ಮಾಮ್ ಅಭಿಯಾನದ ಎರಡನೇ ಕಾರ್ಯಕ್ರಮ
ರಕ್ತದಾನದ ಮಹತ್ವ ಅರಿತುಕೊಳ್ಳಲು ಕರೆ
ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಆಶ್ರಯದಲ್ಲಿ ಹಮ್ಮಿಕೊಂಡಿರುವ ‘ರಕ್ತದಾನ ಅಭಿಯಾನ’ದ ಎರಡನೇ ಕಾರ್ಯಕ್ರಮ ಬುಧವಾರ ನಗರದ ಪಂಪ್‌ವೆಲ್ ಬಳಿ ಇರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫೈಯರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್(ಎಂಐಎಫ್‌ಎಸ್‌ಇ) ಕಾಲೇಜಿನಲ್ಲಿ ನಡೆಯಿತು. ಫೈಯರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್ ಸಂಸ್ಥೆಯ ಆಡಳಿತ ನಿರ್ದೇಶಕ ವಿನೋದ್ ಕೆ. ಜಾನ್ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂದರ್ಭ ಮಾತನಾಡಿದ ಅವರು ರಕ್ತದಾನದ ಮಹತ್ವ ಸಾರುವ ಹಿನ್ನೆಲೆಯಲ್ಲಿ ಮಾಮ್ ಆಯೋಜಿಸಿರುವ ಈ ಅಭಿಯಾನ ಅರ್ಥಪೂರ್ಣವಾದುದು. ವಿದ್ಯಾರ್ಥಿಗಳು ಇಂತಹ ಚಟುವಟಿಕೆಯಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತುಕೊಳ್ಳಬೇಕು ಎಂದರಲ್ಲದೆ ಈ ಅಭಿಯಾನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಅತಿಥಿಯಾಗಿದ್ದ ದ.ಕ.ಜಿಲ್ಲಾ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಕೆ.ವಿ.ನಾಗರಾಜ್ ಮಾತನಾಡಿ, ಪ್ರತಿ ವಿದ್ಯಾ ಸಂಸ್ಥೆಗಳಲ್ಲೂ ರಕ್ತದಾನದ ಮಹತ್ವ ಸಾರುವ ಕೆಲಸವಾಗಬೇಕು. ರಕ್ತದಾನ ಜೀವ ಉಳಿಸುವ ಪುಣ್ಯ ಕಾರ್ಯ ಎಂದರು.
ಎಂಐಎಫ್‌ಎಸ್‌ಇ ಸಂಸ್ಥೆಯ ಪ್ರಾಂಶುಪಾಲ ಯಶವಂತ ಶೆಟ್ಟಿಘಿ, ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್, ಗೌರವಾಧ್ಯಕ್ಷ ವೇಣು ಶರ್ಮಾ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಮಂಗಳೂರು ಘಟಕದ ಅಧ್ಯಕ್ಷೃ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಮಾಮ್ ಸದಸ್ಯೆ ವಿದ್ಯಾ ಇರ್ವತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫೈಯರ್ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್‌ನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ
ಮಾಡಿದರು.
ಈ ರಕ್ತದಾನ ಅಭಿಯಾನ ಜಿಲ್ಲೆಯ ವಿವಿಧೆಡೆ ಮುಂದುವರಿಯಲಿದ್ದುಘಿ, ಪಾಲ್ಗೊಳ್ಳ ಬಯಸುವವರು (೯೪೮೧೯೭೬೯೬೯), (೯೪೪೮೪೨೪೯೨೨) ಸಂಖ್ಯೆಯನ್ನು ಸಂಪರ್ಕಿಸಬಹುದು.
No comments:
Post a Comment