Thursday, 22 October 2015

MAAM TREKKING/ ANNUAL GET TOGETHER

ಆತ್ಮೀಯ ಸ್ನೇಹಿತರೇ,

ಕಳೆದ ವರ್ಷ ಡಿ.26ರಂದು, ಎಂಸಿಜೆ ವಿಭಾಗಕ್ಕೆ 25 ವರ್ಷ ತುಂಬಿದ ಸಂಭ್ರಮವನ್ನು ನಾವು ಹಳೆ ವಿದ್ಯಾರ್ಥಿಗಳು ವಿ.ವಿ.ಯಲ್ಲಿ ಆಚರಿಸಿಕೊಂಡು ಮಾಮ್ ಸಂಘಟನೆ ರಚಿಸಿಕೊಂಡೆವು. ಬಳಿಕ ಯಾವೆಲ್ಲಾ ಚಟುವಟಿಕೆಗಳು ನಡೆದಿವೆ ಎಂಬುದು ನಿಮಗೆ ಗೊತ್ತೇ ಇದೆ. ಇಂದು ನಮ್ಮ ಮೂರು ವಾಟ್ಸಾಪ್ ಗ್ರೂಪುಗಳಲ್ಲಿ 150ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ನಮ್ಮ ಜೊತೆಗಿದ್ದಾರೆ. ಸುಮಾರು 30 ಮಂದಿ ಶುಲ್ಕ ಪಾವತಿಸಿ ನಮ್ಮ ಸದಸ್ಯರಾಗಿದ್ದಾರೆ. ಮಾಮ್ ಸ್ಥಾಪನೆಯಾಗಿ ಒಂದು ವರ್ಷ ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
1) ಮಾಮ್ ವಾರ್ಷಿಕೋತ್ಸವ ಅಥವಾ ಗೆಟ್ ಟುಗೆದರ್ (ಸಂತೋಷ ಕೂಟ)
2) ಮಾಮ್ ಸದಸ್ಯರೊಂದಿಗೆ ಕಿರು ಚಾರಣ ಅಥವಾ ಪ್ರವಾಸ (ಮಂಗಳೂರು ಸೆಂಟರ್ ಆಗಿರಿಸಿಕೊಂಡು)

ಮುಂದಿನ ಡಿಸೆಂಬರ್ ನಲ್ಲಿ ಒಂದು ಸಂಜೆ ವಾರ್ಷಿಕ ಗೆಟ್ ಟುಗೆದರ್ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ದಿನಾಂಕ ಹಾಗೂ ಸ್ಥಳ ನಿಗದಿಯಾದ ತಕ್ಷಣ ತಿಳಿಸಲಾಗುವುದು.

ನವೆಂಬರ್ ನಲ್ಲಿ ಕಿರುಚಾರಣ (ಸಣ್ಣ ಮಟ್ಟಿನ ಪ್ರವಾಸ) ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ನಮ್ಮ ಗ್ರೂಪಿನಲ್ಲಿ ಯಾರಿಗೆಲ್ಲಾ ಸಾಧ್ಯವಾಗುತ್ತದೋ ಅವರಿಗೆಲ್ಲ ಮುಕ್ತ ಸ್ವಾಗತವಿದೆ.

ಮಂಗಳೂರಿನಿಂದ ಪ್ರವಾಸ ಆರಂಭ. ಸ್ಥಳ ಹಾಗೂ ದಿನಾಂಕ ನಿಗದಿಯಾಗಿಲ್ಲ. ಬಹುತೇಕ ನವೆಂಬರ್ ದ್ವಿತೀಯಾರ್ಧದಲ್ಲಿ ಇರಬಹುದು. ಈ ರೀತಿ ಪ್ರವಾಸಕ್ಕೆ ಹೋಗುವುದಾದರೆ ಎಷ್ಟು ಮಂದಿಗೆ ಪಾಲ್ಗೊಳ್ಳಲು ಆಸಕ್ತಿ ಇದೆ ಎಂದು ದಯವಿಟ್ಟು ತಿಳಿಸಿ. ಒಟ್ಟು ಪ್ರವಾಸಿಗರ ಸಂಖ್ಯೆ ಆಧರಿಸಿ ವಾಹನ, ವಸತಿ ಇತ್ಯಾದಿ ವ್ಯವಸ್ಥೆ ಕುರಿತು ಚಿಂತಿಸಬೇಕಾಗುತ್ತದೆ. ಆದ್ದರಿಂದ ದಯವಿಟ್ಟು ಯಾರೆಲ್ಲಾ ಪ್ರವಾಸದಲ್ಲಿ ಪಾಲ್ಗೊಳ್ಳಬಯಸುತ್ತೀರೋ ನನಗೊಂದು ಮೆಸೇಜ್ ಕಳುಹಿಸಿ (9481976969). ಇದು ಅಂತಿಮ ಬುಕಿಂಗ್ ಅಲ್ಲ. ಎಷ್ಟು ಮಂದಿಗೆ ಪಾಲ್ಗೊಳ್ಳಲು ಆಸಕ್ತಿ, ಸಮಯಾವಕಾಶ ಇದೆ ಎಂದು ತಿಳಿಯುವ ಪ್ರಯತ್ನ. ಮುಂದಿನ ನಾಲ್ಕು ದಿನದೊಳಗೆ ಮೆಸೇಜ್ ಕಳುಹಿಸಿ ಅಥವಾ reachtomaam@gmail.com ಐಡಿಗೆ ಮೈಲ್ ಮಾಡಿ.

ಪ್ರವಾಸ ಹಾಗೂ ವಾರ್ಷಿಕ ಗೆಟ್ ಟುಗೆದರ್ ನಮ್ಮೊಳಗೆ ಪರಸ್ಪರ ಪರಿಚಯ ಹಾಗೂ ಸಂಘಟನೆ ಬಲಪಡಿಸಲು ಸಹಕಾರಿ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ. ಈ ಎರಡೂ ಕಾರ್ಯಕ್ರಮಗಳ ಹೆಚ್ಚನ ವಿವರಗಳನ್ನು ಮುಂದೆ ವಾಟ್ಸಾಪ್ ಗ್ರೂಪ್ ಹಾಗೂ ಬ್ಲಾಗ್ ನಲ್ಲಿ ಪ್ರಕಟಿಸಲಾಗುವುದು.

ಬೆಂಗಳೂರನಲ್ಲಿರುವವರು ಸಮಯಾವಕಾಶ ಇದ್ದರೆ ಅಲ್ಲಿ ಪ್ರತ್ಯೇಕ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡು ಆ ಮೂಲಕ ಸಂಘಟನೆ ಬಲಪಡಿಸುವ ಪ್ರಯತ್ನ ಮಾಡಬಹುದು.
-ಕೆಎಂ (ಪ್ರಧಾನ ಕಾರ್ಯದರ್ಶಿ).




Dear friends

As you are aware Media Alumni Association of Mangalagangotri (MAAM) was formed in December 2014 to commemorate the MCJ department of Mangalore University completing 25 years of its fruitful existence.   It is a matter of great satisfaction to know that since its inception MAAM has actively; involved in many activities about which we have kept all our members informed from time to time.  We could do these with the active support and cooperation of our members.    
We have more than 150 alumni  in  the various MAAm Whatsapp groups created for the purpose.  About 30 members have become members by paying the membership fee and we wish more members would enrol with us in the days to come.   Now that MAAM is completing one year  we have chalked out two programmes to mark the first anniversary.
·         MAAM 1st Anniversary or get-together
·         A one day trekking or tour

We have decided to hold the get-together in December this year and the date and place of this will be  communicated to you  once the same is finalised.
However a tour or easy trek is planned for the month of November and all MAAM members  are welcome to  take part in it.  Most probably this will be  held in the second half of November this year. 
  Those who are interested to be a part of this fun loving tour are requested to kindly confirm their participation  through SMS or Whatsapp to mobile number 9481976969 (KM) within the next 4 days.  Though this is not the final date for booking your participation it would help us to know how many are  interested in participating so that we can go ahead with the initial preparation.  You can also confirm your participation by reaching out to reachtomaam@gmail.com.
This is a small effort on our part to  strengthen MAAM and also  to encourage MAAM members to know one another and encourage more interaction among members.  More information about these two programmes will be intimated to members through Whatsapp group and through our blog.  
Members of Bangalore chapter of MAAM are free to join with us  or arrange a separate tour and strengthen the Bangalore chapter.  
-KM
Organising Secretary


No comments:

Post a Comment