Saturday, 22 August 2015

MAAM ರಕ್ತದಾನ ಶಿಬಿರಕ್ಕೆ ಚಾಲನೆ


ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಹಾಗೂ ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕಗಳ ಸಹಯೋಗದಲ್ಲಿ ಮಂಗಳೂರಿನ ಮಿಲಾಗ್ರೀಸ್‍ ಕಾಲೇಜಿನಲ್ಲಿ  ಆ. 22ರಂದು ರಕ್ತದಾನ ಶಿಬಿರ ನಡೆಯಿತು. ಕಾಲೇಜು,   ಮಧ್ಯಾಹ್ನ ವೇಳೆಗೆ 70 ಯೂನಿಟ್‍ ರಕ್ತ ಸಂಗ್ರಹವಾಗಿದೆ.

ರಕ್ತದಾನ ಶಿಬಿರಕ್ಕೆ ಮಾಮ್‍ ಸದಸ್ಯರ ಸಿದ್ಧತೆ. 
ಆ.22ರಿಂದ ವಿವಿಧೆಡೆ "ರಕ್ತದಾನ ಅಭಿಯಾನ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರು ವಿ.ವಿ.ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಘಟಕ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಜಾಗೃತಿ ಮೂಡಿಸಿ ರಕ್ತದಾನ ಸರಣಿ ಶಿಬಿರಗಳನ್ನು ಸಂಘಟಿಸುವುದು ಅಭಿಯಾನದ ಉದ್ದೇಶ.  ಮಿಲಾಗ್ರಿಸ್ ಕಾಲೇಜ್ ಸಂಚಾಲಕ ರೆ.ಫಾ.ವೆಲೇರಿಯನ್ ಡಿಸೋಜಾ, ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಮಂಗಳೂರು ಘಟಕ ಅಧ್ಯಕ್ಷ ಡಾ.ರೋನಾಲ್ಡ್ ಅನಿಲ್ ಫರ್ನಾಂಡಿಸ್, ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ವಿನೀತಾ ಕೆ., ಮಿಲಾಗ್ರಿಸ್ ಕಾಲೇಜ್ ಪ್ರಾಂಶುಪಾಲರಾದ ರೆ.ಫಾ.ಮೈಕಾಲ್ ಸಾಂತು ಮಾಯೆರ್, ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿ ಮಮತಾ ಇದ್ದರು.

ರಕ್ತದಾನ ಅಭಿಯಾನ ಸರಣಿಯ ಮುಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬಯಸುವವರು ಮಾಮ್ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು., ಸುಮಾರು 50ಕ್ಕೂ ಹೆಚ್ಚು ರಕ್ತದಾನಿಗಳನ್ನು ಹೊಂದಿರುವ ಆಸಕ್ತ ಸಂಘ ಸಂಸ್ಥೆಯವರ ಸಹಯೋಗದಲ್ಲಿ ಮಾಮ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗುವುದು.
ಆಸಕ್ತರು ಮಾಮ್ ಪದಾಧಿಕಾರಿಗಳಾದ ಫ್ಲೋರಿನ್ ರೋಚ್ (9880810329), ಕೃಷ್ಣಮೋಹನ (9481976969), ಕೃಷ್ಣಕಿಶೋರ್ (9448424922), ಅಥವಾ ಡಾ.ರೋನಾಲ್ಡ್ ಅನಿಲ್ ಫರ್ನಾಂಡಿಸ್ (9480656393) ಅವರನ್ನು ಸಂಪರ್ಕಿಸುವಂತೆ ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಹಾಗೂ ಗೌರವಾಧ್ಯಕ್ಷ ವೇಣು ಶರ್ಮ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ರಕ್ತದಾನ ಮಾಡುತ್ತಿರುವ ಸ್ಮಿತಾ ಶೆಣೈ

No comments:

Post a Comment