Sunday, 23 August 2015

ರಕ್ತಕ್ಕೆ ಪರ್ಯಾಯ ಇಲ್ಲ, ಅದು ಅತ್ಯಮೂಲ್ಯ

ರಕ್ತದಾನ ಶಿಬಿರ ಉದ್ಘಾಟಿಸಿ ಆರೋಗ್ಯ ಸಚಿವ ಯು.ಟಿ.ಖಾದರ್

ಮಂಗಳೂರು: "ಜ್ಞಾನ, ವೈದ್ಯಕೀಯ ತಂತ್ರಜ್ಞಾನ ಅದೆಷ್ಟೇ ಬೆಳೆದರೂ ರಕ್ತಕ್ಕೆ ಪರ್ಯಾಯ ಹುಡುಕುವುದು ಸಾಧ್ಯವಾಗಿಲ್ಲ. ಹಾಗಾಗಿ ರಕ್ತ ಪ್ರಪಂಚದಲ್ಲಿ ಅತ್ಯಮೂಲ್ಯ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಿಲಾಗ್ರಿಸ್ ಕಾಲೇಜು, ರೆಡ್‌ಕ್ರಾಸ್, "ಮೀಡಿಯಾ ಅಲುಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ-ಮಾಮ್ , ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, "ಜ್ಞಾನ ಮನುಷ್ಯರನ್ನೂ ನಕಲಿ ಮಾಡುವಷ್ಟರ ಮಟ್ಟಿಗೆ ಬೆಳೆದರೂ ರಕ್ತಕ್ಕೆ ಪರ್ಯಾಯ ವಸ್ತುವನ್ನು ರೂಪಿಸಲು ಸಾಧ್ಯವಾಗಿಲ್ಲ, ಹಾಗಾಗಿ ರಕ್ತ ಅಮೂಲ್ಯ, ರಕ್ತದಾನ ಪವಿತ್ರ ಕಾರ್ಯ ಎಂದರು.
ಮೀಡಿಯಾ ಅಲುಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ-ಮಾಮ್ , ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಶನಿವಾರ ಉದ್ಘಾಟಿಸಿ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿದರು. 
"ಹಿಂದೆ ರಕ್ತದಾನ ಎಂದರೆ ದೊಡ್ಡ ಸೂಜಿ ಚುಚ್ಚಲಾಗುತ್ತಿತ್ತು, ಇದರಿಂದ ನೋವು ಆಗುತ್ತಿದ್ದು, ಜನ ರಕ್ತದಾನ ಮಾಡಲು ಹೆದರುತ್ತಿದ್ದರು. ಆದರೆ ಈಗ ಅಂತಹ ಸಮಸ್ಯೆಯಿಲ್ಲ, ಸೂಜಿ ಚುಚ್ಚುವುದೇ ತಿಳಿಯುವುದಿಲ್ಲ. "ವಿದ್ಯಾರ್ಥಿಗಳು ಯಾವುದೇ ಹೆದರಿಕೆಯಿಲ್ಲದೆ ರಕ್ತದಾನಕ್ಕೆ ಮುಂದಾಗಬೇಕು. ರಕ್ತದಾನದಿಂದ ಯಾವುದೇ ತೊಂದರೆ ಇಲ್ಲ. ನನ್ನ ರಕ್ತದಿಂದ ಇನ್ನೊಬ್ಬನ ಜೀವ ಉಳಿಯುತ್ತದೆ ಎನ್ನುವ ಭಾವನೆಯೊಂದಿಗೆ ರಕ್ತ ನೀಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ಮಹಾನಗರಪಾಲಿಕೆ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ಮಾತನಾಡಿ, ರಕ್ತದಾನ ಮಾಡಿ ಜೀವ ಉಳಿಸುವುದು ಸಮಾಜದಲ್ಲಿ ಅತ್ಯಂತ ದೊಡ್ಡ ಕಾರ್ಯ ಎಂದರು.
ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ.ವಲೇರಿಯನ್ ಡಿ’ಸೋಜ ಶುಭ ಹಾರೈಸಿದರು. ರೆಡ್‌ಕ್ರಾಸ್ ಜಿಲ್ಲಾ ಶಾಖೆ ಅಧ್ಯಕ್ಷ ಪ್ರಭಾಕರ ಶ್ರೀಯಾನ್, ರೆಡ್‌ಕ್ರಾಸ್ ರಕ್ತನಿಧಿ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್‌, ಜೇಸಿ ಅಧ್ಯಕ್ಷ ಪೀಟರ್ ಪಿಂಟೊ, ಲಯನ್ಸ್ ಅಧ್ಯಕ್ಷೆ ಮಂದಾಕಿನಿ ಹಾಜರಿದ್ದರು.
"ಮಿಲಾಗ್ರಿಸ್ ಪ್ರಾಂಶುಪಾಲ ಮೈಕೆಲ್ ಸಾಂತುಮಯೇರ್ ಸ್ವಾಗತಿಸಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಮಮತಾ ಎನ್.ಆರ್. ವಂದಿಸಿದರು. ಒಟ್ಟು 76 ಮಂದಿ ಈ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ನೀಡಿದರು.

*ಅಭಿಯಾನ: ಮಾಮ್ ವತಿುಂದ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇದನ್ನು ಹಲವು ಕಾಲೇಜುಗಳಲ್ಲಿ ಮುಂದುವರಿಸಿಕೊಂಡು ಹೋಗಲಾಗುವುದು, ಇದೊಂದು ಮಹತ್ವದ ಜವಾಬ್ದಾರಿಯಾಗಿದ್ದು, ಸಮಾಜಕ್ಕೆ ಒಳಿತಾಗುವಂತಹ ಕಾರ್ಯ ಎಂದು ಮಾಮ್ ಅಧ್ಯಕ್ಷೆ ಫ್ಲೋರಿನ್ ತಿಳಿಸಿದ್ದಾರೆ.




No comments:

Post a Comment