮೇಲ್ಪಟ್ಟ ಪಾವತಿಗಳನ್ನು ಚೆಕ್ ರೂಪದಲ್ಲಿ ಮಾತ್ರ ಮಾಡಲು ಸಭೆ ನಿರ್ಧರಿಸಿತು. ಎಲ್ಲಾ ಪಾವತಿ, ಸ್ವೀಕೃತಿ ವ್ಯವಹಾರಗಳು ಬ್ಯಾಂಕ್ ಮೂಲಕವೇ ನಡೆಯಲಿದೆ.

-ಸದಸ್ಯತ್ವ ಶುಲ್ಕವನ್ನು ಯಾವುದೇ ಖರ್ಚಿಗೆ ಬಳಸದಿರಲು ಹಾಗೂ ಸದಸ್ಯತ್ವ ಶುಲ್ಕದ ಬಡ್ಡಿ ಹಣವನ್ನು ಮಾತ್ರ ಉಳಿತಾಯ ಖಾತೆ ಮೂಲಕ ಬಳಸಿಕೊಳ್ಳಲು ಸಭೆ ನಿರ್ಧರಿಸಿತು.
--------------------------------
ಸಭೆಯಲ್ಲಿ ಗೌರವಾಧ್ಯಕ್ಷ ವೇಣು ಶರ್ಮ, ಉಪಾಧ್ಯಕ್ಷ  ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಕಾರ್ಯಕ್ರಮ ಸಂಘಟಕ ಕೃಷ್ಣ ಕಿಶೋರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಹರೀಶ್ ಕುಲ್ಕುಂದ, ಹರೀಶ್ ಮೋಟುಕಾನ, ಸುರೇಶ್ ಡಿ.ಪಳ್ಳಿ, ಬಾಲಕೃಷ್ಣ ಹೊಳ್ಳ, ಸದಸ್ಯರಾದ ಗುರುರಾಜ್ ಪಣಿಯಾಡಿ, ವಸಂತ ಕೊಣಾಜೆ, ಮೋಹನ್, ಧೀರಜ್, ಪ್ರಶಾಂತ್ ಸುವರ್ಣ, ಕೆವಿನ್ ಮೆಂಡೋನ್ಸಾ, ಚೈತ್ರೇಶ್, ಚಂದ್ರಶೇಖರ ಕುಳಮರ್ವ ಮತ್ತಿತರರು ಹಾಜರಿದ್ದರು.
ಈ ಪೈಕಿ ದೂರದ ಕೊಪ್ಪಳದಿಂದ ಬಂದ ಶರತ್ ಹೆಗ್ಡೆ ಹಾಗೂ ಬೆಂಗಳೂರಿನಿಂದ ಸಭೆಗೆಂದೇ ಬಂದ ದೀಪಕ್ ನಾಯ್ಕ್, ಮಣಿಪಾಲದಿಂದ ಬಂದ ಬಾಲಕೃಷ್ಣ ಹೊಳ್ಳ ಅವರು ಗಮನ ಸೆಳೆದರು.
 ----------------------------------

PHOTO GALLERY
 









































-KM (ಪ್ರಧಾನ ಕಾರ್ಯದರ್ಶಿ, ಫೋಟೊ ಕೃಪೆ: ಮಾಮ್ ಸ್ನೇಹಿತರು)

Friday, 19 August 2016

MAAM 2015-16ನೇ ಸಾಲಿನ ಮಾಮ್ ಚಟುವಟಿಕೆಗಳ ವರದಿ


ಮಂಗಳೂರು ವಿ.ವಿ. ಎಂಸಿಜೆ ವಿಭಾಗದ ಗೌರವಾನ್ವಿತ ಅಧ್ಯಕ್ಷರೆ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಾಮ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರೇ,
ಎಲ್ಲರಿಗೂ ಶುಭ ಮುಂಜಾನೆ.

ಮಾಮ್ ಕಾರ್ಯಕಾರಿ ಸಮಿತಿ ಪರವಾಗಿ ನಾನು 2015 16ನೇ ಸಾಲಿನ ಮಾಮ್ ವಾರ್ಷಿಕ ಚಟುವಟಿಕೆಗಳ ವರದಿಯನ್ನು ನಿಮ್ಮ ಮುಂದಿಡಲು ಹರ್ಷ ವ್ಯಕ್ತಪಡಿಸುತ್ತೇನೆ.
ಕಳೆದ ಸಾಲಿನ ಆಗುಹೋಗುಗಳ ಮೇಲೆ ಕಣ್ಣಾಡಿಸುವ ಮೊದಲು ಮಾಮ್ ಹುಟ್ಟಿಕೊಂಡ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲು ಇಚ್ಚಿಸುತ್ತೇನೆ. ಮಂಗಳೂರು ವಿ.ವಿ.ಯ ಎಂಸಿಜೆ ವಿಭಾಗಕ್ಕೆ 25 ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಕೆಲವು ಮಂದಿ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಮಂಗಳೂರು ವಿ.ವಿ.ಯಲ್ಲಿ 2014ರ ಡಿಸೆಂಬರ್ 20ರಂದು ನಡೆಸಿದ ಎಂಸಿಜೆ 25 ಸ್ಮೇಹ ಸಮ್ಮಿಲನದ ಸಂದರ್ಭ ಮಾಮ್ ಸಂಘಟನೆಯನ್ನು ಸ್ಥಾಪಿಸಲಾಯಿತು. ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ ಅಥವಾ ಮಾಮ್ ಎಂದು ಸಂಸ್ಥೆಗೆ ಹೆಸರಿಡಲಾಯಿತು. ಸಂಘಟನೆಗೆ ಹಳೆ ವಿದ್ಯಾರ್ಥಿಗಳ ಕಡೆಯಿಂದ ಬಂದ ಅಭೂತಪೂರ್ವ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ನಡೆಸಲು ಮಂಗಳೂರು ಕೇಂದ್ರವಾಗಿಟ್ಟು ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿ ಚಟುವಟಿಕೆಗಳನ್ನು ಆರಂಭಿಸಲಾಯಿತು.

-ಮಾಮ್ ನ ಪ್ರಥಮ ವಾರ್ಷಿಕ ಮಹಾಸಭೆ ಅಥವಾ ಎಜಿಎಂ 2015ರ ಜುಲೈ 18ರಂದು ಇದೇ ಆಡ್ ಐಡಿಯಾ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಮಾಮ್ ನ 24 ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭ ಫ್ಲೋರಿನ್ ರೋಚ್ ಅಧ್ಯಕ್ಷತೆಯಲ್ಲಿ ನೂತನ ಸಮಿತಿಯನ್ನು ರಚಿಸಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ನಿರ್ಧರಿಸಲಾಯಿತು.

ಚಟುವಟಿಕೆಗಳು:

-ಕಳೆದ ವರ್ಷ 2015 ಆಗಸ್ಟ್ 8ರಂದು ಮಾಮ್ ಬೆಂಗಳೂರು ಘಟಕವನ್ನು ಸ್ಥಾಪಿಸಲಾಯಿತು. ಮಂಗಳೂರು ಮಾಮ್ ಘಟಕದ ಐವರು ಸದಸ್ಯರು ಬೆಂಗಳೂರಿಗೆ ತೆರಳಿ ಅಲ್ಲಿನ ಪ್ರೆಸ್ ಕ್ಲಬ್ ಆವರಣದಲ್ಲಿ ಒಟ್ಟು ಸೇರಿ ನೂತನ ಸದಸ್ಯರನ್ನು ತಂಡಕ್ಕೆ ಸೇರಿಸಿದ್ದು ಮಾತ್ರವಲ್ಲದೆ, ಆ ಭಾಗದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಪ್ರತ್ಯೇಕ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಬೆಂಗಳೂರು ಭಾಗದ ಹಳೆ ವಿದ್ಯಾರ್ಥಿಗಳು ಸುಮಾರು 25 ಮಂದಿ ಸಭೆಯಲ್ಲಿ ಹಾಜರಿದ್ದರು.

-ಮಾಮ್ ಸದಸ್ಯರ ಕೆಲಸ ಕಾರ್ಯಗಳಿಗೆ ಅಡ್ಡಿಯಾದಗ ಹಾಗೆ  ಸಂಘಟನೆಯ ಚಟುವಟಿಕೆಗಳ ಕುರಿತು ಚರ್ಚಿಸಲು ಹಾಗೂ ಮಾಹಿತಿಗಳ ವಿನಿಮಯದ ಉದ್ದೇಶದಿಂದ ಪ್ರತ್ಯೇಕವಾದ ಆರು ವಾಟ್ಸಪ್ ಗ್ರೂಪುಗಳನ್ನು ರೂಪಿಸಿ ಈ ಮೂಲಕ ಮಾಮ್ ಚಟುವಟಿಕೆಗಳ ಕುರಿತು ಮಾಹಿತಿಯ ಪ್ರಸಾರ, ಚರ್ಚೆಗಳು ನಡೆಯುತ್ತಿವೆ.

-ಮಾಮ್ ನಮಂಗಳೂರು ಬೆಂಗಳೂರು ಘಟಕದ ಸದಸ್ಯರು ಕಳೆದ ವರ್ಷ 2015 ಸೆಪ್ಟೆಂಬರ್ 11ರಂದು ಬೆಂಗಳೂರಿನಲ್ಲಿ ನಡೆದ ಸೈಬರ್ ಕ್ರೈಂ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಮ್ ಪ್ರತಿನಿಧಿಗಳು ವಿಚಾರ ಮಂಡನೆಯನ್ನೂ ಮಾಡಿದ್ದಾರೆ. ರೋಲ್ ಆಫ್ ಮೀಡಿಯಾ ಇನ್ ಪ್ರಿವೆಂಟಿಂಗ್ ಹ್ಯೂಮನ್ ಟ್ರಾಫಿಕಿಂಗ್ ವಿಚಾರದಲ್ಲಿ ಕಾರ್ಯಾಗಾರ ನಡೆದಿತ್ತು.

-ಕಳೆದ ವರ್ಷ 2015 ಆಗಸ್ಟ್ 7ರಂದು ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ ನಡೆದ ಮಾರ್ಕೆಟ್ ಕಮ್ಯೂನಿಕೇಶನ್ ಆಂಡ್ ಜಾಬ್ ಒಪೊರ್ಚುನಿಟೀಸ್ ಕುರಿತ ವಿಚಾರ ಸಂಕಿರಣದಲ್ಲಿ ಮಾಮ್ ಕಡೆಯಿಂದ ವೇಣು ಶರ್ಮ ಹಾಗೂ ವಿವೇಕ್ ನಂಬಿಯಾರ್ ಪಾಲ್ಗೊಂಡು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

-2015 ಅಕ್ಟೋಬರ್ 17ರಂದು ಉಜಿರೆ ಎಸ್ ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ರೈಟಿಂಗ್ ಫಾರ್ ರೇಡಿಯೋ ವಿಚಾರದಲ್ಲಿ ನಡೆದ ವಿಚಾರಸಂಕಿರಣದಲ್ಲಿ ಮಾಮ್ ಸಹಯೋಗ ನೀಡಿ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದಾರೆ.

-ಮಂಗಳೂರು ವಿ.ವಿ.ಯ ರಾಜ್ಯಶಾಸ್ತ್ರ ವಿಭಾಗದಲ್ಲಿ ನಡೆದ ವಿಚಾರಸಂಕಿರಣದಲ್ಲೂ ಮಾಮ್ ಸಹಯೋಗ ನೀಡಿದೆ.

-ಕಳೆದ ವರ್ಷ ಆಗಸ್ಟನಿಂದ ಮಾರ್ಚ್ ತನಕ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಮಾಮ್ ಸಹಯೋಗದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ 10 ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಆಗಸ್ಟ್ 22ರಂದು ಮಂಗಳೂರು ಮಿಲಾಗ್ರಿಸ್ ಕಾಜೇಲಿನಲ್ಲಿ ಸರಣಿ ಶಿಬಿರಗಳ ಉದ್ಘಾಟನೆ ನಡೆಯಿತು. ರಕ್ತದಾನ ಶಿಬಿರಗಳನ್ನು ಆಯೋಜಿಸುವಲ್ಲಿ ಇತರ ಸ್ಥಳೀಯ ಸಂಸ್ಥೆಗಳ ಸಹಯೋಗ ಪಡೆದು ಮಾಮ್ ಕಾರ್ಯಕ್ರಮಗಳನ್ನು ಸಂಘಟಿಸಿತ್ತು. ಮಾಮ್ ಸದಸ್ಯರಾದ ಸುರೇಶ್ ಡಿ ಪಳ್ಳಿ ಅವರಿಗೆ ಇದರ ಸಂಯೋಜನೆ ಹೊಣೆ ವಹಿಸಲಾಗಿತ್ತು. ಇದರ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ.

-ಮಂಗಳೂರಿನ ಮಿಲಾಗ್ರಿಸ್ ಕಾಲೇಜ್, ಮಂಗಳೂರು ಇನ್ ಸ್ಟಿಟ್ಯೂಟ ಆಫ್ ಫೈರ್ ಆಂಡ್ ಸೇಫ್ಟಿ ಎಂಜಿನಿಯರಿಂಗ್ ಕಾಲೇಜ್ ಪಂಪುವೆಲ್, ಬೆಸೆಂಟ್ ಕಾಲೇಜು ಮಂಗಳೂರು, ತೆಂಕಕಜೆಕಾರು ಸರ್ಕಾರಿ ಶಾಲೆ, ಲ್ಯಾಂಡ್ ಲಿಂಕ್ಸ್, ಕೂಡ್ಲು ಗೋಪಾಲಕೃಷ್ಣ ಹಿ.ಪ್ರ.ಶಾಲೆ ಕಾಸರಗೋಡು, ಲೇಡಿ ಗೋಶನ್ ನಲ್ಲಿ ಮೆಗಾ ಬ್ಲಡ್ ಡೊನೇಶನ್ ಕ್ಯಾಂಪ್, ಧವಳಾ ಕಾಲೇಜು ಮೂಡುಬಿದಿರೆ, ಕೆಂಜಾರು ಜೋಕಟ್ಟೆ ಹಾಗೂ ವಿ.ವಿ.ಕಾಲೇಜು ಮಂಗಳೂರು ಇಷ್ಟು ಕಡೆಗಳಲ್ಲಿ ರಕ್ತದಾನ ಶಿಬಿರ ನಡೆದಿದ್ದು ಸುಮಾರು 500 ಯೂನಿಟ್ ಗಳಷ್ಟು ರಕ್ತ ಸಂಗ್ರಹವಾಗಿದೆ.


-ಮಾಮ್ ನ ಮಂಗಳೂರು ಹಾಗೂ ಬೆಂಗಳೂರು ಘಟಕದ ಪದಾಧಿಕಾರಿಗಳು ಜೊತೆಗೆ ಕಳೆದ ವರ್ಷ ನವೆಂಬರ್ 25ರಂದು ಕೊಡಗಿನ ಬೆಟ್ಟತ್ತೂರು ಎಂಬಲ್ಲಿಗೆ ಪಿಕ್ ನಿಕ್ ತೆರಳಿದ್ದೆವು. ಅಲ್ಲಿನ ಮಾಮ್ ಹಳೆ ವಿದ್ಯಾರ್ಥಿ ಕಾರ್ಯಪ್ಪ ಅವರಿಗೆ ಸೇರಿದ ಹೋಂ ಸ್ಟೇನಲ್ಲಿ ರಾತ್ರಿಯೂ ತಂಗಿದ್ದು, ವರ್ಜಿನ್ ಹಿಲ್ಸ್ ಬೆಟ್ಟಕ್ಕೆ ಚಾರಣ ಮಾಡಿ ಖುಷಿ ಪಟ್ಟರು.

-ಮಾಮ್ ಬ್ಯಾಂಕ್ ವ್ಯವಹಾರಗಳನ್ನು ಹೊಂದಿರುವು ಕೊಡಿಯಾಲ್ ಬೈಲಿನ ಎಸ್ ಸಿಡಿಸಿಸಿ ಬ್ಯಾಂಕಿನಲ್ಲಿ ಈಗಾಗಲೇ ನಾವು ಎಸ್ ಬಿ ಖಾತೆ ಹೊಂದಿದ್ದೇವೆ. ಈ ಬ್ಯಾಂಕಿನಲ್ಲಿ ನಾವು ವಾರ್ಷಿಕ ದತ್ತಿನಿಧಿ ಬಹುಮಾನ ಯೋಜನೆಗಾಗಿ ಒಂದು ಲಕ್ಷ ರುಪಾಯಿಗಳು ಹಾಗೂ 1.25 ಲಕ್ಷ ರುಪಾಯಿಗಳ ಇನ್ನೊಂದು ಮೊತ್ತವನ್ನು ಪ್ರತ್ಯೇಕ ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಕಳೆದ ಮೇಯಲ್ಲಿ ಇರಿಸಿದ್ದೇವೆ. ಈ ಪೈಕಿ ಫಿಕ್ಸೆಡ್ ಡೆಪಾಸಿಟ್ ನಿಂದ ಬರುವ ಬಡ್ಡಿಯ ಮೊತ್ತವನ್ನು ವಾರ್ಷಿಕ ದತ್ತಿ ನಿಧಿ ಬಹುಮಾನ ನೀಡಲು ಬಳಸಲು ಉದ್ದೇಶಿಸಿದ್ದು, ಇದರ ರೂಪುರೇಷೆಯನ್ನು ಶರತ್ ಹೆಗ್ಡೆ ಕಡ್ತಲ ರೂಪಿಸಿ ಸಂಯೋಜಿಸಲಿದ್ದಾರೆ. ಈ ವರ್ಷ ನಾವು ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಈ ಬಹುಮಾನ ವಾರ್ಷಿಕವಾಗಿ ನೀಡಲಿದ್ದು, ಕಾಲೇಜುಗಳಿಗೆ ಮುಂಚಿತವಾಗಿ ಸುತ್ತೋಲೆ ಕಳುಹಿಸಲಿದ್ದೇವೆ.

-ಮಾಮ್ ಗೆ ತನ್ನದೇ ಆದ ವೆಬ್ ಸೈಟ್ ರೂಪಿಸುವ ಹೊಣೆಯನ್ನು ರೊನಾಲ್ಡ್ ಅನಿಲ್ ಫರ್ನಾಂಡಿಸ್ ಹಾಗೂ ವೇಣು ವಿನೋದ್ ಅವರು ವಹಿಸಿಕೊಂಡಿದ್ದು, ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿವೆ. ಶೀಘ್ರದಲ್ಲೇ ವೆಬ್ ಸೈಟ್ ಲಾಂಚ್ ಆಗಲಿದೆ.

-ಉಜಿರೆ ಎಸ್ ಡಿಎಂ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಹಾಗೂ ಪತ್ರಿಕೋದ್ಯಮ ವಿಭಾಗದ 30ನೇ ವರ್ಷ ತುಂಬಿದ ಸಂಭ್ರಮದಲ್ಲಿ ಮಾಮ್ ಸಹಯೋಗದಲ್ಲಿ ವರ್ಷಪೂರ್ತಿ ಸರಣಿ ಕಾರ್ಯಕ್ರಮಗಳನ್ನು ಪತ್ರಿಕೋದ್ಯಮ ವಿಭಾಗದೊಂದಿಗೆ ನಡೆಸುವ ಕುರಿತು ಚರ್ಚಿಸಲು ಮಾಮ್ ಪದಾಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿದ್ದರು. ಇದರ ಸಂಯೋಜನೆ ಹಾಗೂ ಫಾಲೋ ಅಪ್ ಜವಾಬ್ದಾರಿಯನ್ನು ಬಾಲಕೃಷ್ಣ ಹೊಳ್ಳ ಹಾಗೂ ಪರಶುರಾಮ ಕಾಮತ್ ವಹಿಸಿಕೊಂಡಿದ್ದಾರೆ.

-ವೇಣು ವಿನೋದ್ ಅವರು ಮಾಮ್ ಗೆ ಸುಂದರವಾಗ ಲೋಗೊ ಹಾಗೂ ಲೆಟರ್ ಹೆಡ್ ರೂಪಿಸಿಕೊಟ್ಟಿದ್ದು ಅವರ ಸಹಕಾರವನ್ನು ಸ್ಮರಿಸುತ್ತೇವೆ.

-ಕಳೆದ ಹಾಗೂ ಈ ವರ್ಷವಿಡೀ ಮಾಮ್ ಕಾರ್ಯಕಾರಿ ಸಮಿತಿ ಸದಸ್ಯರು ವಿವಿಧ ಸಭೆ, ಸಮಾಲೋಚನೆ, ನಿರ್ಧಾರಗಳನ್ನು ಕೈಗೊಳ್ಳಲು ಗೌರವಾಧ್ಯಕ್ಷ ವೇಣು ಶರ್ಮ ಅವರ ಆಡ್ ಐಡಿಯಾ ಕಚೇರಿಯನ್ನು ಬಳಸಿಕೊಂಡಿದ್ದೇವೆ. ನಮ್ಮ ಅಧಿಕೃತ ಕಚೇರಿ ವಿಳಾಸವೂ ಈ ಕಚೇರಿಯದ್ದೇ ಆಗಿದೆ. ಕಚೇರಿ ಒದಗಿಸಿದ್ದಲ್ಲದೆ, ಆತಿಥ್ಯ ಉಪಚಾರ ನೀಡಿದ ವೇಣು ಶರ್ಮ, ಅವರ ಸಿಬ್ಬಂದಿ ಸಂದೀಪ್ ಹಾಗೂ ಕುಟುಂಬದವರಿಗೆ ನಮ್ಮ ಧನ್ಯವಾದಗಳು.
-ರಕ್ತದಾನ ಶಿಬಿರ ಆಯೋಜಿಸುವಲ್ಲಿ ಸಹಯೋಗ ನೀಡಿದ ರೆಡ್ ಕ್ರಾಸ್ ಸೊಸೈಟಿ ಹಾಗೂ ಇತರ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಗೆ ಧನ್ಯವಾದಗಳು.
-ನಮ್ಮ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿ ಕಾರ್ಯಾಗಾರ, ವಿಚಾರಸಂಕಿರಣಗಳನ್ನು ಆಯೋಜಿಸಿದ ಶಿಕ್ಷಣ ಸಂಸ್ಥೆಗಳಿಗೂ ನಮ್ಮ ಧನ್ಯವಾದಗಳು.

-ಸಂಘಟನೆಯೊಂದಿಗಿರುವ ಮಾಮ್ ನ ಎಲ್ಲಾ ಗೌರವಾನ್ವಿತ ಸದಸ್ಯರು, ಎಂಸಿಜೆ ವಿಭಾಗ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳಿಗೂ ವಂದನೆಗಳು. ನಿಮ್ಮಿಂದ ಇನ್ನಷ್ಟು ಸಹಕಾರ, ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇವೆ.

ವಂದನೆಗಳು.
ಫ್ಲೋರಿನ್ ರೋಚ್
(ಅಧ್ಯಕ್ಷರು)
ಕೃಷ್ಣಮೋಹನ
(ಪ್ರಧಾನ ಕಾರ್ಯದರ್ಶಿ)






Thursday, 18 August 2016

MAAM BY LAWS

Registered under the Karnataka Societies Registration Act, 1960(Karnataka Act 17 of 1960) Registration No DKM –S79-2015-16

Memorandum, rules, regulations And Bye-Laws



1.   Name: Media Alumni Association of Mangalagangotri (MAAM) hereinafter referred to as Association or MAAM.

2.      The Registered office: MAAM having it’s register office at #237/24, 1st floor, Bharathi Nagar, Bejai, Mangalore -560004.

3.   Jurisdiction: The Association shall have jurisdiction all over the world wherever Mangalore University MCJ Alumni reside.

4.    Aim And Objectives
4.1       To encourage, foster and promote close relation between academy and its Alumni and among the Alumni themselves in the space of Media at large.
4.2       To provide complete support to the MCJ department that helps the students of media at Large.
4.3       To promote a spirit of co-operation and understanding among MAAM Members.
4.4       To ensure that programs are initiated and developed for the benefit of the Alumni and students of the MCJ in Mangalore University and Mangalore university students and people at Large.
4.5       To guide, assist, support the students of MCJ in getting internship and to help students in employment after completion of the 2 year course.
4.6       To establish and maintain a link with all the students of and with the community at large.
4.7       To participate and assist in the promotion of media research, international participation and support students for major higher education in media space.
4.8       The association to work as  industry academic interface
4.9       To create platform for the MAAM members in  media for their professional approach by effective programs
4.10    To organize program in the media space with other organizations and may be in association with MAA ( alumni association of Mangalore university)
4.11    To undertake activities of nation building including those of charitable nature.

5.                 MISSION:
5.1   The purpose of this organization shall be to promote and support the media Institutions wherever possible; also, to assist in the development and advancement of the Media department of Mangalore University.
5.2  The organization shall also support by providing the following:
a.              Input on future direction of the MCJ department in areas such as: new program development, alumni services and events to be offered, etc.
b.                 Networking opportunities to include alumni events that provide opportunity to meet with employers, industry professionals, etc.


6.    Rules and Regulations
6.1  Definition: "Association" means - Media Alumni Association of Mangalagangotri in short “MAAM’’.
6.2   The "General Body" means the General Body of the Association.
6.3   The "Executive Committee" means the Executive Committee of the Association.
6.4   Alumnus means an ex-student who has obtained a post graduate, PHD from the Department of MCJ, Mangalore University, Mangalagangotri, Mangalore.

7.   Eligibility:

7.1   All passing out from MCJ department of Mangalagangotri, Phd, M.Phil Scholars shall be eligible for the membership of the Association.  Only life members can be the office bearers.
7.2     Membership fees: Life Membership Rs.1000/- and annual membership is Rs 100/-.
7.3       Cessation of Membership: A member of the Association shall cease to be such a member if he/she resigns from his/her membership or is of unsound mind or is convicted by a court for any offence involving moral conductor on termination of the membership by the Executive Committee for compelling reasons.

8.      Organization of the Association
8.1    General Body-There shall be a General Body of the Association consisting of all members.
8.2    Executive Body-There shall be an Executive Committee to manage the affairs of the Association
8.3       Local Chapters-There may be Local Chapters of the Association in various cities in India and abroad. (below mentioned details)

9.       General Body
9.1       The General Body of the Association shall hold an Annual General Body Meeting at least once a year and not more that 18 months shall elapse between two successive Annual General Body Meetings.
9.2       A notice (Mail, Email) of clear 21 days convening an Annual General Meeting shall be given to the members and seven days clear notice for an emergency General Body shall be necessary.
9.3       A special general body meeting can be requisitioned by more than 50 percent of the valid members of the Union by giving 15 days clear notice in writing to the General Secretary to discuss the matter concerning the aims and objectives as enunciated in the Constitution It shall be mandatory on the part of the General Secretary to convene such mooting within two weeks of the receipt of the notice. If the General Decretory fails to convene the meeting, requisitionists themselves can call the meeting.
9.4     The General Secretary in consultation with the President may convene an emergent meeting of the General –Body to discuss any urgent matters.
9.5    Quorum for the Annual General Body Meeting of the Union shall be one fifth of the total membership. For Special and emergent meeting of the General Body quorum shall be one tenth of the membership.
9.6   If the one third members of the Union express in writing their lack of confidence in the President, the General Secretary or other office-bearers of the Executive Committee as a whole, an emergent meeting of the General Body shall be convened to discuss the matter. In case the no-confidence motion of which notice has been given and circulated to all members of the Union is passed by n two-thirds majority of those present at the meeting, the general body can elect new office-bearers or a new Executive Committee as the case may be, in the same meeting through the procedure it deems fit.
9.7   The Annual General body of the Union shall transact among others the following business.
9.7.1  To accept the minutes of the previous Annual General Body.
9.7.2  To consider and adopt the report and auditor balance sheet of the year,
9.7.3  To consider appeals,
9.7.4  To take stock of the work of the Union and devise plans and program for the future, (All the resolutions put to vote at the General Body shall be decided by a majority vote (unless otherwise provided) on a show of hands. In case of equality of vote, the President in Chair shall have the casting vote.)
9.7.5  To set guidelines for the Executive Committee so as to achieve the aims and objectives of the Association.
9.7.6  To approve the budget for the following year.
9.7.7  To appoint Auditors.
9.7.8  To appoint legal advisors, if any.
9.7.9  To honour the Jubilee Alumni and the distinguished Alumni.
9.7.10      To elect office bearers and members of the Executive Committee.
9.7.11      To transact any other business with the permission of the President in Chair.

10.      Executive Committee
10.1             President - 1
10.2            Vice President – 3 (Mangalore & Bangalore and Out station),
10.3            Organizing Secretary – 1
10.4            Secretaries  - 3 (Mangalore & Bangalore and Out station),
10.5            Treasurer – 1
10.6            Executive committee Members – 12
10.7            Immediate Past Secretary (ex-officio)
10.8            Program Co-ordinator – 1
10.9            Spokes Person – 1
10.10        Invites -  3
Chairman of MCJ Department and Two Students (one students each from 1st year and 2nd year)
10.11        Executive Committee Members - 12

11.     Election of the Executive Committee:
11.1    Returning officer for the elections will be appointed by the Executive Committee who will conduct the election process. The guidelines for conducting the election will be decided by the Executive Committee.
11.2  All office bearers and members of the Executive Committee shall be elected/ nominated from amongst the Members.
11.3    The Executive Committee nominate two members i.e. One Program coordinator and another one is Spokes Person.
11.4    In the eventuality of any seat left vacant, the Executive Committee will have the power to co-opt members to fill the vacancies.
11.5    The procedure for election of the office bearers of the Association shall be regulated according to the Bye-laws of the Association.
11.6    Normally no elected/ nominated office bearer shall hold office for more than three consecutive years except under exceptional circumstances approved by the Executive Committee.
11.7    The Executive Committee can also co opt a maximum of four members. It shall be responsible for establishing an agenda for each meeting of the Association, for working with the Secretary to revise the strategic plan and to develop an Annual Plan and Budget for the Association’s programs and activities, and such other duties as the Alumni Association may deem to be appropriate for the tenure of 2 years.

12.    Executive Committee Meeting
12.1    The Executive Committee will meet ordinarily every quarter, but the Secretary with the permission of President, can call an emergent meeting at any time.
12.2    A notice shall ordinarily be given to members for convening an emergent meeting.
12.3    The quorum for the Executive Committee meeting shall be seven. In case, there is no quorum, it shall be adjourned and reconvened after 15 minutes, the number of members present will form the quorum.
12.4    The Executive Committee shall have all the powers with regard to management and promotion of objectives of the Association according to directives, if any, of the General Body.
12.5    The Executive Committee shall frame, amend Bye-laws in accordance with Rules and Regulations, which shall be ratified by the General Body later on.
12.6    All office bearers shall normally hold office for Two year.
12.7    The Executive Committee shall manage the affairs of the Association by majority vote in the Committee Meeting provided that in case of tie, the President shall have the casting vote.

13.      Responsibilities and duties of the office bearers
13.1    President: The President will be ex-office of the Association. The President shall preside over all meetings of the Alumni Association including the annual general body meeting, shall oversee all operations and functions of the Association and shall perform all the duties commonly incident to the Office of the President and such other duties as the Alumni Association shall designate. He/She shall have all the powers for the management and promotion of the objectives of the association. He shall have emergency powers to make any decision in the interest of the Association and report to the Executive Committee later on
13.2    Vice Presidents:  In the absence or inability of the President the Vice President shall perform all of the duties of the President and when so acting shall have all of the powers of and be subject to all of the restrictions of the President. The Vice President shall have such other powers and perform such other duties as may from time to time be assigned to him or her by the President. Vice Presidents will work in specific programs and will build the organization. He/She shall render advice to the Executive Committee with regard to promotion of the objectives of the Association
13.3    Organizing Secretary: The Secretary shall keep the records of the Alumni Association and minutes of the Association meetings. He/She will call for meetings and will communicate the programs to all the office in charge and all members in general. The Organizing Secretary shall attend to all the activities as approved by the Executive Committee. The Organizing Secretary shall be responsible for carrying out all correspondence and preparation and distribution of all publications and souvenirs of the Association. After holding Annual General Body Meeting, the Organizing Secretary shall file thefollowing information with the Registrar of societies:
A.  List of names addresses and occupation of the members of the
B.  Executive Committee
C.  An annual report of the previous year.
D.  Certified copies of the balance sheet and the auditor’s report.
13.4    Secretary Bangalore & Mangalore & Outstation: (a) The Secretary shall assist the organizing Secretary in the management of the activities of the Association, (b) The Secretary shall act as the organizing Secretary, in the absence of the Secretary
13.5    Treasurer: The Treasurer shall disburse Alumni funds only under the direction of the Alumni Committee. These disbursements shall be made by cheque and signed by any two from amongst the President, Secretary and Treasurer. Treasurer will operate the funds of the Association, in subject to general approval of the Executive Committee and present a financial report at each regular meeting. Treasurer shall keep the books of accounts of the Association. He will collect all dues and claims on behalf of the Association and assist the President and Secretary in ensuring budgetary grants are correctly utilized. In addition, he will liaise with the bankers and the Auditors of the Association.
13.6    Program Coordinators: Nominated by the core team based on the program initiated. He should be the member of MAAM or student studying in MCJ dept, Mangalagangothri.
13.7    Spokes Person: Nominated by the Core team as and when required. He should be one among the Executive committee member.
13.8    Special invitees: Special invitees are Student’s members and MCJ Department chairman. They are co-ordinate relationship with alumina - present students, Mangalore University and MCJ Department.

14.  The terms of office
The terms of office are specified below and shall begin in the month of April and end in the month of March. The terms of office
14.1    President – 2 year
14.2    Honorary president – Immediate Past President of association
14.3    Vice Presidents – 2 years
14.4    Organizing Secretary– 2 years
14.5    Secretaries- 2 years
14.6    Treasurer –2 years
14.7    Members – 2 years
The President once elected is not being eligible to contest again for the next one tenure. Remaining office barriers are contest for next tenure.

15.     Amendments: The Alumni Association shall have the power to make, amend and repeal the By- Laws of the Association at any regular General body meeting of the Association or at any special meeting called for that purpose.  Any provision of this constitution can be amended by a two-thirds majority of those alumni members present and voting in General Body Meeting. Notice of the proposed amendments shall be furnished to the Secretary at least 30 days before the date at which it is proposed to consider the amendments. Such a notice will contain details of the Rule (s) desired to be amended, the proposed text of the changed rule and the reason for seeking the amendment. The latter is meant as a guide for any deliberation at the General Body Meeting. Upon the receipt of a requisition for amendment the Secretary shall issue notice to every member for the meeting, at least 21 days before the scheduled date. Mandate for amendments can be sought by circulation or e-mode also in the eventuality of non availability of sufficient members in GBM. Final   approval of the amendment shall be obtained from the Chief Patron and the President. However the Chief Patron has the power to veto any amendment which he feels is not conducive for the smooth functioning of the association. Bye laws will be framed by the Executive Committee and can be amended by the Executive Committee in special case.

16.    Finances and Accounts
16.1    The Association shall raise funds for pursuing the objectives of the Association through:
a.    Subscriptions from the members - The rate of subscription shall be governed by the Bye-Laws of the Association. The membership fee from the passing out students will be collected by the association.
b.    Money donated by the members.
c.    Any other source approved by the Executive Committee
16.2    The accounts of the Association shall be maintained in any scheduled Bank at Mangalore into which all subscriptions, donations and other income shall be credited
16.3    Financial year of the Association shall be from April 1st to March 31st of the following year.
16.4    The funds of the Association may be invested in Reputed Mutual Funds and other financial instruments currently in vogue, Government Securities, Bonds and Debentures of reputed public companies, Schemes of Unit Trust of India and Banks.
16.5    The services of a reputed investment advisor may be engaged for this purpose on suitable terms.
16.6    Withdrawals from the invested funds shall be made only with the approval of the Executive Committee to be ratified by the General Body later on.
16.7    STRATEGIC PLAN AND BUDGET: The Executive Committee and the Alumni Coordinator shall jointly prepare a Strategic Plan defining the two-year strategic goals and priorities for the Association. In addition, the Executive Committee and the Alumni Coordinator shall prepare an Annual Plan for alumni programs and activities, and shall jointly develop a budget that allocates appropriate resources to support the Plan. The Strategic Plan and the Annual Plan and Budget shall be reviewed annually and voted upon by the entire Alumni Association and the vote and recommendations of the Alumni Association shall be communicated to the Chairman of the Institution.

17.           Financial powers of the Secretary: For non-budgeted items, the financial powers of the secretary shall be limited to Rs.15000.00 subject to the approval of President/Working President.

18.  Audit of Accounts: The accounts of the Association shall be audited once a year by a Chartered Accountant to be appointed by the General Body.

19.   Suit and proceedings by and against the Association. The Association may sue or be sued in the name of Secretary.
19.1    No suits or Proceedings shall fail by reason of any vacancy or change in the holder of office of the Secretary.
19.2    Every decree or order against the Association in any suit or proceeding shall be executable against the property of the Association and not against the persons or the property of the President, Organizing Secretary or any office bearer.
19.3    Nothing herein shall exempt the President, Organizing Secretary or other office bearers of the Association from any criminal liability under the act or entitle him/her to claim any contribution from the property of the Association in respect of any claim paid by him on conviction by the criminal court.
19.4    No member of the Association may be sued or prosecuted by the Association except for any injury or loss damage, detention or destruction of any property of the Association.


20.    Records of the Association:
The following records shall be maintained in the office of the Association:
20.1    Roll of Membership.
20.2    Minutes of the Executive Committee Meetings.
20.3    Minutes of the General Body Meetings.
20.4    Stock Register of non-consumable and consumable items.
20.5    Cash Book and Ledger.
20.6    Receipts and vouchers.
20.7     All publications, reports and souvenirs of the Association.
20.8     All documents as required by law under Societies Regulation Act 1860
20.9     Any other relevant record.
20.10                These records shall include details of all sums of money received and the sources thereof, and all the sums of money spent and the purpose.
20.11   Every member of the General Body shall have the right of inspection of records of the Association during the office hours.
20.12    The weeding out of the archival records will be done in accordance of the rules of the Institute.
21.   Ad hoc Committees:
The Alumni Association shall have the power to create such committees with powers and duties as the Alumni Association may prescribe. This committee located in Bangalore or Mangalore will work as ONE TEAM

22.  Local Chapters
22.1    The Local Chapters may elect President and Secretary to manage the affairs of the Chapter. A meeting of all members of the chapter must be convened at least once a year.
22.2    The Secretary should furnish the names and addresses of the office bearers and a list of members of the Local chapter to the Honorary Secretary once a year.
22.3    The Local Chapters may raise funds through suitable rate of subscription from the members.  The Local Chapters will receive a copy of the Annual General Body Meeting report and other publications of the Association.
23.     Winding up of Association: The winding up of the Association shall be carried out as per section 13 & 14 of the societies Regulation Act 21 of 1860.