ಮಾಮ್ ಸಂಪನ್ಮೂಲ ವ್ಯಕ್ತಿಗಳ ಸಹಯೋಗದಲ್ಲಿ ಮಂಗಳೂರು ವಿ.ವಿ.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಸರಣಿ ಉಪನ್ಯಾಸ (ಲೆಕ್ಚರ್ ಸೀರೀಸ್) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಸರಣಿಯ ದ್ವಿತೀಯ ಉಪನ್ಯಾಸ/ಸಂವಾದ ಕಾರ್ಯಕ್ರಮ ಫೆ.14ರಂದು ಮಂಗಳವಾರ ಎಂಸಿಜೆ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.
ಪತ್ರಕರ್ತ, ಬಿಫಸ್ಟ್ ಡಾಟ್ ಇನ್ ವೆಬ್ ಪೋರ್ಟಲ್ ಮುಖ್ಯಸ್ಥ ನವೀನ್ ಅಮ್ಮೆಂಬಳ ಅವರು ಆನ್ ಲೈನ್ ಜರ್ನಲಿಸಂ ಸಂಬಂಧಿಸಿದ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಆನ್ ಲೈನ್ ಜರ್ನಲಿಸಂನ ಪ್ರಾಮುಖ್ಯತೆ, ಮಿತಿಗಳು, ಸಿಜಿಝನ್ ಜರ್ನಲಿಸಂ, ಸವಾಲುಗಳು, ಮುದ್ರಣ ಮಾಧ್ಯಮ ಹಾಗೂ ಆನ್ ಲೈನ್ ಜರ್ನಲಿಸಂಗಿರುವ ವ್ಯತ್ಯಾಸಗಳು ಇತ್ಯಾದಿಗಳ ಕುರಿತು ಅವರು ಮಾಹಿತಿ ನೀಡಿದರು.
ಮೇಘಲಕ್ಷ್ಮೀ ಸ್ವಾಗತಿಸಿದರು. ಶಿಲ್ಪಾ ವಂದಿಸಿದರು. ವಿಭಾಗ ಮುಖ್ಯಸ್ಥರಾದ ಪ್ರೊ.ವಹೀದಾ ಸುಲ್ತಾನ, ಅತಿಥಿ ಉಪನ್ಯಾಸಕ ಸಂದೀಪ್, ಮಾಮ್ ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಮತ್ತಿತರರು ಹಾಜರಿದ್ದರು.
ಮಾಮ್ ಸರಣಿ ಉಪನ್ಯಾಸದಡಿ ಮಾಮ್ ಸಂಘಟನೆಯ ಇನ್ನೂ ಮೂವರು ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಿದ್ದಾರೆ.
PHOTOS: Karthik.
No comments:
Post a Comment