A.V.Balakrishna Holla (Udayavni Editor) speaking in MCJ Department seminar hall on 08.02.2017 Subject: Editing |
ಮಾಮ್ ಸಂಪನ್ಮೂಲ ವ್ಯಕ್ತಿಗಳ ಸಹಯೋಗದಲ್ಲಿ ಮಂಗಳೂರು ವಿ.ವಿ.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಸರಣಿ ಉಪನ್ಯಾಸ (ಲೆಕ್ಚರ್ ಸೀರೀಸ್) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಸರಣಿಯ ಪ್ರಥಮ ಉಪನ್ಯಾಸ/ಸಂವಾದ ಕಾರ್ಯಕ್ರಮ ಫೆ.8ರಂದು ಬುಧವಾರ ಎಂಸಿಜೆ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.
ಉದಯವಾಣಿ ಮಣಿಪಾಲ ಆವೃತ್ತಿಯ ಸಂಪಾದಕ ಎ.ವಿ.ಬಾಲಕೃಷ್ಣ ಹೊಳ್ಳ ಅವರು ಎಡಿಟಿಂಗ್‌ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ವಿದ್ಯಾರ್ಥಿ ಮಹಾಂತೇಶ್ ಸ್ವಾಗತಿಸಿದರು. ಜಯರಾಜ್ ಕಾರ್ಯಕ್ರಮ ನಿರೂಪಿಸಿದರು. ವಿಭಾಗ ಮುಖ್ಯಸ್ಥರಾದ ಪ್ರೊ.ವಹೀದಾ ಸುಲ್ತಾನ, ಪ್ರಾಧ್ಯಾಪಕ ಪ್ರೊ.ಜಿ.ಬಿ.ಶಿವರಾಂ, ಅತಿಥಿ ಉಪನ್ಯಾಸಕರಾದ ನಮ್ರತಾ, ದೀಪ್ತಿ ಹಾಗೂ ಸಂದೀಪ್, ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್ ವೈ., ಮಾಮ್ ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಕುರಿತು ಮಾಹಿತಿ ನೀಡಲಾಯಿತು.
ಮಾಮ್ ಸರಣಿ ಉಪನ್ಯಾಸದಡಿ ಮಾಮ್ ಸಂಘಟನೆಯ ಇನ್ನೂ ನಾಲ್ವರು ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಿದ್ದಾರೆ.
--------------------
MCJ Student's reaction:
ಎಡಿಟಿಂಗ್ ತಂತ್ರದ ಮಹತ್ವ ಗೊತ್ತಾಯಿತು...
ಉದಯವಾಣಿ ಪತ್ರಿಕೆಯ ಸಂಪಾದಕರಾದ ಎ.ವಿ.ಬಾಲಕೃಷ್ಣ ಹೊಳ್ಳರು ಫೆಬ್ವವರಿ 8, 2017ರಂದು ಬುಧವಾರ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಮಾಮ್ ಸಹಯೋಗದಲ್ಲಿ ನಡೆದ ಉಪನ್ಯಾಸ ಸರಣಿಯ ಮೊದಲ ತರಗತಿಯಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ "ಸಂಕಲನ ಮತ್ತು ಅದರ ಪ್ರಾಮುಖ್ಯತೆ " ಯ ಕುರಿತು ಮಾತನಾಡಿದರು.
ಅವರು ಹೇಳಿದ್ದು ಇಷ್ಟು...
ವ್ಯಕ್ತಿ ಗೆ ಅನುಭವ ಆದಂತೆ ಜೀವನದ ಸೂಕ್ತ ದಾರಿಯ ಅರಿವು ಆಗುತ್ತದೆ. ಅನುಭವವೇ ದೊಡ್ದ ಜ್ಞಾನ ಭಂಡಾರ. ಪತ್ರಿಕೋದ್ಯಮದಲ್ಲಿ ಯೂ ಹಾಗೆಯೇ ಅನುಭವಸ್ಥ ಪತ್ರಿಕೋದ್ಯಮಿಗಳು ಯುವ ಪತ್ರಿಕೋದ್ಯಮಿಗಳಿಗೆ ಮಾರ್ಗಸೂಚಿಗಳಾಗುತ್ತಾರೆ.
ಅದರಂತೆ ಪತ್ರಿಕೋದ್ಯಮದಲ್ಲಿ ದೊಡ್ಡ ಸವಾಲಿನ ಹಾಗೂ ಜವಾಬ್ದಾರಿಯುತ ,ಜಾಗೃತೆಯಿಂದ ನಿವ೯ ಹಿಸಲೇಬೇಕಾಗಿರುವ ವೃತ್ತಿ ಎಂದರೆ ಸಂಕಲನ. ಹೌದು , ಬಾಲಕೃಷ್ಣ ಹೊಳ್ಳರು ತಮ್ಮ ವೃತ್ತಿಜೀವನದಲ್ಲಿ ಕಂಡುಂಡ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ:
ಎಡಿಟಿಂಗ್ ತಂತ್ರವು ಜಾಗರೂಕತೆಯಿಂದ ಮಾಡಬೇಕಾದ ಕಲೆ.ಹೆಚ್ಚಾಗಿ ಇವತ್ತು ವ್ಯಾಕರಣದಲ್ಲಿ ಎಡವುತ್ತಿದ್ದೇವೆ. ಮಂಗಳೂರು ಭಾಗದಲ್ಲಿ 'ಅ' ಹಾಗು 'ಹ' ಕಾರದಲ್ಲಿ ತುಂಬಾ ವ್ಯತ್ಯಾಸ ಕಂಡುಬರುತ್ತಿದೆ. ವ್ಯಾಕರಣ ದೋಷ ಸರಿಪಡಿಸುವ ಅವಶ್ಯಕತೆ ಇಂದು ತಲೆದೋರಿದೆ.
ಏಕವಚನ ಮತ್ತು ಬಹುವಚನದ ಕುರಿತು ಗಮನ ಹರಿಸಬೇಕಾದ ಅವಶ್ಯಕತೆ ಇದೆ. ಸಾಮಾನ್ಯವಾಗಿ ಯುವ ಪತ್ರಕರ್ತರಲ್ಲಿ ವಿಸ್ತಾರವಾದ ಜ್ಞಾನದ ಕೊರತೆ ಕಂಡುಬರುತ್ತದೆ. ರಾಜಕೀಯ ವರದಿ ಮಾಡುವಾಗ ಭಾಷೆಯ ಬಳಕೆಯಲ್ಲಿ ಜಾಗೃತರಾಗಿರಬೇಕು. ಎಂದು ಚುಟುಕು ಭಾಷೆಯಲ್ಲಿ ಎಡಿಟಿಂಗ್ ಪ್ರಾರಾಮುಖ್ಯತೆ ತಿಳಿಸಿದರು.
ನಿಜ ಅವರ ಮಾತು ಕೇಳಿದ ಬಳಿಕ ಪಠ್ಯದಿಂದ ಬರೀ ಅಂಕಗಳಿಸಬಹುದು.ಆದರೆ ಕ್ರಿಯಾಶೀಲ ವ್ಯಕ್ತಿಗಳ ಅನುಭವ ವೃತ್ತಿಯನ್ನು ಪ್ರಾಯೋಗಿಕವಾಗಿ ತಿಳಿಹೇಳಿದಾಗ ಮಾತ್ರ ಉತ್ತಮ ವಿಚಾರದ ಮಹತ್ವ ಗೊತ್ತಾಗುವುದು.
ವೃತ್ತಿಜೀವನದ ಅನುಭವ ಒಳ್ಳೆಯ ಶಿಕ್ಷಕನಂತೆ ರೂಪಿಸಿದನ್ನು ಕಂಡ ನನ್ನ ಕಣ್ಣು ಬಾಲಕೃಷ್ಣ ಸರ್ ಗೆ ಕೃತಜ್ಞತೆ .
ಮತ್ತೆ ಮತ್ತೆ ನಿಮ್ಮ ಮಾತುಗಳನ್ನು ಆಲಿಸುವಂತ ಅವಕಾಶ ಸಿಗಲಿ.
-ಪ್ರೇಮ,
ದ್ವಿತೀಯ ವರ್ಷದ
ಪತ್ರಿಕೋದ್ಯಮ ವಿಭಾಗ,
ಮಂಗಳೂರು ವಿಶ್ವವಿದ್ಯಾಲಯ
ಮಂಗಳಗಂಗೋತ್ರಿ.
No comments:
Post a Comment