Saturday, 20 August 2016

MAAM second AGM Report held on 20th AUGUST 2016


ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ MAAM) ಇದರ ಎರಡನೇ ವಾರ್ಷಿಕ ಮಹಾಸಭೆ (AGM) ಶನಿವಾರ ಪೂರ್ವಾಹ್ನ ಮಂಗಳೂರಿನ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ಸಂಪನ್ನಗೊಂಡಿತು.

-ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
-ಮಂಗಳೂರು ವಿ.ವಿ. ಎಂಸಿಜೆ ವಿಭಾಗ ಪ್ರತಿನಿಧಿಯಾಗಿ ಪ್ರೊ.ಜಿ.ಪಿ.ಶಿವರಾಂ ಹಾಗೂ ಬೆಂಗಳೂರು ಘಟಕದ ಪ್ರತಿನಿಧಿಯಾಗಿ ದೀಪಕ್ ನಾಯ್ಕ್ ಪಾಲ್ಗೊಂಡಿದ್ದರು.
-ಇವರಲ್ಲದೆ ಮಾಮ್ ಕಾರ್ಯಕಾರಿ ಸಮಿತಿ ಹಾಗೂ ಇತರ ಸದಸ್ಯರು ಸೇರಿದಂತೆ 20 ಮಂದಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.


............................
-ಮಾಮ್ ಕಾರ್ಯದರ್ಶಿ ವೇಣು ವಿನೋದ್ ಸ್ವಾಗತಿಸಿದರು.
-ಅಧ್ಯಕ್ಷೆ ಫ್ಲೋರಿನ್ ರೋಚ್ ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು.
 (ಈ ವರದಿಯ ಪೂರ್ಣ ಪಾಠವನ್ನು ನೀವು ನಮ್ಮ ಬ್ಲಾಗಿನ ಈ ಹಿಂದಿನ ಪೋಸ್ಟಿನಲ್ಲಿ ನೋಡಬಹುದು)
2015-16 MAAM report in kannada uploaded in our blog:
please click following link:

http://maammangalore.blogspot.in/2016/08/maam-2015-16.html

 
-ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು ಮಾಮ್ ಆರಂಭವಾದಾಗಿನಿಂದ ಈ ವರೆಗಿನ ಲೆಕ್ಕಪತ್ರದ ವಿವರಗಳನ್ನು ಮಂಡಿಸಿದರು. ಆಡಿಟ್ ಆದ ಲೆಕ್ಕಪತ್ರಕ್ಕೆ ಸಭೆ ಅಂಗೀಕಾರ ಸೂಚಿಸುವ ನಿರ್ಣಯ ಕೈಗೊಂಡಿತು
 (ಈ ಲೆಕ್ಕಪತ್ರದ ಮುಖ್ಯಾಂಶಗಳನ್ನು ನಮ್ಮ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು)
-ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಲಾಪ ನಿರ್ವಹಿಸಿದರು.
-ಸಭೆಯ ಬಳಿಕ ಕುಂಟಿಕಾನ ಬಿಎಂಎಸ್ ಹೊಟೇಲಿನಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
-ಆರು ಮಂದಿ ಸಂಘದ ಆಜೀವ ಸದಸ್ಯತ್ವ ಸ್ವೀಕರಿಸಿದರು. ಓರ್ವರು ವಾರ್ಷಿಕ ಸದಸ್ಯತ್ವ ಪಡೆದರು.
..................................

ಆಗಸ್ಟ್ 20ರಂದು ನಡೆದ ಈ ವಾರ್ಷಿಕ ಮಹಾಸಭೆಯ ನಿರ್ಣಯಗಳನ್ನು (ಮಿನಿಟ್ಸ್) ಯಥಾವತ್ತಾಗಿ ಪ್ರತ್ಯೇಕ ಪೋಸ್ಟ್ ರೂಪದಲ್ಲಿ ಈ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು.
ಸಭೆಯ ಮುಖ್ಯ ನಿರ್ಣಯಗಳು ಈ ಕೆಳಗಿನಂತಿವೆ:


-ಮಾಮ್ ದತ್ತಿನಿಧಿ ರೂಪದಲ್ಲಿ ರು.1 ಲಕ್ಷಗಳನ್ನು ನಿರಖು ಠೇವಣಿಯಾಗಿ ಇರಿಸಿದ್ದು, ಇದರ ಬಡ್ಡಿಯ ಹಣ ಹಾಗೂ ಪ್ರಾಯೋಜಕರ ನೆರವಿನಿಂದ ನೀಡಲಾಗುವ ದತ್ತಿನಿಧಿ ಪುರಸ್ಕಾರಕ್ಕೆ ಮಾಮ್ ಇನ್ ಸ್ಪೈರ್ ಅವಾರ್ಡ್ ಎಂದು ಹೆಸರಿಡಲು ನಿರ್ಧಾರಿಸಲಾಯಿತು.
-ಮಾಮ್ ಸಂಘಟನೆಯು ದತ್ತಿ ನಿಧಿ ರೂಪದಲ್ಲಿ ಪ್ರತಿ ವರ್ಷ ಮಂಗಳೂರು, ಉಡುಪಿ ಕೊಡಗು ಭಾಗದ ಇಬ್ಬರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಿದೆ. ಮಂಗಳೂರು ವಿ.ವಿ. ಸೇರಿದಂತೆ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಂದು ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ಪ್ರಶಸ್ತಿ ನೀಡಲಾಗುವುದು. ಇದಕ್ಕೋಸ್ಕರ ವಿದ್ಯಾರ್ಥಿಗಳ ಬರವಣಿಗೆ, ಸಾಂಸ್ಕೃತಿಕ ಸಾಧನೆ, ಕಲಿಕೆಯಲ್ಲಿ ಸಾಧನೆ ಸೇರಿದಂತೆ ಸರ್ವತೋಮುಖ ಪ್ರತಿಭೆಯನ್ನು ಪ್ರಶಸ್ತಿ ಆಯ್ಕೆ ಸಮಿತಿ ಗುರುತಿಸಿ ನಗದು ಪುರಸ್ಕಾರ ನೀಡಲಿದೆ. ಈ ಕುರಿತು ಅಗತ್ಯ ಸುತ್ತೋಲೆಗಳನ್ನು ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಲು ನಿರ್ಧರಿಸಲಾಯಿತು. ಈ ಪ್ರಶಸ್ತಿಯ ಪ್ರಕ್ರಿಯೆಗಳನ್ನು ಪೂರೈಸಲು ಪ್ರತ್ಯೇಕ ಕಾರ್ಯಕಾರಿ ಸಮಿತಿ ರಚಿಸಲಾಗುವುದು, ಇದರ ನೇತೃತ್ವವನ್ನು ಉಪಾಧ್ಯಕ್ಷ ಶರತ್ ಹೆಗ್ಡೆ ಕಡ್ತಲ ವಹಿಸುವರು. ಈ ಕಾರ್ಯಕಾರಿ ಸಮಿತಿಯು ಪ್ರಶಸ್ತಿ ಕುರಿತ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಭೆ ಅಂಗೀಕಾರ ಸೂಚಿಸಿತು.

-ಮಂಗಳೂರು ವಿ.ವಿ.ಯಲ್ಲಿ 1988ರಿಂದ ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪಡೆದು ಹೋಗಿದ್ದಾರೆ. ಆದರೆ ಮಾಮ್ ಸಂಘಟನೆಯ ಸದಸ್ಯರಾಗಿರುವವರು ಹಾಗೂ ಸಂಪರ್ಕಕ್ಕೆ ಸಿಕ್ಕಿರುವ ಸಂಖ್ಯೆ ತುಂಬಾ ಕಡಿಮೆ. ಈ ಹಿನ್ನೆಲೆಯಲ್ಲಿ ಎಂಸಿಜೆ ವಿಭಾಗ ಸಹಾಯದಿಂದ ಹಳೆ ವಿದ್ಯಾರ್ಥಿಗಳ ವಿಳಾಸ, ಸಂಪರ್ಕ ಸಂಖ್ಯೆಗಳನ್ನು ಪತ್ತೆಹಚ್ಚಿ ಪಟ್ಟಿ ತಯಾರಿಸುವುದು, ಹಾಗೂ ಸದಸ್ಯತ್ವ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಯಿತು.

-ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಹಾಗೂ ವೇಣುವಿನೋದ್ ನೇತೃತ್ವದಲ್ಲಿ ಮಾಮ್ ಗೆ ಸ್ವಂತ ವೆಬ್ ಸೈಟ್ ರೂಪಿಸುವ ಕಾರ್ಯಕ್ಕೆ ಚಾಲನೆ ದೊರಕಿದ್ದು, ತಿಂಗಳೊಳಗೆ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ. ಈ ವೆಬ್ ಸೈಟ್ ಸಹಾಯದಿಂದ ಹಳೆ ವಿದ್ಯಾರ್ಥಿಗಳ ಸಂಘಟನೆ ಹಾಗೂ ಸಂಪರ್ಕಕ್ಕೆ ನಿರ್ಧರಿಸಲಾಯಿತು.

-ಈಗಾಗಲೇ ಮಾಮ್ ಬೆಂಗಳೂರು ಘಟಕವನ್ನು ಕಳೆದ ವರ್ಷ ಅಸ್ತಿತ್ವಕ್ಕೆ ತರಲಾಗಿದೆ. ಇದರ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಲು ಅಲ್ಲಿನ ಪ್ರತಿನಿಧಿ ದೀಪಕ್ ನಾಯ್ಕ್ ನೇತೃತ್ವದಲ್ಲಿ ಶೀಘ್ರದಲ್ಲಿ ಸಭೆ ನಡೆಸಲು ನಿರ್ಧಾರ. ಮಂಗಳೂರು ಘಟಕದ ಪ್ರತಿನಿಧಿಗಳು ಬೆಂಗಳೂರಿಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಲು ತೀರ್ಮಾನ.

-ಮಂಗಳೂರಿನ ಎರಡು ಕಾಲೇಜುಗಳ ಸಹಯೋಗದಲ್ಲಿ ವಿಶಿಷ್ಟವಾದ ಎರಡು ಕಾರ್ಯಕ್ರಮಗಳನ್ನು ನಡೆಸಲು ಸಭೆ ಅಂಗೀಕಾರ ನೀಡಿತು.

-ಮಂಗಳೂರು ಎಂಸಿಜೆ ವಿಭಾಗದಲ್ಲಿ ವರ್ಷಪೂರ್ತಿ ಮಾಮ್ ಸಂಪನ್ಮೂಲ ವ್ಯಕ್ತಿಗಳ ಸಹಯೋಗದಲ್ಲಿ ನಿರಂತರ ಕಾರ್ಯಾಗಾರಗಳನ್ನು  ನಡೆಸುವ ಕುರಿತು ಪ್ರೊ.ಜಿ.ಪಿ.ಶಿವರಾಂ ಅವರು ಸಮ್ಮತಿ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಕಾರ್ಯಕ್ರಮಗಳನ್ನು ನಡೆಸಲು ನಿರ್ಧಾರ.

-ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್ (MAA) ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲು ಸಭೆ ಅಂಗೀಕಾರ.

-ರು.5000 ಸಾವಿರ ವರೆಗಿನ ನಗದನ್ನು ಕೋಶಾಧಿಕಾರಿ ಇರಿಸಿಕೊಂಡು ಸಣ್ಣಪುಟ್ಟ ಖರ್ಚುಗಳನ್ನು ನಗದು ರೂಪದಲ್ಲಿ ಹಾಗೂ ರು.1000ಕ್ಕಿಂತ ಮೇಲ್ಪಟ್ಟ ಪಾವತಿಗಳನ್ನು ಚೆಕ್ ರೂಪದಲ್ಲಿ ಮಾತ್ರ ಮಾಡಲು ಸಭೆ ನಿರ್ಧರಿಸಿತು. ಎಲ್ಲಾ ಪಾವತಿ, ಸ್ವೀಕೃತಿ ವ್ಯವಹಾರಗಳು ಬ್ಯಾಂಕ್ ಮೂಲಕವೇ ನಡೆಯಲಿದೆ.

-ಸದಸ್ಯತ್ವ ಶುಲ್ಕವನ್ನು ಯಾವುದೇ ಖರ್ಚಿಗೆ ಬಳಸದಿರಲು ಹಾಗೂ ಸದಸ್ಯತ್ವ ಶುಲ್ಕದ ಬಡ್ಡಿ ಹಣವನ್ನು ಮಾತ್ರ ಉಳಿತಾಯ ಖಾತೆ ಮೂಲಕ ಬಳಸಿಕೊಳ್ಳಲು ಸಭೆ ನಿರ್ಧರಿಸಿತು.
--------------------------------
ಸಭೆಯಲ್ಲಿ ಗೌರವಾಧ್ಯಕ್ಷ ವೇಣು ಶರ್ಮ, ಉಪಾಧ್ಯಕ್ಷ  ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಕಾರ್ಯಕ್ರಮ ಸಂಘಟಕ ಕೃಷ್ಣ ಕಿಶೋರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಹರೀಶ್ ಕುಲ್ಕುಂದ, ಹರೀಶ್ ಮೋಟುಕಾನ, ಸುರೇಶ್ ಡಿ.ಪಳ್ಳಿ, ಬಾಲಕೃಷ್ಣ ಹೊಳ್ಳ, ಸದಸ್ಯರಾದ ಗುರುರಾಜ್ ಪಣಿಯಾಡಿ, ವಸಂತ ಕೊಣಾಜೆ, ಮೋಹನ್, ಧೀರಜ್, ಪ್ರಶಾಂತ್ ಸುವರ್ಣ, ಕೆವಿನ್ ಮೆಂಡೋನ್ಸಾ, ಚೈತ್ರೇಶ್, ಚಂದ್ರಶೇಖರ ಕುಳಮರ್ವ ಮತ್ತಿತರರು ಹಾಜರಿದ್ದರು.
ಈ ಪೈಕಿ ದೂರದ ಕೊಪ್ಪಳದಿಂದ ಬಂದ ಶರತ್ ಹೆಗ್ಡೆ ಹಾಗೂ ಬೆಂಗಳೂರಿನಿಂದ ಸಭೆಗೆಂದೇ ಬಂದ ದೀಪಕ್ ನಾಯ್ಕ್, ಮಣಿಪಾಲದಿಂದ ಬಂದ ಬಾಲಕೃಷ್ಣ ಹೊಳ್ಳ ಅವರು ಗಮನ ಸೆಳೆದರು.
 ----------------------------------

PHOTO GALLERY
 









































-KM (ಪ್ರಧಾನ ಕಾರ್ಯದರ್ಶಿ, ಫೋಟೊ ಕೃಪೆ: ಮಾಮ್ ಸ್ನೇಹಿತರು)

1 comment: