Thursday, 15 October 2015

ಮಾಮ್ ರಕ್ತದಾನ ಅಭಿಯಾನ ಸರಣಿ 6ನೇ ಶಿಬಿರ 18ರಂದು



ಮಂಗಳೂರು-ಮೈತ್ರಿ ಸೋಶಿಯಲ್ ವರ್ಕ್ ಮತ್ತು ಕಲ್ಚರಲ್ ಸೆಂಟರ್, ಉಪ್ಪಂಗಳ ಟ್ರಸ್ಟ್ ಜಯನಗರ ಆಶ್ರಯದಲ್ಲಿ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ನೇತೃತ್ವದಲ್ಲಿ ರಕ್ತದಾನ ಅಭಿಯಾನ ಸರಣಿಯ ಆರನೇ ಶಿಬಿರ ಅ.18ರಂದು ಕೂಡ್ಲುವಿನಲ್ಲಿ ನಡೆಯಲಿದೆ.  ಅಂದು ಬೆಳಗ್ಗೆ 9.30ರಿಂದ ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಆವರಣದಲ್ಲಿ ನಡೆಯುವ ಶಿಬಿರಕ್ಕೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗ ನೀಡಲಿದೆ.
ಕಾಸರಗೋಡು ಡಿವೈಎಸ್ಪಿ ಟಿ.ಪಿ.ರಂಜಿತ್ ಕಾರ್ಯಕ್ರಮ ಉದ್ಘಾಟಿಸುವರು. ಸರ್ಕಲ್ ಇನ್ ಸ್ಪೆಕ್ಟರ್ ಸುಧಾಕರನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ರಾಮದಾಸ ನಗರ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ ಕೂಡ್ಲು, ಮಂಗಳೂರು ರೆಡ್ ಕ್ರಾಸ್ ರಕ್ತನಿಧಿ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಅಭ್ಯಾಗತರಾಗಿ ಪಾಲ್ಗೊಳ್ಳುವರು. ಸಜಂಗದ್ದೆ ಉಪ್ಪಂಗಳ ಟ್ರಸ್ಟ್ ಅಧ್ಯಕ್ಷ ಶ್ರೀಹರಿ ಭಟ್ ಅಧ್ಯಕ್ಷತೆ ವಹಿಸುವರು.
ಸಾರ್ವನಿಕರು, ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬಹುದು. ಮಾಮ್ ನೇತೃತ್ವದಲ್ಲಿ ಈಗಾಗಲೇ ಐದು ರಕ್ತದಾನ ಸರಣಿ ಶಿಬಿರಗಳು ನಡೆದಿದ್ದು ಮುಂದಿನ ಶಿಬಿರಗಳಲ್ಲಿ ಪಾಲ್ಗೊಳ್ಳುವವರು ಮಾಮ್ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಪ್ರಕಟಣೆ ತಿಳಿಸಿದೆ.
HOSA DIGANTHA REPORT

No comments:

Post a Comment