Sunday, 28 August 2016

ಮಾಮ್ ಎರಡನೇ ವಾರ್ಷಿಕ ಮಹಾಸಭೆ (20.08.2016)ಯ ನಿರ್ಣಯಗಳ ವರದಿ



ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್)ಇದರ ಎರಡನೇ ವಾರ್ಷಿಕ ಮಹಾಸಭೆ (ಎಜಿಎಂ) ದಿನಾಂಕ 20.08.2016ರಂದು ಮಂಗಳೂರಿನ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ ನಡೆಯಿತು.


ಎಜಿಎಂ ಅಜೆಂಡಾಗಳು

1) ಸ್ವಾಗತ
2) ವರದಿ ವಾಚನ
3) ಮಾಮ್ ಲೆಕ್ಕಪತ್ರ ಮಂಡನೆ
4) ಮಾಮ್ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸಮಾಲೋಚನೆ
5) ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಚಾರಗಳು

ಎಜಿಎಂ ನಡಾವಳಿಗಳು:

1) ಮಾಮ್ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್. ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

2) ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಅವರು ಮಾಮ್ ಸ್ಥಾಪನೆ ಆರಂಭವಾದಂದಿನಿಂದ ಈ ವರೆಗಿನ ಕಾರ್ಯಚಟುವಟಿಕೆಗಳ ಕುರಿತು ಸಂಕ್ಷಿಪ್ತ ವರದಿ ಮಂಡನೆ ಮಾಡಿದರು.

3) ಬಳಿಕ ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು ಮಾಮ್ ಆರಂಭವಾದಾಗಿನಿಂದ ಈ ವರೆಗಿನ ಲೆಕ್ಕಪತ್ರ (ಬ್ಯಾಲೆನ್ಸ್ ಶೀಟ್) ಮಂಡಿಸಿದರು. ಮಾಮ್ ಸ್ಥಾಪನೆ ಆದ ಬಳಿಕ ಮೊದಲ ಬಾರಿಗೆ ಲೆಕ್ಕಪರಿಶೋಧಕರ ಮೂಲಕ ಮಾಮ್ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಿದ್ದು ಈ ಆಯವ್ಯಯಕ್ಕೆ ಧ್ವನಿಮತದ ಮೂಲಕ ಸದಸ್ಯರು ಅಂಗೀಕಾರ ಸೂಚಿಸಿದರು.
ಲೆಕ್ಕ ಪತ್ರ ಮಂಡನೆ ಬಳಿಕ ಈ ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಲಾಯಿತು:

a) ಇನ್ನು ಮುಂದೆ ಮಾಮ್ ಚಟುವಟಿಕೆಗಳ ಎಲ್ಲಾ ಪಾವತಿ ಬ್ಯಾಂಕ್ ಮೂಲಕವನೇ ನಡೆಯುತ್ತದೆ. ಆದರೆ, ಕೋಶಾಧಿಕಾರಿ ತಮ್ಮ ಬಳಿ ರುಪಾಯಿ 5000 ವರೆಗೆ ಪೆಟ್ಟಿ ಕ್ಯಾಶ್ ಇರಿಸಿಕೊಂಡು ಚಿಲ್ಲರೆ ಪಾವತಿಗಳನ್ನು (ರು.1000 ವರೆಗಿನದ್ದು) ಮಾಡಬಹುದು.


b) ರು.1000ಕ್ಕಿಂತ ಮೇಲಿನ ಎಲ್ಲಾ ಪಾವತಿಗಳನ್ನು ಚೆಕ್ ಮುಖಾಂತರವೇ ಮಾಡುವುದು.

c) ಮಾಮ್ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಿದ (ಎರಡು ವರ್ಷದ್ದು) ಲೆಕ್ಕ ಪರಿಶೋಧಕರಿಗೆ (ಸಿಎ) ರು.3000 ಫೀಸ್ ಪಾವತಿಸಲು ಸಭೆ ಅಂಗೀಕರಿಸಿತು.

d) ಮಾಮ್ ಸದಸ್ಯ ಶುಲ್ಕ ಹಾಗೂ ಸದಸ್ಯತ್ವ ನವೀಕರಣ ಶುಲ್ಕವನ್ನು ಯಾವುದೇ ಖರ್ಚುಗಳಿಗೆ ಬಳಸುವಂತಿಲ್ಲ. ಆ ದುಡ್ಡನ್ನು ಫಿಕ್ಸೆಡ್ ಡೆಪಾಸಿಟ್ ಆಗಿ ನಮ್ಮ ಬ್ಯಾಂಕಿನಲ್ಲಿ ಇರಿಸಿ ಅದರ ಬಡ್ಡಿಯ ಹಣವನ್ನು ಮಾತ್ರ ಖರ್ಚಿಗೆ ಬಳಸುವುದು.

4) ಮಂಗಳೂರು ವಿ.ವಿ. ಎಂಸಿಜೆ ವಿಭಾಗದಲ್ಲಿ ವ್ಯಾಸಂಗ ಮಾಡಿದ 1988ರ ನಂತರದ ಲಭ್ಯವಿರುವ ಎಲ್ಲ ಹಳೆ ವಿದ್ಯಾರ್ಥಿಗಳ ಪಟ್ಟಿ ಹಾಗೂ ಸಂಪರ್ಕ ಸಂಖ್ಯೆಗಳು ಹಾಗೂ ವಿಳಾಸವನ್ನು ವಿಭಾಗ ಮುಖ್ಯಸ್ಥರ ಸಹಾಯದಿಂದ ಸಂಗ್ರಹಿಸುವುದು. ಆಯಾ ಬ್ಯಾಚ್ ಪ್ರಕಾರ ಹಳೆ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಅದನ್ನು ನಮ್ಮ ನೂತನ ವೆಬ್ ಸೈಟಿನಲ್ಲಿ ಪ್ರಕಟಿಸುವುದು. ಈ ಜವಾಬ್ದಾರಿಯನ್ನು ವಸಂತ್ ಕೊಣಾಜೆ ಹಾಗೂ ಕೃಷ್ಣ ಕಿಶೋರ್ ಅವರಿಗೆ ವಹಿಸಲಾಯಿತು.

ಮಂಗಳೂರು ಮತ್ತು ಬೆಂಗಳೂರು ಸಹಿತ ವಿವಿಧೆಡೆ ಮಾಧ್ಯಮ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಎಂಸಿಜೆ ಹಳೆ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ಅವರನ್ನು ಮಾಮ್ ಅಧಿಕೃತ ಸದಸ್ಯರನ್ನಾಗಿಸುವ ಪ್ರಯತ್ನ ಮಾಡುವುದು.


5) ಉಜಿರೆ ಎಸ್ ಡಿಎಂ ಕಾಲೇಜಿನ ಸುವರ್ಣ ಮಹೋತ್ಸವ ಹಾಗೂ ಪತ್ರಿಕೋದ್ಯಮ ವಿಭಾಗದ 30ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸರಣಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಮಾತುಕತೆ ಮುಂದುವರಿಸುವ ಹೊಣೆಯನ್ನು ಬಾಲಕೃಷ್ಣ ಹೊಳ್ಳ ಅವರಿಗೆ ವಹಿಸಲಾಯಿತು.

6) ಮಾಮ್ ಮಂಗಳೂರಿನ ಎಸ್ ಸಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಇರಿಸಿದ 1 ಲಕ್ಷ ರುಪಾಯಿ ಫಿಕ್ಸೆಡ್ ಡೆಪಾಸಿಟ್ ನ ಬಡ್ಡಿ ಹಣದಿಂದ ನೀಡುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗೆ ಮಾಮ್ ಇನ್ ಸ್ಪೈರ್ ಅವಾರ್ಡ್ ಎಂದು ಹೆಸರಿಸಲು ನಿರ್ಧರಿಸಲಾಯಿತು. ಉಪಾಧ್ಯಕ್ಷ ಶರತ್ ಹೆಗ್ಡೆ ಅವರು ದತ್ತಿನಿಧಿ ಮಾರ್ಗಸೂಚಿಗಳ ಕರಡು ಪ್ರತಿಯನ್ನು ಸಭೆಯಲ್ಲಿ ಮಂಡಿಸಿದರು. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಸಭೆ ಕರಡುಪ್ರತಿಗೆ ಅನುಮೋದನೆ ನೀಡಿತು. ದತ್ತಿನಿಧಿ ಕುರಿತು ಈ ಕೆಳಗಿನ ನಿರ್ದಾರಗಳನ್ನು ಕೈಗೊಳ್ಳಲಾಯಿತು:

a) ಪ್ರಾಯೋಜಕರ ಸಹಕಾರದಿಂದ ಮಂಗಳೂರು, ಕೊಡಗು, ಉಡುಪಿ ಭಾಗದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ (ಯಾವುದೇ ಪದವಿ) ಒಂದು ಹಾಗೂ ಮಂಗಳೂರು ವಿ.ವಿ. ಸಹಿತ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇನ್ನೊಂದು ನಗದು ಪ್ರಶಸ್ತಿ ನೀಡುವುದು.

b) ದತ್ತಿನಿಧಿ ಕುರಿತ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಶರತ್ ಹೆಗ್ಡೆ ನೇತೃತ್ವದ ದತ್ತಿನಿಧಿ ಕಾರ್ಯಕಾರಿ ಸಮಿತಿಗೆ ನೀಡಲು ಸಭೆ ನಿರ್ಣಯಿಸಿತು.


7) ಮಂಗಳೂರಿನ ಬೆಸೆಂಟ್ ಕಾಲೇಜಿನ ಸಹಯೋಗದಲ್ಲಿ ನಡೆಸಲು ಉದ್ದೇಶಿಸಿರುವ ಆಟೋ ಚಾಲಕರಿಗೆ ಮಾಧ್ಯಮ ತರಬೇತಿ ಕಾರ್ಯಾಗಾರಕ್ಕೆ ತಗಲಬಹುದಾದ ಅಂದಾಜು ವೆಚ್ಚ ರು.3000ವನ್ನು ಮಾಮ್ ಭರಿಸುವ ತೀರ್ಮಾನ ಕೈಗೊಳ್ಳಲಾಯಿತು. ಸಾಧ್ಯವಾದರೆ ಪ್ರೆಸ್ ಕ್ಲಬ್ ಸಹಾಯ ಪಡೆಯಲು ನಿರ್ಧರಿಸಲಾಯಿತು. ಇದರೊಂದಿಗೆ ಮಂಗಳೂರಿನ ಮಹಾಲಸಾ ಕಲಾ ಕಾಲೇಜು ಮತ್ತು ಮಾಮ್ ಸಹಯೋಗದಲ್ಲಿ ನಡೆಸಲು ಉದ್ದೇಶಿಸಿದ ಜಂಟಿ ಕಾರ್ಯಕ್ರಮಕ್ಕೆ (ಕಲಾಕೃತಿ ರಚನೆ ಹಿನ್ನೆಲೆಯಲ್ಲಿ) ಸುಮಾರು 5000 ರು. ಖರ್ಚು ಮಾಮ್ ವಹಿಸಲು ತೀರ್ಮಾನಿಸಲಾಯಿತು.

8) ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್ (ಮಾ) ಸಹಯೋಗದಲ್ಲಿ ಮಂಗಳೂರು ವಿ.ವಿ. ಹಳೆ ವಿದ್ಯಾರ್ಥಿಗಳ ಬೃಹತ್ ಗೆಟ್ ಟುಗೆದರ್ ಮಾಡುವುದಾದರೆ ಮಾಮ್ ಸಹಯೋಗ ನೀಡಲು ಮಾ ಪದಾಧಿಕಾರಿಗಳೊಂದಿಗೆ ಚರ್ಚಿಸಲು ನಿರ್ಧರಿಸಲಾಯಿತು

9) ಮಾಮ್ ಬೆಂಗಳೂರು ಘಟಕದ ಸದಸ್ಯರನ್ನು ಒಟ್ಟು ಸೇರಿಸುವ ಮತ್ತು ಸದಸ್ಯತ್ವ ಅಭಿಯಾನವನ್ನು ನಡೆಸುವ ಸಹಯೋಗ ನೀಡುವ ಜವಾಬ್ದಾರಿಯನ್ನು ಉಪಾಧ್ಯಕ್ಷ ದೀಪಕ್ ನಾಯ್ಕ್ ಅವರಿಗೆ ನೀಡಲಾಯಿತು.

10) ಎಂಸಿಜೆ ವಿಭಾಗ ಸಹಯೋಗದಲ್ಲಿ ಎಂಸಿಜೆ ವಿದ್ಯಾರ್ಥಿಗಳಿಗಾಗಿ ಪ್ರತಿ ತಿಂಗಳು ಮಾಮ್ ಸಂಪನ್ಮೂಲ ವ್ಯಕ್ತಿಗಳು ನಿಯಮಿತ ಪ್ರಾಕ್ಟಿಕಲ್ ತರಗತಿಗಳನ್ನು ನಡೆಸಲು ವಿಭಾಗ ಪ್ರತಿನಿಧಿ ಪ್ರೊ.ಜಿ.ಪಿ.ಶಿವರಾಂ ಸಮ್ಮತಿಸಿದರು. ಇದಕ್ಕೋಸ್ಕರ ಮಾಮ್ ಸಂಪನ್ಮೂಲ ವ್ಯಕ್ತಿಗಳ ಪಟ್ಟಿಯನ್ನು ವಿಭಾಗಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.

11) ಕೋಶಾಧಿಕಾರಿ ಸ್ಮಿತಾ ಶೆಣೈ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಲಾಪ ನಿರ್ವಹಿಸಿದರು. ಎಂಸಿಜೆ ವಿಭಾಗ ಅಧ್ಯಕ್ಷರ ಪರವಾಗಿ ಪ್ರತಿನಿಧಿ ಪ್ರೊ.ಜಿ.ಪಿ.ಶಿವರಾಂ ಸೇರಿದಂತೆ 20 ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು.








1 comment: