ಮಂಗಳೂರು ವಿ.ವಿ. ಎಂಸಿಜೆ ವಿಭಾಗದ ಗೌರವಾನ್ವಿತ ಅಧ್ಯಕ್ಷರೆ, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ
ಮಾಮ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರೇ,
ಎಲ್ಲರಿಗೂ ಶುಭ ಮುಂಜಾನೆ.
ಮಾಮ್ ಕಾರ್ಯಕಾರಿ ಸಮಿತಿ ಪರವಾಗಿ ನಾನು 2015 16ನೇ ಸಾಲಿನ ಮಾಮ್
ವಾರ್ಷಿಕ ಚಟುವಟಿಕೆಗಳ ವರದಿಯನ್ನು ನಿಮ್ಮ ಮುಂದಿಡಲು ಹರ್ಷ ವ್ಯಕ್ತಪಡಿಸುತ್ತೇನೆ.
ಕಳೆದ ಸಾಲಿನ ಆಗುಹೋಗುಗಳ ಮೇಲೆ ಕಣ್ಣಾಡಿಸುವ ಮೊದಲು ಮಾಮ್
ಹುಟ್ಟಿಕೊಂಡ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲು ಇಚ್ಚಿಸುತ್ತೇನೆ. ಮಂಗಳೂರು ವಿ.ವಿ.ಯ ಎಂಸಿಜೆ
ವಿಭಾಗಕ್ಕೆ 25 ವರ್ಷ ಪೂರ್ತಿಗೊಂಡ
ಹಿನ್ನೆಲೆಯಲ್ಲಿ ಕೆಲವು ಮಂದಿ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಮಂಗಳೂರು ವಿ.ವಿ.ಯಲ್ಲಿ 2014ರ ಡಿಸೆಂಬರ್ 20ರಂದು ನಡೆಸಿದ
ಎಂಸಿಜೆ 25 ಸ್ಮೇಹ ಸಮ್ಮಿಲನದ
ಸಂದರ್ಭ ಮಾಮ್ ಸಂಘಟನೆಯನ್ನು ಸ್ಥಾಪಿಸಲಾಯಿತು. ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್
ಮಂಗಳಗಂಗೋತ್ರಿ ಅಥವಾ ಮಾಮ್ ಎಂದು ಸಂಸ್ಥೆಗೆ ಹೆಸರಿಡಲಾಯಿತು. ಸಂಘಟನೆಗೆ ಹಳೆ ವಿದ್ಯಾರ್ಥಿಗಳ
ಕಡೆಯಿಂದ ಬಂದ ಅಭೂತಪೂರ್ವ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಸಂಘಟನೆಯ ಚಟುವಟಿಕೆಗಳನ್ನು
ಕ್ರಮಬದ್ಧವಾಗಿ ನಡೆಸಲು ಮಂಗಳೂರು ಕೇಂದ್ರವಾಗಿಟ್ಟು ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿ
ಚಟುವಟಿಕೆಗಳನ್ನು ಆರಂಭಿಸಲಾಯಿತು.
-ಮಾಮ್ ನ ಪ್ರಥಮ
ವಾರ್ಷಿಕ ಮಹಾಸಭೆ ಅಥವಾ ಎಜಿಎಂ 2015ರ ಜುಲೈ 18ರಂದು ಇದೇ ಆಡ್ ಐಡಿಯಾ ಕಚೇರಿಯಲ್ಲಿ ನಡೆಯಿತು. ಈ
ಸಭೆಯಲ್ಲಿ ಮಾಮ್ ನ 24 ಸದಸ್ಯರು
ಪಾಲ್ಗೊಂಡಿದ್ದರು. ಈ ಸಂದರ್ಭ ಫ್ಲೋರಿನ್ ರೋಚ್ ಅಧ್ಯಕ್ಷತೆಯಲ್ಲಿ ನೂತನ ಸಮಿತಿಯನ್ನು ರಚಿಸಿ
ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ನಿರ್ಧರಿಸಲಾಯಿತು.
ಚಟುವಟಿಕೆಗಳು:
-ಕಳೆದ ವರ್ಷ 2015 ಆಗಸ್ಟ್ 8ರಂದು ಮಾಮ್
ಬೆಂಗಳೂರು ಘಟಕವನ್ನು ಸ್ಥಾಪಿಸಲಾಯಿತು. ಮಂಗಳೂರು ಮಾಮ್ ಘಟಕದ ಐವರು ಸದಸ್ಯರು ಬೆಂಗಳೂರಿಗೆ
ತೆರಳಿ ಅಲ್ಲಿನ ಪ್ರೆಸ್ ಕ್ಲಬ್ ಆವರಣದಲ್ಲಿ ಒಟ್ಟು ಸೇರಿ ನೂತನ ಸದಸ್ಯರನ್ನು ತಂಡಕ್ಕೆ
ಸೇರಿಸಿದ್ದು ಮಾತ್ರವಲ್ಲದೆ, ಆ ಭಾಗದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಪ್ರತ್ಯೇಕ ಕಾರ್ಯಕಾರಿ
ಸಮಿತಿಯನ್ನು ರಚಿಸಲಾಯಿತು. ಬೆಂಗಳೂರು ಭಾಗದ ಹಳೆ ವಿದ್ಯಾರ್ಥಿಗಳು ಸುಮಾರು 25 ಮಂದಿ ಸಭೆಯಲ್ಲಿ
ಹಾಜರಿದ್ದರು.
-ಮಾಮ್ ಸದಸ್ಯರ ಕೆಲಸ
ಕಾರ್ಯಗಳಿಗೆ ಅಡ್ಡಿಯಾದಗ ಹಾಗೆ ಸಂಘಟನೆಯ
ಚಟುವಟಿಕೆಗಳ ಕುರಿತು ಚರ್ಚಿಸಲು ಹಾಗೂ ಮಾಹಿತಿಗಳ ವಿನಿಮಯದ ಉದ್ದೇಶದಿಂದ ಪ್ರತ್ಯೇಕವಾದ ಆರು
ವಾಟ್ಸಪ್ ಗ್ರೂಪುಗಳನ್ನು ರೂಪಿಸಿ ಈ ಮೂಲಕ ಮಾಮ್ ಚಟುವಟಿಕೆಗಳ ಕುರಿತು ಮಾಹಿತಿಯ ಪ್ರಸಾರ, ಚರ್ಚೆಗಳು
ನಡೆಯುತ್ತಿವೆ.
-ಮಾಮ್ ನಮಂಗಳೂರು
ಬೆಂಗಳೂರು ಘಟಕದ ಸದಸ್ಯರು ಕಳೆದ ವರ್ಷ 2015 ಸೆಪ್ಟೆಂಬರ್ 11ರಂದು
ಬೆಂಗಳೂರಿನಲ್ಲಿ ನಡೆದ ಸೈಬರ್ ಕ್ರೈಂ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಈ
ಕಾರ್ಯಕ್ರಮದಲ್ಲಿ ಮಾಮ್ ಪ್ರತಿನಿಧಿಗಳು ವಿಚಾರ ಮಂಡನೆಯನ್ನೂ ಮಾಡಿದ್ದಾರೆ. ರೋಲ್ ಆಫ್ ಮೀಡಿಯಾ
ಇನ್ ಪ್ರಿವೆಂಟಿಂಗ್ ಹ್ಯೂಮನ್ ಟ್ರಾಫಿಕಿಂಗ್ ವಿಚಾರದಲ್ಲಿ ಕಾರ್ಯಾಗಾರ ನಡೆದಿತ್ತು.
-ಕಳೆದ ವರ್ಷ 2015 ಆಗಸ್ಟ್ 7ರಂದು ಮಂಗಳೂರಿನ
ಬೆಸೆಂಟ್ ಕಾಲೇಜಿನಲ್ಲಿ ನಡೆದ ಮಾರ್ಕೆಟ್ ಕಮ್ಯೂನಿಕೇಶನ್ ಆಂಡ್ ಜಾಬ್ ಒಪೊರ್ಚುನಿಟೀಸ್ ಕುರಿತ
ವಿಚಾರ ಸಂಕಿರಣದಲ್ಲಿ ಮಾಮ್ ಕಡೆಯಿಂದ ವೇಣು ಶರ್ಮ ಹಾಗೂ ವಿವೇಕ್ ನಂಬಿಯಾರ್ ಪಾಲ್ಗೊಂಡು
ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
-2015 ಅಕ್ಟೋಬರ್ 17ರಂದು ಉಜಿರೆ ಎಸ್
ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ರೈಟಿಂಗ್ ಫಾರ್ ರೇಡಿಯೋ ವಿಚಾರದಲ್ಲಿ ನಡೆದ
ವಿಚಾರಸಂಕಿರಣದಲ್ಲಿ ಮಾಮ್ ಸಹಯೋಗ ನೀಡಿ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದಾರೆ.
-ಮಂಗಳೂರು ವಿ.ವಿ.ಯ
ರಾಜ್ಯಶಾಸ್ತ್ರ ವಿಭಾಗದಲ್ಲಿ ನಡೆದ ವಿಚಾರಸಂಕಿರಣದಲ್ಲೂ ಮಾಮ್ ಸಹಯೋಗ ನೀಡಿದೆ.
-ಕಳೆದ ವರ್ಷ
ಆಗಸ್ಟನಿಂದ ಮಾರ್ಚ್ ತನಕ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಮಾಮ್ ಸಹಯೋಗದಲ್ಲಿ ದಕ್ಷಿಣ
ಕನ್ನಡ, ಉಡುಪಿ, ಕಾಸರಗೋಡು
ಜಿಲ್ಲೆಗಳ 10 ಕಡೆಗಳಲ್ಲಿ
ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಆಗಸ್ಟ್ 22ರಂದು ಮಂಗಳೂರು
ಮಿಲಾಗ್ರಿಸ್ ಕಾಜೇಲಿನಲ್ಲಿ ಸರಣಿ ಶಿಬಿರಗಳ ಉದ್ಘಾಟನೆ ನಡೆಯಿತು. ರಕ್ತದಾನ ಶಿಬಿರಗಳನ್ನು ಆಯೋಜಿಸುವಲ್ಲಿ
ಇತರ ಸ್ಥಳೀಯ ಸಂಸ್ಥೆಗಳ ಸಹಯೋಗ ಪಡೆದು ಮಾಮ್ ಕಾರ್ಯಕ್ರಮಗಳನ್ನು ಸಂಘಟಿಸಿತ್ತು. ಮಾಮ್ ಸದಸ್ಯರಾದ
ಸುರೇಶ್ ಡಿ ಪಳ್ಳಿ ಅವರಿಗೆ ಇದರ ಸಂಯೋಜನೆ ಹೊಣೆ ವಹಿಸಲಾಗಿತ್ತು. ಇದರ ಪದಾಧಿಕಾರಿಗಳು ಸಹಕಾರ
ನೀಡಿದ್ದಾರೆ.
-ಮಂಗಳೂರಿನ
ಮಿಲಾಗ್ರಿಸ್ ಕಾಲೇಜ್,
ಮಂಗಳೂರು ಇನ್ ಸ್ಟಿಟ್ಯೂಟ ಆಫ್ ಫೈರ್ ಆಂಡ್ ಸೇಫ್ಟಿ ಎಂಜಿನಿಯರಿಂಗ್ ಕಾಲೇಜ್ ಪಂಪುವೆಲ್, ಬೆಸೆಂಟ್ ಕಾಲೇಜು
ಮಂಗಳೂರು, ತೆಂಕಕಜೆಕಾರು
ಸರ್ಕಾರಿ ಶಾಲೆ, ಲ್ಯಾಂಡ್ ಲಿಂಕ್ಸ್, ಕೂಡ್ಲು
ಗೋಪಾಲಕೃಷ್ಣ ಹಿ.ಪ್ರ.ಶಾಲೆ ಕಾಸರಗೋಡು, ಲೇಡಿ ಗೋಶನ್ ನಲ್ಲಿ
ಮೆಗಾ ಬ್ಲಡ್ ಡೊನೇಶನ್ ಕ್ಯಾಂಪ್, ಧವಳಾ ಕಾಲೇಜು ಮೂಡುಬಿದಿರೆ, ಕೆಂಜಾರು ಜೋಕಟ್ಟೆ
ಹಾಗೂ ವಿ.ವಿ.ಕಾಲೇಜು ಮಂಗಳೂರು ಇಷ್ಟು ಕಡೆಗಳಲ್ಲಿ ರಕ್ತದಾನ ಶಿಬಿರ ನಡೆದಿದ್ದು ಸುಮಾರು 500 ಯೂನಿಟ್ ಗಳಷ್ಟು
ರಕ್ತ ಸಂಗ್ರಹವಾಗಿದೆ.
-ಮಾಮ್ ನ ಮಂಗಳೂರು
ಹಾಗೂ ಬೆಂಗಳೂರು ಘಟಕದ ಪದಾಧಿಕಾರಿಗಳು ಜೊತೆಗೆ ಕಳೆದ ವರ್ಷ ನವೆಂಬರ್ 25ರಂದು ಕೊಡಗಿನ
ಬೆಟ್ಟತ್ತೂರು ಎಂಬಲ್ಲಿಗೆ ಪಿಕ್ ನಿಕ್ ತೆರಳಿದ್ದೆವು. ಅಲ್ಲಿನ ಮಾಮ್ ಹಳೆ ವಿದ್ಯಾರ್ಥಿ
ಕಾರ್ಯಪ್ಪ ಅವರಿಗೆ ಸೇರಿದ ಹೋಂ ಸ್ಟೇನಲ್ಲಿ ರಾತ್ರಿಯೂ ತಂಗಿದ್ದು, ವರ್ಜಿನ್ ಹಿಲ್ಸ್
ಬೆಟ್ಟಕ್ಕೆ ಚಾರಣ ಮಾಡಿ ಖುಷಿ ಪಟ್ಟರು.
-ಮಾಮ್ ಬ್ಯಾಂಕ್
ವ್ಯವಹಾರಗಳನ್ನು ಹೊಂದಿರುವು ಕೊಡಿಯಾಲ್ ಬೈಲಿನ ಎಸ್ ಸಿಡಿಸಿಸಿ ಬ್ಯಾಂಕಿನಲ್ಲಿ ಈಗಾಗಲೇ ನಾವು
ಎಸ್ ಬಿ ಖಾತೆ ಹೊಂದಿದ್ದೇವೆ. ಈ ಬ್ಯಾಂಕಿನಲ್ಲಿ ನಾವು ವಾರ್ಷಿಕ ದತ್ತಿನಿಧಿ ಬಹುಮಾನ ಯೋಜನೆಗಾಗಿ
ಒಂದು ಲಕ್ಷ ರುಪಾಯಿಗಳು ಹಾಗೂ 1.25 ಲಕ್ಷ ರುಪಾಯಿಗಳ ಇನ್ನೊಂದು ಮೊತ್ತವನ್ನು ಪ್ರತ್ಯೇಕ
ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಕಳೆದ ಮೇಯಲ್ಲಿ ಇರಿಸಿದ್ದೇವೆ. ಈ ಪೈಕಿ ಫಿಕ್ಸೆಡ್ ಡೆಪಾಸಿಟ್
ನಿಂದ ಬರುವ ಬಡ್ಡಿಯ ಮೊತ್ತವನ್ನು ವಾರ್ಷಿಕ ದತ್ತಿ ನಿಧಿ ಬಹುಮಾನ ನೀಡಲು ಬಳಸಲು ಉದ್ದೇಶಿಸಿದ್ದು, ಇದರ
ರೂಪುರೇಷೆಯನ್ನು ಶರತ್ ಹೆಗ್ಡೆ ಕಡ್ತಲ ರೂಪಿಸಿ ಸಂಯೋಜಿಸಲಿದ್ದಾರೆ. ಈ ವರ್ಷ ನಾವು ಸ್ನಾತಕೋತ್ತರ
ಹಾಗೂ ಪದವಿ ವಿದ್ಯಾರ್ಥಿಗಳಿಗೆ ಈ ಬಹುಮಾನ ವಾರ್ಷಿಕವಾಗಿ ನೀಡಲಿದ್ದು, ಕಾಲೇಜುಗಳಿಗೆ
ಮುಂಚಿತವಾಗಿ ಸುತ್ತೋಲೆ ಕಳುಹಿಸಲಿದ್ದೇವೆ.
-ಮಾಮ್ ಗೆ ತನ್ನದೇ
ಆದ ವೆಬ್ ಸೈಟ್ ರೂಪಿಸುವ ಹೊಣೆಯನ್ನು ರೊನಾಲ್ಡ್ ಅನಿಲ್ ಫರ್ನಾಂಡಿಸ್ ಹಾಗೂ ವೇಣು ವಿನೋದ್ ಅವರು
ವಹಿಸಿಕೊಂಡಿದ್ದು, ಪ್ರಾಥಮಿಕ ಹಂತದ
ಮಾತುಕತೆಗಳು ನಡೆದಿವೆ. ಶೀಘ್ರದಲ್ಲೇ ವೆಬ್ ಸೈಟ್ ಲಾಂಚ್ ಆಗಲಿದೆ.
-ಉಜಿರೆ ಎಸ್ ಡಿಎಂ
ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಹಾಗೂ ಪತ್ರಿಕೋದ್ಯಮ ವಿಭಾಗದ 30ನೇ ವರ್ಷ ತುಂಬಿದ
ಸಂಭ್ರಮದಲ್ಲಿ ಮಾಮ್ ಸಹಯೋಗದಲ್ಲಿ ವರ್ಷಪೂರ್ತಿ ಸರಣಿ ಕಾರ್ಯಕ್ರಮಗಳನ್ನು ಪತ್ರಿಕೋದ್ಯಮ
ವಿಭಾಗದೊಂದಿಗೆ ನಡೆಸುವ ಕುರಿತು ಚರ್ಚಿಸಲು ಮಾಮ್ ಪದಾಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿದ್ದರು.
ಇದರ ಸಂಯೋಜನೆ ಹಾಗೂ ಫಾಲೋ ಅಪ್ ಜವಾಬ್ದಾರಿಯನ್ನು ಬಾಲಕೃಷ್ಣ ಹೊಳ್ಳ ಹಾಗೂ ಪರಶುರಾಮ ಕಾಮತ್
ವಹಿಸಿಕೊಂಡಿದ್ದಾರೆ.
-ವೇಣು ವಿನೋದ್ ಅವರು
ಮಾಮ್ ಗೆ ಸುಂದರವಾಗ ಲೋಗೊ ಹಾಗೂ ಲೆಟರ್ ಹೆಡ್ ರೂಪಿಸಿಕೊಟ್ಟಿದ್ದು ಅವರ ಸಹಕಾರವನ್ನು
ಸ್ಮರಿಸುತ್ತೇವೆ.
-ಕಳೆದ ಹಾಗೂ ಈ
ವರ್ಷವಿಡೀ ಮಾಮ್ ಕಾರ್ಯಕಾರಿ ಸಮಿತಿ ಸದಸ್ಯರು ವಿವಿಧ ಸಭೆ, ಸಮಾಲೋಚನೆ, ನಿರ್ಧಾರಗಳನ್ನು
ಕೈಗೊಳ್ಳಲು ಗೌರವಾಧ್ಯಕ್ಷ ವೇಣು ಶರ್ಮ ಅವರ ಆಡ್ ಐಡಿಯಾ ಕಚೇರಿಯನ್ನು ಬಳಸಿಕೊಂಡಿದ್ದೇವೆ. ನಮ್ಮ
ಅಧಿಕೃತ ಕಚೇರಿ ವಿಳಾಸವೂ ಈ ಕಚೇರಿಯದ್ದೇ ಆಗಿದೆ. ಕಚೇರಿ ಒದಗಿಸಿದ್ದಲ್ಲದೆ, ಆತಿಥ್ಯ ಉಪಚಾರ
ನೀಡಿದ ವೇಣು ಶರ್ಮ, ಅವರ ಸಿಬ್ಬಂದಿ
ಸಂದೀಪ್ ಹಾಗೂ ಕುಟುಂಬದವರಿಗೆ ನಮ್ಮ ಧನ್ಯವಾದಗಳು.
-ರಕ್ತದಾನ ಶಿಬಿರ
ಆಯೋಜಿಸುವಲ್ಲಿ ಸಹಯೋಗ ನೀಡಿದ ರೆಡ್ ಕ್ರಾಸ್ ಸೊಸೈಟಿ ಹಾಗೂ ಇತರ ಸಂಘ ಸಂಸ್ಥೆಗಳು, ಶಿಕ್ಷಣ
ಸಂಸ್ಥೆಗಳಿಗೆ ಧನ್ಯವಾದಗಳು.
-ನಮ್ಮ ಸಂಪನ್ಮೂಲ
ವ್ಯಕ್ತಿಗಳನ್ನು ಬಳಸಿ ಕಾರ್ಯಾಗಾರ, ವಿಚಾರಸಂಕಿರಣಗಳನ್ನು ಆಯೋಜಿಸಿದ ಶಿಕ್ಷಣ ಸಂಸ್ಥೆಗಳಿಗೂ
ನಮ್ಮ ಧನ್ಯವಾದಗಳು.
-ಸಂಘಟನೆಯೊಂದಿಗಿರುವ
ಮಾಮ್ ನ ಎಲ್ಲಾ ಗೌರವಾನ್ವಿತ ಸದಸ್ಯರು, ಎಂಸಿಜೆ ವಿಭಾಗ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳಿಗೂ
ವಂದನೆಗಳು. ನಿಮ್ಮಿಂದ ಇನ್ನಷ್ಟು ಸಹಕಾರ, ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇವೆ.
ವಂದನೆಗಳು.
ಫ್ಲೋರಿನ್ ರೋಚ್
(ಅಧ್ಯಕ್ಷರು)
ಕೃಷ್ಣಮೋಹನ
(ಪ್ರಧಾನ
ಕಾರ್ಯದರ್ಶಿ)
No comments:
Post a Comment