Sunday, 18 October 2015

ಕೂಡ್ಲು : ಮಾಮ್ ರಕ್ತದಾನ ಅಭಿಯಾನ 6ನೇ ಶಿಬಿರ ಸಂಪನ್ನ 18, ಸೆಪ್ಟೆಂಬರ್‌ 2015


ಕಾಸರಗೋಡು: ಕಾಸರಗೋಡಿನಾದ್ಯಂತ ಇಂದಿಗೂ ಕೆಲ ಸಮುದಾಯಗಳು ಇತರ ಸಮುದಾಯಗಳಿಂದ ಬೇರ್ಪಟ್ಟು ಜೀವಿಸುತ್ತಿವೆ. ಎಲ್ಲ ಸಮುದಾಯಗಳು ಹಾಗೂ ಸಮಾಜದ ಎಲ್ಲ ಸ್ತರಗಳ ಜನರನ್ನು ಒಗ್ಗೂಡಿಸುವ ಪ್ರಯತ್ನ ಸಂಘ-ಸಂಸ್ಥೆಗಳಿಂದ ನಡೆಯಬೇಕು ಎಂದು ಕಾಸರಗೋಡು ಡಿವೈಎಸ್‌ಪಿ ಎಂ.ವಿ. ಸುಕುಮಾರನ್ ಹೇಳಿದರು.
ಕಾಸರಗೋಡು ಮೈತ್ರಿ ಸೋಶಿಯಲ್ ವರ್ಕ್ ಮತ್ತು ಕಲ್ಚರಲ್ ಸೆಂಟರ್, ಜಯನಗರ ಉಪ್ಪಂಗಳ ಟ್ರಸ್ಟ್ ಹಾಗೂ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಮತ್ತು ರೆಡ್‌ಕ್ರಾಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಕೂಡ್ಲು  ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರಗಿದ ‘ಮಾಮ್ ರಕ್ತದಾನ ಅಭಿಯಾನ’ದ ಆರನೇ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪ್ಪಂಗಳ ಟ್ರಸ್ಟ್‌ನ ಸದಸ್ಯ, ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಅಧ್ಯಕ್ಷತೆೆ ವಹಿಸಿದ್ದರು. ಮಾಮ್ ಸದಸ್ಯ ಹಾಗೂ ಛಾಯಾಗ್ರಾಹಕ ಕೃಷ್ಣ ಕಿಶೋರ್, ಮೈತ್ರಿ ಸೋಶಿಯಲ್ ವರ್ಕ್ ಮತ್ತು ಕಲ್ಚರಲ್ ಸೆಂಟರ್‌ನ ಪದಾಧಿಕಾರಿ ಶರತ್ ಕುಮಾರ್ ನಾಯ್ಕ್, ರಾಮದಾಸನಗರ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ  ಶ್ರೀಧರ ಕೂಡ್ಲು, ಸಿಪಿಸಿಆರ್‌ಐ ಅಧಿಕಾರಿ ಶ್ಯಾಂ ಪ್ರಸಾದ್ ಕುಂಚಿನಡ್ಕ, ಉಪ್ಪಂಗಳ ಟ್ರಸ್ಟ್‌ನ ರಂಗಾ ಶರ್ಮಾ ಉಪ್ಪಂಗಳ ಇದ್ದರು.
ಮಂಗಳೂರು ರೆಡ್‌ಕ್ರಾಸ್ ಘಟಕ ಅಧ್ಯಕ್ಷ ಡಾ. ರೋನಾಲ್ಡ್ ಅನಿಲ್ ಫರ್ನಾಂಡಿಸ್, ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ವರದಿ: ಸಾಯಿಭದ್ರಾ ರೈ

ಕಾಸರಗೋಡು ಡಿವೈಎಸ್‌ಪಿ ಎಂ.ವಿ. ಸುಕುಮಾರನ್ ಅವರಿಂದ ‘ಮಾಮ್ ರಕ್ತದಾನ ಅಭಿಯಾನ’ದ ಆರನೇ ಶಿಬಿರ ಉದ್ಘಾಟನೆ.

ರಕ್ತದಾನ

ಡಾ.ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌, ಶ್ಯಾಮ್‌ ಪ್ರಸಾದ್‌ ಕುಂಚಿನಡ್ಕ, ವೇಣು ಶರ್ಮಾ


ಕೃಷ್ಣ ಕಿಶೋರ್‌, ಶ್ಯಾಮ್‌ ಪ್ರಸಾದ್‌, ಸಾಯಿಭದ್ರಾ ರೈ



No comments:

Post a Comment