ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಉಜಿರೆ ಎಸ್ಡಿಎಂ ಕಾಲೇಜಿನ ಮೀಡಿಯಾ ಮೆಸೆಂಜರ್ಸ್ ಕ್ಲಬ್ ಸಹಯೋಗದಲ್ಲಿ ಶನಿವಾರ, ಅ.17ರಂದು ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ರೈಟಿಂಗ್ ಫಾರ್ ರೇಡಿಯೋ ವಿಚಾರದಲ್ಲಿ ಒಂದು ದಿನದ ವಿಚಾರ ಸಂಕಿರಣ ನಡೆಯಿತು.
ಉಜಿರೆ ಎಸ್ಡಿಎಂ ಕಾಲೇಜ್ ಪೋಸ್ಟ್ ಗ್ರಾಜ್ಯುವೇಶನ್ ಸೆಂಟರ್ ನ ಡೀನ್ ಡಾ.ಎಂ.ವೈ.ಮಂಜುಳಾ ಕಾರ್ಯಾಗಾರ ಉದ್ಘಾಟಿಸಿದರು. ಎಂಸಿಜೆ ವಿಭಾಗ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ರೇಡಿಯೊದಲ್ಲಿ ಕಾರ್ಯಕ್ರಮ ನೀಡುವ ಸಂದರ್ಭ ಬಳಸುವ ಪ್ರತಿ ವಾಕ್ಯ, ಪದಗಳು ಧನಾತ್ಮಕವಾಗಿರಬೇಕಲ್ಲದೆ, ಜವಾಬ್ದಾರಿಯುತವಾಗಿರಬೇಕು ಎಂದು ಡಾ.ಮಂಜುಳಾ ಕಿವಿಮಾತು ಹೇಳಿದರೆ, ವಿಭಾಗದ ಮುಂದಿನ ಕಾರ್ಯಕ್ರಮಗಳಲ್ಲೂ ಮಾಮ್ ಸಹಭಾಗಿತ್ವ ಬಯಸುವುದಾಗಿ ಪ್ರೊ.ಭಾಸ್ಕರ ಹೆಗಡೆ ಹೇಳಿದರು, ಮಾಮ್ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಮ್ ಅಧ್ಯಕ್ಷೆ ಫ್ಲೋರನ್ ರೋಚ್ ಹಾಗೂ ಗೌರವಾಧ್ಯಕ್ಷ ವೇಣು ಶರ್ಮ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದು ಮಾಮ್ ಹಾಗೂ ರೇಡಿಯೋ ಮಹತ್ವ ಕುರಿತು ಮಾತನಾಡಿದರು.
------------
ಬಳಿಕ ನಡೆದ ಕಾರ್ಯಾಗಾರದಲ್ಲಿ ರೇಡಿಯೊ ಸ್ಕ್ರಿಪ್ಟ್ ಬರವಣಿಗೆ ಕುರಿತು ಕೆ.ಎಂ.ಹಾಗೂ ರೇಡಿಯೊ ಕಾರ್ಯಕ್ರಮ ನಿರ್ಮಾಣ ಕುರಿತು ಫ್ಲೋರಿನ್ ರೋಚ್ ಮಾಹಿತಿ ನೀಡಿದರು. ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳಿಂದಲೇ ರೇಡಿಯೊ ಕಾರ್ಯಕ್ರಮ ಸ್ಕ್ರಿಪ್ಟ್ ಬರೆಯುವ ಕಿರು ಅಸೈನ್ ಮೆಂಟ್ ನೀಡಿ ಉತ್ತಮ ಬರಹ ನೀಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
-------------
ಅಪರಾಹ್ನ ಎಸ್ಡಿಎಂ ಕಾಲೇಜಿನ ನೂತನ ಸುಸಜ್ಜಿತ ರೇಡಿಯೊ ಸ್ಟುಡಿಯೋ ಸಂದರ್ಶಿಸಿ ವಿದ್ಯಾರ್ಥಿಗಳಿಗೆ ಸ್ಟುಡಿಯೊದಲ್ಲಿ ಕಾರ್ಯಕ್ರಮ ನಿರ್ಮಾಣ ಕುರಿತು ಪ್ರಾಥಮಿಕ ಮಾಹಿತಿ ವಿನಿಮಯ ನಡೆಸಲಾಯಿತು.
ಮಾಮ್ ಪ್ರತಿನಿಧಿಗಳಾದ ಕೃಷ್ಣಕಿಶೋರ್ ಹಾಗೂ ಸ್ಮಿತಾ ಶೆಣೈ ಹಾಜರಿದ್ದು ಮಾಹಿತಿ ನೀಡಿದರು.
---------------
ಮಾಮ್ ಸದಸ್ಯ ಹಾಗೂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಉಪನ್ಯಾಸಕ ಪರಶುರಾಮ ಕಾಮತ್ ಅವರ ಸಂಯೋಜನೆಯಲ್ಲಿ ಸಹಕರಿಸಿದ್ದು, ಅವರ ಸಹಭಾಗಿತ್ವ ಹಾಗೂ ಎಸ್ಡಿಎಂ ಕಾಲೇಜಿನ ಎಂಸಿಜೆ ವಿಭಾಗದ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ನೀಡಿದ ಅವಕಾಶವನ್ನು ಮಾಮ್ ಕೃತಜ್ಞತೆಯಿಂದ ಸ್ಮರಿಸುತ್ತಿದೆ.
PHOTOS: Kishore and KM
No comments:
Post a Comment