ಬೆಂಗಳೂರು:
ಮ್ಯಾಮ್
(ಮೀಡಿಯ
ಅಲ್ಯುಮಿನಿ ಅಸೋಸಿಯೇಶನ್ ಆಫ್
ಮಂಗಳಗಂಗೋತ್ರಿ)
ಬೆಂಗಳೂರು
ಶಾಖೆಯ ಕಾರ್ಯಕಾರಿ ಸಮಿತಿಯ ಮೊದಲ
ಸಭೆ ಶನಿವಾರ ನಡೆಯಿತು.
ಶಾಖೆಯ
ಪ್ರಧಾನ ಕಾರ್ಯದರ್ಶಿ ಪ್ರಶಾಂತ್
ರೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ
ಬೆಂಗಳೂರುನಲ್ಲಿ ‘ಮ್ಯಾಮ್’ನ
ಮುಂದಿನ ಕಾರ್ಯಕ್ರಮಗಳ ಕುರಿತು
ಚಿಂತನ-ಮಂಥನ
ನಡೆಯಿತು.
ಸೆ.
11 ರಂದು
ಮೊದಲ ಕಾರ್ಯಕ್ರಮ:
ರಾಜ್ಯ
ಪೊಲೀಸ್ ಇಲಾಖೆಯ ಸಿಐಡಿ ಘಟಕವು
ಸೆಪ್ಟೆಂಬರ್ 10
ಮತ್ತು
11ರಂದು
ಹಮ್ಮಿಕೊಂಡಿರುವ,
‘ಮಾನವ
ಕಳ್ಳಸಾಗಣೆ’ ವಿಷಯದ ಕುರಿತ ಎರಡು
ದಿನಗಳ ಕಾರ್ಯಾಗಾರಕ್ಕೆ ‘ಮ್ಯಾಮ್’
ಸಹಯೋಗ ನೀಡುವ ಬಗ್ಗೆ ಸಭೆಯಲ್ಲಿ
ನಿರ್ಧರಿಸಲಾಯಿತು.
ಮ್ಯಾಮ್
ಸದಸ್ಯೆ,
ಸಿಐಡಿ
ಎಸ್‌ಪಿ ಮಧುರಾ ವೀಣಾ ಅವರು
ಕಾರ್ಯಾಗಾರದಲ್ಲಿ ತೊಡಗಿsಸಿಕೊಳ್ಳುವ
ಅವಕಾಶವನ್ನು ಕಲ್ಪಿಸಿರುವ
ಸಂಗತಿಯನ್ನು ‘ಮ್ಯಾಮ್’ನ ನಾಮ
ನಿರ್ದೇಶಿತ ಸದಸ್ಯ ನವೀನ್
ಅಮ್ಮೆಂಬಳ ಅವರು ಸಭೆಯ ಗಮನಕ್ಕೆ
ತಂದರು.
ನಾಸ್ಕಾಂ
ಜೊತೆ ಗೂಡಿ ಸೈಬರ್ ಅಪರಾಧದ ಬಗ್ಗೆ
ಉಪನ್ಯಾಸ ಕಾರ್ಯಕ್ರಮವನ್ನು
ಆಯೋಜಿಸುವ,
ರಕ್ತದಾನ
ಶಿಬಿರ,
ಆರೋಗ್ಯ
ಶಿಬಿರ,
ಕಾಲೇಜುಗಳಲ್ಲಿ
ಸುದ್ದಿ ಮಾಧ್ಯಮದ ಬಗ್ಗೆ ಉಪನ್ಯಾಸ
ನೀಡುವ ಕಾರ್ಯಕ್ರಮಗಳು ಸೇರಿದಂತೆ
ಮ್ಯಾಮ್ ಮೂಲಕ ರೂಪಿಸಬಹುದಾದ
ಸಂಭಾವ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ
ಚರ್ಚಿಸಲಾಯಿತು.
ಮ್ಯಾಮ್
ನಾಮ ನಿರ್ದೇಶಿತ ಸದಸ್ಯರಾದ ದೀಪಕ್
ನಾಯ್ಕ್,
ಇತರೆ
ಸದಸ್ಯರಾದ ಅಂಬರೀಶ್ ಭಟ್,
ಸದಾಶಿವ
ಖಂಡಿಗೆ,
ಅಜಿತ್
ಕುಮಾರ್,
ಕಬೀರ್,
ರಾಘವೇಂದ್ರ
ಭಟ್,
ಪ್ರಜ್ಞಾ
ಪಾಲ್ತಾಡಿ ಮತ್ತು ಸೂರ್ಯನಾರಾಯಣ
ಸಭೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ
ವಿವರ
ಸೆಪ್ಟೆಂಬರ್
11ರಂದು
ನಡೆಯಲಿರುವ ಕಾರ್ಯಾಗಾರದಲ್ಲಿ
ಬೆಳಿಗ್ಗೆ 10.15
ರಿಂದ
11.15
ರವರೆಗೆ
ಒಂದು ಗಂಟೆ ಅವಕಾಶ ಮ್ಯಾಮ್‌ಗೆ
ಸಿಕ್ಕಿದೆ.
ಈ
ಅವಧಿಯಲ್ಲಿ ‘ಮಾನವ
ಕಳ್ಳಸಾಗಣಿಕೆ ನಿಗ್ರಹದಲ್ಲಿ
ಮಾಧ್ಯಮದ ಪಾತ್ರ’ ಎಂಬ ವಿಷಯದ
ಮೇಲೆ ಇಬ್ಬರು (ಜ್ಯೋತಿ
ಇರ್ವತ್ತೂರು ಮತ್ತು ರೊನಾಲ್ಡ್
ಅನಿಲ್ ಫೆರ್ನಾಂಡಿಸ್)
ಉಪನ್ಯಾಸ
ನೀಡಲಿದ್ದಾರೆ.
ಸ್ಥಳ
ನಿಗದಿ ಇನ್ನಷ್ಟೇ ನಡೆಯಬೇಕಿದೆ.
ಈ
ಉಪನ್ಯಾಸದ ಅಧ್ಯಕ್ಷತೆಯನ್ನು
ಮಧುರಾ ವೀಣಾ ವಹಿಸಿಕೊಳ್ಳಲಿದ್ದಾರೆ.
PHOTOS,
REPORT: SOORYANARAYANA VAJRANGI.
Good beginning 👍
ReplyDeleteBest wishes Sooryanarayana and MAAM team.
ReplyDelete