Sunday, 30 August 2015

MAAM BENGALURU CHAPTER WORKING COMMITTE FIRST MEETING REPORT (29.08.2015)


ಬೆಂಗಳೂರುಮ್ಯಾಮ್ (ಮೀಡಿಯ ಅಲ್ಯುಮಿನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ) ಬೆಂಗಳೂರು ಶಾಖೆಯ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಶನಿವಾರ ನಡೆಯಿತು.
ಶಾಖೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ರೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರುನಲ್ಲಿ ‘ಮ್ಯಾಮ್‌’ನ ಮುಂದಿನ ಕಾರ್ಯಕ್ರಮಗಳ ಕುರಿತು ಚಿಂತನ-ಮಂಥನ ನಡೆಯಿತು.
ಸೆ. 11 ರಂದು ಮೊದಲ ಕಾರ್ಯಕ್ರಮ: ರಾಜ್ಯ ಪೊಲೀಸ್‌ ಇಲಾಖೆಯ ಸಿಐಡಿ ಘಟಕವು ಸೆಪ್ಟೆಂಬರ್‌ 10 ಮತ್ತು 11ರಂದು ಹಮ್ಮಿಕೊಂಡಿರುವ, ‘ಮಾನವ ಕಳ್ಳಸಾಗಣೆ’ ವಿಷಯದ ಕುರಿತ ಎರಡು ದಿನಗಳ ಕಾರ್ಯಾಗಾರಕ್ಕೆ ಮ್ಯಾಮ್‌’ ಸಹಯೋಗ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಮ್ಯಾಮ್‌ ಸದಸ್ಯೆ, ಸಿಐಡಿ ಎಸ್‌ಪಿ ಮಧುರಾ ವೀಣಾ ಅವರು ಕಾರ್ಯಾಗಾರದಲ್ಲಿ ತೊಡಗಿsಸಿಕೊಳ್ಳುವ ಅವಕಾಶವನ್ನು ಕಲ್ಪಿಸಿರುವ ಸಂಗತಿಯನ್ನು ‘ಮ್ಯಾಮ್‌’ನ ನಾಮ ನಿರ್ದೇಶಿತ ಸದಸ್ಯ ನವೀನ್‌ ಅಮ್ಮೆಂಬಳ ಅವರು ಸಭೆಯ ಗಮನಕ್ಕೆ ತಂದರು.

ನಾಸ್ಕಾಂ ಜೊತೆ ಗೂಡಿ ಸೈಬರ್‌ ಅಪರಾಧದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸುವ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಕಾಲೇಜುಗಳಲ್ಲಿ ಸುದ್ದಿ ಮಾಧ್ಯಮದ ಬಗ್ಗೆ ಉಪನ್ಯಾಸ ನೀಡುವ ಕಾರ್ಯಕ್ರಮಗಳು ಸೇರಿದಂತೆ ಮ್ಯಾಮ್‌ ಮೂಲಕ ರೂಪಿಸಬಹುದಾದ ಸಂಭಾವ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಮ್ಯಾಮ್‌ ನಾಮ ನಿರ್ದೇಶಿತ ಸದಸ್ಯರಾದ ದೀಪಕ್‌ ನಾಯ್ಕ್‌, ಇತರೆ ಸದಸ್ಯರಾದ ಅಂಬರೀಶ್‌ ಭಟ್‌, ಸದಾಶಿವ ಖಂಡಿಗೆ, ಅಜಿತ್‌ ಕುಮಾರ್‌, ಕಬೀರ್‌, ರಾಘವೇಂದ್ರ ಭಟ್‌, ಪ್ರಜ್ಞಾ ಪಾಲ್ತಾಡಿ ಮತ್ತು ಸೂರ್ಯನಾರಾಯಣ ಸಭೆಯಲ್ಲಿ ಭಾಗವಹಿಸಿದ್ದರು.

  ಕಾರ್ಯಕ್ರಮದ ವಿವರ

ಸೆಪ್ಟೆಂಬರ್‌ 11ರಂದು ನಡೆಯಲಿರುವ ಕಾರ್ಯಾಗಾರದಲ್ಲಿ ಬೆಳಿಗ್ಗೆ 10.15 ರಿಂದ 11.15 ರವರೆಗೆ ಒಂದು ಗಂಟೆ ಅವಕಾಶ ಮ್ಯಾಮ್‌ಗೆ ಸಿಕ್ಕಿದೆ. ಈ ಅವಧಿಯಲ್ಲಿ ಮಾನವ ಕಳ್ಳಸಾಗಣಿಕೆ ನಿಗ್ರಹದಲ್ಲಿ ಮಾಧ್ಯಮದ ಪಾತ್ರ’ ಎಂಬ ವಿಷಯದ ಮೇಲೆ ಇಬ್ಬರು (ಜ್ಯೋತಿ ಇರ್ವತ್ತೂರು ಮತ್ತು ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌) ಉಪನ್ಯಾಸ ನೀಡಲಿದ್ದಾರೆ. ಸ್ಥಳ ನಿಗದಿ ಇನ್ನಷ್ಟೇ ನಡೆಯಬೇಕಿದೆ. ಈ ಉಪನ್ಯಾಸದ ಅಧ್ಯಕ್ಷತೆಯನ್ನು ಮಧುರಾ ವೀಣಾ ವಹಿಸಿಕೊಳ್ಳಲಿದ್ದಾರೆ.
PHOTOS, REPORT: SOORYANARAYANA VAJRANGI.

Thursday, 27 August 2015

BLOOD DONATION CAMP @ MIFSE Mangalore REPORT (26.08.2015)









ಮಾಮ್ ಅಭಿಯಾನದ ಎರಡನೇ ಕಾರ್ಯಕ್ರಮ
ರಕ್ತದಾನದ ಮಹತ್ವ ಅರಿತುಕೊಳ್ಳಲು ಕರೆ


ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಆಶ್ರಯದಲ್ಲಿ ಹಮ್ಮಿಕೊಂಡಿರುವ ‘ರಕ್ತದಾನ ಅಭಿಯಾನ’ದ ಎರಡನೇ ಕಾರ್ಯಕ್ರಮ ಬುಧವಾರ ನಗರದ ಪಂಪ್‌ವೆಲ್ ಬಳಿ ಇರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫೈಯರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್(ಎಂಐಎಫ್‌ಎಸ್‌ಇ) ಕಾಲೇಜಿನಲ್ಲಿ ನಡೆಯಿತು. ಫೈಯರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್ ಸಂಸ್ಥೆಯ ಆಡಳಿತ ನಿರ್ದೇಶಕ  ವಿನೋದ್ ಕೆ. ಜಾನ್ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಸಂದರ್ಭ ಮಾತನಾಡಿದ ಅವರು ರಕ್ತದಾನದ ಮಹತ್ವ ಸಾರುವ ಹಿನ್ನೆಲೆಯಲ್ಲಿ  ಮಾಮ್ ಆಯೋಜಿಸಿರುವ ಈ ಅಭಿಯಾನ ಅರ್ಥಪೂರ್ಣವಾದುದು. ವಿದ್ಯಾರ್ಥಿಗಳು ಇಂತಹ ಚಟುವಟಿಕೆಯಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತುಕೊಳ್ಳಬೇಕು ಎಂದರಲ್ಲದೆ ಈ ಅಭಿಯಾನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಅತಿಥಿಯಾಗಿದ್ದ ದ.ಕ.ಜಿಲ್ಲಾ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ  ಕೆ.ವಿ.ನಾಗರಾಜ್ ಮಾತನಾಡಿ, ಪ್ರತಿ ವಿದ್ಯಾ ಸಂಸ್ಥೆಗಳಲ್ಲೂ ರಕ್ತದಾನದ ಮಹತ್ವ ಸಾರುವ ಕೆಲಸವಾಗಬೇಕು. ರಕ್ತದಾನ ಜೀವ ಉಳಿಸುವ ಪುಣ್ಯ ಕಾರ್ಯ ಎಂದರು.
ಎಂಐಎಫ್‌ಎಸ್‌ಇ ಸಂಸ್ಥೆಯ ಪ್ರಾಂಶುಪಾಲ ಯಶವಂತ ಶೆಟ್ಟಿಘಿ, ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್, ಗೌರವಾಧ್ಯಕ್ಷ  ವೇಣು ಶರ್ಮಾ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಮಂಗಳೂರು ಘಟಕದ ಅಧ್ಯಕ್ಷೃ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಮಾಮ್ ಸದಸ್ಯೆ ವಿದ್ಯಾ ಇರ್ವತ್ತೂರು ಮತ್ತಿತರರು ಉಪಸ್ಥಿತರಿದ್ದರು.


ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫೈಯರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್‌ನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ
ಮಾಡಿದರು. 


ಈ ರಕ್ತದಾನ ಅಭಿಯಾನ ಜಿಲ್ಲೆಯ ವಿವಿಧೆಡೆ ಮುಂದುವರಿಯಲಿದ್ದುಘಿ, ಪಾಲ್ಗೊಳ್ಳ ಬಯಸುವವರು  (೯೪೮೧೯೭೬೯೬೯), (೯೪೪೮೪೨೪೯೨೨) ಸಂಖ್ಯೆಯನ್ನು ಸಂಪರ್ಕಿಸಬಹುದು.

MEDIA SUPPORT FOR MAAM BLOOD DONATION CAMP AUGUST 26, 2015





Sunday, 23 August 2015

ಮಾಮ್‌ ವತಿಯಿಂದ ನಡೆದ ರಕ್ತದಾನ ಶಿಬಿರದ ಪತ್ರಿಕಾ ವರದಿಗಳು





ರಕ್ತಕ್ಕೆ ಪರ್ಯಾಯ ಇಲ್ಲ, ಅದು ಅತ್ಯಮೂಲ್ಯ

ರಕ್ತದಾನ ಶಿಬಿರ ಉದ್ಘಾಟಿಸಿ ಆರೋಗ್ಯ ಸಚಿವ ಯು.ಟಿ.ಖಾದರ್

ಮಂಗಳೂರು: "ಜ್ಞಾನ, ವೈದ್ಯಕೀಯ ತಂತ್ರಜ್ಞಾನ ಅದೆಷ್ಟೇ ಬೆಳೆದರೂ ರಕ್ತಕ್ಕೆ ಪರ್ಯಾಯ ಹುಡುಕುವುದು ಸಾಧ್ಯವಾಗಿಲ್ಲ. ಹಾಗಾಗಿ ರಕ್ತ ಪ್ರಪಂಚದಲ್ಲಿ ಅತ್ಯಮೂಲ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಿಲಾಗ್ರಿಸ್ ಕಾಲೇಜು, ರೆಡ್‌ಕ್ರಾಸ್, "ಮೀಡಿಯಾ ಅಲುಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ-ಮಾಮ್ , ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, "ಜ್ಞಾನ ಮನುಷ್ಯರನ್ನೂ ನಕಲಿ ಮಾಡುವಷ್ಟರ ಮಟ್ಟಿಗೆ ಬೆಳೆದರೂ ರಕ್ತಕ್ಕೆ ಪರ್ಯಾಯ ವಸ್ತುವನ್ನು ರೂಪಿಸಲು ಸಾಧ್ಯವಾಗಿಲ್ಲ, ಹಾಗಾಗಿ ರಕ್ತ ಅಮೂಲ್ಯ, ರಕ್ತದಾನ ಪವಿತ್ರ ಕಾರ್ಯ ಎಂದರು.
ಮೀಡಿಯಾ ಅಲುಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ-ಮಾಮ್ , ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಶನಿವಾರ ಉದ್ಘಾಟಿಸಿ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿದರು. 
"ಹಿಂದೆ ರಕ್ತದಾನ ಎಂದರೆ ದೊಡ್ಡ ಸೂಜಿ ಚುಚ್ಚಲಾಗುತ್ತಿತ್ತು, ಇದರಿಂದ ನೋವು ಆಗುತ್ತಿದ್ದು, ಜನ ರಕ್ತದಾನ ಮಾಡಲು ಹೆದರುತ್ತಿದ್ದರು. ಆದರೆ ಈಗ ಅಂತಹ ಸಮಸ್ಯೆಯಿಲ್ಲ, ಸೂಜಿ ಚುಚ್ಚುವುದೇ ತಿಳಿಯುವುದಿಲ್ಲ. "ವಿದ್ಯಾರ್ಥಿಗಳು ಯಾವುದೇ ಹೆದರಿಕೆಯಿಲ್ಲದೆ ರಕ್ತದಾನಕ್ಕೆ ಮುಂದಾಗಬೇಕು. ರಕ್ತದಾನದಿಂದ ಯಾವುದೇ ತೊಂದರೆ ಇಲ್ಲ. ನನ್ನ ರಕ್ತದಿಂದ ಇನ್ನೊಬ್ಬನ ಜೀವ ಉಳಿಯುತ್ತದೆ ಎನ್ನುವ ಭಾವನೆಯೊಂದಿಗೆ ರಕ್ತ ನೀಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ಮಹಾನಗರಪಾಲಿಕೆ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಮಾತನಾಡಿ, ರಕ್ತದಾನ ಮಾಡಿ ಜೀವ ಉಳಿಸುವುದು ಸಮಾಜದಲ್ಲಿ ಅತ್ಯಂತ ದೊಡ್ಡ ಕಾರ್ಯ ಎಂದರು.
ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ.ವಲೇರಿಯನ್ ಡಿ’ಸೋಜ ಶುಭ ಹಾರೈಸಿದರು. ರೆಡ್‌ಕ್ರಾಸ್ ಜಿಲ್ಲಾ ಶಾಖೆ ಅಧ್ಯಕ್ಷ ಪ್ರಭಾಕರ ಶ್ರೀಯಾನ್, ರೆಡ್‌ಕ್ರಾಸ್ ರಕ್ತನಿಧಿ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್‌, ಜೇಸಿ ಅಧ್ಯಕ್ಷ ಪೀಟರ್ ಪಿಂಟೊ, ಲಯನ್ಸ್ ಅಧ್ಯಕ್ಷೆ ಮಂದಾಕಿನಿ ಹಾಜರಿದ್ದರು.
"ಮಿಲಾಗ್ರಿಸ್ ಪ್ರಾಂಶುಪಾಲ ಮೈಕೆಲ್ ಸಾಂತುಮಯೇರ್ ಸ್ವಾಗತಿಸಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಮಮತಾ ಎನ್.ಆರ್. ವಂದಿಸಿದರು. ಒಟ್ಟು 76 ಮಂದಿ ಈ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ನೀಡಿದರು.

*ಅಭಿಯಾನ: ಮಾಮ್ ವತಿುಂದ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇದನ್ನು ಹಲವು ಕಾಲೇಜುಗಳಲ್ಲಿ ಮುಂದುವರಿಸಿಕೊಂಡು ಹೋಗಲಾಗುವುದು, ಇದೊಂದು ಮಹತ್ವದ ಜವಾಬ್ದಾರಿಯಾಗಿದ್ದು, ಸಮಾಜಕ್ಕೆ ಒಳಿತಾಗುವಂತಹ ಕಾರ್ಯ ಎಂದು ಮಾಮ್ ಅಧ್ಯಕ್ಷೆ ಫ್ಲೋರಿನ್ ತಿಳಿಸಿದ್ದಾರೆ.




Saturday, 22 August 2015


MAAM ರಕ್ತದಾನ ಶಿಬಿರಕ್ಕೆ ಚಾಲನೆ


ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಹಾಗೂ ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕಗಳ ಸಹಯೋಗದಲ್ಲಿ ಮಂಗಳೂರಿನ ಮಿಲಾಗ್ರೀಸ್‍ ಕಾಲೇಜಿನಲ್ಲಿ  ಆ. 22ರಂದು ರಕ್ತದಾನ ಶಿಬಿರ ನಡೆಯಿತು. ಕಾಲೇಜು,   ಮಧ್ಯಾಹ್ನ ವೇಳೆಗೆ 70 ಯೂನಿಟ್‍ ರಕ್ತ ಸಂಗ್ರಹವಾಗಿದೆ.

ರಕ್ತದಾನ ಶಿಬಿರಕ್ಕೆ ಮಾಮ್‍ ಸದಸ್ಯರ ಸಿದ್ಧತೆ. 
ಆ.22ರಿಂದ ವಿವಿಧೆಡೆ "ರಕ್ತದಾನ ಅಭಿಯಾನ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರು ವಿ.ವಿ.ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಘಟಕ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಜಾಗೃತಿ ಮೂಡಿಸಿ ರಕ್ತದಾನ ಸರಣಿ ಶಿಬಿರಗಳನ್ನು ಸಂಘಟಿಸುವುದು ಅಭಿಯಾನದ ಉದ್ದೇಶ.  ಮಿಲಾಗ್ರಿಸ್ ಕಾಲೇಜ್ ಸಂಚಾಲಕ ರೆ.ಫಾ.ವೆಲೇರಿಯನ್ ಡಿಸೋಜಾ, ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಮಂಗಳೂರು ಘಟಕ ಅಧ್ಯಕ್ಷ ಡಾ.ರೋನಾಲ್ಡ್ ಅನಿಲ್ ಫರ್ನಾಂಡಿಸ್, ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ವಿನೀತಾ ಕೆ., ಮಿಲಾಗ್ರಿಸ್ ಕಾಲೇಜ್ ಪ್ರಾಂಶುಪಾಲರಾದ ರೆ.ಫಾ.ಮೈಕಾಲ್ ಸಾಂತು ಮಾಯೆರ್, ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿ ಮಮತಾ ಇದ್ದರು.

ರಕ್ತದಾನ ಅಭಿಯಾನ ಸರಣಿಯ ಮುಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬಯಸುವವರು ಮಾಮ್ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು., ಸುಮಾರು 50ಕ್ಕೂ ಹೆಚ್ಚು ರಕ್ತದಾನಿಗಳನ್ನು ಹೊಂದಿರುವ ಆಸಕ್ತ ಸಂಘ ಸಂಸ್ಥೆಯವರ ಸಹಯೋಗದಲ್ಲಿ ಮಾಮ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗುವುದು.
ಆಸಕ್ತರು ಮಾಮ್ ಪದಾಧಿಕಾರಿಗಳಾದ ಫ್ಲೋರಿನ್ ರೋಚ್ (9880810329), ಕೃಷ್ಣಮೋಹನ (9481976969), ಕೃಷ್ಣಕಿಶೋರ್ (9448424922), ಅಥವಾ ಡಾ.ರೋನಾಲ್ಡ್ ಅನಿಲ್ ಫರ್ನಾಂಡಿಸ್ (9480656393) ಅವರನ್ನು ಸಂಪರ್ಕಿಸುವಂತೆ ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಹಾಗೂ ಗೌರವಾಧ್ಯಕ್ಷ ವೇಣು ಶರ್ಮ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ರಕ್ತದಾನ ಮಾಡುತ್ತಿರುವ ಸ್ಮಿತಾ ಶೆಣೈ

Wednesday, 19 August 2015

Knowledge of Current Affairs & Mass Media will enhance employability

Knowledge of Current Affairs & Mass Media will enhance employability – Florine Roche.

Florine Roche
MANGALORE: ‘Students must have fairly good knowledge of current affairs and must be in regular touch with the mass media. This will surely enhance the employability of a candidate. Students from different fields are entering journalism and mass communication not because it is glamorous but because the field is biggest sector providing job opportunities now ‘opined Florine Roche, President of Media Alumni Association of Mangalgangothri (MAAM). She was addressing the participants of inter departmental seminar on “Market Communication and Job Opportunities”, jointly organised by Department of Journalism, Data Processing, Computer Science and Secretarial Practice and M.Com of Besant Women’s College on at the PG auditorium of the college on August 7.
Dr. Sudha K, the College Principal, said, information must transcend into knowledge and thereon, to wisdom.  Education helps in developing a person to his or her full capacity, and prepares one to make contributions to the society. Job opportunities are umpteen but acquiring the skills and personal qualities to suit the requirements of the job is left to a person’s interest.
K. Devananda Pai, College Correspondent who presided over wished the participants well. Dr. Balaji Bhovi, Director, P.G. Studies, Venusharma,   Former President, MAAM and director of Ad Idea Advertising Agency,  Vivek Nambiar, Vice President, Innova Group of Institutions, Bengaluru were present on the stage. Smitha Shenoy, HOD of Journalism welcomed.
There were sessions on advertising, public relations and CSR activities, data processing and multimedia and on preparation of CV and facing interviews. Venusharma, Vivek Nambiar, Prof. Ranjini and Sri Mahesh Nayak, were the resource persons respectively. Around 200 students of UG and PG courses participated in the seminar.

ನಿರಂತರ ಮಾಧ್ಯಮ ಸಂಪರ್ಕ ಉದ್ಯೋಗ ಗಳಿಸುವಲ್ಲಿ ಸಹಾಯಕ


ಮಂಗಳೂರು: ಪ್ರಚಲಿತ ವಿದ್ಯಮಾನಗಳನ್ನು ತಿಳಿದಿರುವುದು ಹಾಗೂ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾದ್ಯಮಗಳು ನೀಡುವ ಪರಿಶೀಲಿಸುತ್ತಿರುವುದರಿಂದ ಲೋಕಜ್ಞಾನ ಹೆಚ್ಚಿ ವ್ಯಕ್ತಿತ್ವ ವಿಕಸನ ಆಗುತ್ತದೆ ಇದರಿಂದ ವಿದ್ಯಾರ್ಥಿಗಳು ಉದ್ಯೋಗ ಗಳಿಸುವಲ್ಲಿ ಸಹಕಾರಿಯಾಗುತ್ತಿದೆ ಎಂದು ಮ್ಯಾಮ್ (ಮೀಡಿಯ ಅಲ್ಯುಮಿನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ), ಅಧ್ಯಕ್ಕೆ ಹಾಗೂ ಆಕಾಶವಾಣಿಯ ಕಾರ್ಯಕ್ರಮ ನಿರ್ವಹಕಿ ಶ್ರೀಮತಿ ಪ್ಲೋರಿನ್ ರೋಚ್ ಅಭಿಪ್ರಾಯಪಟ್ಟರು. ಅವರು  ಬೆಸೆಂಟ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ,  ಡಾಟಾ ಪ್ರೊಸೆಸಿಂಗ್ ಹಾಗೂ ಕಂಪ್ಯೂಟರ್ ವಿಭಾಗ ಹಾಗೂ ಸ್ನಾತಕೋತ್ತರ ವಿಭಾಗ, ಇವರ ಜಂಟಿ ಆಶ್ರಯದಲ್ಲಿ ಬೆಸೆಂಟ್ ಕಾಲೇಜಿನ ಎಂ.ಕಾಂ. ಸಭಾಂಗಣದಲ್ಲಿ ಇಂದು (7ಆಗಸ್ಟ್)‘ಮಾರುಕಟ್ಟೆ ಸಂವಹನ ಮತ್ತು ಉದ್ಯೋಗವಕಾಶಗಳು’ ಎಂಬ ವಿಷಯದ ಬಗ್ಗೆ ಆಯೋಜಿಸಲಾದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರು ಡಾ. ಸುಧಾ ಕೆ, ಮಾತನಾಡಿ ಮಾಹಿತಿ, ಜ್ಞಾನವಾಗಿ ನಂತರ ಪರಿಜ್ಞಾನವಾಗಿ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಇದೇ ಶಿಕ್ಷಣದ ಗುರಿ. ಉದ್ಯೋಗವಕಾಶಗಳು ತಾವಾಗಿಯೇ ಹುಡುಕಿಕೊಂಡು ಬರಬೇಕಾದರೆ ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಉನ್ನತ ವಿಚಾರಗಳನ್ನು ಹೊಂದಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಸಂಚಾಲಕರಾದ ಶ್ರೀ ಕೆ. ದೇವಾನಂದ ಪೈ ಅವರು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾದ ಡಾ.ಬಾಲಾಜಿ ಬೋವಿ, ಆಡ್ ಐಡಿಯ ಜಾಹೀರಾತು ಸಂಸ್ಥೆಯ ನಿರ್ದೇಶಕರಾದ ಶ್ರೀ ವೇಣುಶರ್ಮ ಹಾಗೂ ಮ್ಯಾಮ್‍ನ ಸದಸ್ಯ ಹಾಗೂ ಬೆಂಗಳೂರಿನ ಇನ್ನೋವಾ ಸಂಸ್ಥೆಗಳ ಉಪಾಧ್ಯಕ್ಷರಾಗಿರುವ ಶ್ರೀ ವಿವೇಕ ನಂಬಿಯಾರ್, ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸ್ಮಿತಾ ಶೆಣ್ಯೆಸ್ವಾಗತಿಸಿದರು.
ಗೋಷ್ಠಿಗಳನ್ನು ಶ್ರೀ ವೇಣುಶರ್ಮ, ಶ್ರೀ ವಿವೇಕ ನಂಬಿಯಾರ್, ಮಂಗಳೂರು ಟುಡೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು ಶ್ರೀ ಮಹೇಶ್ ನಾಯಕ್ ಹಾಗೂ ಪ್ರೊ. ರಂಜಿನಿ, ಸೆಕ್ರೆಟೇರಿಯಲ್ ಪ್ರಾಕ್ಟೀಸ್ ವಿಭಾಗದ ಉಪನ್ಯಾಸಕಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

MAAM The New Edition @ BANGALURU

MAAM BANGALURU CHAPTER MEET REPORT HELD ON 8th AUGUST 2015
---------------------

MANGALORE: The Bangalore chapter of Media Alumni Association of Mangalagangotri (MAAM) was formally launched on August 8, 2015 at a meeting of the alumni held at the Bangalore Press Club in Bengaluru.     About 30 alumni from Bengaluru working for  diverse media and five office bearers of  from Mangalore participated in the meeting leading to the formal launching of the Bangalore chapter.  

Five office bearers of MAAM including President Florine Roche, Honorary President Venu Sharma, Secretary Krishnama Mohana  Talengala, Vice President Ronald Anil Fernandes,  and PRO Krishna Kishore travelled to Bengaluru to pave the way for the formation of the Bengaluru Chapter.    The members met at the Press  Club over lunch   and spent about two hours discussing ways and means of strengthening MAAM.
MAAM  team Mangaluru- Bangaluru
The meeting began with Florine Roche giving a brief introduction  about the circumstances that led to the formation of MAAM in December 2014   and the journey so far.  She emphasized the need of forming a Bangalore Chapter of MAAM     to strengthen the alumni association.  Honorary President of MAAM Venu Sharma
 stated that MAAM is a registered body now and it has made its presence felt by conducting various programmes including the successful ‘Manobhinandana’ programme.
The Bangalore chapter members unanimously elected Prashant Rai as the General Secretary of the Bangalore chapter.  Other members elected to the working committee are    1. Ambareesh Bhat 2. Sooryanarayana  3.  Srinivas  4. Navitha Jain  5.  Raghavendra Bhat  6.  Sadashiva 7.  Ramachandra Muliya  8.  Ajith Kumar 9.  Manjunath Hebbar 10 .  Vivek Nambiar.
In addition to these office bearers of MAAM from Bengaluru elected and  coopted  during the AGM  namely  Naveen Amembal,  Deepak K , Suprabha    and automatically become working committee members.
Mr Prashanth Rai, accepted the responsibility to work as General Secretary and said he will work towards the set goal with the active support and cooperation of MAAM members of both Bengaluru and Mangalore.
It was decided to form a Whatsapp group of Bengaluru MAAM members to facilitate communication among them.  Vivek Nambiar and Naveen ammembala has been given this responsibility.  Members of Bengaluru chapter decided to meet over lunch on 4th Saturday of every month at the Press Club to chalk out their programmes and plans.
Joint Secretary of MAAM who is also member of Bangalore chapter Naveen Ammembala said   plans are afoot to organize a seminar on cyber crime in association with NASCOM and police department of Bengaluru within the next 2 months.

ಮಾಮ್ ಬೆಂಗಳೂರು ಶಾಖೆಗೆ ಚಾಲನೆ

ಮಂಗಳೂರು: ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ(ಮಾಮ್) ಇದರ ಬೆಂಗಳೂರು ಶಾಖೆಗೆ ಚಾಲನೆ ನೀಡಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಶಾಖೆ ಆರಂಭಿಸಲಾಗಿದ್ದು ಬೆಂಗಳೂರು ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ರೈ, ಸದಸ್ಯರಾಗಿ ಅಂಬರೀಶ್ ಭಟ್, ಸೂರ್ಯನಾರಾಯಣ, ಶ್ರೀನಿವಾಸ್, ನವಿತಾ ಜೈನ್, ರಾಘವೇಂದ್ರ ಭಟ್, ಸದಾಶಿವ, ರಾಮಚಂದ್ರ ಮುಳಿಯಾಲ, ಅಜಿತ್ ಕುಮಾರ್, ಮಂಜುನಾಥ ಹೆಬ್ಬಾರ್ ಹಾಗೂ ವಿವೇಕ್ ನಂಬಿಯಾರ್ ಅಲ್ಲದೆ ಕಳೆದ ಸಾಮಾನ್ಯಸಭೆಯಲ್ಲಿ ನಾಮನಿರ್ದೇಶನ ಮಾಡಲಾಗಿದ್ದ ನವೀನ್ ಅಮ್ಮೆಂಬಳ, ಸುಪ್ರಭಾ ಮತ್ತು ದೀಪಕ್ ಅವರನ್ನು ಕಾರ್ಯಕಾರಿ ಸಮಿತಿಗೆ ಅಂತಿಮಗೊಳಿಸಲಾಯಿತು.
ಮಾಮ್ ಅಧ್ಯಕ್ಷೆ ಫೆÇ್ಲೀರಿನ್ ರೋಶ್, ಗೌರವಾಧ್ಯಕ್ಷ ವೇಣು ಶರ್ಮ, ಪ್ರಧಾನ ಕಾರ್ಯದರ್ಶಿ ಕೃಷ್ಣ ಮೋಹನ್, ಉಪಾಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಹಾಗೂ ಪಿಆರ್‍ಒ ಕೃಷ್ಣಕಿಶೋರ್ ಹಾಜರಿದ್ದರು.