![]() |
DECCAN HERALD |
![]() |
UDAYAVANI |
![]() |
VIJAYKARNATAKA |
![]() |
PRAJAVANI |
![]() |
VISHWAVAANI |
![]() |
HOSADIGANTHA |
![]() |
VIJAYVANI |
![]() |
Kannadaprabha |
![]() |
Bfirst.in |
![]() |
Bfirst.in |
![]() |
SAMYUKTHA KARNATAKA |
INAUGURATION |
ಅಲ್ಲಿ ಆದೆಷ್ಟೋ ವರ್ಷಗಳ ನಂತರದ ಭೇಟಿಯ ಸಂಭ್ರಮವಿತ್ತು, ಸಹಪಾಠಿಗಳ ಜೊತೆ ಕಾಲೇಜು ದಿನಗಳಲ್ಲಿ ಬೆರೆತ ಆದೆಷ್ಟೋ ನೆನಪುಗಳನ್ನು ಮೆಲುಕು ಹಾಕುತ್ತಾ, ನೆನಪಿನ ಜೊತೆಗೆ ಕಣ್ಣಂಚಿನಲ್ಲಿ ಅದೆಲ್ಲೋ ಅಲ್ಪ ಸಲ್ಪ ಕಣ್ಣೀರು, ಹಳೆಯ ಗೆಳತನದ ಜೊತೆಗೆ ಹೊಸ ನಗುವಿನೊಂದಿಗೆ ಎಲ್ಲೋ ಇದ್ದ ಸಹಪಾಠಿಗಳ ಪುನರ್ ಮಿಲನಕ್ಕೆ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳ ಸಭಾಂಗಣ ದಲ್ಲಿ ಭಾನುವಾರ ಜರಗಿದ ‘ಸಂಗಮಾ’ ಮಂಗಳೂರು ವಿ.ವಿಯ ಹಳೇ ವಿದ್ಯಾರ್ಥಿಗಳ ಮಂಗಳ ಅಲ್ಯುಮಿನಿ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮ ಸಾಕ್ಷಿಯಾಯಿತು.
ವಜ್ರೇಶ್ವರಿ ತಪ್ಪಿದಲ್ಲಿ ಜ್ಯೋತಿ ಬಸ್ಸಿನ ಮೂಲಕ ಪ್ರಯಾಣ. ಮಂಗಳೂರಿನಿಂದ ಕೊಣಾಜೆಯವರೆಗೆ ಪ್ರಯಾಣಿಸಿದವರು ರಾಮಣ್ಣನ ಹೊಟೇಲಿನಲ್ಲಿ ಚಹಾ ಸವಿದು ಪಾಠವನ್ನು ಆಲಿಸುತ್ತಿದ್ದೆವು. ಇದೀಗ ಅದೆಲ್ಲಾ ನೆನಪು ಮಾತ್ರ. ಇಂತಹ ಸವಿನೆನಪುಗಳನ್ನು ಮೆಲುಕು ಹಾಕುತ್ತಲೇ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಕಾರ್ಯಕ್ರವನ್ನು ಉದ್ಘಾಟಿಸಿದ ಕಲ್ಲಿಕೋಟೆ ಹಾಗೂ ಕಣ್ಣೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಅಬ್ದುಲ್ ರೆಹೆಮಾನ್ ಬಹಳ ವರ್ಷಗಳ ಹಿಂದೆ ಸ್ಥಾಪನೆಗೊಂಡ ಮಂಗಳೂರು ವಿಶ್ವವಿದ್ಯಾನಿಲಯಕ್ಕೂ ಇಂದಿನ ವಿಶ್ವವಿದ್ಯಾನಿಯಕ್ಕೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದಾಗಿದೆ. ಶೈಕ್ಷಣಿಕ, ಸಾಂಸ್ಕೃತಿಕ ಬದಲಾವಣೆಯ ಜತೆಗೆ ವಿನ್ಯಾಸದಲ್ಲೂ ಬದಲಾವಣೆಯಾಗಿದೆ. 35 ವರ್ಷಗಳ ಹಿಂದೆ ಕೊಣಾಜೆ ವಿಶ್ವವಿದ್ಯಾನಿಯದಲ್ಲಿ ಈಗ ಇರುವ ಹಾಗೆ ವಾಹನಗಳ ವ್ಯವಸ್ಥೆ ಇರಲಿಲ್ಲ. ಪ್ರಸ್ತುತ ಇರುವ ವಿಜ್ಞಾನ ಕೇಂದ್ರ ಕಟ್ಟಡದ ಬಳಿ ಕೇವಲ ಒಂದೇ ಮರವಿದ್ದಿತ್ತು. ಅಂದು ತೊಕ್ಕೊಟು ಹಾಗೂ ಕುತ್ತಾರು ಪ್ರದೇಶಕ್ಕೆ ರಸ್ತೆಯೇ ಇರಲಿಲ್ಲ. ಕೋಟೆಕಾರು ಬೀರಿ ಮೂಲಕ ಕೊಣಾಜೆಗೆ ಇದ್ದಂತಹ ಸಿಪಿಸಿ, ಭಾರತ್ ಹಾಗೂ ವಜ್ರೇಶ್ವರಿ ಹೆಸರಿನ ಕೇವಲ ಮೂರೇ ಬಸ್ಸುಗಳು ಎಂದಿಗೂ ಸ್ಮರಣೀಯ. ಅದರಲ್ಲಿ ಪ್ರಯಾಣಿಸಿ ಕ್ಲಾಸುಗಳಲ್ಲಿ ಕುಳಿತು ಕೊಳ್ಳಲು ಕುರ್ಚಿ ಮೇಜುಗಳ ವ್ಯವಸ್ಥೆ ಇರಲಿಲ್ಲ. ಕೊಣಾಜೆ ತುಂಬಾ ದೂರ ಹಾಗೂ ವಾಹನಗಳ ವ್ಯವಸ್ಥೆ ಇಲ್ಲದೇ ಇದ್ದ ಕಾರಣ ಯಾವ ಉಪನ್ಯಾಸಕರು ಒಪ್ಪದ ಸ್ಥಿತಿಯಿತ್ತು. ಆದರೆ ಇಂದು ಮಂಗಳೂರು ವಿವಿ ದೇಶದ ಎಲ್ಲಾ ವಿವಿಗಳ ಸಾಲಿನಲ್ಲಿ ಮುಂದುವರೆದು ವಿದೇಶದಲ್ಲೂ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಅದರಲ್ಲೂ ಹಳೆ ವಿದ್ಯಾರ್ಥಿಗಳು ಜೊತೆಗೆ ಸೇರುವಂತಹ ಕಾಯಕ್ರಮ ಶ್ಲಾಘನೀಯ. ಅಲ್ಯುಮಿನಿ ಅಸೋಸಿಯೇಷನ್ ಅಭಿವೃದ್ಧಿ ಹೊಂದಿದ್ದಲ್ಲಿ , ಅದು ನ್ಯಾಕ್ ಮಾನ್ಯತೆಯನ್ನೂ ಪಡೆಯುವಲ್ಲಿ ಸಹಕಾರಿಯಾಗುವುದು. ಹಲವು ವಿ.ವಿಗಳು ಕೇವಲ ನ್ಯಾಕ್ ಮಾನ್ಯತೆಗೆ ಹಳೇ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸುತ್ತಿದೆ. ಇಂತಹ ಸಂಘಗಳಲ್ಲಿ ಹಣದ ಕ್ರೋಢೀಕರಣದ ಜತೆಗೆ ಮೌಲ್ಯಯುತವಾದ ಕಾರ್ಯಕ್ರಮಗಳನ್ನು ನೀಡುವಲ್ಲಿ ಯಶಸ್ವಿಯಾಗಬೇಕಿದೆ ಎಂದರು.
ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಹಳೇ ವಿದ್ಯಾರ್ಥಿ ಸಂಘ ಮಾದ ಗೌರವಾಧ್ಯಕ್ಷ ಅನಂತ ಕೃಷ್ಣ ಮಾತನಾಡಿ, ಮನುಷ್ಯ ಕಲಿತು ಎಷ್ಟು ದೊಡ್ಡ ಮಟ್ಟಕ್ಕೆ ಬೆಳೆದರೂ ಆತ ಕಲಿತ ಶಾಲೆ ಅಥವಾ ಕಾಲೇಜಿಗೆ ಬರುವಾಗ ಮತ್ತೆ ವಿದ್ಯಾರ್ಥಿಯ ಅನುಭವದ ಜೊತೆಗೆ ಭಾವನೆಗಳನ್ನು ಹೊರಹೊಮ್ಮಲು ಸಾಧ್ಯ. ಅದೇ ಭಾವನೆಯಿಂದ ಹಳೆ ವಿದ್ಯಾರ್ಥಿ ಸಂಘ ಸ್ಥಾಪನೆಯಾಗಿದೆ. 1968 ರ ಮೈಸೂರು ವಿಶ್ವವಿದ್ಯಾನಿಲಯದ ಒಂದು ಅಧ್ಯಯನ ಸಂಸ್ಥೆಯಾಗಿ ಮಂಗಳಗಂಗೋತ್ರಿ ಅಧ್ಯಯನ ಕೇಂದ್ರ ಕೊಣಾಜೆಯಲ್ಲಿ ಸ್ಥಾಪನೆಗೊಂಡಿತ್ತು. ಕ್ರಮೇಣ ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಯಿತು. ಕನ್ನಡ, ಗಣಿತಶಾಸ್ತ್ರ ಮತ್ತು ಭೌತ ಶಾಸ್ತ್ರದ ಸ್ನಾತಕೋತ್ತರ ವಿಭಾಗಗಳು ಮೊದಲಿಗೆ ಕಾರ‌್ಯಾಚರಿಸಲು ಆರಂಭಿಸಿತು. ಕಟ್ಟಡಗಳು ಇಲ್ಲದಿದ್ದರೂ ಮೌಲ್ಯಯುತ ಶಿಕ್ಷಣಕ್ಕೆ ಯಾವುದೇ ಕೊರತೆಯಿರಲಿಲ್ಲ. ಅದೇ ಕಾರಣಕ್ಕೆ ಜಿಲ್ಲೆಯಿಂದ ಹೊರಗೆ ಹೋದಾಗ ಮಂಗಳೂರಿನ ವಿದ್ಯಾಭ್ಯಾಸ , ಬ್ಯಾಂಕಿಂಗ್ ವ್ಯವಸ್ಥೆ, ಅತಿಥಿ ಸತ್ಕಾರ, ಹೊಟೇಲುಗಳು ಶ್ಲಾಘನೆಗೆ ಪಾತ್ರವಾಗಿದೆ. 6 ವೈದ್ಯಕೀಯ ಕಾಲೇಜುಗಳು, 12 ಇಂಜಿನಿಯರಿಂಗ್ ಕಾಲೇಜುಗಳು 200 ಕ್ಕೂ ಅಧಿಕ ಕಲೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಕಾಲೇಜುಗಳು ಇರುವ ದಕ್ಷಿಣ ಕನ್ನಡ ಜಿಲ್ಲೆ ದೇಶಲ್ಲಿಯೇ ನಂಬರ್ ಒನ್ ಅನಿಸಿದೆ. ಇದರ ಕೀರ್ತಿ ಮಂಗಳೂರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ದೇಶದ ಯಾವುದೇ ಭಾಗಕ್ಕೆ ಹೋಗಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂದು ಹೇಳಿಸಿಕೊಳ್ಳಲು ಹೆಮ್ಮೆಯಾಗುತ್ತದೆ. ಬ್ಯಾಂಕಿಂಗ್‌ನಲ್ಲಿ 1905 ರಿಂದ 1945ರ ವರಗೆ ಈ ಜಿಲ್ಲೆಯಲ್ಲಿ 22 ಬ್ಯಾಂಕ್ ಗಳಿದ್ದವು. ಆನಂತರ ಮಿಲನ ಹೊಂದಿ 5 ಬ್ಯಾಂಕ್ ಉಳಿಯಿತು. ಅವುಗಳಲ್ಲಿ 4 ರಾಷ್ಟ್ರೀಯ ಬ್ಯಾಂಕ್ ಗಳಾಗಿ ಪರಿವರ್ತನೆಹೊಂದಿತ್ತು. ಭಾರತದಂತಹ ದೇಶದಲ್ಲಿ ಒಂದೇ ಜಿಲ್ಲೆಯಿಂದ 4 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ನೀಡಿದ ಕೀರ್ತಿ ಅದು ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲುವ ಮೂಲಕ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯನ್ನು ಜಿಲ್ಲೆ ನೀಡಿದೆ ಅನ್ನುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಟಯರ್ ಪಂಕ್ಚರ್ ಮಾಡಿದವರು ನೀವೇನಾ ?
ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಮೀಷನರ್, ಹಿರಿಯ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ಮಂಗಳೂರು ವಿ.ವಿ.ಯ ಹಳೇ ವಿದ್ಯಾರ್ಥಿ. ಸನ್ನಿವೇಶವೊಂದನ್ನು ವಿವರಿಸಿದ ಅವರು ‘ ಹಿಂದೆ ಪ್ರೊಫೆಸರ್ ಓರ್ವರನ್ನು ಭೇಟಿ ಮಾಡಲು ಹೊರಟಾಗ, ಅವರು ಉತ್ತಮವಾಗಿಯೇ ಬರಮಾಡಿಕೊಂಡರು. ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡವರು ನೀವು, ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದೀರೆಲ್ಲಾ ಅಂತೆಲ್ಲಾ ಹೊಗಳಿದರು. ಕಡೆಯದಾಗಿ ವಿಶ್ವವಿದ್ಯಾನಿಲಯದ ಹೆಸರು ಪ್ರಸ್ತಾಪಿಸಿದಾಗ , ಬ್ಯಾಚ್ ನ ವರ್ಷವನ್ನು ಪ್ರೊಫೆಸರ್ ಕೇಳಿದ್ದರು. ವರ್ಷ ಹೇಳುತ್ತಿದ್ದಂತೆ ಅಯ್ಯೋ ಆವತ್ತು ಟಯರ್ ಪಂಕ್ಚರ್ ಮಾಡಿದವರು ನೀವೇನಾ ಅಂತಹ ಪ್ರೊಫೆಸರ್ ಕೇಳುತ್ತಿದ್ದಂತೆ , ಅವರ ಕಚೇರಿಯಿಂದ ಕಾಲ್ಕಿತ್ತೆನು’ ಎಂದು ವಿ.ವಿಯಲ್ಲಿ ಕಲಿಯುವ ವೇಳೆ ನಡೆಸಿದ ತುಂಟತನವನ್ನು ಹೇಳಿಕೊಂಡರು.
ಮಂಗಳೂರು ವಿ.ವಿ ಕುಲಸಚಿವ ಡಾ.ಕೆ.ಎಂ.ಲೋಕೇಶ್, ಮಾಮ್‌ನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ಮುಖ್ಯ ಅತಿಥಿಗಳಾಗಿದ್ದರು.
ಸಂಗಮ ಕಾರ್ಯಕ್ರಮದ ಸಂಚಾಲಕ, ಮಾಮ್ ಗೌರವಾಧ್ಯಕ್ಷ ವೇಣುಶರ್ಮ ‘ಮಾ’ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಸಂಗಮ ಸಮಾವೇಶದ ಸಂಚಾಲಕ ಪ್ರೊ.ಪಿ.ಎಲ್.ಧರ್ಮ ಪ್ರಾಸ್ತಾವಿಕ ಮಾತನಾಡಿದರು. ಸಂಗಮದ ಸಂಘಟನಾ ಕಾರ್ಯದರ್ಶಿ ಚಂದ್ರಹಾಸ್ ವಂದಿಸಿದರು. ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ನಿರೂಪಿಸಿದರು.
QUOTE:
ರಾಜಕಾರಣಕ್ಕೆ ಏರಲು ಮಂಗಳೂರು ವಿ.ವಿಯಲ್ಲಿ ಕಲಿತ ಪಾಠವೂ ಕಾರಣವಾಯಿತು. ಇಲ್ಲಿನ ಆದರ್ಶಯುತ ಕಲಿಕೆ, ವಿದ್ಯಾರ್ಥಿಗಳ ಜತೆಗಿನ ಬೆರೆಯುವಿಕೆಯಿಂದ ಜನಪ್ರತಿನಿಧಿಯಾಗಲು ಸಾಧ್ಯವಾಯಿತು. ಅಂತಹ ದಿನಗಳನ್ನು ಮತ್ತೆ ಮೆಲುಕು ಹಾಕುವಂತಹ ಕಾರ್ಯಕ್ರಮವನ್ನು ಒದಗಿಸಿಕೊಟ್ಟಂತಹ ಹಳೇ ವಿದ್ಯಾರ್ಥಿ ಸಂಘದ ಕಾರ‌್ಯ ಶ್ಲಾಘನಾರ್ಹ
-ನಿಂಗಯ್ಯ, ಮಾಜಿ ಸಚಿವ ಹಾಗೂ ಮೂಡಿಗೆರೆ ಶಾಸಕ
------------------------------
ಮಾಮ್ ವೆಬ್ ಸೈಟ್ ಅನಾವರಣ
ಈ ಸಂದರ್ಭ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಇದರ ವೆಬ್ ಸೈಟ್ maammangalore.comನ್ನು ಉದ್ಘಾಟಿಸಲಾಯಿತು. ಮಾ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ವೆಬ್ ಸೈಟಿಗೆ ಚಾಲನೆ ನೀಡಿದರು. ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಪ್ರಾಸ್ತಾವಿಕ ಮಾತನಾಡಿದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಾಮ್ ಉಪಾಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಬಾಲಕೃಷ್ಣ ಹೊಳ್ಳ, ಯೋಗೀಶ್ ಹೊಳ್ಳ ಸಹಿತ ಸುಮಾರು 30ರಷ್ಟು ಮಂದಿ ಎಂಸಿಜೆ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು.
..................
MAPS ಉದ್ಘಾಟನೆ
ಸಮಾರಂಭದಲ್ಲಿ ಮಂಗಳೂರು ವಿ.ವಿ.ರಾಜ್ಯಶಾಸ್ತ್ರ ಹಳೆ ವಿದ್ಯಾರ್ಥಿಗಳ ಸಂಘ ಮಾಪ್ಸ್ (ಮಂಗಳಾ ಅಲ್ಯೂಮ್ನಿ ಪೊಲಿಟಿಕಲ್ ಸೈನ್ಸ್) ಉದ್ಘಾಟನೆ ನಡೆಯಿತು. ಮಾಪ್ಸ್ ಅಧ್ಯಕ್ಷ ಕ್ಸೇವಿಯರ್ ಡಿಸೋಜ, ಸಹ ಕಾರ್ಯದರ್ಶಿ ನಯನಾ, ಕಾರ್ಯಕಾರಿಣಿ ಸಮಿತಿಯ ರಮೀಝಾ, ಸಂಘದ ಗೌರವಾಧ್ಯಕ್ಷ ಡಾ.ಪಿ.ಎಲ್.ಧರ್ಮ ಮತ್ತಿತರರು ಹಾಜರಿದ್ದರು.
..............
ಜೊತೆಗೆ ಯೋಗ ವಿಜ್ಞಾನ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯೂ ನಡೆಯಿತು. ವಿಭಾಗ ಅಧ್ಯಕ್ಷ ಡಾ.ಕೆ.ಕೃಷ್ಣ ಶರ್ಮ, ಡಾ.ತಿರುಮಲೇಶ್, ಡಾ.ಉದಯಕುಮಾರ್ ಮತ್ತಿತರರು ಹಾಜರಿದ್ದರು.
-ಸಮಾರಂಭದ ವರದಿ: ವಜ್ರ ಗುಜರನ್ ಮಾಡೂರು.
(ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಕಟ್ಟಿಂಗ್ಸ್ ಲಗತ್ತಿಸಲಾಗಿದೆ)
No comments:
Post a Comment