ಮಂಗಳೂರು: ಪ್ರಚಲಿತ ವಿದ್ಯಮಾನಗಳನ್ನು ತಿಳಿದಿರುವುದು ಹಾಗೂ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾದ್ಯಮಗಳು ನೀಡುವ ಪರಿಶೀಲಿಸುತ್ತಿರುವುದರಿಂದ ಲೋಕಜ್ಞಾನ ಹೆಚ್ಚಿ ವ್ಯಕ್ತಿತ್ವ ವಿಕಸನ ಆಗುತ್ತದೆ ಇದರಿಂದ ವಿದ್ಯಾರ್ಥಿಗಳು ಉದ್ಯೋಗ ಗಳಿಸುವಲ್ಲಿ ಸಹಕಾರಿಯಾಗುತ್ತಿದೆ ಎಂದು ಮ್ಯಾಮ್ (ಮೀಡಿಯ ಅಲ್ಯುಮಿನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ), ಅಧ್ಯಕ್ಕೆ ಹಾಗೂ ಆಕಾಶವಾಣಿಯ ಕಾರ್ಯಕ್ರಮ ನಿರ್ವಹಕಿ ಶ್ರೀಮತಿ ಪ್ಲೋರಿನ್ ರೋಚ್ ಅಭಿಪ್ರಾಯಪಟ್ಟರು. ಅವರು ಬೆಸೆಂಟ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ಡಾಟಾ ಪ್ರೊಸೆಸಿಂಗ್ ಹಾಗೂ ಕಂಪ್ಯೂಟರ್ ವಿಭಾಗ ಹಾಗೂ ಸ್ನಾತಕೋತ್ತರ ವಿಭಾಗ, ಇವರ ಜಂಟಿ ಆಶ್ರಯದಲ್ಲಿ ಬೆಸೆಂಟ್ ಕಾಲೇಜಿನ ಎಂ.ಕಾಂ. ಸಭಾಂಗಣದಲ್ಲಿ ಇಂದು (7ಆಗಸ್ಟ್)‘ಮಾರುಕಟ್ಟೆ ಸಂವಹನ ಮತ್ತು ಉದ್ಯೋಗವಕಾಶಗಳು’ ಎಂಬ ವಿಷಯದ ಬಗ್ಗೆ ಆಯೋಜಿಸಲಾದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರು ಡಾ. ಸುಧಾ ಕೆ, ಮಾತನಾಡಿ ಮಾಹಿತಿ, ಜ್ಞಾನವಾಗಿ ನಂತರ ಪರಿಜ್ಞಾನವಾಗಿ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಇದೇ ಶಿಕ್ಷಣದ ಗುರಿ. ಉದ್ಯೋಗವಕಾಶಗಳು ತಾವಾಗಿಯೇ ಹುಡುಕಿಕೊಂಡು ಬರಬೇಕಾದರೆ ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಉನ್ನತ ವಿಚಾರಗಳನ್ನು ಹೊಂದಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಸಂಚಾಲಕರಾದ ಶ್ರೀ ಕೆ. ದೇವಾನಂದ ಪೈ ಅವರು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾದ ಡಾ.ಬಾಲಾಜಿ ಬೋವಿ, ಆಡ್ ಐಡಿಯ ಜಾಹೀರಾತು ಸಂಸ್ಥೆಯ ನಿರ್ದೇಶಕರಾದ ಶ್ರೀ ವೇಣುಶರ್ಮ ಹಾಗೂ ಮ್ಯಾಮ್‍ನ ಸದಸ್ಯ ಹಾಗೂ ಬೆಂಗಳೂರಿನ ಇನ್ನೋವಾ ಸಂಸ್ಥೆಗಳ ಉಪಾಧ್ಯಕ್ಷರಾಗಿರುವ ಶ್ರೀ ವಿವೇಕ ನಂಬಿಯಾರ್, ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸ್ಮಿತಾ ಶೆಣ್ಯೆಸ್ವಾಗತಿಸಿದರು.
ಗೋಷ್ಠಿಗಳನ್ನು ಶ್ರೀ ವೇಣುಶರ್ಮ, ಶ್ರೀ ವಿವೇಕ ನಂಬಿಯಾರ್, ಮಂಗಳೂರು ಟುಡೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು ಶ್ರೀ ಮಹೇಶ್ ನಾಯಕ್ ಹಾಗೂ ಪ್ರೊ. ರಂಜಿನಿ, ಸೆಕ್ರೆಟೇರಿಯಲ್ ಪ್ರಾಕ್ಟೀಸ್ ವಿಭಾಗದ ಉಪನ್ಯಾಸಕಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
No comments:
Post a Comment